ಈಗ ಭಾರತದ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಆದ ಭಾರ್ತಿ ಏರ್ಟೆಲ್ ಕಂಪನಿಯು ಹೊಸದಾಗಿ ಬಿಡುಗಡೆಯಾದ ಆನ್ಲೈನ್ ಸ್ಟೋರ್ ಮೂಲಕ ಆಪಲ್ ಐಫೋನ್ನ 7 ನ 32GB ಯಾ ಆವೃತ್ತಿಯನ್ನು ಕೇವಲ 7,777 ರೂ ನಂತೆ 2499 ರ ಮಾಸಿಕ ಕಂತುಗಳಲ್ಲಿ ನೀಡುತ್ತಿದೆ. ಈ ಮಾಸಿಕ ಕಂತುಗಳಲ್ಲಿ 30GB ಯಾ ಡೇಟಾ, ಅನ್ಲಿಮಿಟೆಡ್ ಕರೆ (ಲೋಕಲ್, ಎಸ್ಟಿಡಿ, ರಾಷ್ಟ್ರೀಯ ರೋಮಿಂಗ್) ಮತ್ತು ಇದು ಯಾವುದೇ ದೈಹಿಕ ಹಾನಿಯ ವಿರುದ್ಧ ಸಾಧನವನ್ನು ಆವರಿಸುತ್ತದೆ ಮತ್ತು ಸೈಬರ್ ರಕ್ಷಣೆಯನ್ನು ಒದಗಿಸುವ ಏರ್ಟೆಲ್ ಸುರಕ್ಷಿತ ಪ್ಯಾಕೇಜನ್ನು ಒದಗಿಸುತ್ತದೆ.
ಆಪಲ್ ತನ್ನ ಐಫೋನ್ 7 ಹೊರತುಪಡಿಸಿ ಆನ್ಲೈನ್ ಸ್ಟೋರ್ ನಲ್ಲಿ ತನ್ನ ಐಫೋನ್ 7 ಪ್ಲಸ್ ಅನ್ನು ಮಾರಾಟ ಮಾಡುತ್ತದೆ. ಇದೊಂದು ದೊಡ್ಡ ಡಿಸ್ಪ್ಲೇಯನ್ನು ಮತ್ತು ಡ್ಯುಯಲ್-ಕ್ಯಾಮೆರಾ ಸೆಟಪನ್ನು ಹೊಂದಿದೆ. ಅಲ್ಲದೆ 32GB ಐಫೋನ್ನ 7 ಪ್ಲಸ್ ರೂ 17,300 ಕ್ಕೆ ಲಭ್ಯವಿದೆ. ಮತ್ತು 128GB ಯಾ ಮಾದರಿಯನ್ನು 26,000 ರೂಗಳಿಗೆ ಖರೀದಿಸಬಹುದು. ಈ ಎರಡೂ ಸ್ಮಾರ್ಟ್ಫೋನ್ಗಳು ಕೇವಲ ರೂ 2499 ಯಂತೆ ಯೋಜನೆಗೆ ಬರುತ್ತವೆ. ಮತ್ತು ಅವುಗಳನ್ನು ಉಚಿತ ಹ್ಯಾಂಡ್ಸೆಟ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ರೋಗ್ರಾಂ ಅಡಿಗೆ ಒಳಗೊಳ್ಳಲಾಗುತ್ತದೆ. ಅಲ್ಲದೆ ಭವಿಷ್ಯದಲ್ಲಿ ಎಲ್ಲಾ ಪ್ರಮುಖ ಬ್ರಾಂಡ್ಗಳಿಂದ ಹೆಚ್ಚಿನ ಸಾಧನಗಳನ್ನು ಸೇರಿಸಲು ಯೋಜಿಸಿದೆ ಎಂದು ಕಂಪನಿಯು ಹೇಳಿದೆ.
ಏರ್ಟೆಲ್ನ ಆನ್ಲೈನ್ ಸ್ಟೋರ್ ತನ್ನ Project Next ಜೋತೆಗೆ ಡಿಜಿಟಲ್ ನಾವೀನ್ಯತೆಯು ಅದರ ಎಲ್ಲಾ ಸೇವೆಗಳ ಮತ್ತು ಟಚ್ ಪಾಯಿಂಟ್ಗಳಲ್ಲಿ ಗ್ರಾಹಕರ ಅನುಭವವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. Project Next ಇನಿಶಿಯೇಟಿವ್ನಡಿಯಲ್ಲಿ 2000 ಕೋಟಿ ರೂಪಾಯಿಗೆ ತಳ್ಳಲು ಟೆಲಿಕಾಂನ ಇದು ಪ್ರಮುಖ ಯೋಜನೆಯಾಗಿದೆ. ಅಲ್ಲದೆ ಅಂಗಡಿಯಲ್ಲಿನ ಎಲ್ಲಾ ಸ್ಮಾರ್ಟ್ಫೋನ್ಗಳು ಡೌನ್ ಪೇಯ್ಡ್ಗಳೊಂದಿಗೆ ಬರುತ್ತದೆ ಎಂದು ಏರ್ಟೆಲ್ ಹೇಳುತ್ತದೆ. ಇದು ಪೋಸ್ಟ್ಪೇಯ್ಡ್ ಯೋಜನೆಯನ್ನು ನಿರ್ಮಿಸಿದ ಸಾಧನದ "ಮಾರುಕಟ್ಟೆ ಬೆಲೆಯ ಭಾಗ" ಎನ್ನಬಹುದು.
ಸದ್ಯಕ್ಕೆ ಈ ಸಮಯದಲ್ಲಿ ಆನ್ಲೈನ್ ಸ್ಟೋರ್ ಸೇವೆಗಳು ಭಾರತದಾದ್ಯಂತ 21 ನಗರಗಳಲ್ಲಿ ಗ್ರಾಹಕರಿಗೆ ಪ್ರಸ್ತುತ ಲಭ್ಯವಿವೆ. ಟೆಲ್ಕೊ ಅದರ ಆನ್ಲೈನ್ ಸ್ಟೋರ್ನಲ್ಲಿ ಡಿಜಿಟಲ್ ಅನುಭವವನ್ನು ಸಕ್ರಿಯಗೊಳಿಸಲು ಆಪಲ್, HDFC ಬ್ಯಾಂಕ್, Clix ಕ್ಯಾಪಿಟಲ್, Seynse ಟೆಕ್ನಾಲಜೀಸ್, Brightstar ಟೆಲಿಕಮ್ಯುನಿಕೇಶನ್ಸ್ ಮತ್ತು ವಲ್ಕನ್ ಎಕ್ಸ್ಪ್ರೆಸ್ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.