ಈಗ ಭಾರತದಲ್ಲಿ ಆಧಾರ್ ಕಾರ್ಡಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿರುವುದು ನೂರಕ್ಕೆ ನೂರು ಸತ್ಯ. ನಿಮ್ಮ ಆಧಾರ್ ವಿವರಗಳಲ್ಲಿ ಯಾವುದೇ ದೋಷ ಮತ್ತು ಇತರ ತಪ್ಪುಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನೇಕ ಸೇವೆಗಳಿಗೆ ಪರಿಣಾಮಕಾರಿಯಾಗಿ ಕಡ್ಡಾಯವಾಗಿ ಸೇರಿಸಬೇಕಾಗಿದೆ. ನಿಮ್ಮ ಎಲ್ಲಾ ಜನಸಂಖ್ಯಾ ವಿವರಗಳೂ ಕೂಡಾ ಹೊಂದಾಣಿಕೆ ಆಗಬೇಕು. ನಿಮ್ಮ ಹೆಸರು, ಲಿಂಗ, ಜನ್ಮ ದಿನಾಂಕದಲ್ಲೂ ಯಾವುದೇ ತಪ್ಪು ಅಸಮಂಜಸತೆ ಇದ್ದಲ್ಲಿ ನೀವು ಅವೆರಡನ್ನು ಲಿಂಕ್ ಮಾಡಲು ಸಾಧ್ಯವಾಗದಿರಬಹುದು ಎಂದರ್ಥ.
ಇದಲ್ಲದೆ ನಿಮ್ಮ ಇತರ ಕಾರಣಗಳಿರಬಹುದು ಮತ್ತು ನಿಮ್ಮ 12 ಅಂಕಿಯ ವಿಶಿಷ್ಟ ಗುರುತಿನ ಪುರಾವೆಗಳನ್ನು ನೀವು ನವೀಕರಿಸಬೇಕಾಗಬಹುದು. ಈಗ ನೀವು ಮನೆಯಲ್ಲೇ ಕುಂತ್ತು ನಿಮ್ಮ ಆಧಾರ್ ಕಾರ್ಡಿನ ಒಟ್ಟು ಮಾಹಿತಿಯನ್ನು ಅಪ್ಡೇಟ್ ಮಾಡಬವುದು. ನಿಮ್ಮ ಆಧಾರ್ ಕಾರ್ಡಿನಲ್ಲಿ ಯಾವುದಾದರು ಮಾಹಿತಿ ತಪ್ಪಿದೆಯೇ? ಅದನ್ನು ಸರಿಪಡಿಸುವುದೇಗೆ ಇಲ್ಲಿಂದ ತಿಳಿದುಕೊಳ್ಳಿರಿ.
ನಿಮ್ಮ ಆಧಾರ್ ಅನ್ನು ನವೀಕರಿಸಲು ನೀವು ಬಯಸಿದರೆ, ಅದಕ್ಕಾಗಿ UIDAI ವೆಬ್ಸೈಟ್ ಪ್ರಕಾರ ನಿಮ್ಮ ವಿವರಗಳನ್ನು ನವೀಕರಿಸಲು ಅಥವಾ ಸರಿಪಡಿಸಲು ಮೂರು ಮಾರ್ಗಗಳಿವೆ:
1. ನಿಮ್ಮ ವಿವರಗಳನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡಿರಿ.
2. ಪೋಸ್ಟ್ ಮೂಲಕ ನವೀಕರಣವನ್ನು ಪಡೆಯಿರಿ.
3. ಹತ್ತಿರದ ಆಧಾರ್ ನೋಂದಣಿ ಕೇಂದ್ರವನ್ನು ಭೇಟಿ ಮಾಡಿ
Updating Online:
ಆಧಾರ್ ಜೊತೆ ರಿಜಿಸ್ಟರ್ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ ವ್ಯಕ್ತಿಗಳು ಅದನ್ನು ಆನ್ಲೈನ್ನಲ್ಲಿ ನವೀಕರಿಸಲು ಸಾಧ್ಯವಾಗುತ್ತದೆ. ಆನ್ಲೈನ್ ವಹಿವಾಟುಗಳು OTP ದೃಢೀಕರಿಸಿದ ನಂತರವಷ್ಟೇ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ಗೆ ನೋಂದಾಯಿಸುವುದು ಕಡ್ಡಾಯವಾಗಿದೆ.
ನವೀಕರಣಕ್ಕಾಗಿ ನೀವು ಆನ್ಲೈನ್ ಸ್ವಯಂ ಸೇವಾ ನವೀಕರಣ ಪೋರ್ಟಲ್ (SSUP) ಅನ್ನು ಬಳಸುತ್ತಿದ್ದರೆ ನಿಮ್ಮ ವಿವರಗಳನ್ನು (Name, Address, DoB, Gender, Mobile & Email) ನವೀಕರಿಸಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲಾಯೇ ಎಂದು ಮೊದಲು ಖಚಿತಪಡಿಸಿಕೊಳ್ಳಿ.
ಆಧಾರ್ ಕಾರ್ಡ್ಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ಸ್ವಯಂ ಸೇವಾ ನವೀಕರಣ ಪೋರ್ಟಲ್ಗೆ ಲಾಗಿನ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಹೆಸರು ಬದಲಾವಣೆ / ತಿದ್ದುಪಡಿ / ಉಪನಾಮ ಬದಲಾವಣೆ ವಿನಂತಿಯನ್ನು ಆನ್ಲೈನ್ನಲ್ಲಿ ಸಲ್ಲಿಸಿರಿ.
ಆಧಾರ್ ಕಾರ್ಡಿನ ಹೆಸರು ಬದಲಾವಣೆ / ತಿದ್ದುಪಡಿ / ಉಪನಾಮ ಬದಲಾವಣೆಗಳಿಗೆ ಸ್ವಯಂ ದೃಢೀಕರಿಸಿದ ಗುರುತು ಸರ್ಕಾದ ಕಡೆಯಿಂದ ನಿಮ್ಮನ್ನು ಗುರುತಿಸುವ ದಾಖಲೆಯ (ಸಾಫ್ಟ್ ನಕಲು) ಅನ್ನು ಸ್ಕ್ಯಾನ್ ಮಾಡಿ ಮತ್ತು ಇಲ್ಲಿ ಅಪ್ಲೋಡ್ ಮಾಡಿರಿ.
ಹೆಸರು ಬದಲಾವಣೆ / ತಿದ್ದುಪಡಿ / ಉಪನಾಮ ಬದಲಾವಣೆ ವಿನಂತಿಯನ್ನು ಸಲ್ಲಿಸಿದ ಬಳಿಕ ನಿಮ್ಮ ಆಥಾರ್ ಕಾರ್ಡ್ ಅಪ್ಡೇಟ್ ವಿನಂತಿ ಸಂಖ್ಯೆ ನೀಡಲಾಗುವುದು, ಅದನ್ನು ನಿಮ್ಮ ರಿಕ್ವೆಸ್ಟ್ ಸ್ಟೇಟಸನ್ನು ಟ್ರ್ಯಾಕ್ ಮಾಡಲು ಸಹ ಇದನ್ನು ಬಳಸಬಹುದು.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada. .