ಈಗಾಗಲೇ ನಡೆದಿರುವ ರಿಲಯನ್ಸ್ ಜಿಯೋವಿನ AGM ಅನುಯಲ್ ಜನರಲ್ ಮೀಟಿಂಗ್ 2019 ಬಗ್ಗೆ ಅಲ್ಪ ಸ್ವಲ್ಪ ಮಾಹಿತಿಯನ್ನು ತಿಳ್ಕೊಂಡಿದ್ದೇವೆ. ಆದರೆ ಇಲ್ಲಿ ದೇಶದ ಜನ ಹೆಚ್ಚಾಗಿ ಹೊಸ ಜಿಯೋಫೋನ್ 3 ಅನ್ನು ನಿರೀಕ್ಷಿಸುತ್ತಿತ್ತು ಆದರೆ ಅದು ಬರಲಿಲ್ಲ ಅದರ ಬದಲಾಗಿ ಜಿಯೋ ಫೈಬರ್ ವೆಲ್ಕಮ್ ಆಫರ್ ಜೊತೆಗೆ ಫ್ರೀ ಫ್ರೀ ಟಿವಿ...
ಹೌದು ಜಿಯೋ ಉಚಿತವಾದ ಟಿವಿ ನೀಡಲಿದೆ. ಇದಲ್ಲದೆ ಹಲವಾರು ಅಫೀಷಿಯಲ್ ಇಂಟ್ರೆಸ್ಟಿಂಗ್ ಘೋಷಣೆಗಳನ್ನು ರಿಲಯನ್ಸ್ ಜಿಯೋವಿನ ಮಾಲೀಕ ಮತ್ತು ರಿಲಯನ್ಸ್ ಇಂಡಸ್ಟ್ರಿಯಲ್ ಲಿಮಿಟೆಡ್ ಮೆಂಬರ್ಗಳು ಸೇರಿ ಘೋಷಿಸಿದ್ದಾರೆ. 5ನೇ ಸೆಪ್ಟೆಂಬರ್ 2019 ಕ್ಕೆ ಜಿಯೋ ಕಮಾರ್ಷಿಯಲಿ 3 ವರ್ಷಗಳನ್ನು ಪೂರ್ತಿಗೊಳಿಸಲಿದೆ ನಾವು ನೀವು ಸೇರಿ ಈ ವಿಡಿಯೋ ಮೂಲಕ ಆರ್ಥಿಕ ಶುಭಯಗಳನ್ನು ನೀಡೋಣ.
ಈ ಬಾರಿ ಹಲವಾರು ಅಫೀಷಿಯಲ್ ಇಂಟ್ರೆಸ್ಟಿಂಗ್ ಘೋಷಣೆಗಳನ್ನು ರಿಲಯನ್ಸ್ ಜಿಯೋವಿನ ಮಾಲೀಕ ಮುಖೇಶ್ ಧೀರೂಭಾಯಿ ಅಂಬಾನಿ ಮತ್ತು ರಿಲಯನ್ಸ್ ಇಂಡಸ್ಟ್ರಿಯಲ್ ಲಿಮಿಟೆಡ್ ಮೆಂಬರ್ಗಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಸೇರಿ ಘೋಷಿಸಿದ್ದಾರೆ. ಮೊದಲಿಗೆ ಜಿಯೋವಿನ ಬಳಕೆದಾರರ ಮಾಹಿತಿ ಬಗ್ಗೆ ನೋಡಬೇಕೆಂದರೆ ಈವರೆಗೆ 340 ಮಿಲಿಯನ್ ಬಳಕೆದಾದರೂ ಜಿಯೊವನ್ನು ಸೇರಿದ್ದಾರೆ ಈ ಮೂಲಕ ದೇಶದ ಅತಿ ದೊಡ್ಡ ಮತ್ತು ಟಾಪ್ 1 ಟೆಲಿಕಾಂ ಕಂಪನಿಯಾಗಿದೆ. ಇದಷ್ಟೆಯಲ್ಲದೆ ರಿಲಯನ್ಸ್ ಜಿಯೋ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿಯು ಸಹ ಹೌದು. ಇದರೊಂದಿಗೆ ಹಲವಾರು ಹೊಸ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ ಮತ್ತು ಅದರ ಮೇಲೆ ಈಗಾಗಲೇ ಕೆಲಸ ಸಹ ನಡೆಸುತ್ತಿದ್ದಾರೆ.
ಇದರಲ್ಲಿ Internet And Things ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ ಅಂದ್ರೆ ಈಗಾಗಲೇ ದೇಶದಲ್ಲಿ ಹಲವಾರು ಸ್ಥಳಗಳಲ್ಲಿ ನೆಟ್ವರ್ಕ್ ತೊಂದರೆಗಳಿವೆ. ಅದನ್ನು ಸಾಧ್ಯವಾಗುವ ಮಟ್ಟಕ್ಕೆ ಸುಧಾರಿಸಿ ಉತ್ತಮ ನೆಟ್ವರ್ಕ್ ನೀಡುವ ಬಗ್ಗೆ ಕೆಲಸ ಮಾಡಲಿದೆ. ಈ ಮೂಲಕ ಭವಿಷ್ಯದಲ್ಲಿ ಕನೆಕ್ಟೆಡ್ ಡಿವೈಸ್ ದೇಶದ ಮೂಲೆ ಮೂಲೆಯಲ್ಲಿ ಬಳಸಬವುದು.
ಈಗ ಜಿಯೋವಿನ ಹೋಂ ಬ್ರಾಡ್ಬ್ಯಾಂಡ್ ಬಗ್ಗೆ ನೋಡಬೇಕೆಂದರೆ ಇದರ ಟೆಸ್ಟಿಂಗ್ ನಿಮಗೆ ಈಗಾಗಲೇ ತಿಳಿದಿರುವಂತೆ ಕಳೆದ ವರ್ಷದ AGM 2018 ರಲ್ಲಿ ಬಹಿರಂಗವಾದಗಲಿಂದ ನಡೆಯುತ್ತಿದೆ. ಸುಮಾರು 5 ಲಕ್ಷ ಜನರು ದೇಶದ ಬೇರೆ ಬೇರೆ ನಗರ ಮತ್ತು ಗ್ರಾಮೀಣ ವಲಯದಲ್ಲಿ ಈ ಜಿಯೋ ಹೋಂ ಬ್ರಾಡ್ಬ್ಯಾಂಡ್ ಟೆಸ್ಟಿಂಗ್ ನಡೆಸುತ್ತಿದ್ದಾರೆ. ಇದು ಸಹ ಯಾವಾಗ ಜನ ಸಾಮಾನ್ಯರಿಗೆ ಲಭ್ಯವಾಗುತ್ತೆ ಅನ್ನುವ ಮಾಹಿತಿ ನೀಡಿಲ್ಲ.
ಇದರ ಸೆಟಪ್ ಬಾಕ್ಸ್ ಇದರೊಂದಿಗೆ ಇದರ UI ಸಹ ತೋರಿಸಲಾಗಿತ್ತು. ಇದಲ್ಲದೆ ಇದರ ಸ್ಪೀಡ್ ಟೆಸ್ಟ್ ಸಹ ನಡೆಸಲಾಗಿತ್ತು ಇದರ ಸ್ಪೀಡ್ ಬರೋಬ್ಬರಿ 1gbps ಅಂದ್ರೆ ಒಂದು ಗೀಗ ಬೈಟ್ ಪರ್ ಸಕೇಂಡ್. ಸಾಮಾನ್ಯವಾಗಿ ಟೆಲಿಕಾಂಗಳ ಸ್ಪೀಡ್ ನೋಡಬೇಕೆಂದರೆ 5 ರಿಂದ 10mbps ಸಿಗೋದು ಸರ್ವೇ ಸಾಮಾನ್ಯ ಆದ್ರೆ ಜಿಯೋವಿನ ಈ ಒಂದು ಗೀಗ ಬೈಟ್ ಪರ್ ಸಕೇಂಡ್ ಸಿಕ್ಕಾಪಟ್ಟೆ ಹೈ ಸ್ಪೀಡ್ ಆಗಿರುತ್ತೆ. ಇದರೊಂದಿಗೆ ಇದರ ಡೆಮೋ ಸಹ ಮಲ್ಟಿ ಉಸೆರ್ ವಿಡಿಯೋ ಕಾಲ್ ಅಥವಾ ವಿಡಿಯೋ ಕಾನ್ಫರೆನ್ಸ ಈ ಮೂಲಕ ನೀವು ಜಿಯೋ ಗೀಗ ಫೈಬರ್ ಜೊತೆಗೆ ಒಂದು ಕ್ಯಾಮೆರಾ ಕನೆಕ್ಟ್ ಮಾಡಿ ಅದ್ದೂರಿಯ ಕ್ಲಾರಿಟಿಯೊಂದಿಗೆ ವಿಡಿಯೋ ಕರೆಗಳನ್ನು ಮಾಡಬವುದು. ಡೆಮೋದಲ್ಲಿ ನಾಲ್ಕು ಜನರ ವಿಡಿಯೋ ಕಾಲ್ ಮಾಡಿಸಲಾಗಿತ್ತು ಆದರೆ ಇದರಲ್ಲಿ ನಾಲ್ಕಕಿಂತ ಹೆಚ್ಚು ಜನರು ಸೇರಿ ಮಾಡಬವುದಾ ಇಲ್ವ ಅನ್ನೋ ಮಾಹಿತಿ ನೀಡಿಲ್ಲ ಆದರೆ ಈ ಮೂಲಕ ಒನ್ ಟು ಒನ್ ಅಂತು ಮಾಡಬವುದು.
ಇದರ ನಂತರದ ಮಾಹಿತಿ ಮುಖ್ಯವಾಗಿ ಗೇಮರ್ಗಳಿಗಾಗಲಿದೆ. ಏನಪ್ಪಾ ಅಂದ್ರೆ ಕನ್ಸೋಲ್ ಗೇಮ್ ಅನುಭವ. ನಾವೇಲ್ಲ ಸಾಮನ್ಯವಾಗಿ ಹೈ ಗ್ರಾಫಿಕ್ ಗೇಮ್ಗಳನ್ನು ನಮ್ಮ ಹೆಚ್ಚು ಕಂಪಟೇರ್ಬಲ್ ಅನುಗುಣವಾಗಿ Xbox ಅಥವಾ (PS) ಅಂದ್ರೆ ಪ್ಲೇ ಸ್ಟೇಷನ್ಗಳನ್ನು ಬಳಸಿಕೊಂಡು ಆಡುತ್ತೇವೆ. ಆದರೆ ಈಗ ಜಿಯೋ ಸೆಟಪ್ ಬಾಕ್ಸ್ ಮೂಲಕ ಈ ರೀತಿಯ ಅನುಭವಗಳನ್ನು ನೀಡಲಿದೆ.ಇದರಲ್ಲಿ ಬೇರೆ ಬೇರೆ ರೀತಿಯ ಕಂಟ್ರೋಲ್ಗಳನ್ನೂ ಸಹ ನೀಡಲಾಗಿದೆ. ಇದಲ್ಲದೆ ಇಲ್ಲಿ ಫೀಫಾ 2019 ಡೆಮೋ ಸಹ ತೋರಿಸಲಾಗಿತ್ತು. ಇದರೊಂದಿಗೆ ಇನ್ನು ಬೇರೆ ಬೇರೆ ಗೇಮ್ಗಳು ಸಹ ಬರಲಿವೆ. ಇದರಲ್ಲಿ ನಾನು ಹೆಚ್ಚಾಗಿ ಗಮನಿಸಿದ್ದು ಟೆನ್ಸೆಂಟ್ ಗೇಮ್ ಅಂದ್ರೆ PUBG ಸಹ ಮುಂದಿನ ದಿನಗಳಲ್ಲಿ ಈ ಮೂಲಕ ಲಭ್ಯವಾಗಲಿದೆ. ಒಟ್ಟಾರೆಯಾಗಿ ನಿಮ್ಮ ನೆಟ್ ಸ್ಪೀಡ್ ಹೆಚ್ಚು ಫಾಸ್ಟ್ ಇದ್ರೆ ನಿಮ್ಮ ಗೇಮ್ ಸಹ ಅದೇ ರೀತಿಯಲ್ಲಿ ಅದ್ದೂರಿಯಾಗಿ ಆಡಲು ಅವಕಾಶ ಮಾಡಿ ಕೊಡುತ್ತದೆ.
ನಿಮಗೆ ಇಲ್ಲಿ ಮತ್ತೋಂದು ಇಂಟ್ರೆಸ್ಟಿಂಗ್ ಹಾರ್ಡ್ವೇರ್ ಅಂದ್ರೆ ಒಂದು ಹೊಸ ವಿನ್ಯಾಸದ ಮಿಕ್ಸ್ ರಿಯಾಲಿಟಿ ಹೆಡ್ಸೆಟ್ ಸಹ ಬಿಡುಗಡೆಗೊಳಿಸಲಾಗಿತ್ತು. ಅಂದ್ರೆ ಇದೊಂದು ಹೊಸ ಮಾದರಿಯ AR ಮತ್ತು VR ಎರಡು ಕಾಂಬಿನೇಶನ್ ಸೇರಿಸಿ ತಯಾರಿಸಲಾಗಿದೆ. ಇದನ್ನು ಮುಖ್ಯವಾಗಿ ಮೂರು ವಲಯಗಳ ಅಧಾರದ ಮೇರೆಗೆ ತಯಾರಿಸಲಾಗಿದೆ. ಅವೆಂದರೆ ಶಾಪಿಂಗ್, ಎಜುಕೇಶನ್ ಮತ್ತು ಎಂಟರ್ಟೆಂಟ್ಮೆಂಟ್. ಇದರಲ್ಲಿ ಹೆಚ್ಚು ಇಂಟ್ರೆಸ್ಟಿಂಗ್ ಅಂದ್ರೆ ಇದರ ಮೂಲಕ ಜಿಯೋ ನಿಮಗೆ ಫಸ್ಟ್ ಡೇ ಫಸ್ಟ್ ಶೋ ಸಹ ನೀಡುತ್ತಿದೆ.
ಅಂದ್ರೆ ಯಾವುದೇ ಹೊಸ ಚಲನಚಿತ್ರ ಅಥವಾ ಟ್ರಿಲ್ ಜಿ ಅಥವಾ ವೆಬ್ ಸೀರಿಸ್ ಸಿನಿಮಾ ಹಾಲ್ಗಳಲ್ಲಿ ಬಿಡುಗಡೆಯಾದ ಅದೇ ದಿನ ನೀವು ಮನೆಯಲ್ಲೇ ಕುಳಿತು ಇದರ ಮೂಲಕ ಉಚಿತವಾಗಿ ನೋಡಬವುದು. ಅಂದ್ರೆ ಇದು ನೆಟ್ಫ್ಲಿಸ್ ಸೇವೆಯನ್ನು ಸಹ ಸೈಡ್ ಹೊಡೆಯಲಿದೆ. ಇವೆಲ್ಲ ಕಮರ್ಸಿಯಲಿ ಇದೇ 5ನೇ ಸೆಪ್ಟೆಂಬರ್ 2019 ರಂದು ಬಳಕೆದಾರರ ಕೈ ಸೇರಲು ಶುರುವಾಗಲಿದೆ.
ಈ ಪ್ಲಾನ್ಗಳ ಆರಂಭಿಕ ಬೆಲೆ 700 ರೂಗಳಲ್ಲಿ ನಿಮಗೆ 100mbps ಸ್ಪೀಡ್ ಲಭ್ಯವಾಗಲಿದೆ. ನಂತರ 10,000 ರೂಗಳವರೆಗೆ ಈ ಪ್ಲಾನ್ಗಳು ಲಭ್ಯವಾಗಲಿವೆ ಅದೇ ರೀತಿಯಲ್ಲಿ 1gbps ವರೆಗೆ ಸ್ಪೀಡ್ ಸಿಗಲಿದೆ. ಕಾಲಿಂಗ್ ಬಗ್ಗೆ ನೋಡಬೇಕೆಂದರೆ ಲೋಕಲ್ ಮತ್ತು STD ಕಾಲಿಂಗ್ ಮತ್ತು SMS ಅನ್ಲಿಮಿಟೆಡ್ ಉಚಿತವಾಗಲಿದೆ ಇದರೊಂದಿಗೆ ನೀವು STD ಕರೆಗಳನ್ನು ಮೊಬೈಲ್ ಅಥವಾ ಲ್ಯಾಂಡ್ಲೈನ್ ಮತ್ತು ನ್ಯಾಷನಲ್ ರೋಮಿಂಗಲ್ಲು ಸಹ ಉಚಿತವಾಗಲಿದೆ. ಆದರೆ ಒಂದು ವೇಳೆ ನಿಮಗೆ ಇಂಟರ್ನ್ಯಾಷನಲ್ ಅಥವಾ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಯಸಿದರೆ ಸದಾಯಕ್ಕೆ ಜಿಯೋ ಇದಕ್ಕಾಗಿ ಒಂದು ಪ್ಯಾಕನ್ನು ಬಿಡುಗಡೆಗೊಳಿಸಿದೆ. ಆದರೆ ಈ ಪಾಕ್ ಕೇವಲ ಅಮೇರಿಕ ಮತ್ತು ಕೆನಡಾಕ್ಕೆ ಅನ್ವಯಿಸುತ್ತದೆ. ಇದಕ್ಕಾಗಿ ತಿಂಗಳಿಗೆ ಕೇವಲ 500 ರೂಗಳನ್ನು ಪಾವತಿಸಿ ಅಂತಾರಾಷ್ಟ್ರೀಯ ಅನ್ಲಿಮಿಟೆಡ್ ಕರೆಗಳನ್ನು ಪಡೆಯಬವುದಾಗಿದೆ.
ಆದರೆ ಒಂದು ವೇಳೆ ನಿಮಗೆ ಇಂಟರ್ನ್ಯಾಷನಲ್ ಅಥವಾ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಯಸಿದರೆ ಸದಾಯಕ್ಕೆ ಜಿಯೋ ಇದಕ್ಕಾಗಿ ಒಂದು ಪ್ಯಾಕನ್ನು ಬಿಡುಗಡೆಗೊಳಿಸಿದೆ. ಆದರೆ ಈ ಪಾಕ್ ಕೇವಲ ಅಮೇರಿಕ ಮತ್ತು ಕೆನಡಾಕ್ಕೆ ಅನ್ವಯಿಸುತ್ತದೆ. ಇದಕ್ಕಾಗಿ ತಿಂಗಳಿಗೆ ಕೇವಲ 500 ರೂಗಳನ್ನು ಪಾವತಿಸಿ ಅಂತಾರಾಷ್ಟ್ರೀಯ ಅನ್ಲಿಮಿಟೆಡ್ ಕರೆಗಳನ್ನು ಪಡೆಯಬವುದಾಗಿದೆ.
ಈಗ ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ಅಂದ್ರೆ ಸದ್ಯಕ್ಕೆ ಲಭ್ಯವಿರುವ Netflix, ಅಮೆಜಾನ್ ಪ್ರೈಮ್, Hotstar ನಂತಹ ಪ್ರೀಮಿಯಂ ವಲಯಗಳಿಗೆ ಕಡಿವಾಣ ಹಾಕಲಿದೆ. ಸದ್ಯಕ್ಕೆ ಜಿಯೋ ಏನೇನು ಆಫರ್ ಕೊಡುತ್ತೆ ಅನ್ನೋದನ್ನು ಹೇಳಿಲ್ಲವಾದರೂ OTT (ಓವರ್ ದಿ ಟಾಪ್) ಅಪ್ಲಿಕೇಷನ್ಗಳ ಬಂಡಲ್ ಆಫರ್ ನೀಡುತ್ತದೆ. ಇದಕ್ಕಾಗಿ ನಾವು ನೀವೆಲ್ಲ ಇನ್ನು ಸ್ವಲ್ಪ ದಿನಗಳು ಕಾದು ನೋಡಬೇಕಿದೆ.
ಇಲ್ಲಿ ಮತ್ತೋಂದು ಅದ್ದೂರಿಯ ಮಾತೆಂದರೆ ಜಿಯೋ ಗೀಗಫೈಬರ್ ವೆಲ್ಕಮ್ ಆಫರ್: ಏನಪ್ಪಾ ಇದು ಇದರಲ್ಲೇನು ವಿಶೇಷತೆ ಅಂದ್ರೆ ಈ ವೆಲ್ಕಮ್ ಆಫರ್ ಮೂಲಕ ನಿಮಗೆ ಒಂದು ಹೊಸ ಫುಲ್ HD ಅಥವಾ 4K ಟಿವಿ ಒಂದು ಹೊಸ 4K ಸೆಟಪ್ ಬಾಕ್ಸ್ ಜೊತೆಗೆ ಉಚಿತವಾಗಿ ಲಭ್ಯವಾಗಲಿದೆ. ಇಲ್ಲಿ ನೀವು ಖರೀದಿಸುವ ಪ್ಲಾನಗಳ ಮೇರೆಗೆ ಈ ಆಫರ್ ಪಡೆಯಬವುದು. ಇವು ಸಾಮನ್ಯವಾಗಿ ವಾರ್ಷಿಕ ಪ್ಲಾನಗಳಾಗಲಿವೆ. ಆದರೆ ಇಲ್ಲಿಯೂ ಈ ಪ್ಲಾನಗಳ ಮತ್ತು ಯಾವ ಬ್ರಾಂಡ್ ಟಿವಿ ಅಥವಾ ಇದರ ಸೈಜ್ ಎಷ್ಟು ಎನ್ನುವ ಮಾಹಿತಿ ಇನ್ನು ಲಭ್ಯವಿಲ್ಲ. ಟಿವಿ ಏನೋ ಉಚಿತ ಅಂತ ಹೇಳಿದ್ದಾರೆ ಆದರೆ ಸೆಕ್ಯೂರಿಟಿ ಡೆಪಾಸಿಟ್ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಜಿಯೋ ಕೇವಲ ಬ್ರಾಡ್ಬ್ಯಾಂಡ್ ಅಥವಾ ಫೈಬರ್ ಮಾತ್ರವಲ್ಲದೆ. ಇಂದಿನ ಡೇ ಟು ಡೇ ಲೈಫಲ್ಲಿ ಜನಸಾಮಾನ್ಯರಿಗೆ ಅವಶ್ಯವಿರುವ ಹತ್ತಾರು ಸೇವೆಗಳನ್ನು ಒಂದೇ ಬ್ರಾಂಡ್ 'ಜಿಯೋ' ಪೂರೈಸಲಿದೆ. ಕೇವಲ ಇಂಟರ್ನೆಟ್ ಮಾತ್ರವಲ್ಲದೆ ಇದರ ಮೂಲಕ ಟಿವಿ, ಇಂಟರ್ನೆಟ್, ಲ್ಯಾಂಡ್ಲೈನ್, ಅನ್ಲಿಮಿಟೆಡ್ ಡೈರೆಕ್ಟ್ ಕರೆಗಳು (ನಾಟ್ ಥ್ರೂ ಥರ್ಡ್ ಪಾರ್ಟಿ ಆಪ್ಸ್) ಮತ್ತು ಅಂತಾರಾಷ್ಟ್ರೀಯ ಕರೆಗಳ ಉತ್ತಮವಾಗಿ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ. ಈಗ ಪ್ರತಿ ಕರೆಗಳಿಗೆ ಹೆಚ್ಚುವರಿಯ ಚಾರ್ಜ್ಗಳು ನೀಡುವುದು ತಪ್ಪಿ ಶೀಘ್ರದಲ್ಲೇ ತಲೆನೋವು ದೂರವಾಗಲಿವೆ.