ಇದು ಲೆನೊವೋ ಕಂಪನಿಯ ಹೊಚ್ಚ ಹೊಸ IdeaPad 330S ಇಲ್ಲಿದೆ ಇದರ ಸಂಪೂರ್ಣವಾದ ಮಾಹಿತಿ

ಇದು ಲೆನೊವೋ ಕಂಪನಿಯ ಹೊಚ್ಚ ಹೊಸ IdeaPad 330S ಇಲ್ಲಿದೆ ಇದರ ಸಂಪೂರ್ಣವಾದ ಮಾಹಿತಿ
HIGHLIGHTS

ಇದನ್ನು ನೋಡುವುದರಿಂದ ಇದರಲ್ಲಿ ಪ್ಲ್ಯಾಸ್ಟಿಕ್ ಸೇರಿಸಲಾಗಿದೆ ಎಂದು ಹೇಳುವುದು ಕಷ್ಟಕರವಾಗಿದೆ.

ಸ್ನೇಹಿತರೇ ಇವತ್ತು ನಾವು ಹೊಸದಾಗಿ ಬಿಡುಗಡೆಯಾಗಿರುವ Ideapad 330S ಲ್ಯಾಪ್ಟಾಪ್ ಬಗ್ಗೆ ಮಾತನಾಡೋಣ. ಇದರಲ್ಲಿದೆ Intel Core i3 ಪ್ರೊಸೆಸರ್ ಮತ್ತು 4GB RAM ಚಿಪ್ನೊಂದಿಗೆ 1TB ಹಾರ್ಡ್ ಡ್ರೈವನ್ನು ಒಳಗೊಂಡಿದೆ. ಹಾಗಾದ್ರೆ ಇದರಲ್ಲಿ ಇನ್ನು ಏನೇನಿದೆ ನೋಡೋಣ ಬನ್ನಿ. ಮೊದಲಿಗೆ ಇದರ ಬಿಲ್ಡ್ ಮತ್ತು ಡಿಸೈನ್ ಬಗ್ಗೆ ಹೇಳಬೇಕೆಂದರೆ ಈ ಹೊಸ Ideapad 330S ಲ್ಯಾಪ್ಟಾಪನ್ನು ಹೆಚ್ಚು ನಯಗೊಳಿಸಲು ಇದರ ನಿರ್ಮಾಣದಲ್ಲಿ ಅಲ್ಯೂಮಿನಿಯಂ ಮತ್ತು ಪ್ಲ್ಯಾಸ್ಟಿಕ್ ಸೇರಿಸಲಾಗಿದೆ. ಇದನ್ನು ನೋಡುವುದರಿಂದ ಇದರಲ್ಲಿ ಪ್ಲ್ಯಾಸ್ಟಿಕ್ ಸೇರಿಸಲಾಗಿದೆ ಎಂದು ಹೇಳುವುದು ಕಷ್ಟಕರವಾಗಿದೆ.

ಇದರ ಒಳಗೆ ಮತ್ತು ಹೊರಗಡೆ ಮತ್ತು ಇದರ ಮೇಲೆ ಮತ್ತು ಕೆಳಗೆ ಅಚ್ಚುಕಟ್ಟಾದ ಮ್ಯಾಟ್ ಫಿನಿಶಿಂಗ್ ಲುಕ್ ನೀಡುತ್ತದೆ. ಒಟ್ಟಾರೆಯಾಗಿ ಈ Ideapad 330S ಲ್ಯಾಪ್ಟಾಪ್ ಪ್ರೀಮಿಯಂ ಲುಕ್ ಮತ್ತು ಡಿಸ್ಪ್ಲೇ ಸ್ಟೈಲ್ ಉತ್ತಮವಾಗಿದೆ ಕೈಯಲ್ಲಿ ಹಿಡಿದುಕೊಳ್ಳಿ ಅಥವಾ ಕೈಯಿಂದ ದೂರವಿಟ್ಟರು ಇದರ ಡಿಸ್ಪ್ಲೇ ಸಂಪೂರ್ಣವಾದ ಒಂದು ಕ್ಲೀನ್ ಮ್ಯಾಟ್ ಲುಕನ್ನು ಹೊಂದಿ ಯಶಸ್ವಿಯಾಗುತ್ತದೆ. ಈ ಎಲ್ಲಾ ಜೊತೆಗೆ Ideapad 330S ಇರುವುದಕ್ಕಿಂತ ಕಡಿಮೆ ಮತ್ತು ಪ್ರೀಮಿಯಂ ಕಾಣುವಲ್ಲಿ ಯಶಸ್ವಿಯಾಗುತ್ತದೆ.

https://laptoping.com/specs/wp-content/uploads/2018/06/Lenovo-IdeaPad-330S-15IKB-81F5004EUS-15.6-Laptop-Intel-Core-i5-8GB-RAM-128GB-SSD-Platinum-Gray.jpg

ಈ ಹೊಸ Ideapad 330S ಲ್ಯಾಪ್ಟಾಪ್ 14 ಇಂಚಿನ HD ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರೊಂದಿಗೆ 1920X1080 ಡಿಸ್ಪ್ಲೇ HD ರೆಸುಲ್ಯೂಷನಿನೊಂದಿಗೆ ಮ್ಯಾಟ್ IPS ಪ್ಯಾನಲ್ ಹೊಂದಿದೆ. ನನ್ನ ಅತ್ರ ರಿವ್ಯೂಗಾಗಿ ಬಂದಿರುವ ಈ ಲ್ಯಾಪ್ಟಾಪ್ ಫುಲ್ HD IPS ಡಿಸ್ಪ್ಲೇಯಾಗಿದ್ದು ಇದು ನಿಜಕ್ಕೂ ಅದ್ದೂರಿಯಾಗಿದೆ. ಇದರ ಡಿಸ್ಪ್ಲೇ ಬ್ರೈಟ್ನೆಸ್ ಉತ್ತಮವಾಗಿದೆ. ಸಾಮಾನ್ಯವಾಗಿ ಬೆಳಗಿನ ಬೆಳಕಿಗಾಗಿ ಸದ್ಯಕ್ಕೆ ಕಾಣುವುದುದಕ್ಕಿಂತ ಹೆಚ್ಚು ಬ್ರೈಟ್ನೆಸ್ ನೀಡಬವುದುದಾಗಿತ್ತು. ಈ ಲ್ಯಾಪ್ಟಾಪಿನ ಡಿಸ್ಪ್ಲೇ ನಿಮಗೆ 180 ಡಿಗ್ರಿ ಯಾಂಗಲ್ ನೀಡುತ್ತದೆ.

ಇದು ನಿಮಗೆ ನೋಡಲು ಮತ್ತು ಟೈಪ್ ಮಾಡಲು ನಿಮಗೆ ಹೇಗಿದ್ದರೂ ಹೆಚ್ಚು ಅನುವು ಮಾಡಿಕೊಡುತ್ತದೆ. ಈ ಹೊಸ Ideapad 330S ಲ್ಯಾಪ್ಟಾಪಿನಲ್ಲಿನ ಆಡಿಯೋ ನಿಜಕ್ಕೂ ಉತ್ತಮವಾಗಿದೆ. ಇದರಲ್ಲಿನ ಗರಿಷ್ಟವಾದ ವಾಲ್ಯೂಮ್ ಒಂದು ರೂಮಲ್ಲಿ ಅತ್ಯುತ್ತಮವಾದ ಅನುಭವ ನೀಡುತ್ತದೆ. ಇದರಲ್ಲಿ ನಿಮಗೆ  ಡಾಲ್ಬಿ ಸ್ಪೀಕರ್ 2X2 W ನಲ್ಲಿ ಬರುತ್ತದೆ. ಒಟ್ಟಾರೆಯಾಗಿ ಇದರ ಬೇಸಿಕ್ ಔಟ್ಪುಟ್ ಉತ್ತಮವಾಗಿದೆ.
ಇದರ IO ಬಗ್ಗೆ ಹೇಳಬೇಕೆಂದ್ರೆ ಇದರ ಬಲಭಾಗದಲ್ಲಿ ನಿಮಗೆ ಫುಲ್ ಸೈಜ್ USB ಪೋರ್ಟ್ ಮತ್ತು ಕಾರ್ಡ್ ರೀಡರ್ ಸ್ಲಾಟ್ ನೀಡಿದರೆ. ಇದರ ಎಡಭಾಗದಲ್ಲಿ ಚಾರ್ಜಿಂಗ್ ಪೋರ್ಟ್ HDMI ಪೋರ್ಟ್ ಮತ್ತೋಂದು ಫುಲ್ ಸೈಜ್ USB ಪೋರ್ಟ್ ಹಾಗು 3.5mm ಆಡಿಯೋ ಜಾಕ್ ಮತ್ತು ಟೈಪ್ C ಪೋರ್ಟ್ ಹೊಂದಿದೆ.

https://laptoping.com/specs/wp-content/uploads/2018/06/Lenovo-IdeaPad-330S-15IKB-81F5004EUS-15.6-Laptop-Intel-Core-i5-8GB-RAM-128GB-SSD-Platinum-Gray-2.jpg

Ideapad 330S ಲ್ಯಾಪ್ಟಾಪಿನಲ್ಲಿ ಯಾವುದೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿಲ್ಲ. ಇದರ ಕೀಬೋರ್ಡ್ ಉತ್ತಮವಾಗಿ ರಚನೆಯಾಗಿದೆ. ಇದರಲ್ಲಿ ನಿಮಗೆ ಎರಡು ಹಂತಗಳ ಕೀಬೋರ್ಡ್ ಬ್ರೈಟ್ನೆಸ್ ಪಡೆಯುವಿರಿ. ಇದರ ಟಚ್ ಪ್ಯಾಡ್ ನಿಜಕ್ಕೂ ಸಾಫ್ಟ್ ಮತ್ತು ವೇಗವಾಗಿ ರೆಸ್ಪೋನ್ಸ್ ನೀಡುತ್ತದೆ. ಈಗಾಗಲೇ ಹೇಳಿದಂತೆ Ideapad 330S ಲ್ಯಾಪ್ಟಾಪ್ನಲ್ಲಿ  Intel Core i3 ಪ್ರೊಸೆಸರ್ ಮತ್ತು 4GB RAM ಚಿಪ್ನೊಂದಿಗೆ 1TB ಹಾರ್ಡ್ ಡ್ರೈವನ್ನು ಒಳಗೊಂಡಿದೆ. ಅಲ್ಲದೆ ಇದರ ಗ್ರಫಿಕ್ಸ್ ಕಾರ್ಡ್ ಇಂಟೆಲ್ UHT ಗ್ರಫಿಕ್ಸ್ 620 ಕಾರ್ಡ್ ಹೊಂದಿದೆ.

ಕೊನೆಯದಾಗಿ ಇದರ ಬ್ಯಾಟರಿ ಲೈಫ್ ಬಗ್ಗೆ ಹೇಳಬೇಕೆಂದರೆ Ideapad 330S ಲ್ಯಾಪ್ಟಾಪ್ನಲ್ಲಿ ನಿಮಗೆ ಒಟ್ಟು 5 ಘಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ. ಈ ರೇಂಜಿನ ಬೆಲೆಯಲ್ಲಿ ಇದು ಉತ್ತಮವಾಗಿದೆ. ಇದರ ಬೆಲೆ 35,990 ರೂಗಳಲ್ಲಿ ಈ ಲ್ಯಾಪ್ಟಾಪ್ ಡಿಸೆಂಟ್ ಆಗಿದೆ. ಆದರೆ ಇದರಲ್ಲಿ ನೀವು Extra RAM ಬಳಸಬೇಕಾಗುತ್ತದೆ. ಮತ್ತು ಇದರಲ್ಲಿ ಯಾವುದೇ ಗ್ರಾಫಿಕ್ ಕಾರ್ಡ್ ಸ್ಲಾಟ್ ನೀಡಿಲ್ಲ ಇದರ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ.

https://laptoping.com/specs/wp-content/uploads/2018/06/Lenovo-IdeaPad-330S-15IKB-81F5004EUS.jpg

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo