ಭಾರತದಲ್ಲಿ ಲಾವಾ ತನ್ನ ಹೊಚ್ಚ ಹೊಸ Lava Z91 ಫೇಸ್ ಅನ್ಲಾಕ್ ಫೀಚರಿನೊಂದಿಗೆ ಕೇವಲ 9,999 ರೂಗಳಲ್ಲಿ ಬಿಡುಗಡೆ ಮಾಡಿದೆ.

Updated on 05-Apr-2018

ಈಗ ಲಾವಾ ಕಂಪನಿಯು ಭಾರತದಲ್ಲಿ ತನ್ನ ಹೊಚ್ಚ ಹೊಸ 'Z' ಸರಣಿಯನ್ನು ವಿಸ್ತರಿಸುತ್ತಾ 'Z91' ಸ್ಮಾರ್ಟ್ಫೋನನ್ನು ಕೇವಲ 9,999 ರೂಪಾಯಿಗಳಿಗೆ ಇದರ ಎಲ್ಲ ವೈಶಿಷ್ಟ್ಯದೊಂದಿಗೆ ಪ್ರಾರಂಭಿಸಿದೆ. ಅಲ್ಲದೆ ಇದು ಸಂಪೂರ್ಣವಾಗಿ 18:9 ವಿಶಾಲ ಪರದೆಯ ಡಿಸ್ಪ್ಲೇಯನ್ನು ಮತ್ತು ಗಾಜಿನ ಮುಕ್ತಾಯದೊಂದಿಗೆ ನೀಲಿ ಬಣ್ಣದಿಂದ ಮೂಡಿ ಬರುತ್ತದೆ. ಇದು ಇದೇ ತಿಂಗಳ ಮಧ್ಯದಲ್ಲಿ ಅಂದ್ರೆ ಏಪ್ರಿಲ್ ತಿಂಗಳೊಳಗೆ ಈ ಫೋನ್ ದೇಶದಾದ್ಯಂತ ಸುಮಾರು 1,00,000 ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

 

ಇದರ ಬಗ್ಗೆ ಇನ್ನು ಹೆಚ್ಚಾಗಿ ಹೇಳಬೇಕೆಂದರೆ ಈ ಲಾವಾ Z91 ನಲ್ಲಿ 5.7 ಇಂಚಿನ ಪೂರ್ಣ ಎಚ್ಡಿ + ಡಿಸ್ಪ್ಲೇ ಹೊಂದಿದೆ. 18: 9 ಆಕಾರ ರೇಟಿಯೊಂದಿಗೆ ಇದು 3GB ಯ ರಾಮ್ ಮತ್ತು 32GB ಇಂಟರ್ನಲ್ ಸ್ಟೋರೇಜಿನೊಂದಿಗೆ 128GB ವರೆಗೆ ವಿಸ್ತರಿಸಬಹುದಾದ ಮೀಡಿಯಾಟೆಕ್ ಎಂಟಿಕೆ 6739 ಪ್ರೊಸೆಸರ್ ಹೊಂದಿದೆ. ಒಂದು ಚಾರ್ಜ್ನಲ್ಲಿ ಸುಮಾರು 24 ಗಂಟೆಗಳವರೆಗೆ ಬಾಳಿಸುವ 3000mAh ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಪ್ಯಾಕ್ ಮಾಡುತ್ತದೆ.

ಇದರ ಫೋಟೋಗ್ರಾಫಿಯ ಬಗ್ಗೆ ಹೇಳಬೆಂದರೆ ಈ ಲಾವಾ Z91 ಬೆಸ್ಟ್ 13 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಫ್ಲಾಶ್ನಲ್ಲಿ ಹೊಂದಿದೆ. ಹಿಂದಿನ ಫಲಕದಲ್ಲಿ ಸ್ಮಾರ್ಟ್ಫೋನ್ ಫಿಂಗರ್ಪ್ರಿಂಟ್ ಸಂವೇದಕವನ್ನು ಕೂಡಾ ಸಹ ಮಾಡುತ್ತದೆ.

ನಿಮ್ಮದೆಯಾದ ಬಜೆಟಿನಲ್ಲಿ ಇಂದಿನ ಬೆಸ್ಟ್ ಡೀಲ್ಗಳ ಸಂಪೂರ್ಣ ಮಾಹಿತಿ ಇಲ್ಲಿಂದ ಪಡೆಯಿರಿ.

ಈ ಸ್ಮಾರ್ಟ್ಫೋನ್ ಎರಡು ವರ್ಷದ ಖಾತರಿ ಕರಾರುಗಳೊಂದಿಗೆ ಬರುತ್ತದೆ. ಮತ್ತು ಇದರೊಂದಿಗೆ ನಿಮಗೆ ಟೆಲಿಕಾಂ ಸೇವೆ ಒದಗಿಸುವ ಭಾರತಿ ಏರ್ಟೆಲ್ ಮೂಲಕ ನೀವು 2000 ರೂಗಳನ್ನು ಬಳಕೆದಾರನು ಖರೀದಿಯ ದಿನಾಂಕದಿಂದ ಒಂದು ವರ್ಷದೊಳಗೆ ಒಂದು ವೇಳೆ ಹಾಳಾದರೆ ಅದನ್ನು ಕಂಪನಿ ಒಂದು ಬಾರಿ ಉಚಿತವಾಗಿ ಯಾವುದೇ ಖರ್ಚು ಇಲ್ಲದೆ ಡಿಸ್ಪ್ಲೇಯನ್ನು ಬದಲಿಸುತ್ತದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :