ವಿರಾಟ್ ಕೊಹ್ಲಿ ಸೇರಿ ಹಲವಾರು ಸೆಲೆಬ್ರಟಿಗಳು ಬಳಸುವ ಈ WHOOP ಫಿಟ್‌ನೆಸ್ ಬ್ಯಾಂಡ್‌ನ ವಿಶೇಷತೆಗಳೇನು?
ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಧರಿಸಿದ ಫಿಟ್‌ನೆಸ್ ಬ್ಯಾಂಡ್ (WHOOP Fitness Bands) ಭಾರಿ ಸದ್ದು ಮಾಡುತ್ತಿದೆ.
ಹಾಗಾದ್ರೆ ಇದರ ಬೆಲೆ ಎಷ್ಟಿದೆ? ಮತ್ತು ಬೇರೆ ಫಿಟ್‌ನೆಸ್ ಬ್ಯಾಂಡ್‌ಗಳಿಗಿಂತ ಇದು ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ
ಅಮೆಜಾನ್ ಮೂಲಕ $239 ನೀಡಿ ಪೂರ್ತಿ 12 ತಿಂಗಳ ಚಂದಾದಾರಿಕೆಯನ್ನು ಪಡೆಯಬಹುದು. ಪ್ರಸ್ತುತ ಈ ಬ್ಯಾಂಡ್ ಭಾರತದಲ್ಲಿ ಲಭ್ಯವಿಲ್ಲ.
WHOOP Fitness Bands: ಕ್ರಿಕೆಟ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಇದನ್ನು ದೇಶದ ಬಹುತೇಕ ಎಲ್ಲೆಡೆ ಸಣ್ಣ ಗಲ್ಲಿಗಳಿಂದ ದೊಡ್ಡ ಸ್ಟೇಡಿಯಂಗಳವರೆಗೂ ಆಡಲಾಗುತ್ತದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತೀಯ ಕ್ರಿಕೆಟ್‌ನ ಆಡಳಿತ ಮಂಡಳಿಯಾಗಿದೆ. ಎಲ್ಲಾ ದೇಶೀಯ ಪಂದ್ಯಾವಳಿಗಳನ್ನು ನಡೆಸುವುದರೊಂದಿಗೆ ಭಾರತ ರಾಷ್ಟ್ರೀಯ ಕ್ರಿಕೆಟ್ ಪುರುಷ ಮತ್ತು ಮಹಿಳಾ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಪವರ್ ಹೊಂದಿದೆ. ಇತ್ತೀಚಿಗೆ ನಡೆದ ಭಾರತ-ಇಂಗ್ಲೆಂಡ್ ICC ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ವೇಳೆ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಧರಿಸಿದ WHOOP ಫಿಟ್‌ನೆಸ್ ಬ್ಯಾಂಡ್ ಭಾರಿ ಸದ್ದು ಮಾಡುತ್ತಿದೆ.
Also Read: WhatsApp Voice Chat: ವಾಟ್ಸಾಪ್‌ನಿಂದ ಹೊಸ ಫೀಚರ್ ಪರಿಚಯ! ಇದನ್ನು ಬಳಸುವುದು ಹೇಗೆ ತಿಳಿಯಿರಿ
WHOOP ಫಿಟ್‌ನೆಸ್ ಬ್ಯಾಂಡ್
ಈ WHOOP ಫಿಟ್‌ನೆಸ್ ಬ್ಯಾಂಡ್‌ಗೆ ಈಗ ಇದರ ಅಭಿಮಾನಿಗಳು ಗಂಭೀರವಾದ ಗಮನವನ್ನು ನೀಡಿದ್ದಾರೆ. ಏಕೆಂದರೆ ಆಧುನಿಕ ಕಾಲದ ಅಥ್ಲೀಟ್‌ಗಳು ಮಾರುಕಟ್ಟೆಯಲ್ಲಿ ನೂರೆಂಟು ದೊಡ್ಡ ಮತ್ತು ಜನಪ್ರಿಯ ಬ್ರಾಂಡ್ಗಳಿದ್ದರೂ ಅಷ್ಟಾಗಿ ಸದ್ದು ಮಾಡದ WHOOP ಫಿಟ್‌ನೆಸ್ ಬ್ಯಾಂಡ್‌ಗಳನ್ನೆ ಏಕೆ ಬಳಸುತ್ತಿದ್ದಾರೆ. ಒಂದು ರೀತಿಯಲ್ಲಿ ಉಚಿತವಾಗಿ ಜಾಹೀರಾತು ನೀಡುವ ಅಂಶದಿಂದ ಈ ಫಿಟ್‌ನೆಸ್ ಬ್ಯಾಂಡ್‌ನ ದಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಒಮ್ಮೆಗೆ ಯೋಚಿಸಬಹುದು.
ಹಾಗಾದ್ರೆ ಇದರ ಬೆಲೆ ಎಷ್ಟಿದೆ? ಮತ್ತು ಬೇರೆ ಫಿಟ್‌ನೆಸ್ ಬ್ಯಾಂಡ್‌ಗಳಿಗಿಂತ ಇದು ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎನ್ನುವುದನ್ನು ಮುಂದೆ ತಿಳಿಯಿರಿ. ಈ WHOOP ಕಂಪನಿ ತನ್ನ ಮೊದಲ ಫಿಟ್‌ನೆಸ್ ಟ್ರ್ಯಾಕರ್ ಬ್ಯಾಂಡ್ ಅನ್ನು 2015 ರಲ್ಲಿ ತನ್ನ 1.0 ವೇರಿಯಿಂಟ್ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿತು. ಇದರ ನಂತರ ಕಂಪನಿ ಈಗ 2021 ರಂದು ಲೇಟೆಸ್ಟ್ 4.0 ಆವೃತ್ತಿಯೊಂದಿಗೆ ಮರು ಎಂಟ್ರಿ ನೀಡಿ ಈಗ ಭಾರಿ ಸದ್ದು ಮಾಡಿದೆ. ಅಮೆಜಾನ್ ಮೂಲಕ $239 ನೀಡಿ ಪೂರ್ತಿ 12 ತಿಂಗಳ ಚಂದಾದಾರಿಕೆಯನ್ನು ಪಡೆಯಬಹುದು. ಪ್ರಸ್ತುತ ಈ ಬ್ಯಾಂಡ್ ಭಾರತದಲ್ಲಿ ಲಭ್ಯವಿಲ್ಲ.
WHOOP ಫಿಟ್‌ನೆಸ್ ಬ್ಯಾಂಡ್ ವಿಶೇಷತೆಗಳು
ಇದರ ವಿಶೇಷತೆ ಅಂದ್ರೆ ಈ ಬ್ರಾಂಡ್ ಈ ಡಿವೈಸ್ ಅನ್ನು ಮಾಸಿಕ ಚಂದಾದಾರಿಕೆ ಶುಲ್ಕದಲ್ಲಿ ಕಾರ್ಯನಿರ್ವಹಿಸುತ್ತದೆ. WHOOP 4.0 ವ್ಯಕ್ತಿಯ ಹೃದಯ ಬಡಿತದ ವ್ಯತ್ಯಾಸ, ತಾಪಮಾನ, ಉಸಿರಾಟದ ದರವನ್ನು ಅಳೆಯುತ್ತದೆ, ರಕ್ತದ ಆಮ್ಲಜನಕದ ಮಟ್ಟ, ವ್ಯಯಿಸಲಾದ ಕ್ಯಾಲೋರಿಗಳು ಮತ್ತು ಹೆಚ್ಚಿನವು ಈ ಎಲ್ಲಾ ಡೇಟಾವನ್ನು ಸೆಕೆಂಡಿಗೆ 100 ಬಾರಿ ಸಂಗ್ರಹಿಸಲಾಗುತ್ತದೆ. ಈ 24×7 ಧರಿಸಬಹುದಾದ ಅವಧಿ, ಸ್ಟೇಬಲ್, ದಕ್ಷತೆ ಇತ್ಯಾದಿಗಳಂತಹ ಹಲವಾರು ಅಂಶಗಳ ಆಧಾರದ ಮೇಲೆ ಒಬ್ಬರ ನಿದ್ರೆಯ ಕಾರ್ಯಕ್ಷಮತೆಯನ್ನು ಅಳೆಯುತ್ತದೆ ಮತ್ತು ಹಿಂದಿನ ದಿನದ ವಿಶ್ರಾಂತಿ ಹೃದಯ ಬಡಿತ, ಹೃದಯ ಬಡಿತದ ವ್ಯತ್ಯಾಸ, ಉಸಿರಾಟ ಮತ್ತು ನಿದ್ರೆಯ ಆಧಾರದ ಮೇಲೆ ಬೆಳಿಗ್ಗೆ ಚೇತರಿಕೆಯ ಸ್ಕೋರ್ ಅನ್ನು ಒದಗಿಸುತ್ತದೆ.
Is a WHOOP better than an Apple Watch?
ನಿಮ್ಮ ಪೂರ್ತಿ ಆರೋಗ್ಯ, ದೈನಂದಿನ ಅಂಕಿಅಂಶಗಳು ಮತ್ತು ರಿಕವರಿಯೊಂದಿಗೆ ಮೆಟ್ರಿಕ್‌ಗಳ ಮೇಲೆ ಹೆಚ್ಚು ಗಮನಹರಿಸುವುದರೊಂದಿಗೆ ಹೆಚ್ಚಾಗಿ ನಿದ್ರೆ, ದೇಹದ ಒತ್ತಡ ಮತ್ತು ಚೇತರಿಕೆಯ ಜಾಡು ಹಿಡಿಯುವ ಡಿವೈಸ್ ಬೇಕಿದ್ದರೆ WHOOP ಅತ್ಯುತ್ತಮವಾಗಿದೆ. ಏಕೆಂದರೆ ಆಪಲ್ ನಿದ್ರೆಯ ಸಮಯದಲ್ಲಿ ಉಸಿರಾಟದ ದರಗಳನ್ನು ಪತ್ತೆಹಚ್ಚುವುದಿಲ್ಲ ಕೇವಲ ರಕ್ತದಲ್ಲಿನ ಆಮ್ಲಜನಕದ ಮೊನಿಟರ್ ಮಾಡಿ ಡೇಟಾ ನೀಡುತ್ತದೆ.
ಸಮಂಜಸವಾದ ಫಿಟ್‌ನೆಸ್ ಮತ್ತು ಸ್ಲೀಪ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳೊಂದಿಗೆ ಅತ್ಯುತ್ತಮ ವಾಚ್ ಬೇಕಿದ್ದರೆ ನೀವು ಆಪಲ್ ವಾಚ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ನೀವು ಗಂಭೀರವಾದ ಫಿಟ್ನೆಸ್ ಉತ್ಸಾಹಿ ಅಥವಾ ಸ್ಪರ್ಧಾತ್ಮಕ ಕ್ರೀಡಾಪಟುವಾಗಿದ್ದರೆ ಯೋಚಿಸದೆ WHOOP ಪಡೆಯಬೇಕುತ್ತದೆ ಏಕೆಂದರೆ ಇದು ಹಗಲು ರಾತ್ರಿ ಎನ್ನದೆ ನಿಮ್ಮ ದೇಹದ ಸಾವಿರಾರು ಡೇಟಾ ಪಾಯಿಂಟ್‌ಗಳನ್ನು 24×7 ಆಟೋಮ್ಯಾಟಿಕಾಗಿ ಟ್ರ್ಯಾಕ್ ಮಾಡುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile