ನಿಮಗೀಗಾಗಲೇ ತಿಳಿದಿರುವಂತೆ ಆನ್ಲೈನ್ ವೀಡಿಯೋ ಬ್ರೌಸಿಂಗ್ ಮತ್ತು ಲೈವ್ಸ್ ಸ್ಟ್ರೀಮಿಂಗ್ಗಾಗಿ ಯೂಟ್ಯೂಬ್ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರತಿದಿನ ಜನರು ಹೊಸ ಹೊಸ ವೀಡಿಯೊಗಳನ್ನು ವೀಕ್ಷಿಸುವ ವಿಧಾನವನ್ನು ಮಾರ್ಪಡಿಸಿದ್ದಾರೆ. ಆದಾಗ್ಯೂ ಆನ್ಲೈನ್ ಸೇವೆಯಾಗಿ YouTube ಮೊಬೈಲ್ ಡೇಟಾವನ್ನು ಭಾರಿ ಪ್ರಮಾಣದಲ್ಲಿ ಬಳಸುತ್ತದೆ. ವಿಶೇಷವಾಗಿ HD 720 ಪಿಕ್ಸೆಲ್ ರೆಸಲ್ಯೂಶನ್ ದೀರ್ಘವಾದ ವೀಡಿಯೊಗಳನ್ನು ಕೆಲಒಮ್ಮೆ ನೋಡಲಾಗದಿದ್ದರೆ ನಿಮಗಿದೆ ರಾಮಬಾಣ.
ಆದರೆ ಸಕ್ರಿಯ ಇಂಟರ್ನೆಟ್ ಸಂಪರ್ಕವಿಲ್ಲದೆ ಅಂತಹ ವೀಡಿಯೋಗಳನ್ನು ಸುಲಭವಾಗಿ ವೀಕ್ಷಿಸಬಹುದಾದ ಒಂದು ಮಾರ್ಗವಾಗಿದೆ. ನೀವು ಆಫ್ಲೈನ್ ವೀಕ್ಷಣೆಗೆ ಬಯಸುವ ವಿಡಿಯೋಗಳನ್ನು ನೀವು ಉಳಿಸುವ ಆಯ್ಕೆಯನ್ನು ಇದು ಹೊಂದಿದೆ. ಆದರೆ ಇದು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವಾಗ ಮಾತ್ರ ನೀವು ಆಫ್ಲೈನ್ನಲ್ಲಿ ವೀಕ್ಷಿಸಲು ಬಯಸುವ ವೀಡಿಯೊವನ್ನು ಉಳಿಸಬವುದು. ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದು ಇಲ್ಲಿ ತಿಳಿಯಿರಿ.
ಹಂತ 1. ಮೊದಲು ನೀವು YouTube ಅಪ್ಲಿಕೇಶನನ್ನು ಪ್ರಾರಂಭಿಸಿರಿ.
ಹಂತ 2. ನೀವು ಸೇವ್ ಮಾಡಲು ಬಯಸುವ ವೀಡಿಯೊವನ್ನು ತೆರೆದು ಕೆಲ ಸೆಕೆಂಡ್ (ಜಾಹಿರಾತನ್ನು ಹೊರೆತು ಪಡಿಸಿ 5-10 ಸೆಕೆಂಡ್) ವೀಕ್ಷಿಸಿರಿ.
ಹಂತ 3. ನಂತರ ಈಗ ವೀಡಿಯೋವಿನ ಕೆಳಗೆ 'ಥಂಬ್ಸ್ ಅಪ್ ಐಕಾನ್ಗಳ' ಜೊತೆಗೆ ವೀಡಿಯೊ ಕೆಳಗೆ ಒಂದು ಡೌನ್ಲೋಡ್ / ಸೇವ್ ಐಕಾನ್ ಕಾಣುವಿರಿ.
ಹಂತ 4. ಈಗ ಡೌನ್ಲೋಡ್ ಐಕಾನ್ ಕ್ಲಿಕ್ ಮಾಡಿ ನಂತರ ನಿಮಗೊಂದು 'ಪಾಪ್ ಅಪ್' (ಸ್ಕ್ರೀನ್ ಮೆಸೇಜ್) ಪಡೆಯುವಿರಿ.
ಹಂತ 5. ಈ 'ಪಾಪ್ ಅಪ್' ಪೆಟ್ಟಿಗೆಯಲ್ಲಿ ನಿಮ್ಮ ವೀಡಿಯೊಗಾಗಿ ನೀವು ಬಯಸಿದ ರೆಸಲ್ಯೂಶನನ್ನು ಆಯ್ಕೆ ಮಾಡಿರಿ ಮತ್ತು Ok ಕ್ಲಿಕ್ ಮಾಡಿ.
ಹಂತ 6. ಇದು ಡೌನ್ಲೋಡ್ ಪೂರ್ಣಗೊಂಡ ನಂತರ ನೀವು ಅಪ್ಲಿಕೇಶನ್ ಆಫ್ ಹೋಮ್ ಪೇಜ್ಗೆ ಹೋಗಿ Menu ಹೋಗಿ Offline ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 7. ಇಂಟರ್ನೆಟ್ ಅಥವಾ ಮೊಬೈಲ್ ಸಂಪರ್ಕವಿಲ್ಲದೆ ನೀವು ಯಾವ ಸಮಯದಲ್ಲಾದರೂ ನೀವು ವೀಕ್ಷಿಸಬಹುದಾದ ಎಲ್ಲಾ ಡೌನ್ಲೋಡ್ ಮಾಡಲಾದ ವೀಡಿಯೊಗಳ ಪಟ್ಟಿಯನ್ನು ಇದು ನಿಮಗೆ ತೋರಿಸುತ್ತದೆ. ಈಗ ವೀಡಿಯೊವನ್ನು ಕ್ಲಿಕ್ ಮಾಡಿ ಮತ್ತು ವೀಕ್ಷಿಸುವುದನ್ನು ಪ್ರಾರಂಭಿಸಿ.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / DigitKannad