ಭಾರತದಲ್ಲಿ ಅತಿ ಹೆಚ್ಚು ನಿರೀಕ್ಷಿತ ಮತ್ತು ಜನಪ್ರಿಯ Redmi Note 7 Pro ಸ್ಮಾರ್ಟ್ಫೋನ್ ಈಗ ಅಧಿಕೃತವಾಗಿ ಬಿಡುಗಡೆಯಾಗಿದೆ. ಭಾರತದಲ್ಲಿ Xiaomi ಕಂಪನಿ ಫೆಬ್ರವರಿ ಕೊನೆಯ ವಾರದಲ್ಲಿ Redmi Note 7 ಮತ್ತು Redmi Note 7 Pro ಎಂಬ ಎರಡು ಹೊಸ ಸ್ಮಾರ್ಟ್ಫೋನಗಳನ್ನು ನಂಬಲಾಗದ ಬೆಲೆಯ ರೇಂಜಲ್ಲಿ ಬಿಡುಗಡೆಗೊಳಿಸಿದೆ. ಈ ಫೋನ್ಗಳಲ್ಲಿ Redmi Note 7 Pro ಹೆಚ್ಚು ಅದ್ದೂರಿ ಮತ್ತು ಆಕರ್ಷಕವಾಗಿದೆ.
ಈ ಫೋನ್ ಮೊಟ್ಟ ಮೊದಲ ಬಾರಿಗೆ ಭಾರತದ ನವದೆಹಲಿಯಲ್ಲಿ 28ನೇ ಫೆಬ್ರವರಿ 2019 ರಂದು ಮಧ್ಯಾಹ್ನ 12:00 ಕ್ಕೆ ನಡೆದ ಕಾರ್ಯಕ್ರಮವೊಂದರಲ್ಲಿ Xiaomi ಇದನ್ನು ಘೋಷಿಸಿದೆ. ಈ Redmi Note 7 Pro ಕಂಪನಿ ಮುಖ್ಯವಾಗಿ ನವೀಕರಿಸಿದ ಪ್ರೊಸೆಸರ್, ಹೆಚ್ಚಿನ ಸ್ಟೋರೇಜ್ ಮತ್ತು ನಂಬಲಾಗದ ಕ್ಯಾಮೆರಾಗಳನ್ನು ಒಳಗೊಂಡಂತೆ ಹಲವಾರು ರೀತಿಯ ಭರ್ಜರಿ ಫೀಚರ್ಗಳನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಇದರೊಂದಿಗೆ ಮತ್ತಿತರ ಡಿಸ್ಪ್ಲೇ, ಬ್ಯಾಕ್ ಕ್ಯಾಮೆರಾ, ಫ್ರಂಟ್ ಕ್ಯಾಮೆರಾ, ಪರ್ಫಾರ್ಮೆನ್ಸ್, ಬ್ಯಾಟರಿ, ಮೆಮೊರಿ, ಸ್ಟೋರೇಜ್, ಸೆನ್ಸರ್ಮ, ಕನೆಕ್ಟಿವಿಟಿ ಮತ್ತು ಬೆಲೆ ಹಾಗು ಲಭ್ಯತೆಯ ಮಾಹಿತಿ ಪಡೆಯಿರಿ.
ಡಿಸ್ಪ್ಲೇ ಮಾಹಿತಿ.
ಈ ಹೊಸ Redmi Note 7 Pro ಸ್ಮಾರ್ಟ್ಫೋನ್ ನಿಮಗೆ 19.5: 9 ಆಕಾರ ಅನುಪಾತದೊಂದಿಗೆ 1080 x 2340 ರೆಸುಲ್ಯೂಷನಿನ 409 ppi ಡೆನ್ಸಿಟಿಯನ್ನು ನೀಡುತ್ತದೆ. ಅಲ್ಲದೆ 6.3 ಇಂಚಿನ ಫುಲ್ HD+ IPS LCD ಸ್ಕ್ರೀನ್ ಅನ್ನು ಹೊಂದಿದೆ. ಮತ್ತು ವಾಟರ್ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಈ Redmi Note 7 Pro ಫೋನ್ನ ಮುಂಭಾಗ ಮತ್ತು ಹಿಂಭಾಗವನ್ನು 2.5D ಬಾಗಿದ ಗೊರಿಲ್ಲಾ ಗ್ಲಾಸ್ 5 ಸೇರಿಸಿಕೊಂಡಿದೆ.
ಬ್ಯಾಕ್ ಕ್ಯಾಮೆರಾ ಮಾಹಿತಿ.
ಇದರ ಹಿಂದೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಇದು 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಅನ್ನು f/ 1.79 ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಸೆಕೆಂಡರಿ ಡೆಪ್ತ್ ಸೆನ್ಸರ್ನೊಂದಿಗೆ ಒಳಗೊಂಡಿದೆ. ಕಂಪನಿಯು AI ಯ ದೃಶ್ಯಗಳನ್ನು ಪತ್ತೆ ಹಚ್ಚಲು AI ಪೋರ್ಟ್ರೇಟ್ 2.0, ಮತ್ತು ನೈಟ್ ಮೋಡ್ ಸೇರಿದಂತೆ ಫೋನ್ನ ಕ್ಯಾಮೆರಾ ಅಪ್ಲಿಕೇಶನ್ನಲ್ಲಿ ಹಲವಾರು AI ಚಾಲಿತ ವೈಶಿಷ್ಟ್ಯಗಳನ್ನು ಸೇರಿಸಿದೆ. ಹೆಚ್ಚುವರಿಯಾಗಿ ಈ ಫೋನ್ನಲ್ಲಿನ ಹಿಂಬದಿಯ ಕ್ಯಾಮರಾದಲ್ಲಿ 4K ವೀಡಿಯೋ ರೆಕಾರ್ಡಿಂಗ್ಗೆ ಬೆಂಬಲಿಸುತ್ತದೆ.
ಫ್ರಂಟ್ ಕ್ಯಾಮೆರಾ ಮಾಹಿತಿ.
ಇದರ ಸೆಲ್ಫಿ ಕ್ಯಾಮರಾ 13MP ರೆಸಲ್ಯೂಶನ್ ಚಿತ್ರಗಳನ್ನು ತಲುಪಿಸಲು ಪಿಕ್ಸೆಲ್ ಬಿನ್ನಿಂಗ್ ಬಳಸುತ್ತದೆ. ಮತ್ತು ಕಡಿಮೆ ಬೆಳಕಿನ AI ದೃಶ್ಯ ಪತ್ತೆ ಮತ್ತು AI ಭಾವಚಿತ್ರ ಮೋಡ್ ಒಂದು ಸ್ಥಿರ ಹ್ಯಾಂಡ್ಹೆಲ್ಡ್ ರಾತ್ರಿ ಶೂಟಿಂಗ್ ಮೋಡ್ ಸೇರಿದಂತೆ ವಿವಿಧ ಸಾಫ್ಟ್ವೇರ್ ವೈಶಿಷ್ಟ್ಯಗಳೊಂದಿಗೆ ಲೋಡ್ ಬರುತ್ತದೆ.ಅಲ್ಲದೆ ಇದರಲ್ಲಿ ನೀವು HDR ಮೂಡ್ ಸಹ ಬಳಸಬವುದು. ಅಲ್ಲದೆ ಫ್ರಂಟಲ್ಲಿ 1080p@30fps ರೆಸಲ್ಯೂಶನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಬವುದು. ಫೇಸ್ ಅನ್ಲಾಕ್ ಫೀಚರ್ ಸಹ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಪರ್ಫರ್ಮೆನ್ಸ್ ಮಾಹಿತಿ.
ಈ Redmi Note 7 Pro ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 675 ಪ್ರೊಸೆಸರ್ನೊಂದಿಗೆ ಬರುತ್ತದೆ. ಇದರಲ್ಲಿನ CPU ಬಗ್ಗೆ ಹೇಳಬೇಕೆಂದರೆ ಇದರಲ್ಲಿ ಓಕ್ಟಾ ಕೊರ್ (2x2.0 GHz Kryo 460 Gold & 6x1.7 GHz Kryo 460 ಸಿಲ್ವರ್ ಅನ್ನು ಹೊಂದಿದ್ದು ಇದು ಅಡ್ರಿನೊ 612 ಜಿಪಿಯು ಅನ್ನು ಹೊಂದಿದೆ. ಅಲ್ಲದೆ ಆಂಡ್ರಾಯ್ಡ್ 9.0 (ಪೈ ) MIUI 10 ಅನ್ನು ರನ್ ಮಾಡುತ್ತದೆ.
ಬ್ಯಾಟರಿ ಮಾಹಿತಿ.
ನಿಮಗೆ ತೆಗೆಯಲಾಗದ Li-Po 4000mAh ಬ್ಯಾಟರಿಯನ್ನು ನೀಡಿದೆ. ಈ ಫೋನ್ ಫಾಸ್ಟ್ ಚಾರ್ಜ್ ವರ್ಷನ್ 4 ಅನ್ನು ಬೆಂಬಲಿಸುವುದರೊಂದಿಗೆ ಕ್ವಿಕ್ ಫಾಸ್ಟ್ ಚಾರ್ಜ್ 3.0 ಅನ್ನು ಸಹ ಬೆಂಬಲಿಸುತ್ತದೆ. Redmi Note 7 Pro ಫೋನ್ ಕೂಡ USB ಟೈಪ್ C ಪೋರ್ಟ್ ಅನ್ನು ಬೆಂಬಲಿಸುತ್ತದೆ. ಕಂಪನಿಯ ಪ್ರಕಾರ ಒಮ್ಮೆ ಪೂರ್ತಿ ಚಾರ್ಜ್ ಮಡಿದ ನಂತರ ಈ ಫೋನ್ ನಿಮಗೆ 251 ಘಂಟೆ ಸ್ಟಾಂಡ್ ಬೈ, 38 ಘಂಟೆ ಮ್ಯೂಸಿಕ್ ಪ್ಲೇ ಬ್ಯಾಕ್, 8.25 ಘಂಟೆ ಗೇಮಿಂಗ್, 11 ಘಂಟೆ ವಿಡಿಯೋ ಪ್ಲೇ ಬ್ಯಾಕ್, 5 ಘಂಟೆ FHD ರೆಕಾರ್ಡಿಂಗ್ ಮತ್ತು 45.30 ಘಂಟೆ ಕಾಲಿಂಗ್ ಅವಧಿಯನ್ನು ನೀಡುತ್ತದೆಂದು ಹೇಳಿದೆ.
ಮೆಮೊರಿ & ವೇರಿಯಂಟ್ಗಳ ಮಾಹಿತಿ.
Redmi Note 7 Pro ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ ಎರಡು ವೇರಿಯಂಟ್ಗಳಲ್ಲಿ ಲಭ್ಯವಿದೆ. ಅವೆಂದರೆ 4GB ಯ RAM ಮತ್ತು 64GB ಯ ಸ್ಟೋರೇಜ್ ಮತ್ತೊಂದು 6GB ಯ RAM ಮತ್ತು 128GB ಯ ಸ್ಟೋರೇಜ್ ರೂಪಾಂತರ. ಅಲ್ಲದೆ ಈ ಸ್ಟೋರೇಜ್ ನಿಮಗೆ ಕಡಿಮೆಯಾದರೆ ಮೈಕ್ರೋ SD ಕಾರ್ಡ್ ಬಳಸುವ ಮೂಲಕ ಸುಮಾರು 256GB ವರೆಗೆ ವಿಸ್ತರಿಸಿಕೊಳ್ಳಬವುದು.
ಮೆಮೊರಿ & ವೇರಿಯಂಟ್ಗಳ ಮಾಹಿತಿ.
Redmi Note 7 Pro ಸ್ಮಾರ್ಟ್ಫೋನ್ ನಿಮಗೆ ಹಲವಾರು ರೀತಿಯ ಸೆನ್ಸರ್ಗಳನ್ನು ನೀಡುತ್ತದೆ. ಅದರಲ್ಲಿ ಮುಖ್ಯವಾಗಿ ಫಿಂಗರ್ಪ್ರಿಂಟ್ ಸೆನ್ಸರ್ , ಎಕ್ಸ್ಸಿಸೋಲೋಮೀಟರ್ ಸೆನ್ಸರ್, ಗೈರೊ ಸೆನ್ಸರ್, ಪ್ರೋಕ್ಸಿಮಿಟಿ ಸೆನ್ಸರ್, ಕಂಪಾಸ್ ಹಾಗು ಈ ಸ್ಮಾರ್ಟ್ಫೋನಿನ ಫ್ರಂಟ್ ಸೆಲ್ಫಿ ಕ್ಯಾಮೆರಾದಲ್ಲಿ ನಿಮಗೆ ಫೇಸ್ ಅನ್ಲಾಕ್ ಸೆನ್ಸರೊಂದಿಗೆ ಹಲವಾರು AI ಫೀಚರ್ಗಳನ್ನು ಈ ಸ್ಮಾರ್ಟ್ಫೋನ್ ಹೊಂದಿದೆ.
ಕನೆಕ್ಟಿವಿಟಿ ಮಾಹಿತಿ.
Redmi Note 7 Pro ಸ್ಮಾರ್ಟ್ಫೋನಿನ ಕನೆಕ್ಟಿವಿಟಿ ಬಗ್ಗೆ ಹೇಳಬೇಕೆಂದರೆ ಇದರಲ್ಲಿ ನಿಮಗೆ Wi-Fi 802.11 a/b/g/n/ac, ಡುಯಲ್ ಬ್ಯಾಂಡ್ Wi-Fi ಡೈರೆಕ್ಟ್, ಹಾಟ್ಸ್ಪಾಟ್ ಮತ್ತು ಬ್ಲೂಟೂತ್ 5.0, A2DP, LE ಸಪೋರ್ಟ್ ಮಾಡುತ್ತದೆ. ಇದರೊಂದಿಗೆ GPS ಲೊಕೇಶನ್ ಸೆನ್ಸರ್ ಸಹ A-GPS, GLONASS, BDS ಹೊಂದಿದೆ. ಇದರಲ್ಲಿ ನಿಮಗೆ FM ರೇಡಿಯೋ ಮತ್ತು ಇದರಲ್ಲಿ ಪ್ರಸಾರವಾಗುವುದನ್ನು ಸಹ ರೆಕಾರ್ಡಿಂಗ್ ಮಾಡಬವುದು.
ಬೆಲೆ ಮತ್ತು ಲಭ್ಯತೆಯ ಮಾಹಿತಿ.
Redmi Note 7 Pro ಸ್ಮಾರ್ಟ್ಫೋನ್ ಭಾರತದಲ್ಲಿ ಇದೇ ತಿಂಗಳ 13ನೇ ಮಾರ್ಚ್ 2019 ರಂದು ಮಧ್ಯಾಹ್ನ 12:00 ಘಂಟೆಗೆ ಮೊದಲ ಬಾರಿಗೆ ಮಾರಾಟವಾಗಲಿದೆ. ಇದರ ಬೆಳೆಯನ್ನು ಈಗಾಗಲೇ ಫ್ಲಿಪ್ಕಾರ್ಟ್ ನಲ್ಲಿ ಅಪ್ಡೇಟ್ ಮಾಡಿದ್ದೂ 13,999 ರೂಗಳಲ್ಲಿ ಲಭ್ಯವಾಗಲಿದೆ. ಈ ಫೋನ್ ಮುಖ್ಯವಾಗಿ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಾಗಲಿದೆ. ನೀವು ಇದನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಲಿಂಕ್ Redmi Note 7 Pro ಮೇಲೆ ಕ್ಲಿಕ್ ಮಾಡಿ ನೋಟಿಫೈ ಅಥವಾ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬವುದು.