ಭಾರತದಲ್ಲಿ ಮೋಬಿಸ್ಟಾರ್ ಡುಯಲ್ ಕ್ಯಾಮೆರಾ ಸೆಟಪಿನೊಂದಿಗೆ ಹೊಸ XQ Dual Selfie Star ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ

Updated on 23-May-2018
HIGHLIGHTS

ಫ್ರಂಟ್ ಕ್ಯಾಮೆರಾ 13MP ಮತ್ತು 8MP ಮೆಗಾಪಿಕ್ಸೆಲ್ ಜೋತೆಯಲ್ಲಿ ವೈಡ್ ಆಂಗಲ್ 120° ಬಾರ್ಡರ್ ರೇಂಜ್ ನೀಡುತ್ತದೆ.

ಭಾರತದಲ್ಲಿ ಮೋಬಿಸ್ಟಾರ್ ಕಂಪನಿಯು ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನನ್ನು ಬಿಡೂಡುಗಡೆ ಮಾಡಲಿದೆ. ಇದರ ಹೆಸರನ್ನು Mobiistar XQ Dual Selfie Star. ಈ ಕಂಪನಿ ಭಾರತದಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ ಬ್ರಾಂಡ್ಗಳಾದ ವಿವೋ, ಒಪ್ಪೋ, ಕ್ಸಿವೋಮಿಯಂತಹ ಬ್ರಾಂಡ್ಗಳ ಬಜೆಟ್ ವಿಭಾಗಕ್ಕೆ ಸ್ಪರ್ಧಿಸಲು ತಯಾರಾಗಿದೆ. ಈ ಕಂಪನಿ ಬಜೆಟ್ ವಿಭಾಗದಲ್ಲಿ ಅದರಲ್ಲು ಹೆಚ್ಚಾಗಿ ಸೆಲ್ಫಿಗಾಗಿ ಹೆಚ್ಚು ಗಮನಹರಿಸಿದೆ.

ಈ ಮೊಬಿಸ್ಟಾರ್ ಇಂಡಿಯಾ ಮೊದಲ ಮೊಬೈಲ್ 2017 ರಲ್ಲಿ ಆನ್ಲೈನ್ನಲ್ಲಿ ಹೊರಬಂದಿತು. ಈಗ ಈ ಸ್ಮಾರ್ಟ್ಫೋನ್ ಸಹ ತನ್ನ ಹಿಂದಿನ ಸ್ಮಾರ್ಟ್ಫೋನ್ ಆದ Zumbo S2 Dual ಸ್ಮಾರ್ಟ್ಫೋನ್ಗೆ ಹೋಲುತ್ತದೆ. ಈ ಹೊಸ Mobiistar XQ Dual Selfie Star ಮೊದಲ ನೋಟವನ್ನು ಮತ್ತು ಇದರ ಜೋತೆ ನಾವು ಕಳೆದ ಸಮಯದಿಂದ ಇದರ ಸ್ಪೆಸಿಫಿಕೇಷನ್ ನಿಮಗಾಗಿ ಇಲ್ಲಿಟ್ಟಿದ್ದೇವೆ.

Display.
ಈ ಹೊಸ Mobiistar XQ Dual Selfie Star ಇದರ ಡಿಸ್ಪ್ಲೇ 5.5 ಇಂಚಿನ ಸಂಪೂರ್ಣವಾದ ಫುಲ್ HD IPS LCD ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ನಿಮಗೆ 16 ಮಿಲಿಯನ್ ಬಣ್ಣಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.

Processor Information.  
ಈ ಹೊಸ ಸ್ಮಾರ್ಟ್ಫೋನಿನ ಪ್ರೊಸೆಸರ್ ಬಗ್ಗೆ ಹೇಳಬೇಕಾದರೆ ಇದು ಮೀಡಿಯಾ ಟೆಕ್ನ MTK MT6737T ಪ್ರೊಸೆಸರಿನೊಂದಿಗೆ Quad Core Cortex-A7 ಮತ್ತು ಸುಮಾರು 1.45GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಪ್ರೊಸೆಸರನ್ನು ಹೊಂದಿದೆ. ಇದು ನಿಮಗೆ ಆಂಡ್ರಾಯ್ಡ್ 7.1.2 ನೌಗಟನ್ನು ಬೆಂಬಲಿಸುತ್ತದೆ. ಅದೇ ರೀತಿಯಲ್ಲಿ ಇದರಲ್ಲಿದೆ 3GB ಯ RAM ಮತ್ತು ಇದರ ಮೊದಲ ಸೆಕ್ಯುರಿಟಿ ಪ್ಯಾಚ್ ಲೆವೆಲ್ 5ನೇ ಫೆಬ್ರವರಿಯಂದು ಮಾಡಲಾಗಿದೆ. ಅಲ್ಲದೆ ಇದರಲ್ಲಿ 32GB ಯ ಇಂಟರ್ನಲ್ ಸ್ಟೋರೇಜ್ ಮತ್ತು ಇದನ್ನು ನೀವು 128GB ಯ ವರೆಗೆ ಮೈಕ್ರೋ SD ಕಾರ್ಡ್ ಬಳಸಿ ವಿಸ್ತರಿಸಬವುದಾಗಿದೆ.

Camera.
ಈ ಮೋಬಿಸ್ಟಾರ್ ಕಂಪನಿಯ ಈ ಹೊಸ ಸ್ಮಾರ್ಟ್ಫೋನ್ ಮುಖ್ಯವಾಗಿ ಸೆಲ್ಫಿಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಅಂದ್ರೆ ಈ ಸ್ಮಾರ್ಟ್ಫೋನಿನ ಫ್ರಂಟ್ ಕ್ಯಾಮೆರಾ 13MP ಮತ್ತು 8MP ಮೆಗಾಪಿಕ್ಸೆಲ್ ಜೋತೆಯಲ್ಲಿ ನಿಮಗೆ ಇದು ವೈಡ್ ಆಂಗಲ್ 120° ಬಾರ್ಡರ್ ರೇಂಜ್ ನೀಡುತ್ತದೆ. ಆದರೆ ನನಗೆ ಈ ವೈಡ್ ಆಂಗಲ್ ಅಷ್ಟಗೇನು ಸರಿಯಾದ ರೀತಿಯಲ್ಲಿನ ಸಾಮರ್ಥ್ಯ ಹೊಂದಿಲ್ಲದ ಅನುಭವ ನೀಡಿದೆ.

ಮತ್ತು ಇದರ ಫ್ರಂಟಲ್ಲಿದೆ f/2.0 ಅಪೆರ್ಚರ್ ಮತ್ತು 7 ಹಂತದ ಫೇಸ್ ಬ್ಯೂಟಿ ಮೂಡನ್ನು ಒಳಗೊಂಡಿದೆ. ಇದರ ಫ್ರಂಟ್ ಕ್ಯಾಮೆರಾ ನನಗೆ ಒಂದು ರೀತಿಯಲ್ಲಿ ಕೂಲ್ ಅನ್ನುವ ಅನುಭವ ನೀಡಿದೆ. ಇದರಲ್ಲಿನ ಬ್ಯಾಕ್ ಕ್ಯಾಮೆರಾದ ಬಗ್ಗೆ ಮಾತನಾಡಬೇಕಾದ್ರೆ ಇದರ ಬ್ಯಾಕಲ್ಲಿದೆ ರೇರ್ ಸೆನ್ಸರ್ ಜೋತೆಯಲ್ಲಿ 13MP ಮೆಗಾಪಿಕ್ಸೆಲ್ ಮತ್ತು ನಿಮಗೆ ಇದರಲ್ಲಿ ಡ್ಯೂಯಲ್ ಟೋನ್ LED ಫ್ಲಾಶ್ ಸಹ ಲಭ್ಯವಿದೆ.

ಅಲ್ಲದೆ ಇದರ ಬ್ಯಾಕಲ್ಲಿ f/2.0 ಅಪೆರ್ಚರ್ ನೀಡಿದೆ. ಅಷ್ಟೇಯಲ್ಲದೆ ಇದರಲ್ಲಿ Auto Focus, PDAF, Night mode, Pro mode, Panorama HDR, Face beauty 7 ಸೌಲಭ್ಯದೊಂದಿಗೆ ಲಭ್ಯವಿದೆ. ಇದು ನಿಜವಾಗಿಯೂ ಒಂದು ಹೊಸ ಬಜೆಟ್ ಕೊಡುಗೆ ಎನ್ನಬವುದು.

Price.
ಈ ಮೋಬಿಸ್ಟಾರ್ XQ Dual ನಿಮಗೆ ಕೇವಲ 7,999 ರೂಗಳಲ್ಲಿ ಲಭ್ಯವಿದೆ. ಮತ್ತು ಇದು ನಮಗೆ ಇದೇ ಮೇ 30 ರಿಂದ ಪ್ರಾರಂಭವಾಗುವ ಫ್ಲಿಪ್ಕಾರ್ಟ್ನಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದೆ.  ಈ ಸಂಸ್ಥೆಯ ಸ್ಥಾಪಕರಾದ ಕಾರ್ಲ್ ಎನ್ಗೊ ಮೊಬಿಸ್ಟಾರ್ ಬಲವಾದ ಪಿಚ್ ಮಾಡುವಂತೆ ಖಚಿತಪಡಿಸಿಕೊಳ್ಳಲು ತನ್ನ ಜಾಗತಿಕ ಪ್ರೈಮ್ ಕಛೇರಿಗೆ ಭಾರತಕ್ಕೆ ಸ್ಥಳಾಂತರಗೊಂಡಿದ್ದಾರೆ. 

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram  ಮತ್ತು  YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :