ಇಂದು ಭಾರತದಲ್ಲಿ Redmi ತನ್ನ ಮೊದಲ Redmi Smart TV X Series ಸ್ಮಾರ್ಟ್ ಟಿವಿಗಳನ್ನು ಇಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. Xiaomi ಇಂಡಿಯಾದ ಸಿಇಒ ಮುಖ್ಯಸ್ಥರಾಗಿರುವ ಮನು ಕುಮಾರ್ ಜೈನ್ HDR10+ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಸ್ಮಾರ್ಟ್ ಟಿವಿ ಬರಲಿದೆ ಎಂದು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಖಚಿತಪಡಿಸಿದ್ದಾರೆ. ಇದು 4K ರೆಸಲ್ಯೂಶನ್‌ನಲ್ಲಿ ಸುಳಿವು ನೀಡುವ ವಿವಿದ್ ಪಿಕ್ಚರ್ ಎಂಜಿನ್‌ನೊಂದಿಗೆ ಸಹ ಬರಲಿದೆಯಂತೆ. ಕಂಪನಿಯ ಮೈಕ್ರೋಸೈಟ್ 'XL Experience' ಅನ್ನು ಸಹ ಒಳಗೊಂಡಿದ್ದು ಹೊಸ ಉತ್ಪನ್ನವು ದೊಡ್ಡ ಡಿಸ್ಪ್ಲೇಯೊಂದಿಗೆ ಭಾರತದ ಮಾರುಕಟ್ಟೆಗೆ ಕಾಲಿಡಲಿದೆ. ಇದಕ್ಕೂ ಮುನ್ನ Redmi ಈಗಾಗಲೇ ಇಂತಹ ಸ್ಮಾರ್ಟ್ ಟಿವಿಗಳನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
https://twitter.com/RedmiIndia/status/1371830914741850116?ref_src=twsrc%5Etfw
ಈ ಟಿವಿಯ ಬಿಡುಗಡೆಯ ಕಾರ್ಯಕ್ರಮವು ಇಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಇದನ್ನು ವೀಕ್ಷಕರು Redmi ಕಂಪನಿಯ ಅಧಿಕೃತ ಯೂಟ್ಯೂಬ್, ಟ್ವಿಟರ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಲೈವ್‌ಸ್ಟ್ರೀಮ್ ಮೂಲಕ ವೀಕ್ಷಿಸಬವುದು. ಬೇಕಾದರೆ ನೀವು ಇದರ ಲೈವ್ ನವೀಕರಣಗಳನ್ನು ಪಡೆಯಲು ಈ ಕೆಳಗೆ ನೀಡಿರುವ ಲಿಂಕ್ ಮೂಲಕವೂ ಸಹ ನೋಡಬಹುದು.
ಕಂಪನಿಯು Redmi Smart TV X Series – ಸರಣಿ ಟಿವಿಯನ್ನು ಈಗಾಗಲೇ ಚೀನಾದಲ್ಲಿ 55 ಇಂಚು 65 ಇಂಚಿನ ರೂಪಾಂತರಗಳಲ್ಲಿ ಪ್ರಾರಂಭಿಸಿದೆ. ಭಾರತದಲ್ಲಿ ಮುಂಬರುವ ಉತ್ಪನ್ನದ ಬಗ್ಗೆ ಹೆಚ್ಚು ಬಹಿರಂಗಗೊಂಡಿಲ್ಲವಾದರೂ ಇದರಲ್ಲಿ ರಿಮೋಟ್ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಗೂಗಲ್ ಅಸಿಸ್ಟೆಂಟ್ ಹಾಟ್‌ಕೀಗಳೊಂದಿಗೆ ಬರುತ್ತದೆಂದು ಶಾರ್ಟ್ ವೀಡಿಯೊ ಟೀಸರ್ ಬಹಿರಂಗಪಡಿಸುತ್ತದೆ. ಈ ಆಂಡ್ರಾಯ್ಡ್ ಟಿವಿ 10 ಆಧಾರಿತ ಪ್ಯಾಚ್‌ವಾಲ್ ಯುಐನಲ್ಲಿ ಸ್ಮಾರ್ಟ್ ಟಿವಿ ಕಾರ್ಯನಿರ್ವಹಿಸುತ್ತದೆ. ಇದು ಡಾಲ್ಬಿ ಆಡಿಯೋ, ಡಾಲ್ಬಿ ವಿಷನ್, HDR10+ ಮತ್ತು ಹೆಚ್ಚಿನವುಗಳೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ.