ಇಂದಿನಿಂದ JioPhone ನಲ್ಲಿ ಫೇಸ್ಬುಕ್ ಅಪ್ಲಿಕೇಶನನ್ನು ಅಳವಡಿಸುವ ಹಂತದ ಪ್ರಕ್ರಿಯೆಯು Jio Phone ನಲ್ಲಿ FB ಅಪ್ಲಿಕೇಶನನ್ನು facebook install ಮಾಡಲು ಅನುಸರಿಸಬೇಕಾದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಮೊದಲನೆಯದಾಗಿ ಜಿಯೋ ಫೋನ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಅಲ್ಲ. ಆದರೆ ಹಿಂದೆ ನೋಕಿಯಾ ಆಶಾದೊಂದಿಗೆ ಫೈರ್ಫಾಕ್ಸ್ OS ಅನ್ನು ಬಿಡುಗಡೆ ಮಾಡಿತ್ತು. ಈಗ ನೀವು ಜಿಯೋ ಫೋನ್ನಲ್ಲಿ FB ಅಪ್ಲಿಕೇಶನ್ ಸ್ಥಾಪಿಸಲು ಅನುಸರಿಸಬೇಕಾದ ಹಂತಗಳು ಈ ಕೆಳಗಿವೆ.
1. ಮೊದಲಿಗೆ ನಿಮ್ಮ ಜಿಯೋ ಫೋನ್ನ ಡೇಟಾವನ್ನು ಆನ್ ಮಾಡಿ ನಿಮ್ಮ ಬಳಕೆದಾರಿಕೆಯ ದೃಢೀಕರಣವನ್ನು ಪೂರ್ಣಗೊಳಿಸಿಕೊಂಡಿರಬೇಕು.
2. ಈಗಾಗಲೇ ನಾವು ಪರೀಕ್ಷಿಸಿದ ಪ್ರಕಾರ ನೀವು ಫೇಸ್ಬುಕ್ ಅಪ್ಲಿಕೇಶನ್ನ ಲಿಂಕ್ ಮಾಡಲು MyJio ಅಪ್ಲಿಕೇಶನ್ ಹೋಗಿ ಅಲ್ಲಿಂದ ರೆಕ್ವೇಸ್ಟ್ ಕಳುಹಿಸಬೇಕಾಗುತ್ತದೆ.
3. ನಂತರ ನೀವು MyJio ಅಪ್ಲಿಕೇಶನ್ ನಿಮಗೆ FB ಅಪ್ಲಿಕೇಶನ್ Install ಮಾಡಲು ನೇರ ಲಿಂಕ್ ಹೊಂದಿರುವ ಮೆಸೇಜನ್ನು ಕಳುಹಿಸುತ್ತದೆ.
4. ಅದೇ ಪರದೆಯಲ್ಲಿ ನಿಮಗೆ MyJio ಅಪ್ಲಿಕೇಶನ್ನಿಂದ ಕಳುಹಿಸಿದ ಮೆಸೇಜಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
5. ಈಗ ಫೇಸ್ಬುಕ್ ಅಪ್ಲಿಕೇಶನನ್ನು ಇಲ್ಲಿಂದ ಡೌನ್ಲೋಡ್ ಮಾಡಿ ಮತ್ತು Install ಮಾಡಿಕೊಳ್ಳಿ.
6. ಈಗ ನಿಮ್ಮ ಜಿಯೋ ಫೋನ್ನಲ್ಲಿ FB ಅಪ್ಲಿಕೇಶನ್ ಯಶಸ್ವಿಯಾದ ನಂತರ ನಿಮ್ಮ FB ಖಾತೆಯ ವಿವರಗಳನ್ನು ನಮೂದಿಸಿ ಬಳಸಬವುದು.
ಸೂಚನೆ: ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ನ ಇದನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದರೆ ಜಿಯೋ ಫೋನ್ನಲ್ಲಿ ಈ ಫೇಸ್ಬುಕ್ನ ಬಳಕೆಯನ್ನು 'Market Place' ನಿಂದ Install ಮಾಡಿ ಮೇಲಿನ ಕೆಲ ಪ್ರಕ್ರಿಯೆಯಿಂದ ಇದನ್ನು ಬಳಸಬವುದು. ಇದು ನಿಮಗೆ 100% ಕೆಲಸ ಮಾಡುತ್ತದೆ. ಏಕೆಂದರೆ ಇದನ್ನು ನಾವೀಗಾಗಲೇ ಬಳಸಿ ನೋಡಿದ್ದೇವೆ.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.