ಲೆನೊವೋ ತಮ್ಮ ಹೊಸ Lenovo Thinkpad X1 Yoga ಲ್ಯಾಪ್ಟಾಪನ್ನು ಬಿಡುಗಡೆ ಮಾಡಿದ್ದು ಇದು ಟಚ್ ಮತ್ತು ಫಿಂಗರ್ಪ್ರಿಂಟ್ ಸೆನ್ಸರ್ ಲ್ಯಾಪ್ಟಾಪ್ ಆಗಿದೆ.

ಲೆನೊವೋ ತಮ್ಮ ಹೊಸ Lenovo Thinkpad X1 Yoga ಲ್ಯಾಪ್ಟಾಪನ್ನು ಬಿಡುಗಡೆ ಮಾಡಿದ್ದು ಇದು ಟಚ್ ಮತ್ತು ಫಿಂಗರ್ಪ್ರಿಂಟ್ ಸೆನ್ಸರ್ ಲ್ಯಾಪ್ಟಾಪ್ ಆಗಿದೆ.

ಇವತ್ತು ನಾವು ಲೆನೊವೋ ಕಂಪನಿಯ ಹೊಚ್ಚ ಹೊಸ Lenovo Thinkpad X1 Yoga ಲ್ಯಾಪ್ಟಾಪಿನ ಡೀಟೈಲ್ ಮಾಹಿತಿ ಇಲ್ಲಿ ನೋಡೋಣ. ನಂಗಂತೂ ಕಳೆದ ವರ್ಷದ Lenovo Yoga ಲ್ಯಾಪ್ಟಾಪ್ಗಳಿಗಿಂತ ಹೆಚ್ಚಾಗಿ ಇದು ಇಷ್ಟ ಆಗಿದೆ. ಹಾಗಾದ್ರೆ ಸ್ನೇಹಿತರೇ ಬನ್ನಿ ಈ ಲ್ಯಾಪ್ಟಾಪ್ನಲ್ಲಿ ಈ ವರ್ಷ ಏನೇನು ಬದಲಾವಣೆ ಬಂದಿದೆ ಅಂತ ನೋಡೋಣ.  ಮೊದಲಿಗೆ ಇದರ ಬಿಲ್ಡ್ ಮತ್ತು ಡಿಸೈನ್ ಬಗ್ಗೆ ಹೇಳಬೇಕಾದ್ರೆ ಈ Lenovo Thinkpad X1 Yoga ಹೈ-ಬ್ರಿಡ್ ಕಾರ್ಬನ್ ಮೆಟಿರಿಯಲ್ಗಳಿಂದ ಮಾಡಲ್ಪಟ್ಟಿದ್ದು ಒಂದು ಉತ್ತಮವಾದ ಪ್ರೀಮಿಯಂ ಲುಕ್ ನೀಡುತ್ತದೆ. ಈ ಬಾರಿ Thinkpad ಬ್ರಾಂಡ್ ಲೋಗೊ ನಿಜಕ್ಕೂ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ. ಈ ಹೊಸ ಲ್ಯಾಪ್ಟಾಪಲ್ಲಿ ನೀವು ಯೋಗಕಾರದ ಬಳಕೆಯನ್ನು ನೋಡಬವುದು.  

ಇದರ ಕೀಬೋರ್ಡ್ ಬಗ್ಗೆ ಹೇಳಬೇಕಾದ್ರೆ ಇದನ್ನು ಸಾಫ್ಟ್ ಪ್ಲಾಸ್ಟಿಕ್ ಮೆಟಿರಿಯಲ್ಗಳಿಂದ ಮಾಡಿದ್ದು ಉಳಿದ ಭಾಗ ಕೇವಲ ಹಲವಾರು ರೇಖೆಗಳಿಂದ ರಚತವಾಗಿದೆ. ಇದರ ಕೆಲ ಭಾಗದಲ್ಲಿ ನಿಮಗೆ ಕೆಲ ಗ್ರೇಲ್ಗಳು ಸಹ ಲಭ್ಯವಿದ್ದು ಇದು ಸ್ಪೀಕರ್ ಮತ್ತು ಹೀಟ್ ತಡಯುತ್ತದೆ. ಇದರಲ್ಲಿನ ಫಿಂಗರ್ಪ್ರಿಂಟ್ ಸೆನ್ಸರ್ ಕೀಬೋರ್ಡ್ ಕೆಳಭಾಗದಲ್ಲಿ ಲಭ್ಯವಿದ್ದು ಇದರ ಮೇಲೆ ಸೆನ್ಸರ್ ಸಹ ನೀಡಲಾಗಿದೆ. ಇದರೊಂದಿಗಿನ ನನ್ನ ಅನುಭವ ಹೇಳಬೇಕೆಂದರೆ ಇದರ ಫಿಂಗರ್ಪ್ರಿಂಟ್ ಸೆನ್ಸರ್ ಕೊಂಚ ಸ್ಲೋ ಇದೆ.  

ಇದರಲ್ಲಿ ಮತ್ತೋಂದು ಹೊಸ ಫೀಚರ್ ಅಂದ್ರೆ ಇದರಲ್ಲಿನ ವೆಬ್ ಕ್ಯಾಮೆರಾ. ಈ ಹೊಸ ಥರ್ಡ್ ಜೆನರೇಷನ್ ಲ್ಯಾಪ್ಟಾಪಲ್ಲಿ ನಿಮಗೆ ಮನ್ಯುಲಿ ಆನ್ ಆಫ್ ಮಾಡುವ ವೆಬ್ ಕ್ಯಾಮೆರಾವಿದೆ. ಲ್ಯಾಪ್ಟಾಪ್ ಆನ್ ಮಾಡದೇ ಕೆಲವೋಮ್ಮೆ ನಮಗೆ ಅಥವಾ ಬೇರೆಯವರಿಗೆ ತಿಳಿಯದೆ ಕ್ಯಾಮೆರಾ ಆನ್ ಆಫ್ ಮಾಡುವ ಈ ಫೀಚರ್ ಬಗ್ಗೆ ಸ್ವಲ್ಪ ಹೆಚ್ಚರಿಕೆಯಿಂದರಬೇಕು. ಇದರಲ್ಲಿ ನಿಮಗೆ 14 ಇಂಚಿನ WQHD ರೆಸೊಲ್ಯೂಷನ್ ಟಚ್ ಸ್ಕ್ರೀನ್ IPS ಪ್ಯಾನಲ್ ಲಭ್ಯವಾಗುತ್ತದೆ. ಇದರಲ್ಲಿ ನಿಮಗೆ ಡಾಲ್ಬಿ ವಿಷನ್ ಸಿಗೋದಿಲ್ಲ ಇದರಿಂದ ನೀವು HDR ಮತ್ತು 500 ಬ್ರೈಟ್ನೆಸ್ ಪಡೆಯಲಾಗುವುದಿಲ್ಲ.

   https://www.lenovo.com/medias/X1-yoga-feature-1.png?context=bWFzdGVyfHJvb3R8MjUwNTA4fGltYWdlL3BuZ3xoM2QvaDZkLzkyNDQwMjEyNjAzMTgucG5nfGE3MTg5MGE0YjY4OTlkMGViM2JlNDE0Yjk5ZGRiMzdhMGJkOGFjMmFkYzNjOGRmNmQ0MDA2ZTEzZGNkZWQwZmM&w=1920

ಇದರ ಆಡಿಯೋ ಬಗ್ಗೆ ಹೇಳಬೇಕಾದ್ರೆ Lenovo Thinkpad X1 Yoga ಲ್ಯಾಪ್ಟಾಪಿನಲ್ಲಿ ನಿಮಗೆ ಸಾಕಾಗುವಷ್ಟು ಆಡಿಯೋ ಲಭ್ಯವಿದೆ. ಇದು ಲೌಡ್ ಮತ್ತು ಕ್ಲಿಯರಾಗಿದೆ ಅಂದ್ರೆ 15X15 ರೂಮಲ್ಲಿ ಬೆಸ್ಟ್ ಕ್ವಾಲಿಟಿಯಲ್ಲಿ ಪಡೆಯುವಿರಿ ಆದರೆ ಇದರ ಸ್ಪೀಕರ್ ಕೆಳಗಿರುವ ಕಾರಣದಿಂದಾಗಿ ಅದರ ಬೇಸ್ ನೀವು ಕಳೆದುಕೊಳ್ಳುವಿರಿ. ಇದರಲ್ಲಿ ನಿಮಗೆ 1 ಫುಲ್ ಸೈಜ್ USB ಪೋರ್ಟ್, 2 ಥಂಡರ್ ಬೋರ್ಡ್ ಎಡಭಾಗದಲ್ಲಿ ಲಭ್ಯವಿದ್ದು ಇದರ ಬಲಭಾಗದಲ್ಲಿ 1 ಫುಲ್ ಸೈಜ್ HDMI ಪೋರ್ಟ್, ಡಿಸ್ಪ್ಲೇ ಪೋರ್ಟ್, ಸಿಂಗಲ್ 3.5mm ಆಡಿಯೋ ಜಾಕ್, ಲಾಕ್ ಪೋರ್ಟ್ ಮತ್ತು 1 ಫುಲ್ ಸೈಜ್ USB ಪೋರ್ಟ್ ಲಭ್ಯವಿದೆ.

ಇದರಲ್ಲಿ ಮತ್ತೋಂದು ವಿಶೇಷತೆಯೆಂದ್ರೆ ಇದರಲ್ಲಿ ನಿಮಗೆ ಲೆನೊವೊ ಪೆನ್ ಸಹ ಬರುತ್ತದೆ. ಆದರೆ ಇದು ಹೇಗೆ ಕೆಲಸ ಮಾಡುತ್ತದೆ ಅನ್ನದೊಂದು ಇನ್ನು ನನಗೆ ಅರ್ಥವಾಗಲಿಲ್ಲ. ನಾನು ತುಂಬಾ ಸಲ ಪ್ರಯತ್ನ ಮಾಡಿದ್ರು ಏನು ಪ್ರಾಯೋಜನ ಆಗಿಲ್ಲ. ಇದನ್ನು ನಾನು ಚಾರ್ಜ್ ಸಹ ಮಾಡಿ ನೋಡ್ದೆ ಆದರೂ ಯಾವುದೇ ಪ್ರಾಯೋಜನ ಆಗಿಲ್ಲ. ನಂಗೆ ಅರ್ಥ ಆಗ್ತಾ ಎಲ್ಲ ಏನ್ ಮಾಡಬೇಕು ಅಂತ ನಾನು ಈ ಪೆನ್ ಟೆಸ್ಟ್ ಮಾಡೋಕೆ ತುಂಬ ಅಸೆ ಮಾಡಿಕೊಂಡಿದ್ದೆ ನನ್ನಾಸೆ ಎಲ್ಲ ವೆಸ್ಟ್ ಆಗೋಯ್ತು.

ಇದರ ಪರ್ಫಾರ್ಮೆನ್ಸ್ ಬಗ್ಗೆ ಹೇಳಬೇಕಾದ್ರೆ ಇದು ನಿಮಗೆ Intel Core i5 ಜೋತೆಯಲ್ಲಿ ಬರುವುದರಿಂದ ಅದ್ದೂರಿಯಾಗಿದೆ ಆದರೂ ಇದರ ಕೆಲ ಫೀಚರ್ಗಳು ಮಾತ್ರ ಕಡಿಮೆಯಾಗಿವೆ. ಇದರಲ್ಲಿ ಒಮ್ಮೆಲೇ ಪ್ರತಿನಿತ್ಯ ಬಳಸುವ ಹಲವಾರು ಟ್ಯಾಬ್ಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಕ್ರೋಮ್, ಐಟ್ಯೂನ್, ವರ್ಡ್ ಇನ್ನು ಇತರೆ ಚಟುವಟಿಕೆಗಳನ್ನು ಆರಾಮಾಗಿ ಮಾಡಬವುದು. ಇದರಲ್ಲಿ ಯಾವುದೇ ರೀತಿಯ ಕೊರತೆ ಕಂಡು ಬಂದಿಲ್ಲ. ಇದರೊಂದಿಗೆ ನಿಮಗೆ 16GB DDR4 ಲಭ್ಯವಿದೆ. 

ಕೊನೆಯದಾಗಿ ಇದರ ಬ್ಯಾಟರಿ ಬಗ್ಗೆ ಹೇಳಬೇಕೆಂದ್ರೆ ಲೆನೊವೊ ವೆಬ್ಸೈಟಲ್ಲಿ ಒಮ್ಮೆ ಫುಲ್ ಚಾರ್ಜ್ ಮಾಡಿದರೆ 15 ಘಂಟೆಗಳ ಕಾಲ ಬ್ಯಾಟರಿ ಲೈಫ್ ನೀಡುವುದಾಗಿ ಹೇಳಿಕೊಂಡಿದೆ. ಆದರೆ ಇದನ್ನು 60-65% ಬ್ರೈಟ್ನೆಸ್ ಇಟ್ಟು ನೈಜವಾಗಿ ಬಳಸಿದ ನಂತರ 6-7 ಘಂಟೆ ಮಾತ್ರ ಬರುತ್ತದೆ.  

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo