1ನೇ ಮಾರ್ಚ್ 2020 ರಿಂದ ಕೇಬಲ್ ಮತ್ತು ಡಿಟಿಎಚ್ ವಲಯದಲ್ಲಿ ಮತ್ತೊಮ್ಮೆ ಹೊಸ ಸುಧಾರಣೆಯ ಹೊಸ ನಿಯಮ

Updated on 30-Jan-2020
HIGHLIGHTS

ಕೇಬಲ್ ಮತ್ತು ಡಿಟಿಎಚ್ ನಿಯಮಗಳಿಗೆ TRAI ಮಾಡಿರುವ ಎಲ್ಲಾ ಹೊಸ ತಿದ್ದುಪಡಿಗಳನೊಮ್ಮೆ ನೋಡಿ

ಭಾರತದಲ್ಲಿ ಟ್ರೈ  DTH Cable ಟಿವಿ ನಿಯಮಗಳಿಗೆ ಇತ್ತೀಚಿನ ಹೊಸ ತಿದ್ದುಪಡಿಯನ್ನು ಅಂದ್ರೆ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕ (Network Capacity Fee (NCF) ಬೆಲೆಗಳನ್ನು ತಗ್ಗಿಸಿದೆ. ಮತ್ತು ಆಪರೇಟರ್‌ಗಳು ತಮ್ಮ ದೀರ್ಘಕಾಲೀನ ಯೋಜನೆಗಳಲ್ಲಿ ಬಳಕೆದಾರರಿಗೆ ರಿಯಾಯಿತಿ ನೀಡಲು ಅವಕಾಶ ಮಾಡಿಕೊಟ್ಟಿದೆ. ಬಹು ಟಿವಿ ಕನೆಕ್ಷನ್ (Multiple) ನಿಯಮಗಳ ಜೊತೆಗೆ ಬೆಲೆಯಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಬದಲಾವಣೆಗಳು ಮತ್ತೊಮ್ಮೆ ಗ್ರಾಹಕರು ಮತ್ತು ಪ್ರಸಾರಕರ ಕಳವಳಗಳನ್ನು ಗಣನೆಗೆ ತೆಗೆದುಕೊಂಡಿವೆ. DHT ಮತ್ತು ಕೇಬಲ್ ಟಿವಿ ನಿಯಮಗಳಿಗೆ TRAI ಮಾಡಿದ ಎಲ್ಲಾ ತಿದ್ದುಪಡಿಗಳ ಸಂಪೂರ್ಣ ಪರಿಷ್ಕರಣೆ ಮಾಹಿತಿ ಈ ಕೆಳಗಿದೆ.

A-la-Carte / Alacarte ಎಂದರೇನು?

ಯಾವುದಾದರೊಂದು ಸಣ್ಣ ಮಾಸಿಕ ಪ್ಯಾಕ್ (ಇದು ಕಡ್ಡಾಯ) ಜೊತೆಗೆ ನಿಮಗಿಷ್ಟವಿರುವ ಯಾವುದೇ ಚಾನಲ್ಗಳನ್ನು ಆಯ್ಕೆ ಮಾಡಿ ಅದಕ್ಕೆ ಪಾವತಿಸುವುದನ್ನು ವಿಧಾನವನ್ನು A-la-Carte ಅಥವಾ Alacarte ಎನ್ನಲಾಗುತ್ತದೆ. ಉದಾಹರಣೆಗೆ ನಾನು ಟಾಟಾ ಸ್ಕೈ ಬಳಕೆದಾರನಾಗಿದ್ದು ಕನ್ನಡ ಮೆಟ್ರೋ ಪ್ಯಾಕ್ ಬಳಸಿದರೆ ತಿಂಗಳಿಗೆ 41.71 + GST ಮಾತ್ರ ಪಾವತಿಸಬೇಕಾಗುತ್ತದೆ. ಆದರೆ ಇದರಲ್ಲಿ ಕೆಲವೇ ಚಾನಲ್ಗಳನ್ನೂ ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಆದರೆ ನನಗೆ ಇದರೊಂದಿಗೆ ಕನ್ನಡ ಮತ್ತು ನ್ಯೂಸ್ ಚಾನಲಲ್ಲಿ ಯಾವುದೇ ಭಾಷೆಯ ನ್ಯೂಸ್, ಮೂವೀಸ್, ಮ್ಯೂಸಿಕ್ ಅಥವಾ ಕಾರ್ಟೂನ್ ಆಗಿರಬವುದು. ಅಂದ್ರೆ ಪ್ರತ್ಯೇಕವಾಗಿ ಚಾನಲ್ ಆಯ್ಕೆ ಮಾಡುವ ಅವಕಾಶವಿದೆ. ಗಮನದಲ್ಲಿಡಿ ಪ್ರತಿ ಚಾನಲ್'ನ  ಬೆಲೆ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ.

ಮೊದಲಿಗೆ ಪ್ರತಿ ತಿಂಗಳಿಗೆ ತೆರಿಗೆಗಳನ್ನು ಹೊರತುಪಡಿಸಿ ಗರಿಷ್ಠ ₹130 ನೆಟ್‌ವರ್ಕ್ ಸಾಮರ್ಥ್ಯ ಶುಲ್ಕದಲ್ಲಿ 200 ಚಾನೆಲ್‌ಗಳನ್ನು ಒದಗಿಸಲು ಟ್ರಾಯ್ ಆದೇಶಿಸಿದೆ. ಇದರ ಉತ್ತಮ ಭಾಗವೆಂದರೆ 200 ಚಾನೆಲ್‌ಗಳ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಡ್ಡಾಯಗೊಳಿಸಿದ ಎಲ್ಲಾ ಚಾನಲ್‌ಗಳನ್ನು ಹೊರಗಿಡುತ್ತದೆ. ಆಪರೇಟರ್‌ಗಳು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಎಲ್ಲಾ ಚಾನೆಲ್‌ಗಳನ್ನು ನೀಡಲು ತಿಂಗಳಿಗೆ ಕೇವಲ ₹160 ರೂಗಿಂತ ಹೆಚ್ಚಿನ ಶುಲ್ಕ ವಿಧಿಸದಂತೆ ಆದೇಶಿಸಲಾಗಿದೆ.  

-ಚಾನೆಲ್ಗಳ ಪ್ಯಾಕೇಜಿಗೆ ಬಂದಾಗ TRAI ಸಹ ಅಲ್ಲಿಯೂ ಬದಲಾವಣೆಗಳನ್ನು ಮಾಡಿದೆ. ಅಲಕಾರ್ಟೆ ರೀತಿಯಲ್ಲಿ ಪರಿಸ್ಕರಿಸಿದೆ ಆಯ್ದ ಚಾನಲ್‌ಗಳ ಪ್ಯಾಕೆಜ್ ಮೊತ್ತಕ್ಕಿಂತ 1.5 ಪಟ್ಟು ಹೆಚ್ಚು ದುಬಾರಿಯಾಗಬಾರದು ಎಂದು TRAI ಆದೇಶಿಸುತ್ತದೆ. ಹೆಚ್ಚುವರಿಯಾಗಿ ಪ್ಯಾಕೆಜಲ್ಲಿ  ಪಾವತಿಸಿದ ಚಾನಲ್‌ನ ಸರಾಸರಿ ದರವು ಅಲಕಾರ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ದುಬಾರಿಯಾಗಬಾರದು.

-ಪ್ರಸಾರಕರಿಗೆ ಅವರ ಚಾನೆಲ್ ಪ್ಯಾಕೆಜ್ 12 ರೂಗಿಂತ ಕಡಿಮೆ ಬೆಲೆಯ ಚಾನೆಲ್‌ಗಳನ್ನು ಮಾತ್ರ ಒಳಗೊಂಡಿರುತ್ತವೆ. ಆ ಚಾನಲ್‌ಗಳಿಗೆ 12 ರೂಗಿಂತ ಹೆಚ್ಚಿನ ಬೆಲೆಯಿದ್ದರೆ ಗ್ರಾಹಕರು ಅವುಗಳನ್ನು ಪ್ರತ್ಯೇಕವಾಗಿ ಆರಿಸಬೇಕಾಗುತ್ತದೆ.

-ಒಬ್ಬ ಚಂದಾದಾರರಿಗೆ ಮಲ್ಟಿ ಟಿವಿ ಕನೆಕ್ಷನ್ ನೋಂದಾಯಿಸಿದಲ್ಲಿ ಎರಡನೇ ಮತ್ತು ಹೆಚ್ಚುವರಿ ಟಿವಿ ಸಂಪರ್ಕಗಳಿಗಾಗಿ ಘೋಷಿತ NCF ನ ಗರಿಷ್ಠ 40% ಪ್ರತಿಶತವನ್ನು ವಿಧಿಸಲಾಗುವುದು ಎಂದು TRAI ನಿರ್ಧರಿಸಿದೆ.

-ಆಪರೇಟರ್‌ಗಳು 6 ತಿಂಗಳಿಗಿಂತ ಹೆಚ್ಚು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ದೀರ್ಘಾವಧಿಯ ರಿಯಾಯಿತಿಯನ್ನು ನೀಡಲು ಸಾಧ್ಯವಾಗುತ್ತದೆ. 

-ಜನವರಿ 15 ರೊಳಗೆ ಈ ಅಲಕಾರ್ಟೆ ಮತ್ತು ಹೊಸ ಪ್ಯಾಕೆಜ್ಗಳಿಗೆ ಪೇ ಚಾನೆಲ್‌ಗಳ ಬೆಲೆಯಲ್ಲಿ ಮಾಡಿದ ಬದಲಾವಣೆಗಳನ್ನು ಪ್ರತಿಬಿಂಬಿಸಲು TRAI ಎಲ್ಲಾ ಪ್ರಸಾರಕರನ್ನು ಕಡ್ಡಾಯಗೊಳಿಸಿದೆ.

-ಆದರೆ ಆಪರೇಟರ್‌ಗಳು ನವೀಕರಿಸಿದ ಬೆಲೆಗಳನ್ನು ಜನವರಿ 30 ರೊಳಗೆ ತೋರಿಸಬೇಕಾಗುತ್ತದೆ. ಇದರ ನಂತರ ಗ್ರಾಹಕರು ಹೊಸ ಬದಲಾವಣೆಗಳನ್ನು ಇದೇ ಮಾರ್ಚ್ 1 ರಿಂದ ಪಡೆಯಬವುದೆಂದು ಟ್ರೈ ತಿಳಿಸಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :