ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಇತ್ತೀಚಿನ ಅತ್ಯಾಧುನಿಕ ಮೊಟ್ಟ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಫೀಚರ್ (AI Feature) ಆಧಾರಿತ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ. ಮತ್ತು ಅದರ ಪ್ರಮುಖ OLED 4K ಮತ್ತು Neo QLED 8K ಮಾದರಿಗಳನ್ನು NQ8 AI Gen3 ಪ್ರೊಸೆಸರ್‌ನೊಂದಿಗೆ ಪ್ರದರ್ಶಿಸಿದೆ. ಇದು ಇಮೇಜ್ ಅಪ್‌ಸ್ಕೇಲಿಂಗ್ ಮತ್ತು ಆಡಿಯೊ ಸ್ಪೀಕರ್ಗಳಲ್ಲಿ AI ಸಾಮರ್ಥ್ಯಗಳನ್ನು ಹೊಂದಿದೆ. ಇದನ್ನು ಸ್ಯಾಮ್‌ಸಂಗ್ ಬೆಂಗಳೂರಿನಲ್ಲಿ ನಡೆದ ತನ್ನ ಅನ್‌ಬಾಕ್ಸ್ ಮತ್ತು ಡಿಸ್ಕವರ್ 2024 ಬಿಡುಗಡೆ ಸಮಾರಂಭದಲ್ಲಿ ಮೊದಲು ಪ್ರದರ್ಶಿಸಲಾಗಿದೆ.
ಈ ಅತ್ಯಾಧುನಿಕ ಟಿವಿಗಳು ಆನ್-ಡಿವೈಸ್ ಜನರೇಟಿವ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಫೀಚರ್ (AI Feature) ಆಧಾರಿತ ತಂತ್ರಜ್ಞಾನಕ್ಕೆ ಸ್ಯಾಮ್‌ಸಂಗ್‌ನ ಪ್ರವೇಶವನ್ನು ಗುರುತಿಸುತ್ತವೆ. ಇದು AI ಚಾಲಿತ ಸ್ಮಾರ್ಟ್ ಟಿವಿಗಳನ್ನು ಮನರಂಜನೆಯಲ್ಲಿ ಹೊಸ ಪ್ರವೃತ್ತಿಯ ಆರಂಭವನ್ನು ಸಹ ಗುರುತಿಸುತ್ತದೆ. ಇದರಲ್ಲಿ ನಿಮಗೆ TizenOS ನಿಂದ ನಡೆಸಲ್ಪಡುವ ಹೊಸ Samsung Neo QLED 8K ಸ್ಮಾರ್ಟ್ ಟಿವಿ ಸರಣಿಯು ಸ್ಯಾಮ್‌ಸಂಗ್‌ನ ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಮತ್ತು ಕ್ಲೌಡ್ ಗೇಮಿಂಗ್, ಎಜುಕೇಶನ್ ಹಬ್ ಮತ್ತು ಸ್ಮಾರ್ಟ್ ಯೋಗ ಕಾರ್ಯನಿರ್ವಹಣೆಗಳನ್ನು ನೀಡುತ್ತದೆ. ಇದನ್ನು ಟಿವಿಯನ್ನು AI-ಚಾಲಿತ ಚಾಪೆಯೊಂದಿಗೆ ಜೋಡಿಸುವ ಮೂಲಕ ಪ್ರವೇಶಿಸಬಹುದು.
ಈ ಸ್ಮಾರ್ಟ್ ಟಿವಿಗಳ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಕಂಪನಿ ಪ್ರೀ-ಆರ್ಡರ್ ಈಗಾಗಲೇ ಶುರುವಾಗಿದ್ದು ಇದರ ಕೊಡುಗೆಯ ಭಾಗವಾಗಿ Neo QLED 8K ಮತ್ತು Neo QLED 4K ಸ್ಮಾರ್ಟ್ ಟಿವಿ ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 79,990 ಮೌಲ್ಯದ ಉಚಿತ ಸೌಂಡ್‌ಬಾರ್ ಮತ್ತು 59,990 ರೂಗಳ ಫ್ರೀಸ್ಟೈಲ್ ಮತ್ತು 29,990 ರೂಗಳ ಮ್ಯೂಸಿಕ್ ಫ್ರೇಮ್ ಪಡೆಯಲಿದ್ದಾರೆ. ಈ ಆಫರ್ ಖರೀದಿಸುವ ಮಾಡೆಲ್ ಮೇಲೆ ನಿರ್ಧರಿಸಲಾಗಿರುತ್ತದೆ. ಸ್ಮಾರ್ಟ್ ಟಿವಿಗಳನ್ನು ಆಸಕ್ತರು 30ನೇ ಏಪ್ರಿಲ್ 2024 ರಿಂದ ಖರೀದಿಸಬಹುದು. ಅಲ್ಲದೆ ಈ ಸ್ಮಾರ್ಟ್ ಟಿವಿ ಬಿಡುಗಡೆಯ ಕೊಡುಗೆಯಾಗಿ ಗ್ರಾಹಕರು ಮಾಡೆಲ್ ಮೇಲೆ 20% ವರೆಗೆ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು.
Samsung Neo QLED 8K ಆರಂಭಿಕ ಬೆಲೆ 3,19,990 ರೂಗಳಿಂದ ಶುರು
Samsung Neo QLED 4K ಆರಂಭಿಕ ಬೆಲೆ 1,39,990 ರೂಗಳಿಂದ ಶುರು
Samsung OLED ಆರಂಭಿಕ ಬೆಲೆ 1,64,990 ರೂಗಳಿಂದ ಶುರು.
Also Read: Photo Edit: ಮೊಬೈಲ್‌ನಲ್ಲಿ ಫೋಟೋ ಎಡಿಟ್ ಮಾಡೋರಿಗೆ ಈ 4 ಅಪ್ಲಿಕೇಶನ್ಗಳು ವರದಾನವೆಂದರೆ ತಪ್ಪಿಲ್ಲ ?
Neo QLED 8K TVಗಳ ಹೊಸ ಶ್ರೇಣಿಯು NPU ನೊಂದಿಗೆ NQ8 AI Gen 3 ಪ್ರೊಸೆಸರ್ ಅನ್ನು ಹೊಂದಿದ್ದು ಹಿಂದಿನ ಪೀಳಿಗೆಯ ನಿಯೋ ಸ್ಮಾರ್ಟ್ ಟಿವಿಗಳಿಗೆ ಹೋಲಿಸಿದರೆ 64 ರಿಂದ 512 ರವರೆಗೆ ನ್ಯೂರಲ್ ನೆಟ್‌ವರ್ಕ್‌ಗಳಲ್ಲಿ 8 ಪಟ್ಟು ಹೆಚ್ಚಳವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಮತ್ತೊಂದೆಡೆಯಲ್ಲಿ ನಿಯೋ QLED 4K ಟಿವಿಗಳು ಮತ್ತು OLED ಟಿವಿಗಳು NQ4 AI Gen 2 ಪ್ರೊಸೆಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಇದರ ಬಗ್ಗೆ ಮತ್ತಷ್ಟು ಫೀಚರ್ ತಿಳಿಯಲು Samsung AI Smart Tv ಮೇಲೆ ಕ್ಲಿಕ್ ಮಾಡಬಹುದು.
ನಿಯೋ QLED 8K ಶ್ರೇಣಿಯು AI ಪಿಕ್ಚರ್ ಟೆಕ್ನಾಲಜಿ, AI ಅಪ್‌ಸ್ಕೇಲಿಂಗ್ ಪ್ರೊ, AI ಮೋಷನ್ ಎನ್‌ಹಾನ್ಸರ್ ಪ್ರೊ, ರಿಯಲ್ ಮತ್ತು ಡೆಪ್ತ್ ಎನ್‌ಹಾನ್ಸರ್ ಪ್ರೊ, AI ಕಸ್ಟಮೈಸೇಶನ್ ಮೋಡ್ ಮತ್ತು AI ಎನರ್ಜಿ ಮೋಡ್‌ನಂತಹ ಹಲವಾರು AI ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಸ್ಯಾಮ್‌ಸಂಗ್‌ನ AI ಸೌಂಡ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಇದು ಬ್ಯಾಕ್‌ಗ್ರೌಂಡ್ ಸೌಂಡ್ ಪತ್ತೆಹಚ್ಚಲು ಮತ್ತು ಸ್ವಯಂಚಾಲಿತವಾಗಿ ವಾಲ್ಯೂಮ್ ಅನ್ನು ಹೊಂದಿಸುತ್ತದೆ. AI ಆಟೋ ಗೇಮ್ ಮೋಡ್ ಆಟ ಮತ್ತು ಪ್ರಕಾರ ಎರಡನ್ನೂ ಗುರುತಿಸುತ್ತದೆ ಮತ್ತು ಚಿತ್ರದ ಗುಣಮಟ್ಟ ಮತ್ತು ವಾಯ್ಸ್ ಗುಣಮಟ್ಟದ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.