ಈಗ ನೀವು ಮನೆಯಲ್ಲೇ ಕುಂತ್ತು ನಿಮ್ಮ ಪಾನ್ ಕಾರ್ಡಿನ ಮಾಹಿತಿಯನ್ನು ಸರಿಪಡಿಸಿಕೊಳ್ಳಬವುದು. PAN ಕಾರ್ಡ್ ಎನ್ನುವುದು ವಿವಿಧ ವಿಷಯಗಳಿಗಾಗಿ ಉದಾಹರಣೆಗೆ ಬ್ಯಾಂಕ್ ಖಾತೆ ತೆರೆಯುವುದು, ಸಾಲಗಳಿಗೆ ಅರ್ಜಿ ಸಲ್ಲಿಸುವುದು, ಆದಾಯ ತೆರಿಗೆ ಫೈಲಿಂಗ್ ಇತ್ಯಾದಿಗಳನ್ನು ಸರ್ಕಾರಿ ನೀಡಿರುವ ಗುರುತಿನ ದಾಖಲೆಯಾಗಿದೆ. ಆದ್ದರಿಂದ ನಿಮ್ಮ ಪಾನ್ ಕಾರ್ಡ್ನಲ್ಲಿನ ಎಲ್ಲಾ ವಿವರಗಳನ್ನೂ ನೀವು ತಿಳಿದುಕೊಳ್ಳಬೇಕು. ನಿಮ್ಮ ಪಾನ್ ಕಾರ್ಡ್ ವಿವರಗಳನ್ನು ನೀವು ಅನೇಕ ಮಾರ್ಗಗಳನ್ನು ಅನುಸರಿಸುವ ಮೂಲಕ ಪರಿಶೀಲಿಸಬಹುದು.
ಮೊದಲಿಗೆ ನೀವು ನಿಮ್ಮ ಪಾನ್ ಮಾಹಿತಿಯನ್ನು ಮುಖ್ಯವಾಗಿ 2 ಮಾರ್ಗಗಳಲ್ಲಿ ಪಡೆಯಬವುದು.
1) Search by PAN number
2) Search by Name and Date of Birth
1) Search by PAN number.
ಇದಕ್ಕಾಗಿ ನೀವು ಪ್ಯಾನ್ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ತೆರೆದ ನಂತರ ನಿಮ್ಮ ಬಳಿ ಇರುವ ನಿಮ್ಮ ಪಾನ್ ಸಂಖ್ಯೆಯನ್ನು ನಮೂದಿಸಿ. ಮತ್ತು ಕೊಟ್ಟಿರುವ ಕ್ಯಾಪ್ಚಾವನ್ನು ಸಹ ನಮೂದಿಸಿರಿ. ಇದಲ್ಲದೆ ನಿಮ್ಮ ಹೆಸರು, ಪ್ರದೇಶ ಕೋಡ್, ನ್ಯಾಯವ್ಯಾಪ್ತಿ, ವಿಳಾಸ ಮತ್ತು ಇತರ ಮಾಹಿತಿಯನ್ನು ಇಲ್ಲಿಂದ ವೀಕ್ಷಿಸಬವುದು.
2) Search by Name and Date of Birth.
ಒಂದು ವೇಳೆ ನೀವು ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕದ ಮೂಲಕ ಮಾಹಿತಿ ಪಡೆಯ ಬಯಸಿದರೆ ಮೊದಲು ನೀವು ಆದಾಯ ತೆರಿಗೆ ವೆಬ್ಸೈಟ್ ಭೇಟಿ ನೀಡಿ. ತೆರೆದ https: //incometaxindiaefiling.gov.in) ನಿಮ್ಮ ಪಾನ್ ನೋ" ಕ್ಲಿಕ್ ಮಾಡಿ ಹೆಸರು, ಸ್ಥಿತಿ, ಲಿಂಗ, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನಮೂದಿಸಿ ನಿಮ್ಮ ಎಲ್ಲಾ ಪಾನ್ ಕಾರ್ಡ್ ವಿವರಗಳನ್ನು ಪಡೆಯಲು Submit ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಇಲ್ಲಿಂದ ವೀಕ್ಷಿಸಬವುದು.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿ Facebook / Digit Kannada..