ಸ್ನೇಹಿತರೇ MSI ಈ ಗೇಮಿಂಗ್ ಲ್ಯಾಪ್ಟಾಪನ್ನು ಭಾರತದಲ್ಲಿ ಕೇವಲ 1,79,990 ರೂಪಾಯಿಗಳ ಮಾರಾಟದ ಬೆಲೆಯನ್ನು ನೀಡಿದೆ. ಈ ಹೊಸ ಲ್ಯಾಪ್ಟಾಪ್ ಹೆಚ್ಚು ಆಕರ್ಷಣೀಯವಾದ ಬೆಲೆ ಬ್ರಾಕೆಟನ್ನು ನಮೂದಿಸುವ ಒಂದು ಉತ್ತಮ ಪ್ರಯತ್ನ ಮಾಡಿದೆ. ಅಲ್ಲದೆ ಕಳೆದ ಕೆಲ ದಿನಗಳು ನಾವು ಈ ಲ್ಯಾಪ್ಟಾಪ್ ಜೋತೆ ನೀಡಿದ ಸಮಯದಿಂದಾಗಿ ಇದನ್ನು ಪೂರ್ಣವಾಗಿ ಅನುಭವಿಸಿದ್ದೇವೆ. ಇದರಿಂದ ಈ ಲ್ಯಾಪ್ಟಾಪ್ ನಮ್ಮನ್ನು ತನ್ನತ್ತ ಸೆಳೆಯುತ್ತಿದೆ.
ನೀವು ಈ ಲ್ಯಾಪ್ಟಾಪಿನಲ್ಲಿನ ಮೇಲೆ ಅಲ್ಯುಮಿನಿಯಂ ಮತ್ತು ಪ್ಲ್ಯಾಸ್ಟಿಕ್ ಶೆಲ್ ಅನ್ನು ಪಡೆಯುವಿರಿ ಮತ್ತು ಇದರಲ್ಲಿನ RGB ಲೈಟಿಂಗ್ ಕೇವಲ ಕೀಬೋರ್ಡ್ನಲ್ಲಿ ಮಾತ್ರವಲ್ಲದೆ ಇದರ ಲೀಡ್ ಮೇಲೆಯು ಸುಂದರವಾಗಿ ಮೂಡಿದೆ. ಇದಲ್ಲದೆ ಈ ಲ್ಯಾಪ್ಟಾಪ್ನಲ್ಲಿರುವ USB 3.0 ಪೋರ್ಟ್ಗಳಲ್ಲಿನ ರೆಡ್ ಬ್ಯಾಕ್ ಲೈಟ್ ಸಹಾ ಹೆಚ್ಚು ಕಣ್ಮನ ಸೆಳೆಸುತ್ತದೆ. ಒಂದೇ ವಾಕ್ಯದಲ್ಲಿ ಹೇಳಬೇಕಾದ್ರೆ ಇದು ನಿಮಗೆ ಯೂನಿಕ್ ಲುಕ್ ನೀಡುತ್ತದೆ.
ಈ ಹೊಸ GE73 ರೈಡರ್ ಇಂಟೆಲ್ ಕೋರ್ i7-8750H ಪ್ರೊಸೆಸರ್ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ NVIDIA GTX 1070 GPU ಮತ್ತು 16GB ಯ DDR4 ರಾಮ್ನೊಂದಿಗೆ ಸಂಯೋಜಿತವಾಗಿದೆ. ನೀವೋಬ್ಬ ಗೇಮರ್ ಆಗಿದ್ದರೆ ನೀವು ಅತ್ಯಂತ ಸಮರ್ಥತೆಯನ್ನು ಹೊಂದಿರುವ ಈ ಲ್ಯಾಪ್ಟಾಪಿನೊಂದಿಗೆ ಕೊನೆಗೊಳ್ಳಬವುದು. ನಾವು ಇದರ ಮ್ಯಾಕ್ಸಿಮಮ್ ಸೆಟ್ಟಿಂಗ್ಗಳನ್ನು ಹೊಂದಿರುವ Shadow of Mordor ನಡೆಸಿ ನೋಡಿದೆವು ಮತ್ತು ಈ ಲ್ಯಾಪ್ಟಾಪ್ ಸುಂದರವಾದ ಡಿಸ್ಪ್ಲೇಯನ್ನು ನೀಡುತ್ತಿದ್ದು ಸತತವಾಗಿ 60FPS ಅನ್ನು ಸ್ಥಿರವಾಗಿ ತಳ್ಳುತ್ತದೆ.
ಇದರಲ್ಲಿನ ಸಾಕಷ್ಟು ವೇಗದ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದ್ದು 1TB HDD ಜೊತೆಗೆ NVMe SSDs 512GB ಯನ್ನು ರೈಡರ್ 4 ನಲ್ಲಿ ನೀಡುತ್ತದೆ. ಇದರಲ್ಲಿನ 17.3 ಇಂಚಿನ ಪ್ಯಾನಲ್ 120Hz ನ ರಿಫ್ರೆಶ್ ರೇಟ್ ಮತ್ತು 3ms ನ ಪ್ರತಿಕ್ರಿಯೆಯ ಸಮಯವನ್ನು ಹೊಂದಿದೆ. ಇದರಲ್ಲಿನ ಕ್ಯಾಟೆಗರಿ ಆವರೇಜ್ 5ms ಹೆಚ್ಚಾಗಿ ನೀಡುತ್ತದೆ ಇದು ನಿಜಕ್ಕೂ ತುಂಬಾ ಒಳ್ಳೆಯ ವಿಷಯವಾಗಿದೆ.
ಹೊಸ ಲ್ಯಾಪ್ಟಾಪ್ MSI GE73 8RF ರೈಡರ್ RGB ಬ್ಯಾಕ್ ಲೈಟನ್ನು ಮತ್ತು ಸಾಕಷ್ಟು ಪೋರ್ಟ್ಗಳು ಮತ್ತು ಸೇಬ್ರೆ ಹೈ-ಫೈ ಆಡಿಯೋದೊಂದಿಗೆ ಸ್ಟೀಲ್ ಸೀರೀಸ್ ಕೀಬೋರ್ಡ್ ಅನ್ನು ಸಹ ನೀಡುತ್ತದೆ. ಇದರಲ್ಲಿನ ಕೀಗಳು 1.9mm ವೇಗವನ್ನು ನೀಡುತ್ತವೆ. ನಾವು ಅವುಗಳನ್ನು ಬಳಸಿದ ಅಲ್ಪಾವಧಿಯಲ್ಲಿ ನಮಗೆ ಸಾಕಷ್ಟು ಉತ್ತಮವೆನಿಸಿದೆ ಆದರೂ ನಾವು ಇದರ ಸಂಪೂರ್ಣ ವಿಮರ್ಶೆಯ ತನಕ ನಮ್ಮ ಅಂತಿಮ ತೀರ್ಪನ್ನು ನಾವು ಕಾಯ್ದಿರಿಸುತ್ತೇವೆ.
ಒಟ್ಟಾರೆಯಾಗಿ ಈ MSI GE73 8RF ರೈಡರ್ ಗೇಮಿಂಗ್ ಉತ್ಸಾಹದ ಉತ್ತಮ ಗೇಮಿಂಗ್ ಲ್ಯಾಪ್ಟಾಪ್ನಂತೆ ತಯಾರಿಸಲಾಗಿದೆ. ವಿಶೇಷವಾಗಿ ಇದರ ಬೆಲೆಗೆ ಇದು ಒದಗಿಸುವ ಹಾರ್ಡ್ವೇರ್ ಪ್ರಮಾಣವನ್ನು ಪರಿಗಣಿಸಿ ಒಂದೇ ರೀತಿಯ ಬೆಲೆಯಲ್ಲಿ ಅದೇ ಗೇಮಿಂಗ್ ಪಿಸಿ ಮಾಡಲು ಮತ್ತು ಈ ಕೂಲ್ ನೋಡುವಿಕೆಯನ್ನು ಮಾಡಲು ನಿಜವಾಗಿಯೂ ಕಷ್ಟಕರವೇ ಸರಿ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.