AMOLED ಡಿಸ್ಪ್ಲೇಯೊಂದಿಗೆ Noise ColorFit Pro ಸೀರೀಸ್‌ನ ಸ್ಮಾರ್ಟ್ ವಾಚ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ನಾಯ್ಸ್ (Noise) ತನ್ನ ಹೊಚ್ಚ ಹೊಸ ಸ್ಮಾರ್ಟ್ ವಾಚ್ ಅನ್ನು ಭಾರತದಲ್ಲಿ ಪರಿಚಯಿಸಿದೆ.
Noise ColorFit Pro 5 ಮತ್ತು Noise ColorFit Pro 5 Max ಎಂಬ ಎರಡು ಹೊಸ ಸ್ಮಾರ್ಟ್ ವಾಚು ಬಿಡುಗಡೆಗೊಳಿಸಿದೆ.
ಭಾರತದ ಜನಪ್ರಿಯ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಕಂಪನಿ ನಾಯ್ಸ್ (Noise) ತನ್ನ ಹೊಚ್ಚ ಹೊಸ ಸ್ಮಾರ್ಟ್ ವಾಚ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ನೋಯಿಸ್ ಮುಖ್ಯವಾಗಿ Noise ColorFit Pro 5 ಮತ್ತು Noise ColorFit Pro 5 Max ಎಂಬ ಎರಡು ಹೊಸ ಸ್ಮಾರ್ಟ್ ವಾಚುಗಳನ್ನು ಉತ್ತಮ ಬೆಲೆಗೆ ಲೇಟೆಸ್ಟ್ ಫೀಚರ್‌ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ ವಾಚುಗಳು SOS ಕನೆಕ್ಷನ್, ಸುಧಾರಿತ ಟ್ರ್ಯಾಕಿಂಗ್ ಜೊತೆಗೆ 150+ ಅಧಿಕ ವಾಚ್ ಫೇಸ್‌ಗಳೊಂದಿಗೆ ಮಲ್ಟಿ ಸ್ಪೋರ್ಟ್ ಮತ್ತು ಆರೋಗ್ಯ ವಿಧಾನದ ಫೀಚರ್ಗಳನ್ನು ಬೆಂಬಲಿಸುತ್ತವೆ
Also Read: SIM Card New Rules: ಹೊಸ ಸಿಮ್ ಕಾರ್ಡ್ ಖರೀದಿಗೆ 1ನೇ ಡಿಸೆಂಬರ್ 2023 ರಿಂದ ಹೊಸ ನಿಯಮ ಜಾರಿ!
Noise ColorFit Pro 5 ಮತ್ತು Noise ColorFit Pro 5 Max ವಿಶೇಷಣಗಳು
ಇದರಲ್ಲಿನ ಡಾಕ್‌ನಲ್ಲಿರುವ ಬಟನ್ ಐದು ಬಾರಿ ಒತ್ತುವುದರಿಂದ ತುರ್ತು ಕನೆಕ್ಷನ್ ತ್ವರಿತವಾಗಿ ಕರೆ ಮಾಡಲು ಅನುಮತಿಸುವ ಮೂಲಕ ಧರಿಸಬಹುದಾದ ವಸ್ತುಗಳ ಸುರಕ್ಷತೆಯ ಅಂಶವನ್ನು ಹೆಚ್ಚಿಸಿದೆ. Noise ColorFit Pro 5 ಸರಣಿಯು ವೈಯಕ್ತಿಕ ಸ್ಪರ್ಶಕ್ಕಾಗಿ DIY ವಾಚ್ ಫೇಸ್ ವೈಶಿಷ್ಟ್ಯವನ್ನು ಹೊಂದಿದೆ. ಮತ್ತು ಒತ್ತಡದ ಮಟ್ಟಗಳು, ಹವಾಮಾನ ಮತ್ತು AQI ಗೆ ಹೊಂದಿಕೊಳ್ಳುವ ಡೈನಾಮಿಕ್ ವಾಚ್ ಮುಖವನ್ನು ಹೊಂದಿದೆ. ನಿಖರವಾದ ಲೋಹದ ನಾಬ್, ಪವರ್ ಬಟನ್ ಮತ್ತು ಇಂಟರ್ನಲ್ ಮೈಕ್ರೊಫೋನ್‌ನೊಂದಿಗೆ ಕೇಂದ್ರ ನಿಯಂತ್ರಣ ಕೇಂದ್ರವಾಗಿ ಕಾರ್ಯನಿರ್ವಹಿಸುವ ಸ್ಮಾರ್ಟ್ ಡಾಕ್ ಅನ್ನು ನೋಯ್ಸ್ ಪರಿಚಯಿಸಿದೆ.
Noise ColorFit Pro 5 ಇದು 1.85 ಇಂಚಿನ AMOLED ಡಿಸ್ಪ್ಲೇಯೊಂದಿಗೆ ಬಂದ್ರೆ ಇದರ Max ರೂಪಾಂತರವು ಸ್ವಲ್ಪ ದೊಡ್ಡದಾದ 1.96 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಎರಡೂ ಡಿಸ್ಪ್ಲೇಗಳು 600 ನಿಟ್‌ಗಳ ಗರಿಷ್ಠ ಹೊಳಪನ್ನು ತಲುಪಬಹುದು. ಇದರಿಂದಾಗಿ ಪರದೆಗಳು ಪ್ರಕಾಶಮಾನವಾಗಿ ಗೋಚರಿಸುತ್ತವೆ. ಈ ಹೊಸ ಸ್ಮಾರ್ಟ್ ವಾಚ್‌ಗಳು ಡಸ್ಟ್ ಮತ್ತು ವಾಟರ್ ಪ್ರೂಫ್ ಪ್ರಮಾಣಿತ IP68 ರೇಟಿಂಗ್‌ನೊಂದಿಗೆ ಬರುತ್ತವೆ.
ಸ್ಮಾರ್ಟ್‌ವಾಚ್‌ಗಳ ಬೆಲೆ ಮತ್ತು ಲಭ್ಯತೆ
Noise ColorFit Pro 5 ಮತ್ತು Noise ColorFit Pro 5 Max ಸ್ಮಾರ್ಟ್‌ವಾಚ್‌ಗಳು ಸ್ಟ್ಯಾಂಡರ್ಡ್ ಆವೃತ್ತಿಗಳಿಗೆ 3,999 ರೂಗಳಾಗಿದ್ದು ಮತ್ತೊಂದು 4,999 ರೂಗಳಾಗಿವೆ. ಇದರೊಂದಿಗೆ ಕಂಪನಿ ಎಲೈಟ್ ಆವೃತ್ತಿಗಳನ್ನು ಸಹ ನೀಡಿದ್ದು 4,999 ರೂಗಳಾದರೆ ಮತ್ತೊಂದು 5,999 ರೂಗಳಾಗಿವೆ. ಈ ಸ್ಮಾರ್ಟ್‌ವಾಚ್‌ಗಳನ್ನು GoNoise.com, Flipkart, Amazon, Myntra ಮತ್ತು ರಾಷ್ಟ್ರವ್ಯಾಪಿ ಅಧಿಕೃತ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.
Noise ColorFit Pro 5 Max ಮಿಡ್‌ನೈಟ್ ಬ್ಲ್ಯಾಕ್, ವಿಂಟೇಜ್ ಬ್ರೌನ್, ಸನ್‌ಸೆಟ್ ಆರೆಂಜ್, ಕ್ಲಾಸಿಕ್ ಬ್ಲೂ, ಕ್ಲಾಸಿಕ್ ಬ್ರೌನ್, ಎಲೈಟ್ ಬ್ಲಾಕ್, ಎಲೈಟ್ ರೋಸ್ ಗೋಲ್ಡ್, ಆಲಿವ್ ಗ್ರೀನ್, ರೇನ್‌ಬೋ ವೀವ್ ಮತ್ತು ಸ್ಟಾರ್‌ಲೈಟ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಮತ್ತೊಂದೆಡೆ, Noise ColorFit Pro 5 Max ಜೆಟ್ ಬ್ಲಾಕ್, ಸ್ಪೇಸ್ ಬ್ಲೂ, ಕ್ಲಾಸಿಕ್ ಬ್ಲ್ಯಾಕ್, ಕ್ಲಾಸಿಕ್ ಬ್ರೌನ್, ಎಲೈಟ್ ಬ್ಲಾಕ್, ಎಲೈಟ್ ಸಿಲ್ವರ್, ಸೇಜ್ ಗ್ರೀನ್ ಮತ್ತು ಶಾಡೋ ಬ್ಲಾಕ್ ಆಯ್ಕೆಗಳಲ್ಲಿ ಲಭ್ಯವಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile