Best 40 Inch Smart TV: ನೀವು ನಿಮ್ಮ ಮನೆಗೊಂದು ಹೊಸ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ ಲೇಟೆಸ್ಟ್ ಸ್ಮಾರ್ಟ್ ಟಿವಿಯನ್ನು ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಯಲು ಯೋಚಿಸುತ್ತಿದ್ದರೆ ಅಮೆಜಾನ್ ನಿಮಗೊಂದು ಜಬರ್ದಸ್ತ್ ಡೀಲ್ ಅನ್ನು ಖರೀದಿಸಲು ಸಲಹೆ ನೀಡುತ್ತದೆ. ಯಾಕೆಂದರೆ ಇಂದಿನ ದಿನಗಳಲ್ಲಿ ಸ್ಮಾರ್ಟ್ ಟಿವಿ ಕೇವಲ ಧಾರಾವಾಹಿಗಳನ್ನು ಮಾತ್ರ ನೋಡಲು ಬಳಸದೆ ಹೈ ಕ್ವಾಲಿಟಿಯಲ್ಲಿ ಹೊಸ ಸಿನಿಮಾಗಳು, ವೆಬ್ ಸೀರೀಸ್ಗಳು ಮತ್ತು ಪಾರ್ಟಿಗಾಗಿ ಉತ್ತಮ ಆಡಿಯೋಗಾಗಿ ಬಳಸಲಾಗುತ್ತಿದೆ. ಇಂದಿನ ನಮ್ಮೇಲ್ಲಾರ ಜೀವನದಲ್ಲಿ ಟೆಕ್ನಾಲಜಿ ಸಿಕ್ಕಾಪಟ್ಟೆ ದೊಡ್ಡ ಪಾತ್ರವನ್ನೇ ನಿಭಾಹಿಸುತ್ತಿದೆ.
ಇದರ ಹಿನ್ನಲೆಯಲ್ಲಿ ನೀವು ಬಳಸುವ ಮೊಬೈಲ್ ರಿಚಾರ್ಜ್ (Mobile Recharge) ಕಂಪನಿಗಳು ಸಹ OTT ಅಪ್ಲಿಕೇಶನ್ ಬಳಕೆಗೆ ಅವಕಾಶ ಮಾಡಿಕೊಡುತ್ತಿವೆ. ಇದರಿಂದಾಗಿ ಸಾಮಾನ್ಯ ಜನರು ಒಂದೇ ಕಲ್ಲಲ್ಲಿ ಎರಡು ಹಕ್ಕಿ ಎನ್ನುವ ಗಾದೆ ಮಾತಿನಂತೆ ಮನೆಗೊಂದು ಹೊಸ ಅತ್ಯುತ್ತಮ ಸ್ಮಾರ್ಟ್ ಟಿವಿ (Best Smart TV) ಖರೀದಿಸಿ ಒಂದೇ ಮೊಬೈಲ್ ರಿಚಾರ್ಜ್ ಮಾಡಿಕೊಂಡು ಫೋನ್ ಮತ್ತು ಸ್ಮಾರ್ಟ್ ಟಿವಿ ಎರಡನ್ನು ಬಳಸುವ ರೂಢಿಯನ್ನು ಅಳವಡಿಸಿಕೊಂಡಿದ್ದಾರೆ.
Also Read: Traffic Fines 2025: ರಸ್ತೆ ಸುರಕ್ಷತೆ ಉಲ್ಲಂಘಿಸುವ ವಾಹನ ಸವಾರರಿಗೆ ಹೊಸ ಆನ್‌ಲೈನ್ ದಂಡ ಪಟ್ಟಿ ಜಾರಿ!
ಈ ಸ್ಮಾರ್ಟ್ ಟಿವಿಯ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಈ 40 ಇಂಚಿನ VW ಕಂಪನಿಯ ಸ್ಮಾರ್ಟ್ ಟಿವಿ ಪ್ರಸ್ತುತ -38% ಡಿಸ್ಕೌಂಟ್‌ನೊಂದಿಗೆ ಕೇವಲ ₹12,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಡೀಲ್ ಆಫರ್ ಕೇವಲ ಲಿಮಿಟೆಡ್ ಸಮಯದವರೆಗೆ ಮಾತ್ರ ಫೆಸ್ಟಿವ್ ಸ್ಪೆಷಲ್ ಅಡಿಯಲ್ಲಿ ಲಭ್ಯವಿದೆ. ಅಲ್ಲದೆ ಆಸಕ್ತಗ್ರಾಹಕರು ಈ ಸ್ಮಾರ್ಟ್ ಟಿವಿಯನ್ನು HSBC Bank , DBS Bank, Yes Bank ಮತ್ತು Federal Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಖರೀದಿಸುವ ಮೂಲಕ ಹೆಚ್ಚುವರಿಯ ಸುಮಾರು ₹1500 ರೂಗಳ ವರೆಗೆ ರಿಯಾಯಿತಿಯನ್ನು ಸಹ ಪಡೆಯುವ ಅವಕಾಶವನ್ನು ಪಡೆಯಬಹುದು.
ಈ ಸ್ಮಾರ್ಟ್ ಟಿವಿ FHD (1920 x 1080 ಹೊಂದಿರುವ 40 ಇಂಚಿನ ಸ್ಟೀನ್ ಡಿಸ್ಟ್ರೇಯನ್ನು ಹೊಂದಿದೆ. ಇದು 60Hz ರಿಫ್ರೆಶ್ ದರವನ್ನು ನೀಡುತ್ತದೆ. ಶಕ್ತಿಶಾಲಿ ಆಡಿಯೊ ಅನುಭವಕ್ಕಾಗಿ ಇದು 24W ಸಾಮರ್ಥ್ಯದ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದರಲ್ಲಿ ನೆಟ್‌ಪ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್‌ನಂತಹ OTT ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಸ್ಮಾರ್ಟ್ ಟಿವಿ ಬಹು ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ. ಟಿವಿಯಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಒದಗಿಸಲಾಗಿದೆ ಮತ್ತು ಅಂತರ್ನಿಮಿ್ರತ ಕ್ರೋಮ್‌ಕಾಸ್ಟ್ ಬೆಂಬಲ ಲಭ್ಯವಿದೆ.