ಭಾರತೀಯ ಟೆಲಿಕಾಂನಲ್ಲಿ ಕೇವಲ 250 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ಗಳ ಸಂಪೂರ್ಣವಾದ ಮಾಹಿತಿ ಇಲ್ಲಿದೆ

ಭಾರತೀಯ ಟೆಲಿಕಾಂನಲ್ಲಿ ಕೇವಲ 250 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ಗಳ ಸಂಪೂರ್ಣವಾದ ಮಾಹಿತಿ ಇಲ್ಲಿದೆ

Airtel Prepaid Rs 249 Plan: ಏರ್ಟೆಲ್ನ ಈ ಈ ಪ್ಲಾನ್ 28 ದಿನಗಳ ವಾಲಿಡಿಟಿಯೊಂದಿಗೆ ಬರುತ್ತದೆ. ಮತ್ತು ಬಳಕೆದಾರರಿಗೆ ದಿನಕ್ಕೆ 2GB ಯ 4G ಡೇಟಾವನ್ನು ಒದಗಿಸುತ್ತದೆ. ಈ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳನ್ನು ಸಹ ನೀಡುತ್ತದೆ. ಇದರಲ್ಲಿ ದಿನಕ್ಕೆ 100 SMS ಸಹ ಲಭ್ಯವಿದೆ.

Vodafone Prepaid Rs 255 Plan: ವೊಡಾಫೋನ್ ವೆಬ್ಸೈಟ್ನ ಪ್ರಕಾರ ಈ ಪ್ಲಾನ್ ಸಹ 2GB ಯ 3G / 4G ಯ ಡೇಟಾವನ್ನು ಬಳಕೆದಾರರಿಗೆ ನೀಡುತ್ತದೆ. ಇದು ಸಹ 28 ದಿನಗಳ ಮಾನ್ಯತೆಯ ಅವಧಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳ ಸೌಲಭ್ಯವನ್ನು ನೀಡುತ್ತದೆ. ಆದರೆ  ವೊಡಾಫೋನ್ ಈ ಯೋಜನೆಯಲ್ಲಿ ಯಾವುದೇ ಉಚಿತ SMS ಒದಗಿಸುವುದಿಲ್ಲ.

Reliance Jio Rs 198 Plan: ರಿಲಯನ್ಸ್ ಜಿಯೊ ರೂ 198 ಪ್ಲಾನ್ ಪ್ರತಿ ದಿನಕ್ಕೆ 2GB ಯ ಡೇಟಾವನ್ನು ಬಳಕೆದಾರರಿಗೆ ನೀಡಿದೆ. ಮತ್ತು ಅನ್ಲಿಮಿಟೆಡ್ ಸ್ಥಳೀಯ ಮತ್ತು STD ಕರೆಗಳನ್ನು ಸಹ ನೀಡುತ್ತದೆ. ಮತ್ತು ದಿನಕ್ಕೆ 100 SMS ಸಹ 28 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದ್ದು ಈ ಯೋಜನೆಯ ಒಟ್ಟು ಮಾಸಿಕ ಡೇಟಾ 56GB ಆಗಿದೆ.

Idea Cellular Rs 249 Plan: ಐಡಿಯಾದ ಈ ಪ್ಲಾನ್ 249 ಯೋಜನೆಗಳನ್ನು ಏರ್ಟೆಲ್ ಪರಿಚಯಿಸಿದ ನಂತರ ಬಂದಿದೆ. ಐಡಿಯಾ ಸೆಲ್ಯುಲಾರ್ 249 ಪ್ರಿಪೇಡ್ ಯೋಜನೆಗೆಯಲ್ಲಿ 2GB / 3G ಡೇಟಾವನ್ನು ದಿನಕ್ಕೆ ಮತ್ತು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMSಗಳನ್ನು ಪೂರ್ತಿ 28 ದಿನಗಳವರೆಗೆ ಒದಗಿಸುತ್ತಿದೆ.

ಎಲ್ಲಾ ಯೋಜನೆಗಳು ಸಮಾನ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಜಿಯೊ ಯೋಜನೆಯು ಕೆಳಭಾಗದಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಬೆಲೆಯಿದೆ. ಅಲ್ಲದೆ ಏರ್ಟೆಲ್ ಮತ್ತು ಜಿಯೋ ನೆಟ್ವರ್ಕ್ನಲ್ಲಿನ ಧ್ವನಿ ಕರೆಗಳು ಯಾವುದೇ FUP ಇಲ್ಲದೆ ಅನಿಯಮಿತವಾಗಿರುತ್ತವೆ. ಐಡಿಯಾ ಮತ್ತು ವೊಡಾಫೋನ್ ನೆಟ್ವರ್ಕ್ನಲ್ಲಿ ದಿನಕ್ಕೆ 250 ನಿಮಿಷಗಳು ಮತ್ತು ವಾರಕ್ಕೆ 1000 ನಿಮಿಷಗಳ ದರದಲ್ಲಿ ಬೆಲೆಯಿರುತ್ತದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo