ಮೋಟೊರೋಲ ಒಟ್ಟು 6 ಹೊಚ್ಚ ಹೊಸ ಫೋನ್ಗಳನ್ನು ಬಿಡುಗಡೆ ಮಾಡಿದೆ, ಇಲ್ಲಿದೆ ಇದರ ಸಂಪೂರ್ಣವಾದ ಮಾಹಿತಿ.

Updated on 20-Apr-2018
HIGHLIGHTS

ಮೋಟೊರೋಲದ ಈ ಹೊಸ ಸ್ಮಾರ್ಟ್ಫೋನ್ಗಳು ಇಂದು ಬ್ರೆಜಿಲ್ನಲ್ಲಿ ಬಿಡುಗಡೆಯಾಗಿವೆ ಭಾರತಕ್ಕೆ ಯಾವಾಗ ಬರುತ್ತೆ ಗೋತ್ತಾ.

ಈ ವರ್ಷ ಜನಪ್ರಿಯ ಫೋನ್ ಕಂಪನಿಯಾದ ಲೆನೊವೊ ಮೊಟೊರೊಲಾ ತನ್ನ ಹೊಸ ಬಜೆಟ್ ಮತ್ತು ಎಂಟ್ರಿ ಮಟ್ಟದ ಸ್ಮಾರ್ಟ್ಫೋನ್ಗಳನ್ನು ತಂದಿದೆ. ಈ ಕಂಪನಿಯು ಹೊಚ್ಚ ಹೊಸ Moto G, Moto G6,  Moto G6 Plus, Moto E5, Moto E5 Plus, Moto E5 Play ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಮೋಟೋರೋಲಾ ಸ್ಮಾರ್ಟ್ಫೋನ್ನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮುಖ್ಯ ಮತ್ತು ಎಲ್ಲಾ ಫೋನ್ಗಳ ಸಂಪೂರ್ಣವಾದ ಮಾಹಿತಿ ಡಿಜಿಟ್ ಕನ್ನಡ ಇಲ್ಲಿಟ್ಟಿದೆ. 

ಈ ಸ್ಮಾರ್ಟ್ಫೋನ್ಗಳು ಇಂದು ಬ್ರೆಜಿಲ್ನಲ್ಲಿ ಮತ್ತು ಮುಂದಿನ ವಾರ ಮೆಕ್ಸಿಕೊದಲ್ಲಿ ಖರೀದಿಸಲು ಲಭ್ಯವಾಗುತ್ತವೆ. ನಂತರ ಭಾರತ, ಯುರೋಪ್, ಲ್ಯಾಟಿನ್ ಅಮೆರಿಕಾ ಮತ್ತು ಉತ್ತರ ಅಮೆರಿಕಾ ಮಾರುಕಟ್ಟೆ ಸೇರಿದಂತೆ ಏಷ್ಯಾ ಪೆಸಿಫಿಕ್ನಲ್ಲಿನ ಹಲವಾರು ದೇಶಗಳು ಮುಂದಿನ ಎರಡು ತಿಂಗಳುಗಳಲ್ಲಿ ಈ ಹೊಸ ಹ್ಯಾಂಡ್ಸೆಟ್ಗಳನ್ನು ಪಡೆಯಲಿವೆ.

ಮೋಟೊರೋಲ Moto G6.
ಇದರ ಡಿಸ್ಪ್ಲೇ: 5.7 ಇಂಚಿನ ಫುಲ್ HD+ ಮ್ಯಾಕ್ಸ್ ವಿಷನ್ 18:9 ಅನುಪಾತದ  ಡಿಸ್ಪ್ಲೇ.
RAM: 3/4 GB 
ಸ್ಟೋರೇಜ್: 32/64 GB
ಪ್ರೊಸೆಸರ್: 1.8GHz octa-core Snapdragon 450 SoC
ಬ್ಯಾಕ್ ಕ್ಯಾಮೆರಾ: ಡ್ಯೂಯಲ್ 12MP+5MP
ಫ್ರಂಟ್ ಕ್ಯಾಮೆರಾ: 8MP
ಬ್ಯಾಟರಿ: 3000mAh 

ಮೋಟೊರೋಲ Moto G6 Plus.
ಇದರ ಡಿಸ್ಪ್ಲೇ: 5.9 ಇಂಚಿನ ಫುಲ್ HD+ ಮ್ಯಾಕ್ಸ್ ವಿಷನ್ 18:9 ಅನುಪಾತದ  ಡಿಸ್ಪ್ಲೇ.
RAM: 4/6 GB 
ಸ್ಟೋರೇಜ್: 64 GB
ಪ್ರೊಸೆಸರ್: 2.2GHz octa-core Snapdragon 630 SoC
ಬ್ಯಾಕ್ ಕ್ಯಾಮೆರಾ: ಡ್ಯೂಯಲ್ 12MP+5MP
ಫ್ರಂಟ್ ಕ್ಯಾಮೆರಾ: 8MP
ಬ್ಯಾಟರಿ: 3200mAh

ಮೋಟೊರೋಲ Moto G6 Play.
ಇದರ ಡಿಸ್ಪ್ಲೇ: 5.7 ಇಂಚಿನ ಫುಲ್ HD+ ಮ್ಯಾಕ್ಸ್ ವಿಷನ್ 18:9 ಅನುಪಾತದ  ಡಿಸ್ಪ್ಲೇ.
RAM: 2 GB 
ಸ್ಟೋರೇಜ್: 16 GB
ಪ್ರೊಸೆಸರ್: 1.4 GHz octa-core Snapdragon 427 SoC
ಬ್ಯಾಕ್ ಕ್ಯಾಮೆರಾ: 13MP
ಫ್ರಂಟ್ ಕ್ಯಾಮೆರಾ: 5MP
ಬ್ಯಾಟರಿ: 4000mAh

ಮೋಟೊರೋಲ Moto E5.
ಇದರ ಡಿಸ್ಪ್ಲೇ: 5.7 5.7-inch HD+ IPS LCD ಡಿಸ್ಪ್ಲೇ.
RAM: 2 GB 
ಸ್ಟೋರೇಜ್: 16 GB
ಪ್ರೊಸೆಸರ್: 1.4 GHz octa-core Snapdragon 425 SoC
ಬ್ಯಾಕ್ ಕ್ಯಾಮೆರಾ: 13MP
ಫ್ರಂಟ್ ಕ್ಯಾಮೆರಾ: 5MP
ಬ್ಯಾಟರಿ: 4000mAh 

ಮೋಟೊರೋಲ Moto E5 Plus.
ಇದರ ಡಿಸ್ಪ್ಲೇ: 6 ಇಂಚಿನ HD+ IPS LCD ಡಿಸ್ಪ್ಲೇ.
RAM: 3/4 GB 
ಸ್ಟೋರೇಜ್: 32/64 GB
ಪ್ರೊಸೆಸರ್: ಇನ್ನು ಅಧಿಕೃತವಾಗಿ ಘೋಷಿಸಿಲ್ಲ.  
ಬ್ಯಾಕ್ ಕ್ಯಾಮೆರಾ: 12MP
ಫ್ರಂಟ್ ಕ್ಯಾಮೆರಾ: 8MP
ಬ್ಯಾಟರಿ:  5000mAh 

ಮೋಟೊರೋಲ Moto E5 Play.
ಇದರ ಡಿಸ್ಪ್ಲೇ: 5.2 ಇಂಚಿನ HD+ IPS LCD ಡಿಸ್ಪ್ಲೇ.
RAM: 2 GB 
ಸ್ಟೋರೇಜ್: 16 GB
ಪ್ರೊಸೆಸರ್: 1.4GHz octa-core Snapdragon 425/427 SoC  
ಬ್ಯಾಕ್ ಕ್ಯಾಮೆರಾ: 8MP
ಫ್ರಂಟ್ ಕ್ಯಾಮೆರಾ: 5MP
ಬ್ಯಾಟರಿ: 2800mAh 

ಈ ಸ್ಮಾರ್ಟ್ಫೋನ್ಗಳು ಇಂದು ಬ್ರೆಜಿಲ್ನಲ್ಲಿ ಮತ್ತು ಮುಂದಿನ ವಾರ ಮೆಕ್ಸಿಕೊದಲ್ಲಿ ಖರೀದಿಸಲು ಲಭ್ಯವಾಗುತ್ತವೆ. ಈ ಮೊಟೊರೊಲಾ ಹ್ಯಾಂಡ್ಸೆಟ್ಗಳ ಜಾಗತಿಕ ಬೆಲೆಗಳು ಮತ್ತು ಲಭ್ಯತೆ ಯೋಜನೆಗಳನ್ನು ಇಲ್ಲಿ ಪಟ್ಟಿ ಮಾಡಿದೆ. 

1.Moto G6 Plus: ಆರಂಭಿಕ ಬೆಲೆ $ 299, ಭಾರತದ ರೂಗಳಲ್ಲಿ ಸುಮಾರು 19,644 ರೂ.
2.Moto G6: ಆರಂಭಿಕ ಬೆಲೆ $ 249, ಭಾರತದ ರೂಗಳಲ್ಲಿ ಸುಮಾರು 16,359 ರೂ. 
3.Moto G6 Play: ಆರಂಭಿಕ ಬೆಲೆ $ 199, ಭಾರತದ ರೂಗಳಲ್ಲಿ ಸುಮಾರು 13,074 ರೂ.
4.Moto E5 Plus:  ಆರಂಭಿಕ ಬೆಲೆ $ 169, ಭಾರತದ ರೂಗಳಲ್ಲಿ ಸುಮಾರು 11,103 ರೂ.
5.Moto E5: ಆರಂಭಿಕ ಬೆಲೆ $ 149, ಭಾರತದ ರೂಗಳಲ್ಲಿ ಸುಮಾರು 9,789 ರೂ.
6.Moto E5 Play: ಇದರ ಬೆಲೆ ಇನ್ನು ಅನಿರ್ದಿಷ್ಟವಾಗಿದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಮಾಹಿತಿಗಾಗಿ Digit Kannada, Facebook, Instagram  ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

ಇಮೇಜ್ ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :