ಮೈಕ್ರೋಮ್ಯಾಕ್ಸ್ ಹೊಸ YU ACE ಸ್ಮಾರ್ಟ್ಫೋನನ್ನು ಫುಲ್ ವಿಷನ್ ಡಿಸ್ಪ್ಲೇಯೊಂದಿಗೆ ಕೇವಲ 5,999 ರೂಗಳಲ್ಲಿ ಬಿಡುಗಡೆಗೊಳಿಸಿದೆ.

ಮೈಕ್ರೋಮ್ಯಾಕ್ಸ್ ಹೊಸ YU ACE ಸ್ಮಾರ್ಟ್ಫೋನನ್ನು ಫುಲ್ ವಿಷನ್ ಡಿಸ್ಪ್ಲೇಯೊಂದಿಗೆ ಕೇವಲ 5,999 ರೂಗಳಲ್ಲಿ ಬಿಡುಗಡೆಗೊಳಿಸಿದೆ.
HIGHLIGHTS

ಹೊಸ YU Ace ನಿಮಗೆ ಆಂಡ್ರಾಯ್ಡ್ 8 ಓರಿಯೊ ಮತ್ತು 18: 9 ಡಿಸ್ಪ್ಲೇಯೊಂದಿಗೆ ಬರುತ್ತದೆ ಇದು ಈ ಬೆಲೆಯ ಫೋನ್ಗಳಲ್ಲಿ ತುಂಬ ಅಪರೂಪವಾಗಿದೆ.

ಈ ವರ್ಷ Micromax ಹೊಸ YU Ace ಫೋನಿನೊಂದಿಗೆ ಭಾರತಕ್ಕೆ ಹೊಸ ಬಜೆಟ್ ಸ್ಮಾರ್ಟ್ಫೋನ್ ಬಜೆಟ್ ಮಾರುಕಟ್ಟೆಯಲ್ಲಿ ಕೇವಲ 5999 ರೂಗಳಲ್ಲಿ ತಂದಿದೆ. ಈ ಹೊಸ ಬಜೆಟ್ ಫೋನ್ ಇದಕ್ಕೆ ಸರಿಸಾಟಿಯಾದ Xiaomi ಯ Redmi 5A ಮತ್ತು Infinix Smart ನಂತಹ ರೀತಿಯ ಬೆಲೆ ಸೆಗ್ಮೆಂಟ್ ಫೋನ್ಗಳನ್ನು ಇಷ್ಟಪಡುವ ಗುರಿಯನ್ನು ಹೊಂದಿದೆ. ಈ ಹೊಸ YU Ace ನಿಮಗೆ ಆಂಡ್ರಾಯ್ಡ್ 8 ಓರಿಯೊ ಮತ್ತು 18: 9 ಡಿಸ್ಪ್ಲೇಯೊಂದಿಗೆ ಬರುತ್ತದೆ ಇದು ಈ ಬೆಲೆಯ ಫೋನ್ಗಳಲ್ಲಿ ತುಂಬ ಅಪರೂಪವಾಗಿದೆ.

https://data1.ibtimes.co.in/cache-img-851-315/en/full/697729/1535627923_yu-ace-launched.jpg

ಈ ಹೊಸ YU Ace ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ನ ಮೂಲ ಮಾದರಿಯು 2GB ಯ RAM ಮತ್ತು 16GB ಸ್ಟೋರೇಜ್ ಬರುತ್ತದೆ. ಇದರ ಎರಡನೇ ಅಥವಾ ಉನ್ನತ ಮಟ್ಟದ ಮಾದರಿ 3GB ಯ RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಹೊಸ YU Ace ಸ್ಮಾರ್ಟ್ ಫೇಸ್ ಅನ್ಲಾಕ್ ಮತ್ತು ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ. ಇದರ ಡಿಸ್ಪ್ಲೇ 720 × 1440 ಪಿಕ್ಸೆಲ್ ರೆಸೊಲ್ಯೂಷನ್ ಮತ್ತು 18: 9 ಆಕಾರ ಅನುಪಾತದೊಂದಿಗೆ ಫೋನ್ 5.45 ಇಂಚಿನ HD+ ಡಿಸ್ಪ್ಲೇಯನ್ನು ನೀಡುತ್ತದೆ.

https://www.mobigyaan.com/wp-content/uploads/2018/08/yu-ace-2.jpg 

ಈ ಫೋನ್ ನಿಮಗೆ ಫುಲ್ ವಿಷನ್ ಡಿಸ್ಪ್ಲೇಯ ಮೂಲಕ ಹೆಚ್ಚು ಆಕರ್ಷಣೀಯವಾಗಿದೆ. ಇದರಲ್ಲಿ 2D ಬಾಗಿದ ಗಾಜಿನ ಹೆಚ್ಚುವರಿ ಪದರದಿಂದ ರಕ್ಷಿಸಲಾಗಿದೆ. ಇದರ RAM ಫೋನ್ ಎರಡು ಮಾದರಿಗಳಲ್ಲಿ ಬರುತ್ತದೆ. 2GB ಮತ್ತು 3GB ಯ RAM ಅದೇ ರೀತಿಯಲ್ಲಿ ಈ ಫೋನ್ ಎರಡು ಸ್ಟೋರೇಜ್ ಅಂದ್ರೆ 16GB ಮತ್ತು 32GB ಯ ಸ್ಟೋರೇಜ್ಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಅನ್ನು ಕ್ವಾಡ್-ಕೋರ್ ಮೀಡಿಯಾಟೆಕ್ MT6738 ಪ್ರೊಸೆಸರ್ ಹೊಂದಿದೆ. 

ಕೊನೆಯದಾಗಿ ಇದರಲ್ಲಿ ಧೀರ್ಘಕಾಲದ ಬ್ಯಾಟರಿ ಅಂದ್ರೆ ಬೃಹತ್ 4000mAh ಬ್ಯಾಟರಿಯೊಂದಿಗೆ ಈ ಸ್ಮಾರ್ಟ್ಫೋನ್ ಬರುತ್ತದೆ. ಇದರ ಬ್ಯಾಕ್ ಕ್ಯಾಮರಾ 13MP  ಮೆಗಾಪಿಕ್ಸೆಲ್ ಸೆನ್ಸರ್ ಮತ್ತು ಫ್ರಂಟ್ 5MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo