WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Feb 01 2023
WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

ನಿಮಗೆ ಈಗಾಗಲೇ ತಿಳಿದಿರುವಂತೆ ವಾಟ್ಸಾಪ್ (WhatsApp) ಫೀಚರ್ಗಳ ಸುರಿಮಳೆಯನ್ನೇ ಹೊಂದಿದೆ. ಈ ವರ್ಷ 2023 ರಲ್ಲಿಯೂ ಪ್ರತಿನಿತ್ಯ ಒಂದಲ್ಲ ಒಂದು ಹೊಸ ಫೀಚರ್ ಮೇಲೆ ಕಾರ್ಯ ನಿರ್ವಯಿಸುತ್ತಲೇ ಇರುತ್ತದೆ. ಮೆಟಾ ಅಂದ್ರೆ Facebook ಮಾಲೀಕತ್ವದ ಅಪ್ಲಿಕೇಶನ್ ಪ್ರಪಂಚದಾದ್ಯಂತ ಎರಡು ಶತಕೋಟಿ ಬಳಕೆದಾರರನ್ನು ಹೊಂದಿದೆ. ಹಾಗಾಗಿ ವಾಟ್ಸಾಪ್ (WhatsApp) ಬಳಸುವ ಹೊಸ ಬಳಕೆದಾರರಿಗೆ ಕೆಲವು ಅತ್ಯುತ್ತಮ ಟ್ರಿಕ್ ಮತ್ತು ಟಿಪ್ಸ್‌ಗಳ ಜೊತೆಗೆ ನಿಮಗೆ ತಿಳಿದಿರದ ಕೆಲವು ಇಂಟ್ರೆಸ್ಟಿಂಗ್ ರಹಸ್ಯ ಸಲಹೆಗಳು ಇಲ್ಲಿವೆ.

ವಾಟ್ಸಾಪ್ (WhatsApp) ಸದಾ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಪರಿಚಯಸ್ಥರನ್ನು ಒಳಗೊಂಡಂತೆ WhatsApp ಎಲ್ಲ ಜನರೊಂದಿಗೆ ಮತ್ತು ಹೆಚ್ಚಿನವುಗಳೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಚಾಟ್‌ಗಳ ಜೊತೆಗೆ ಇದು ಬಳಕೆದಾರರಿಗೆ ಕರೆ ಮತ್ತು ವೀಡಿಯೊ ಕರೆಗಳನ್ನು ಮಾಡಲು, ಸಮೀಕ್ಷೆಗಳನ್ನು ನಡೆಸಲು, ಫೈಲ್‌ಗಳು ಮತ್ತು ಮೀಡಿಯಾವನ್ನು ಹಂಚಿಕೊಳ್ಳಲು, ಫೋಟೋಗಳನ್ನು ಕ್ಲಿಕ್ ಮಾಡಲು, ಆಡಿಯೋ ರೆಕಾರ್ಡಿಂಗ್ಗಳನ್ನು ಕಳುಹಿಸಲು ಹೆಚ್ಚು ಸಹಕಾರಿಯಾಗಿದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಗ್ರೂಪ್‌ ಕಂಮ್ಯುನಿಟಿಸ್

ಕಂಮ್ಯುನಿಟಿಸ್ ಈ ವರ್ಷ WhatsApp ನ ದೊಡ್ಡ ಫೀಚರ್‌ಗಳಲ್ಲಿ ಒಂದಾಗಿದೆ. ಒಂದೇ ಸೂರಿನಡಿ ಅನೇಕ ಗ್ರೂಪ್‌ಗಳನ್ನು ಕ್ಲಬ್ ಮಾಡುವ ಮೂಲಕ ಇದು ಶಾಲೆ, ಆಫೀಸ್, ಸ್ಥಳೀಯ ಕ್ಲಬ್‌ಗಳು ಮತ್ತು ಕೆಲಸದ ಸ್ಥಳಗಳಲ್ಲಿ ತಮ್ಮ ಕಾರ್ಯನಿರತ ಸಂಭಾಷಣೆಗಳನ್ನು ನಿರ್ವಹಿಸಲು ಸರಳಗೊಳಿಸಲಿದೆ. ಅಲ್ಲದೆ ಈ ಫೀಚರ್ ಅಡ್ಮಿನ್‌ಗಳಿಗೆ ಅನೌನ್ಸ್‌ಮೆಂಟ್ ಗ್ರೂಪ್ ಮತ್ತು ಯಾವುದೇ ವಿಷಯದ ಮೇಲೆ ಸಬ್ ಗ್ರೂಪ್‌ಗಳನ್ನು ರಚಿಸುವ ಸಾಮರ್ಥ್ಯ ಒಳಗೊಂಡಂತೆ ಬಲವಾದ ಪರಿಕರಗಳನ್ನು ನೀಡಿತು.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಇನ್-ಚಾಟ್ ಪೋಲ್‌ಗಳು 

ಚಾಟ್‌ನಲ್ಲಿ ನೇರವಾಗಿ ಮತದಾನವನ್ನು ನಡೆಸಲು ಬಳಕೆದಾರರನ್ನು ಅನುಮತಿಸುತ್ತದೆ. ಅಂದ್ರೆ ನಿಮಗೊತ್ತಾ ವಾಟ್ಸಾಪ್ ಮೂಲಕ ಯಾವುದೇ ವಿಷಯಗಳಲ್ಲಿ ಇನ್-ಚಾಟ್ ಪೋಲ್‌ಗಳನ್ನು ನಡೆಸುವ ಸಾಮರ್ಥ್ಯವನ್ನು WhatsApp ಹೊಂದಿರುವ ಮತ್ತೊಂದು ಹೊಸ ಫೀಚರ್‌ ಆಗಿದೆ. ಬಳಕೆದಾರರು ಈಗ ವೈಯಕ್ತಿಕ ಮತ್ತು ಗುಂಪು ಚಾಟ್‌ಗಳಲ್ಲಿ ಸಮೀಕ್ಷೆಗಳನ್ನು ರಚಿಸಲು ಸಾಧ್ಯವಾಗುತ್ತದೆ. 

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಬಿಗ್ ಗ್ರೂಪ್ ಸೈಜ್

ಹೌದು ಈಗ ನೀವು ನಿಮ್ಮ ಒಂದೇ ಗ್ರೂಪ್ ಅನ್ನು ಮತ್ತಷ್ಟು ಬಳಕೆದಾರರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಹೆಚ್ಚಿನ ಜನರನ್ನು ಸೇರಿಸಲು ಅನುಮತಿಸುತ್ತದೆ. ಈ ವರ್ಷ WhatsApp ಗ್ರೂಪ್ಗಳಿಗೆ ಭಾಗವಸುವವರ ಮಿತಿಯನ್ನು 256 ರಿಂದ 1024 ಕ್ಕೆ ವಿಸ್ತರಿಸಿತು. ಅಡ್ಮಿನ್‌ಗಳು ಒಂದೇ ಗ್ರೂಪ್ ಒಳಗೆ ಹೆಚ್ಚಿನ ಬಳಕೆದಾರರನ್ನು ಸೇರಿಸಲು ಅನುವು ಮಾಡಿಕೊಡುತ್ತದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಅಡ್ಮಿನ್‌ ಮೆಸೇಜ್ ಡಿಲೀಟ್

ಈಗ ನೀವು ಗ್ರೂಪ್ಗಳ ಮೇಲೆ ಅಡ್ಮಿನ್‌ಗಳಿಗೆ ಹೆಚ್ಚಿನ ನಿಯಂತ್ರಣವನ್ನು ನೀಡಿರಿವುದು ಅನಿವಾರ್ಯ. ಆದರೆ ಗ್ರೂಪ್ಗಳು ಹೆಚ್ಚು ಸಂಘಟಿತಗೊಳಿಸುವ ಸಲುವಾಗಿ ಅಡ್ಮಿನ್‌ಗಳಿಗೆ WhatsApp ಹೊಸ ಸಾಮರ್ಥ್ಯವನ್ನು ಸೇರಿಸಿದೆ. ಇದರ ಪರಿಣಾಮವಾಗಿ ಗ್ರೂಪ್ ಅಡ್ಮಿನ್‌ಗಳು ಈಗ ಗ್ರೂಪ್ ಚಾಟ್‌ಗಳಿಂದ ಸಮಸ್ಯಾತ್ಮಕ ಸಂದೇಶಗಳನ್ನು ಡಿಲಿಟ್‌ ಮಾಡಬಹುದು.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಆನ್‌ಲೈನ್ ಸ್ಟೇಟಸ್ ಹೈಡ್ ಮಾಡಿ

ಬಳಕೆದಾರರು ತಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಇತರರಿಂದ ಹೈಡ್ ಮಾಡಲು ಅನುಮತಿಸುತ್ತದೆ. ಈ ಫೀಚರ್‌ನೊಂದಿಗೆ ಬಳಕೆದಾರರು ನಿಮ್ಮ ಪ್ರೈವಸಿ ಸೆಟ್ಟಿಂಗ್‌ಗಳಿಂದ ನೀವು ಕೊನೆಯದಾಗಿ ನೋಡಿರುವವರು ಯಾರು ಮತ್ತು ನೀವು ಆನ್‌ಲೈನ್‌ನಲ್ಲಿದ್ದೀರಾ ಎಂಬುದನ್ನು ಈಗ ನಿಯಂತ್ರಿಸಬಹುದು. 

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಗ್ರೂಪ್‌ಗಳನ್ನು ಯಾರಿಗೂ ತಿಳಿಯದಂತೆ ತೊರೆಯಿರಿ 

ಒಂದು ವೇಳೆ ನಿಮಗೆ ನೀವಿರುವ ಗ್ರೂಪ್ ಇಷ್ಟವಿಲ್ಲದಿದ್ದರೆ ಯಾರಿಗೂ ತಿಳಿಯದಂತೆ ತೊರೆಯಬಹುದು. ಅಂದರೆ ಇತರರಿಗೆ ತಿಳಿಸದೆಯೇ ಗ್ರೂಪ್‌ಗಳನ್ನು ತೊರೆಯಲು ಬಳಕೆದಾರರನ್ನು ಅನುಮತಿಸುತ್ತದೆ. ಗ್ರೂಪ್‌ನ ಉಳಿದವರಿಗೆ ತಿಳಿಸದೆ ಈ ಫೀಚರ್‌ನ ಮೂಲಕ ಬಳಕೆದಾರರು ಗ್ರೂಪ್‌ ಅನ್ನು ತೊರೆಯಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿ ಗ್ರೂಪ್ ಅಡ್ಮಿನ್‌ಗಳಿಗೆ ಮಾತ್ರ ಇದರ ಸೂಚನೆ ನೀಡಲಾಗುತ್ತದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಚಾಟ್ ಆಕಸ್ಮಿಕ ಡಿಲಿಟ್

ಒಂದು ವೇಳೆ ನೀವು ಆಕಸ್ಮಿಕವಾಗಿ ಚಾಟ್ ಡಿಲಿಟ್ ಆಗಿದ್ದರೆ ಅದನ್ನು ನೀವು ಪುನಃ ಸಾಲವಾಗಿ ಪಡೆಯಬವುದು. ಆಕಸ್ಮಿಕವಾಗಿ ಡಿಲಿಟ್‌ ಮಾಡಿದ ಚಾಟ್ ಅನ್ನು ಹಿಂಪಡೆಯಲು ಬಳಕೆದಾರರಿಗೆ ಆಯ್ಕೆಯನ್ನು ನೀಡಲಾಗುತ್ತದೆ. ತಪ್ಪಾದ ಗ್ರೂಪ್‌ನೊಂದಿಗೆ ಹಂಚಿಕೊಳ್ಳಲಾದ ಯಾವುದನ್ನಾದರೂ ತ್ವರಿತವಾಗಿ ಡಿಲಿಟ್‌ ಮಾಡಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ Delete For Me ಕ್ಲಿಕ್ ಮಾಡಿದ್ದರೆ ಪುನಃ Undo ಮಾಡುವ ಮೂಲಕ ಚಾಟ್ ಅನ್ನು ಪಡೆಯಬವುದು. 

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಒಟ್ಟಿಗೆ 32 ಜನರ ಗ್ರೂಪ್‌ ಕರೆ

ಹೌದು ಈಗ ನೀವು ವಾಟ್ಸಪ್ ಮೂಲಕ ಭಾರಿ ದೊಡ್ಡ ಗ್ರೂಪ್‌ ಕರೆಗಳನ್ನು ಗ್ರೂಪ್‌ ಕರೆಯ ಫೀಚರ್ ಮೂಲಕ ಹೆಚ್ಚಿನ ಬಳಕೆದಾರರನ್ನು ಸೇರಿಸಲು ಬಳಕೆದಾರರಿಗೆ ಅನುಮತಿಸುತ್ತದೆ. WhatsApp ಗ್ರೂಪ್‌ ಕರೆಗಳಿಗೆ 32 ಜನರ ಮಿತಿಯನ್ನು ಹೆಚ್ಚಿಸಿದೆ. ಅಂದರೆ ಒಂದೇ ವೀಡಿಯೊ ಅಥವಾ ಧ್ವನಿ ಕರೆಯಲ್ಲಿ  32 ಜನರನ್ನು ಸೇರಬಹುದು. ಆರಂಭದಲ್ಲಿ ಕೇವಲ 8 ಮಂದಿಗೆ ಮಾತ್ರ ಅವಕಾಶವಿತ್ತು.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ನಿಮಗೆ ನೀವೇ ಮೆಸೇಜ್ ಮಾಡಿ

ಇದನ್ನು ಕೆಲವು ವಿಶೇಷ ಸನ್ನಿವೇಶಗಳಲ್ಲಿ ಬಳಸಲಾಗುತ್ತದೆ. ಅಂದ್ರೆ ಇದರಲ್ಲಿ ನೀವು ನಿಮಗೆ ನೀವೇ ಮೆಸೇಜ್, ಆಡಿಯೋ ರೆಕಾರ್ಡಿಂಗ್, ಇಮೇಜ್ಗಳನ್ನು ಕಳುಹಿಸಲು ಅನುಮತಿಸುತ್ತದೆ. ಸಂದೇಶಗಳು, ಆಡಿಯೋ ರೆಕಾರ್ಡಿಂಗ್ ಗಳು, ಮಾಡಬೇಕಾದ ಕಾರ್ಯಗಳು,ರಿಮೈನ್ಡರ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಸ್ವತಃ ಕಳುಹಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಡುವ ಫೀಚರ್‌ನ ಮೂಲಕ ನೀವೇ ಸಂದೇಶ ಮಾಡಿ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಬೇಡದವರ ಮೆಸೇಜ್ ಅಥವಾ ಕರೆ ಮ್ಯೂಟ್ ಮಾಡಿ

ನೀವು ಬೇಡದವರ ಮೆಸೇಜ್ ಅಥವಾ ಕರೆಯಲ್ಲಿ ಭಾಗವಹಿಸುವವರನ್ನು ಮ್ಯೂಟ್ ಮಾಡಲು ವಾಟ್ಸಾಪ್ ಅನುಮತಿಸುತ್ತದೆ. ಬಳಕೆದಾರರಿಗೆ ಸಂದೇಶ ಕಳುಹಿಸಲು ಅಥವಾ ಕರೆಯಲ್ಲಿರುವಾಗ ಜನರನ್ನು ಮ್ಯೂಟ್ ಮಾಡಲು ಅನುಮತಿಸುತ್ತದೆ. ಭಾಗವಹಿಸುವವರ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ಬಳಕೆದಾರರು ವೀಡಿಯೊ ಅಥವಾ ಆಡಿಯೊ ಫೀಡ್ ಅನ್ನು ಹಿಗ್ಗಿಸಬಹುದು. ಅವರನ್ನು ಮ್ಯೂಟ್ ಮಾಡಬಹುದು ಅಥವಾ ಅವರಿಗೆ ಪ್ರತ್ಯೇಕ ಸಂದೇಶವನ್ನು ಕಳುಹಿಸಬಹುದು.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಕರೆ ಲಿಂಕ್‌ಗಳು 

ಈಗ ನೀವು ಗೂಗಲ್ ಅಂತೆಯೇ ಬಳಕೆದಾರರಿಗೆ WhatsApp ನಲ್ಲಿ ಕರೆಗಳನ್ನು ಹಂಚಿಕೊಳ್ಳಲು ಮತ್ತು ಸೇರಲು ಸುಲಭವಾಗಿಸುತ್ತದೆ. ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳಂತೆಯೇ ಕರೆ ಲಿಂಕ್‌ಗಳ ಫೀಚರ್ ಬಳಕೆದಾರರಿಗೆ ಕರೆ ಲಿಂಕ್ ಅನ್ನು ರಚಿಸಲು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಅನುಮತಿಸುತ್ತದೆ. ಆದ್ದರಿಂದ ಅವರು ಕರೆಗೆ ಸುಲಭವಾಗಿ ಸೇರಬಹುದು. ಬಳಕೆದಾರರು ಭಾಗವಹಿಸಲು ಸಕ್ರಿಯ WhatsApp ಖಾತೆಯನ್ನು ಹೊಂದಿರಬೇಕು.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಇನ್-ಕಾಲ್ ಬ್ಯಾನರ್ ನೋಟಿಫಿಕೇಷನ್ಸ್ 

ನೀವು ಯಾರಾದರೂ ಕಾಲರ್ ಸೇರಿದಾಗ ಇತರರಿಗೆ ಇನ್-ಕಾಲ್ ಬ್ಯಾನರ್ ನೋಟಿಫಿಕೇಷನ್ಸ್ ಸೂಚನೆ ನೀಡುತ್ತದೆ. ಕರೆ ಮಾಡುವುದನ್ನು ಸರಳಗೊಳಿಸುವ ಸಲುವಾಗಿ WhatsApp ಯಾರಾದರೂ ಹೊಸ ಕರೆಗೆ ಸೇರಿದಾಗ ಗ್ರೂಪ್ ಕರೆಯಲ್ಲಿ ಭಾಗವಹಿಸುವವರಿಗೆ ತಿಳಿಸುವ ಮೂಲಕ ಹೊಸ ಇನ್-ಕಾಲ್ ಬ್ಯಾನರ್ ಅನ್ನು ಸಹ ಸೇರಿಸಿದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಔಟ್-ಆಫ್-ಚಾಟ್‌ ಪ್ಲೇಬ್ಯಾಕ್ 

ಈಗ ನಿಮ್ಮ  ವಾಟ್ಸಾಪ್ ಭಾಗವಹಿಸುವವರ ಹಿನ್ನೆಲೆಯಲ್ಲಿ ವಾಯ್ಸ್ ರೆಕಾರ್ಡಿಂಗ್ಗಳನ್ನು ಪಡೆಯಬವುದು. WhatsApp ನಲ್ಲಿ ಬಳಕೆದಾರರಿಗೆ ಮಲ್ಟಿಟಾಸ್ಕ್ ಮಾಡಲು ಸುಲಭವಾಗುವಂತೆ ಕಂಪನಿಯು ಹೊಸ ಔಟ್-ಆಫ್-ಚಾಟ್ ಪ್ಲೇಬ್ಯಾಕ್ ಫೀಚರ್‌ ಅನ್ನು ಸೇರಿಸಿದೆ. ಇದು ವಾಟ್ಸಾಪ್‌ನಲ್ಲಿ ಇತರ ಕಾರ್ಯಗಳನ್ನು ಮಾಡುವಾಗ ಹಿನ್ನೆಲೆಯಲ್ಲಿ ವಾಯ್ಸ್ (Background Voice) ರೆಕಾರ್ಡಿಂಗ್ ಗಳನ್ನು ಪ್ಲೇ ಮಾಡುತ್ತದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ರೆಕಾರ್ಡಿಂಗ್ ಸ್ಟಾಪ್ / ಪುನರಾರಂಭ 

ರೆಕಾರ್ಡಿಂಗ್ ಅಲ್ಲಿ ವಿರಾಮಗೊಳಿಸಲು ಮತ್ತು ಪುನರಾರಂಭಿಸಲು ಬಳಕೆದಾರರಿಗೆ ಅನುಮತಿಸುತ್ತದೆ. WhatsApp ನಲ್ಲಿ ವಾಯ್ಸ್ ಸಂದೇಶವನ್ನು ರೆಕಾರ್ಡ್ ಮಾಡುವಾಗ ವಿರಾಮ/ರೆಸ್ಯೂಮ್ ರೆಕಾರ್ಡಿಂಗ್ ಫೀಚರ್ ಸಹಾಯಕವಾಗಿದೆ. ‌ವಾಯ್ಸ್ ಸಂದೇಶವನ್ನು ರೆಕಾರ್ಡ್ ಮಾಡುವಾಗ ರೆಕಾರ್ಡಿಂಗ್ ಬಟನ್ ಅನ್ನು ಲಾಕ್ ಮಾಡಲು ಒಮ್ಮೆ ಟ್ಯಾಪ್ ಮಾಡಿ ನಂತರ ನೀವು ವಿರಾಮವನ್ನು ಒತ್ತಿ ಮತ್ತು ಅಗತ್ಯವಿರುವಷ್ಟು ಬಾರಿ ಪುನರಾರಂಭಿಸಬಹುದು. 

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಡ್ರಾಫ್ಟ್ ಮುನ್ನೋಟ  

ವಾಟ್ಸಾಪ್ನಲ್ಲಿ ನೀವು ಕಳುಹಿಸುವ ಮೊದಲು ವಾಯ್ಸ್ ರೆಕಾರ್ಡಿಂಗ್ ಗಳನ್ನು ಕೇಳಲು ಬಳಕೆದಾರರಿಗೆ ಅನುಮತಿಸುತ್ತದೆ. ಬಳಕೆದಾರರು ವಾಯ್ಸ್ ರೆಕಾರ್ಡಿಂಗ್ ಗಳನ್ನು ಕಳಿಹಿಸುವ ಮೊದಲು ಈ ಫೀಚರ್‌ ಅನ್ನು ಬಳಸಿಕೊಂಡು ರೆಕಾರ್ಡ್ ಮಾಡಿದರ ಮುನ್ನೋಟ ನೋಡಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮಗೆ ಇಷ್ಟವಾಗದಿದ್ದರೆ ಅದನ್ನು ಡಿಲಿಟ್‌ ಮಾಡಿ ಮತ್ತೆ ರೆಕಾರ್ಡ್ ಮಾಡುವ ಆಯ್ಕೆಯನ್ನು ನೀಡುತ್ತದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಪ್ಲೇಬ್ಯಾಕ್ ಸ್ಪೀಡ್ ನಿಯಂತ್ರಣ

ನೀವು ವಾಟ್ಸಾಪ್ ಅಲ್ಲಿ ಪಡೆದ ವಾಯ್ಸ್ ರೆಕಾರ್ಡಿಂಗ್ ಅನ್ನು ಕಡಿಮೆ ಅಥವಾ ವೇಗಗೊಳಿಸಲು ಬಳಕೆದಾರರಿಗೆ ಅನುಮತಿಸುತ್ತದೆ. WhatsApp ಬಳಕೆದಾರರು ಈಗ ವಾಯ್ಸ್ ರೆಕಾರ್ಡಿಂಗ್ ಅನ್ನು ವೇಗಗೊಳಿಸಲು ಆಯ್ಕೆ ಮಾಡಬಹುದು. ವಾಯ್ಸ್ ಸಂದೇಶಗಳನ್ನು ಬಳಕೆದಾರರು 1.5x ಅಥವಾ 2x ವೇಗದಲ್ಲಿ ಪ್ಲೇ ಮಾಡಬಹುದು.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಎಮೋಜಿ ರಿಆಕ್ಷನ್ 

ನೀವು ವಾಟ್ಸಾಪ್ ಅಲ್ಲಿ ಸಂದೇಶಗಳಿಗೆ ಪ್ರತಿಕ್ರಿಯಿಸಲು ಬಳಕೆದಾರರು ಎಮೋಜಿಗಳನ್ನು ಬಳಸಿಕೊಳ್ಳಲು ಅನುಮತಿಸುತ್ತದೆ. ಈ ವರ್ಷ WhatsApp ಸ್ವೀಕರಿಸಿದ ಅತ್ಯಂತ ಉಪಯುಕ್ತ ಫೀಚರ್‌ ಗಳಲ್ಲಿ ಎಮೋಜಿ ಪ್ರತಿಕ್ರಿಯೆಗಳು ಒಂದಾಗಿದೆ. ಸಂದೇಶವನ್ನು ದೀರ್ಘವಾಗಿ ಟ್ಯಾಪ್ ಮಾಡುವುದರಿಂದ ಬಳಕೆದಾರರು ತಮ್ಮ ಆದ್ಯತೆಯ ಎಮೋಜಿಯನ್ನು ಆಯ್ಕೆ ಮಾಡಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ಅನುಮತಿಸುತ್ತದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಅವತಾರಗಳು: 

ವಾಟ್ಸಾಪ್ ಬಳಕೆದಾರರು ಅವತಾರಗಳನ್ನು ಬಳಸಿಕೊಂಡು ತಮ್ಮ ವರ್ಚುವಲ್ ಆವೃತ್ತಿಯನ್ನು ರಚಿಸಬಹುದು. ಕೆಲವು ತಿಂಗಳ ಹಿಂದೆ ವಾಟ್ಸಾಪ್ ಮೂಲಕ ಅವತಾರಗಳನ್ನು ಪರಿಚಯಿಸಲಾಯಿತು. ಇದು ಅವರು ಕಸ್ಟಮೈಸ್ ಮಾಡಿದ ವರ್ಚುವಲ್ ಪಾತ್ರವನ್ನು ರಚಿಸಲು ಮತ್ತು ಅವುಗಳನ್ನು ಸ್ಟಿಕ್ಕರ್‌ಗಳಾಗಿ ಅಥವಾ ಪ್ರೊಫೈಲ್ ಫೋಟೋವಾಗಿ ಬಳಸಬಹುದಾಗಿ ಅನುಮತಿಸುತ್ತದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp 2GB ಫೈಲ್ ಶೇರ್ 

ನಿಮಗೊತ್ತಾ ಈಗ ನೀವು  ವಾಟ್ಸಾಪ್ ಅಲ್ಲಿ ಸುಮಾರು 2GB ವರೆಗಿನ ಫೈಲ್ಗಳನ್ನು ಕಳುಹಿಸಬಹುದು.  ಪ್ಲಾಟ್‌ಫಾರ್ಮ್ ಮೂಲಕ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅನುಮತಿಸುತ್ತದೆ. WhatsApp 100MB ನಿಂದ 2GB ವರೆಗೆ ಫೈಲ್ ಹಂಚಿಕೆ ಗಾತ್ರವನ್ನು ಹೆಚ್ಚಿಸಿದೆ. ಇದು ಬಳಕೆದಾರರಿಗೆ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

WhatsApp 2023: ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ 20 ಇಂಟ್ರೆಸ್ಟಿಂಗ್ ಫೀಚರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

WhatsApp ಆಂಡ್ರಾಯ್ಡ್‌ನಿಂದ iOS ಚಾಟ್‌ಗಳನ್ನು ವರ್ಗಾಯಿಸಿ

ಹೌದು ಕೊನೆಯದಾಗಿ ನಿಮ್ಮ ವಾಟ್ಸಾಪ್ ಆಂಡ್ರಾಯ್ಡ್ ಮತ್ತು iOS ನಡುವೆ ಚಾಟ್‌ಗಳನ್ನು ವರ್ಗಾಯಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಆಪರೇಟಿಂಗ್ ಸಿಸ್ಟಂಗಳ ನಡುವೆ ಬದಲಾಯಿಸುವಾಗ ಬಳಕೆದಾರರು ಈಗ ತಮ್ಮ ಖಾತೆಯ ಮಾಹಿತಿ, ಸೆಟ್ಟಿಂಗ್‌ಗಳು, ಪ್ರೊಫೈಲ್ ಫೋಟೋ ಮತ್ತು ಚಾಟ್ ಹಿಸ್ಟರಿಯನ್ನು ವರ್ಗಾಯಿಸಬಹುದು.