₹45,000 ರೂಗಳ Samsung Galaxy Watch5 Pro Bluetooth ಅಮೆಜಾನ್‌ನಲ್ಲಿ ₹12,499 ರೂಗಳಲ್ಲಿ ಲಭ್ಯ!

Updated on 31-Jul-2024
HIGHLIGHTS

Samsung Galaxy Watch5 Pro Bluetooth ಸ್ಮಾರ್ಟ್ ವಾಚ್ ಮೇಲೆ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್‌ ನೀಡುತ್ತಿದೆ.

ಪ್ರಸ್ತುತ ಅಮೆಜಾನ್‌ನಲ್ಲಿ ಕೇವಲ ₹12,499 ರೂಗಳಿಗೆ ಮಾರಾಟವಾಗುತ್ತಿರುವು ನೋಡುಗರಿಗೆ ನಿಜಕ್ಕೂ ಮೂಕ ವಿಸ್ಮಯಗೊಳಿಸಿದೆ.

Samsung Galaxy Watch5 Pro ಸ್ಮಾರ್ಟ್ ವಾಚ್‌ನಲ್ಲಿ 1.77 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ.

ಭಾರತದಲ್ಲಿ ಸ್ಯಾಮ್‌ಸಂಗ್‌ ತಲ್ಲ ಲೇಟೆಸ್ಟ್ Samsung Galaxy Watch5 Pro Bluetooth ಸ್ಮಾರ್ಟ್ ವಾಚ್ ಮೇಲೆ ನೀವು ಎಂದು ಕೇಳಿರದ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್‌ನೊಂದಿಗೆ ಅಮೆಜಾನ್ ಇಂಡಿಯಾದ ಮೂಲಕ ನೀಡುತ್ತಿದೆ. ಸ್ಮಾರ್ಟ್ ವಾಚ್ ಕಂಪನಿಯ ಮೊದಲ ಮತ್ತು ಟೈಟಾನಿಯಂ ಕೇಸ್ ಮತ್ತು ಸಫೈರ್ ಕ್ರಿಸ್ಟಲ್ ಡಿಸ್‌ಪ್ಲೇಯೊಂದಿಗೆ ಬಂದ ಏಕೈಕ ವಾಚ್ ಆಗಿದೆ. ಇದಲ್ಲದೆ ಇದು ಕಂಪನಿಯ ಸಾಲಿನಲ್ಲಿ ಅತ್ಯಂತ ಕಠಿಣವಾದ ಸ್ಮಾರ್ಟ್ ವಾಚ್ ಆಗಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್ ಈಗಲೂ ಸಹ ಸ್ಯಾಮ್‌ಸಂಗ್‌ ವೆಬ್‌ಸೈಟ್‌ನಲ್ಲಿ ₹44,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಪ್ರಸ್ತುತ ಅಮೆಜಾನ್‌ನಲ್ಲಿ ಕೇವಲ ₹12,499 ರೂಗಳಿಗೆ ಮಾರಾಟವಾಗುತ್ತಿರುವು ನೋಡುಗರಿಗೆ ನಿಜಕ್ಕೂ ಮೂಕ ವಿಸ್ಮಯಗೊಳಿಸಿದೆ.

Also Read: ಜಿಯೋಗಿಂತ ಕಡಿಮೆ ಬೆಲೆಗೆ ದಿನಕ್ಕೆ 1.5GB ಡೇಟಾ ಮತ್ತು ಕರೆಗಳನ್ನು 90 ದಿನಗಳಿಗೆ ನೀಡುವ ಈ Airtel Plan ಬೆಲೆ ಎಷ್ಟು?

ಮೊದಲಿಗೆ ಭಾರತದಲ್ಲಿ ಈ ಸ್ಮಾರ್ಟ್ ವಾಚ್ ಜನವರಿ 2022 ರಂದು ಬಿಡುಗಡೆಗೊಂಡಿದ್ದು ಈ Samsung Galaxy Watch5 Pro Bluetooth ಸ್ಮಾರ್ಟ್ ವಾಚ್ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಸ್ಮಾರ್ಟ್‌ವಾಚ್ ಕೊಡುಗೆಯಾಗಿ ಬಿಡುಗಡೆ ಮಾಡಿತು. ಭಾರತದಲ್ಲಿ ಅತಿ ವೇಗವಾಗಿ ಹರಿದಾಡುತ್ತಿರುವ ಈ ಸುದ್ದಿ ಒಂದು ಕ್ಷಣಕ್ಕೆ ನಿಜಾನಾ ಎಂದು ಯೋಚಿಸಬೇಕಾದರು ಇದು ಸತ್ಯವಾಗಿದೆ. ಇದರೊಂದಿಗೆ ಬರೋಬ್ಬರಿ 74% ವರೆಗೆ ತನ್ನ ಮಾರಾಟದ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಮಾಡಿ ಮಾರಾಟ ಮಾಡುತ್ತಿದೆ.

Samsung Galaxy Watch5 Pro Bluetooth Now available at lowest price in Amazon

Samsung Galaxy Watch5 Pro Bluetooth ಸ್ಮಾರ್ಟ್ ವಾಚ್ ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ ತನ್ನ ಈ ಸ್ಮಾರ್ಟ್ ವಾಚ್ ಮೇಲೆ ಎಲ್ಲಿಲ್ಲದ ಬೆಲೆ ಇಳಿಕೆಯನ್ನು ನೀಡಿ ಬಳಕೆದಾರರಿಗೆ ಅತ್ಯುತ್ತಮ ಆಫರ್ಗಳನ್ನು ನೀಡುತ್ತಿದೆ. ಯಾಕೆಂದರೆ ಮಾರ್ಚ್ ತಿಂಗಳಲ್ಲೂ ಸಹ ಕಂಪನಿ ಈ ಸ್ಮಾರ್ಟ್ ವಾಚ್ ಮೇಲೆ ಬರೋಬ್ಬರಿ 24,000 ರೂಗಳ ಡಿಸ್ಕೌಂಟ್ ನೀಡಿತ್ತು ಆದರೆ ಈಗ ಅದಕ್ಕಿಂತ ಕಡಿಮೆ ಕೇವಲ 12,499 ರೂಗಳಿಗೆ ಮಾರಾಟ ಮಾಡುತ್ತಿದೆ. ಅಷ್ಟೇಯಲ್ಲದೆ ಅಮೆಜಾನ್‌ನಲ್ಲಿ ಗ್ರಾಹಕರು HSBC ಕ್ರೆಡಿಟ್ ಕಾರ್ಡ್ ಸುಮಾರು 1500 ರೂಗಳು ಮತ್ತು ಇದೆ ನೀವು ಮೂಲಕ EMI ಸೌಲಭ್ಯವನ್ನು ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಅಂದ್ರೆ ಸುಮಾರು 2000 ರೂಗಳವರೆಗೆ ರಿಯಾಯಿತಿಯನ್ನು ಸಹ ಪಡೆಯಬಹುದು. ಇದರ ಹಿನ್ನಲೆ ನೋಡುವುದಾದರೆ ಕಂಪನಿ ಮತ್ತೊಂದು ಹೊಸ Galaxy Watch ಬಿಡುಗಡೆಯನ್ನು ನಿರೀಕ್ಷಿಸಬಹುದು.

Samsung Galaxy Watch5 Pro Bluetooth ಫೀಚರ್ಗಳೇನು?

ಮೊದಲಿಗೆ ಈ ಸ್ಮಾರ್ಟ್ ವಾಚ್‌ನಲ್ಲಿ 1.77 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಪಡೆಯುತ್ತೀರಿ ಇದರ ಹೊರತಾಗಿ ಇದು GPS ನ್ಯಾವಿಗೇಶನ್ ಜೊತೆಗೆ ಕರೆ ಕಾರ್ಯವನ್ನು ಡ್ಯುಯಲ್ ಕೋರ್ CPU, 5 ವಾಚ್ ಫೇಸ್‌ಗಳು ಮತ್ತು 1.5GB RAM ಜೊತೆಗೆ 16GB ಸ್ಟೋರೇಜ್ ಸಾಮರ್ಥ್ಯವನ್ನು ಸಹ ಹೊಂದಿದೆ. Samsung Galaxy Watch5 Pro Bluetooth ಇದರಲ್ಲಿ ನೀವು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲವನ್ನು ಮಾತ್ರ ಪಡೆಯುತ್ತೀರಿ. ಆದರೆ ಗಮನದಲ್ಲಿರಲಿ ಅದನ್ನು iOS ಸಾಧನಗಳೊಂದಿಗೆ ಬಳಸಲಾಗುವುದಿಲ್ಲ. ನಿಮ್ಮ ಮಾಹಿತಿಗಾಗಿ ನೀವು ಅದರಲ್ಲಿ WearOS ಬೆಂಬಲವನ್ನು ಪಡೆಯುತ್ತಿರುವಿರಿ.

ಈ Samsung Galaxy Watch5 Pro Bluetooth ಸ್ಮಾರ್ಟ್ ವಾಚ್ ನಿಮ್ಮ ಹೃದಯ ಬಡಿತದ ಮಾನಿಟರಿಂಗ್ ಜೊತೆಗೆ ನಿದ್ರೆ ಮಾನಿಟರ್ ಮತ್ತು ವ್ಯಾಯಾಮ ಟ್ರ್ಯಾಕರ್ ಅನ್ನು ಸಹ ಹೊಂದಿದ್ದೀರಿ. ಈ ಸ್ಮಾರ್ಟ್ ವಾಚ್ 50m ಮೀಟರ್ ವರೆಗೆ ನೀರು ನಿರೋಧಕವಾಗಿ ಮಾಡಲಾಗಿದೆ. ವೈ-ಫೈ ಬೆಂಬಲದ ಹೊರತಾಗಿ ವಾಚ್‌ನಲ್ಲಿ ಬ್ಲೂಟೂತ್ ಸಂಪರ್ಕವೂ ಲಭ್ಯವಿದ್ದು ಈ ಸ್ಮಾರ್ಟ್ ವಾಚ್ ನಿಮಗೆ 590mAh ಬ್ಯಾಟರಿಯನ್ನು ಹೊಂದಿದ್ದು ಕಂಪನಿಯು ಸುಮಾರು 80 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುವುದಾಗಿ ಹೇಳಲಾಗಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :