ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಗ್ರೂಪ್ ವೀಡಿಯೋ ಕಾಲ್ ಮಾಡಲು ಈ ಹೊಚ್ಚ ಹೊಸ 5 ಅಪ್ಲಿಕೇಶನ್ಗಳ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಗ್ರೂಪ್ ವೀಡಿಯೋ ಕಾಲ್ ಮಾಡಲು ಈ ಹೊಚ್ಚ ಹೊಸ 5 ಅಪ್ಲಿಕೇಶನ್ಗಳ ಬಗ್ಗೆ ತಿಳಿದುಕೊಳ್ಳಿ

WhatsApp: ನಿಮಗೀಗಾಗಲೇ ತಿಳಿದಿರುವಂತೆ WhatsApp ಮೆಸೇಜಿಂಗ್ ಪ್ರಪಂಚದ ಒಂದು ಮೂಲಾಧಾರವಾಗಿದೆ ಆದರೆ ವೇದಿಕೆ ಸ್ಕೈಪ್ ಮತ್ತು ಇತರ ಎದುರಾಳಿಗಳು ನೀಡುವ ಒಂದು ವೈಶಿಷ್ಟ್ಯವನ್ನು ನೀಡುತ್ತಿದೆ ಅದು ಗ್ರೂಪ್ ವೀಡಿಯೋ ಕಾಲಿಂಗ್. ಈ ವೀಡಿಯೊ ಚಾಟ್ ವೈಶಿಷ್ಟ್ಯವು ಈಗಾಗಲೇ ಧೀರ್ಘಾವಧಿ ಮೀರಿದ್ದು ಕಂಪನಿಯು ಅಂತಿಮವಾಗಿ ಈ ವೈಶಿಷ್ಟ್ಯವನ್ನು ತನ್ನ ಬಳಕೆದಾರರಿಗೆ ಸೇರಿಸಿದೆ. ಇದು ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಹೊಸ ಬೀಟಾ ಅಪ್ಡೇಟ್ ಪಡೆದು ಬಳಸಬವುದು. ಈ ಹೊಸ ವೈಶಿಷ್ಟ್ಯ ಸದ್ಯಕ್ಕೆ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಒಂದು ವೇಳೆ ನಿಮ್ಮ ಅಪ್ಲಿಕೇಶನಲ್ಲಿ ಇದು ಲಭ್ಯವಿದ್ದರೆ ನೀವು ಅದೃಷ್ಟವಂತರಾಗಬಹುದು. iOS ಬಳಕೆದಾರರು ಆಂಡ್ರಾಯ್ಡ್ ಬಳಕೆದಾರರಿಗೆ WhatsApp ಆವೃತ್ತಿ 2.18.52 ಮತ್ತು 2.18.145 ಸರ್ಚ್ ಮಾಡಿ ಪಡೆಯಬೇಕಿದೆ.

 https://www.cyberfreewishes.com/uploads/6/4/0/6/6406650/954079057_orig.jpg

Instagram: ಗ್ರೂಪ್ ವೀಡಿಯೊ ಚಾಟ್ ವೈಶಿಷ್ಟ್ಯವು ಇದರ ಚಾಟ್ನಲ್ಲಿ ಭಾಗವಹಿಸಲು ನಾಲ್ಕು ಜನರನ್ನು ಪ್ರಸ್ತುತ ಅನುಮತಿಸುತ್ತದೆ. ನೀವು ಸಕ್ರಿಯ ಡೈರೆಕ್ಟ್ ಥ್ರೆಡ್ ಹೊಂದಿರುವ ಯಾರಿಗಾದರೂ ನೀವು ವೀಡಿಯೊ ಚಾಟ್ ಮಾಡಬಹುದು. ನೀವು ಒಬ್ಬ ವ್ಯಕ್ತಿಯನ್ನು ನಿರ್ಬಂಧಿಸಿದರೆ (Block ಮಾಡಿದರೆ) ಅವರು ನಿಮಗೆ ವೀಡಿಯೊ ಚಾಟ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ಅವರಿಂದ ಅಧಿಸೂಚನೆಗಳನ್ನು ಮಾತ್ರ ಸ್ವೀಕರಿಸಲು ಬಯಸದಿದ್ದರೆ ನೀವು ಆ ವ್ಯಕ್ತಿಯ ಪ್ರೊಫೈಲನ್ನು ಮ್ಯೂಟ್ ಮಾಡಬಹುದು. ನಿಮ್ಮ ವೀಡಿಯೊ ಚಾಟ್ ಅಧಿಸೂಚನೆಗಳನ್ನು ನವೀಕರಿಸಲು ಪ್ರೊಫೈಲ್ನಲ್ಲಿ ಗೇರ್ ಐಕಾನ್ ಟ್ಯಾಪ್ ಮಾಡಿ ಮತ್ತು ಪುಷ್ ಅಧಿಸೂಚನೆಗಳಲ್ಲಿ ಹೊಸ ವೀಡಿಯೊ ಚಾಟ್ ಕಂಟ್ರೋಲರನ್ನು ಪಡೆಯಬವುದು.

Facebook Messenger: ಫೇಸ್ಬುಕ್ ಮೆಸೆಂಜರ್ನ ಗ್ರೂಪ್ ವೀಡಿಯೊ ಕರೆ ಕೂಡ ಫ್ರೀ ಆಗಿದೆ ಆದರೆ ಬಳಕೆದಾರ ಒಬ್ಬ ವ್ಯಕ್ತಿಯೊಂದಿಗೆ ವೀಡಿಯೊ ಕರೆಯನ್ನು ಪ್ರಾರಂಭಿಸಲಾಗುವುದಿಲ್ಲ ಯಾಕೆಂದ್ರೆ ಇದು ಗ್ರೂಪ್ ಆಗಿರೋದರಿಂದ ಅದನ್ನು ನೀವು ಗ್ರೂಪ್ ಕರೆಯನ್ನಾಗಿ ಪರಿವರ್ತಿಸಬಹುದು. ನೀವು ಒಂದು ಗುಂಪನ್ನು ರಚಿಸಬೇಕು ಅಥವಾ ಅಸ್ತಿತ್ವದಲ್ಲಿರುವ ಗುಂಪನ್ನು ಬಳಸಬೇಕು ಈ ಫೀಚರನ್ನು ಪಡೆಯಲು ನಂತರ ಎಲ್ಲಾ ಸದಸ್ಯರನ್ನು ಕರೆ ಮಾಡಲು ಅಥವಾ ವೀಡಿಯೊ ಕರೆಗಾಗಿ ಗುಂಪಿನಿಂದ ವ್ಯಕ್ತಿಗಳನ್ನು ಹುಡುಕಿ ಸೇರಬವುದು. ಒಂದು ಗುಂಪು ಕರೆಯಲ್ಲಿ ಸುಮಾರು 50 ಜನರನ್ನು ಸೇರಿಸಬಹುದು. ಆದರೆ ಪ್ರತಿಯೊಬ್ಬರ ಸ್ಕ್ರೀನ್ ಮೇಲೆ ಪ್ರತಿ ಕರೆಮಾಡುವವರಿಗೆ ಅವಕಾಶ ಕಲ್ಪಿಸುವುದಿಲ್ಲ. ಕರೆಗೆ ಸೇರ್ಪಡೆಗೊಳ್ಳುವ ಮೊದಲ ಆರು ಜನರಿಗೆ ಒಂದೇ ಸಮಯದಲ್ಲಿ ಸ್ಕ್ರೀನ್ ಸ್ಥಳವನ್ನು ಪಡೆಯಲಾಗುತ್ತದೆ. ಉಳಿದವರು ಪರದೆಯ ಕೆಳಭಾಗದಲ್ಲಿ ಚಿಕ್ಕ ಚಿತ್ರಗಳಿಗೆ ಕಡಿಮೆಗೊಳಿಸಲಾಗುತ್ತದೆ.

https://fbnewsroomus.files.wordpress.com/2016/12/groupvideo-newsroomcover.jpg?w=960

Skype: ಆಂಡ್ರಾಯ್ಡ್ ಮತ್ತು iOS ಗಾಗಿ ಈ Skype ಸಹ ಗ್ರೂಪ್ಗಳಲ್ಲಿ ವೀಡಿಯೊ ಕರೆಗಳನ್ನು ಬೆಂಬಲಿಸುತ್ತದೆ ಮತ್ತು ಇದು ಉಚಿತವಾಗಿದೆ. ಬಳಕೆದಾರರು ಒಬ್ಬ ವ್ಯಕ್ತಿಯೊಂದಿಗೆ ವೀಡಿಯೊ ಕರೆಯನ್ನು ಪ್ರಾರಂಭಿಸಬಹುದು ಮತ್ತು ಸುಮಾರು 25 ಜನರನ್ನು ಅದೇ ಅಧಿವೇಶನಕ್ಕೆ ಸೇರಿಸಬಹುದು ಅಥವಾ ಮೊದಲು ಭಾಗವಹಿಸುವವರನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ನಂತರ ಅವುಗಳನ್ನು ಸೆಶನ್ನಲ್ಲಿ ಸೇರಲು ಅನುಮತಿಸಬಹುದು. ಒಂದು ಕರೆಗೆ 5 ಜನರಿಗಿಂತ ಹೆಚ್ಚು ಜನರು ಸೇರಿಕೊಂಡರೆ ಇಂಟರ್ಫೇಸ್ ಸ್ವಯಂಚಾಲಿತವಾಗಿ 'ಫೋಕಸ್ ಮೋಡ್'ಗೆ ಬದಲಾಗುತ್ತದೆ. ಅಲ್ಲಿ ಸ್ಪೀಕರ್ ಮುಖವು ಬಹುತೇಕ ಪರದೆಯ ಮೇಲೆ ತೋರಿಸುತ್ತದೆ ಮತ್ತು ಉಳಿದ ಬಳಕೆದಾರರು ಪರದೆಯ ಕೆಳಭಾಗದಲ್ಲಿ ಚಿಕ್ಕ ಚಿತ್ರಗಳನ್ನು ತೋರಿಸುತ್ತಾದೆ.

https://www.supertintin.com/blog/wp-content/uploads/2012/12/Group-Video-Calls.jpg

Google Hangouts: ಇದು ಏಕಕಾಲದಲ್ಲಿ 25 ಜನರೊಂದಿಗೆ ವೀಡಿಯೊ ಕರೆಗಳನ್ನು ಅನುಮತಿಸುತ್ತದೆ. ಒಂದು ಗುಂಪು ವೀಡಿಯೊ ಕರೆ ಪ್ರಾರಂಭಿಸಲು, ಬಳಕೆದಾರರು ಪರದೆಯ ಕೆಳಭಾಗದಲ್ಲಿರುವ + ಐಕಾನನ್ನು ಸ್ಪರ್ಶಿಸಬೇಕಾಗುತ್ತದೆ. ನಂತರ ವೀಡಿಯೊ ಕರೆ ಬಟನ್ ಮತ್ತು ಅವರು ಚಾಟ್ ಮಾಡಲು ಬಯಸುವ ಸಂಪರ್ಕವನ್ನು ಆಯ್ಕೆ ಮಾಡಿ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಉಚಿತ ಮತ್ತು ಲಭ್ಯವಿದೆ. ಹೊಸ ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

http://1.bp.blogspot.com/-GuSyDtL6JHM/ThYg3J4PyHI/AAAAAAAAAig/rdp4Tfg4wHQ/s1600/hangout.GIF

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo