ನೋಯಿಸ್ ತನ್ನ ಬಜೆಟ್ ಸ್ಮಾರ್ಟ್ ವಾಚ್ NoiseFit Vortex ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬಿಡುಗಡೆಯ ಈ ನೋಯಿಸ್ ಕಲರ್‌ಫಿಟ್ ಮೈಟಿಯ ಬಿಡುಗಡೆಯ ನಂತರ ಇದನ್ನು ಮೇ ಅಂತ್ಯದಲ್ಲಿ ದೇಶದಲ್ಲಿ ಪರಿಚಯಿಸಲಾಗಿದೆ. ಅಲ್ಲದೆ ಹೊಸದಾಗಿ ಬಿಡುಗಡೆಯಾದ ಈ NoiseFit Vortex ಸ್ಮಾರ್ಟ್‌ವಾಚ್ ಹೆಚ್ಚು ಆಕರ್ಷಕವಾಗಿದ್ದು ಡಯಲ್ ಆಕಾರದ 1.46 ಇಂಚಿನ AMOLED ಡಿಸ್ಪ್ಲೇ ಮತ್ತು ಇದರಲ್ಲಿ ನಿಮಗೆ 150+ ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ಬೆಂಬಲ 24×7 ಹೃದಯ ಬಡಿತ ಮಾನಿಟರಿಂಗ್, SpO2 ಮಾಪನ ಜೊತೆಗೆ IP68 ವಾಟರ್ ಮತ್ತು ಡಸ್ಟ್ ಪ್ರೂಫ್ ಜೊತೆಗೆ ಬರುತ್ತದೆ.
ನೋಯಿಸ್ ಬಜೆಟ್ ಸ್ಮಾರ್ಟ್ ವಾಚ್ NoiseFit Vortex ಜೆಟ್ ಬ್ಲಾಕ್, ಸಿಲ್ವರ್ ಗ್ರೇ, ವಿಂಟೇಜ್ ಬ್ರೌನ್, ರೋಸ್ ಪಿಂಕ್ ಮತ್ತು ಸ್ಪೇಸ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. NoiseFit Vortex ನ ಬೆಲೆ ಮತ್ತು ಫೀಚರ್‌ಗಳ ಬಗ್ಗೆ ನೋಡುವುದಾದರೆ ಈ ಸ್ಮಾರ್ಟ್ ವಾಚ್ ಭಾರತದಲ್ಲಿ ಇಂದಿನಿಂದ ಅಂದ್ರೆ ಜೂನ್ 13 ರಿಂದ gonoise.com ಮತ್ತು ಅಮೆಜಾನ್ ಇಂಡಿಯಾದ ಮೂಲಕ ಸುಮಾರು 2,999 ರೂಪಾಯಿಗಳ ವಿಶೇಷ ಬಿಡುಗಡೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.
ನೋಯಿಸ್ ತನ್ನ ಹೊಚ್ಚ ಹೊಸ NoiseFit Vortex ಸ್ಮಾರ್ಟ್‌ವಾಚ್ 1.46 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಡಯಲ್ ಚದರದ ಎರಡು ಫಿಸಿಕಲ್ ಸೈಡ್ ಬಟನ್‌ಗಳು ಮತ್ತು 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ ವಾಚ್ ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಇದು ತ್ವರಿತ ಕನೆಕ್ಷನ್ ಜೊತೆಗೆ ಕಡಿಮೆ ಬ್ಯಾಟರಿ ಬಳಕೆಯೊಂದಿಗೆ ಬ್ಲೂಟೂತ್ v5.3 ಕರೆಯನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ ಈ ಸ್ಮಾರ್ಟ್‌ವಾಚ್ ಜೆಟ್ ಬ್ಲಾಕ್, ಸಿಲ್ವರ್ ಗ್ರೇ, ವಿಂಟೇಜ್ ಬ್ರೌನ್, ರೋಸ್ ಪಿಂಕ್ ಮತ್ತು ಸ್ಪೇಸ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.
ನೋಯಿಸ್ ಕಂಪನಿಯ ಈ ಬಜೆಟ್ NoiseFit Vortex ಸ್ಮಾರ್ಟ್‌ವಾಚ್ 24×7 ಹೃದಯ ಬಡಿತ ಮಾನಿಟರಿಂಗ್, SpO2 ಮಾಪನ, ಒತ್ತಡ ಮಾಪನ, ನಿದ್ರೆ ಟ್ರ್ಯಾಕಿಂಗ್ ಜೊತೆಗೆ ಸ್ತ್ರೀ ಸೈಕಲ್ ಟ್ರ್ಯಾಕರ್ ಅನ್ನು ಹೊಂದಿದೆ. ಸ್ಮಾರ್ಟ್ ವಾಚ್ ಬಹು ಕ್ರೀಡಾ ಮೋಡ್ ಬೆಂಬಲ IP68 ನೀರು ಮತ್ತು ಧೂಳಿನ ಪ್ರತಿರೋಧ ಮತ್ತು 7 ದಿನಗಳ ಬ್ಯಾಟರಿ ಅವಧಿಯನ್ನು ಸಹ ಹೊಂದಿದೆ. ನೋಟಿಫಿಕೇಶನ್ ಡಿಸ್ಪ್ಲೇ, ಕ್ಯಾಲ್ಕುಲೇಟರ್, ಕ್ಯಾಮರಾ ಮತ್ತು ಮ್ಯೂಸಿಕ್ ಕಂಟ್ರೋಲ್‌ಗಳು, ಕ್ವಿಕ್ ರಿಪ್ಲೈ ಮತ್ತು ಕ್ಯಾಲ್ಕುಲೇಟರ್ ಫೀಚರ್‌ಗಳನ್ನು ಸ್ಮಾರ್ಟ್‌ವಾಚ್‌ನಲ್ಲಿ ನೀಡಲಾಗಿದೆ