Apple Launch Event 2024: ಆಪಲ್ ವಾಚ್ 10 ಸೀರೀಸ್ ಬಿಡುಗಡೆ! ಇದರ ಬೆಲೆ ಮತ್ತು ಫೀಚರ್ಗಳೇನು?

Apple Launch Event 2024: ಆಪಲ್ ವಾಚ್ 10 ಸೀರೀಸ್ ಬಿಡುಗಡೆ! ಇದರ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಒಟ್ಟಾರೆಯಾಗಿ ಎರಡು ರೂಪಾಂತರ ಪರಿಚಯಿಸಿದ್ದು Apple Watch 10 ಮತ್ತೊಂದು Apple Watch 10 Ultra 2 ಆಗಿದೆ.

Apple Watch 10 Series ಸ್ಟೇನ್‌ಲೆಸ್ ಸ್ಟೀಲ್ ಬದಲಿಗೆ ಏರೋಸ್ಪೇಸ್-ಗ್ರೇಡ್ ಟೈಟಾನಿಯಂನೊಂದಿಗೆ ತಯಾರಿಸಿ ಬಿಡುಗಡೆಗೊಳಿಸಿದೆ.

Apple Watch 10 Series ವಾಚ್ಗಳು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 80% ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

Apple Launch Event 2024: ಈಗಷ್ಟೇ ಶುರುವಾದ ಆಪಲ್ ಇವೆಂಟ್ನಲ್ಲಿ ಮೊದಲಿಗೆ iPhone 16 launch Event ಸರಣಿಯಲ್ಲಿ ಏನೇನು ಬಿಡುಗಡೆಗುತ್ತದೆ ಎಂದು ಕಾದು ಕುಳಿತ್ತಿರುವವರಿಗೆ ಕಂಪನಿ ಮೊದಲಿಗೆ Apple Watch 10 Series ಬಿಡುಗಡೆಗೊಳಿಸಿದೆ. ಇದರಲ್ಲಿ ಒಟ್ಟಾರೆಯಾಗಿ ಎರಡು ರೂಪಾಂತರ ಪರಿಚಯಿಸಿದ್ದು Apple Watch 10 ಮತ್ತೊಂದು Apple Watch 10 Ultra 2 ಆಗಿದೆ. ಅಲ್ಲದೆ ಈ ಕಂಪನಿ ಮೊದಲ ಬಾರಿಗೆ ಈ Apple Watch 10 Series ಸ್ಟೇನ್‌ಲೆಸ್ ಸ್ಟೀಲ್ ಬದಲಿಗೆ ಏರೋಸ್ಪೇಸ್-ಗ್ರೇಡ್ ಟೈಟಾನಿಯಂನೊಂದಿಗೆ ತಯಾರಿಸಿ ಬಿಡುಗಡೆಗೊಳಿಸಿದೆ. ಈ ವಾಚ್ಗಳು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 80% ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

Also Read: iPhone 16 launch Event ಲೈವ್ ಸ್ಟ್ರೀಮಿಂಗ್ ನೋಡುವುದು ಎಲ್ಲಿ? ಮಾರಾಟ ಯಾವಾಗ? ಮತ್ತು ಬೆಲೆ ಎಷ್ಟು?

Apple Watch 10 Series ಫೀಚರ್ಗಳು

ಹೊಸ ವಾಚ್ ಸೀರೀಸ್ 10 ವೈಡ್ ಆಂಗಲ್ OLED ಡಿಸ್ಪ್ಲೇ ಜೊತೆಗೆ ದೊಡ್ಡ ಆಕಾರ ಅನುಪಾತದೊಂದಿಗೆ ಬರುತ್ತದೆ. ಇದು ಹಳೆಯ ಆವೃತ್ತಿಗಳಿಗಿಂತ 40% ಪ್ರತಿಶತದಷ್ಟು ಪ್ರಕಾಶಮಾನವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ Watch 10 Series ಆವರಣವನ್ನು ಪಾಲಿಶ್ ಫಿನಿಶ್‌ನೊಂದಿಗೆ ಗಟ್ಟಿಮುಟ್ಟಾದ ಅಲ್ಯೂಮಿನಿಯಂ ಮಿಶ್ರಲೋಹದಿಂದ ಮಾಡಲಾಗಿದೆ. ಹೊಸ ಸ್ಲೀಪ್ ಅಪ್ನಿಯಾ (Sleep Apnea) ವೈಶಿಷ್ಟ್ಯವನ್ನು Apple Watch Series 9 ಮತ್ತು Watch Ultra 2 ನಂತಹ ಹಳೆಯ ಸಾಧನಗಳಿಗೆ ಪರಿಚಯಿಸಲಾಗುತ್ತದೆ. ಈ Watch 10 Series ಒಂದು ತಿಂಗಳ ಕಾಲ ನಿದ್ರೆ ಮತ್ತು ಉಸಿರಾಟದ ಮಾದರಿಗಳನ್ನು ಅಧ್ಯಯನ ಮಾಡುತ್ತದೆ.

Apple launch event 2024 apple watch 10 series launched
Apple launch event 2024 apple watch 10 series launched

Apple Watch 10 Series ಇಂದಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಸ್ಲೀಪ್ ಅಪ್ನಿಯಾದ (Sleep Apnea) ಯಾವುದೇ ಚಿಹ್ನೆ ಇದ್ದರೆ ತಿಳಿಸುತ್ತದೆ. Watch 10 Series ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಉಸಿರಾಟವು ಪದೇ ಪದೇ ನಿಲ್ಲುತ್ತದೆ ಮತ್ತು ಪ್ರಾರಂಭವಾಗುತ್ತದೆ. ಸ್ಲೀಪ್ ಅಪ್ನಿಯಾದಿಂದ ಜನರು (Sleep Apnea) ರೋಗನಿರ್ಣಯ ಮಾಡಿದ ಜನರು ಪರಿಧಮನಿಯ ಕಾಯಿಲೆಗಳು, ಹೃದಯಾಘಾತ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯುಗಳಿಗೆ ಗುರಿಯಾಗುತ್ತಾರೆ. ಆದರೆ ನಿಮ್ಮ ನಿದ್ರೆಯನ್ನು ಪ್ರತಿ ಸೆಕೆಂಡ್ ರೆಕಾರ್ಡ್ ಮಾಡಿ ನಿಮ್ಮ ಆರೋಗ್ಯದ ಮೇಲೆ ನೀವು ಹೆಚ್ಚು ಗಮನ ಹರಿಸಲು ಸಟಿಕ್ ಡೇಟಾವನ್ನು ನೀಡುತ್ತದೆ.

Apple Watch 10 Series ಬೆಲೆ ಮತ್ತು ಲಭ್ಯತೆಗಳು

ಇಂದು ಬಿಡುಗಡೆಯಾದ ಹೊಸ Apple Watch 10 ಹೊಸ ಸ್ಯಾಟರ್ನ್ ಬ್ಲ್ಯಾಕ್ ಬಣ್ಣದ ಆವೃತ್ತಿಯನ್ನು ಪರಿಚಯಿಸಿದೆ. ಇದರ ಬೆಲೆ $399 ಜಾಗತಿಕವಾಗಿ ಪರಿಚಯಿಸಲಾಗಿದೆ. ಇದನ್ನು 20ನೇ ಸೆಪ್ಟೆಂಬರ್ 2024 ರಿಂದ ಖರೀದಿಗೆ ಲಭ್ಯವಾಗಲಿದೆ. ಆದರೆ ಭಾರತದ ಬೆಲೆ ಬರಲು ಇನ್ನೂ ಕಾದು ನೋಡಬೇಕಿದೆ. ಇದರ ಕ್ರಮವಾಗಿ ಇದರ Apple Watch 10 Ultra 2 ಸ್ಮಾರ್ಟ್ ವಾಚ್ ಇದರ ಬೆಲೆಯನ್ನು $799 ಜಾಗತಿಕವಾಗಿ ಪರಿಚಯಿಸಲಾಗಿದೆ. ಇದನ್ನು ಇಂದಿನಿಂದಲೇ ಪ್ರಿ-ಆರ್ಡರ್ ಮಾಡಬಹುದು. ಇವೆಲ್ಲ ಜಾಗತಿಕ ಬೆಲೆಯಾಗಿದ್ದು ಭಾರತದ ಬೆಲೆ ಬಿಡುಗಡೆಯಾಗಲು ಇನ್ನೂ ಕಾದು ನೋಡಬೇಕಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo