Redmi Smart Fire TV: 32 ಇಂಚಿನ ಸ್ಮಾರ್ಟ್ ಟಿವಿ ಕೇವಲ 9,499 ರೂಗಳಿಗೆ ಅಮೆಜಾನ್‌ನಲ್ಲಿ ಮಾರಾಟ!

Redmi Smart Fire TV: 32 ಇಂಚಿನ ಸ್ಮಾರ್ಟ್ ಟಿವಿ ಕೇವಲ 9,499 ರೂಗಳಿಗೆ ಅಮೆಜಾನ್‌ನಲ್ಲಿ ಮಾರಾಟ!
HIGHLIGHTS

Xiaomi ಭಾರತದಲ್ಲಿ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಗ್ಯಾಜೆಟ್ಗಳಿಗೆ ಸಿಕ್ಕಾಪಟ್ಟೆ ಪ್ರಸಿದ್ದವಾದ ಬ್ರಾಂಡ್ ಆಗಿದೆ.

ಲೇಟೆಸ್ಟ್ 32 Inch Redmi Smart Fire TV ಟಿವಿ ಎಂದು ಕಾಣದ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಮಾರಾಟ.

ಅತ್ಯುತ್ತಮವಾದ ಡೀಲ್ ಪಡೆಯುವ ಅವಕಾಶವನ್ನು Amazon ಮತ್ತು Redmi ಕೈ ಜೋಡಿಸಿ ನೀಡುತ್ತಿವೆ.

Xiaomi ಭಾರತದಲ್ಲಿ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಗ್ಯಾಜೆಟ್ಗಳಿಗೆ ಸಿಕ್ಕಾಪಟ್ಟೆ ಪ್ರಸಿದ್ದವಾದ ಬ್ರಾಂಡ್ ಆಗಿದೆ. ಇದರೊಂದಿಗೆ ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ (Amazon Great Indian Festival Sale 2024) ತನ್ನ ಸಬ್ ಬ್ರಾಂಡ್ ಆಗಿರುವ ರೆಡ್ಮಿ ಕಂಪನಿಯ ಲೇಟೆಸ್ಟ್ 32 Inch Redmi Smart Fire TV ಟಿವಿಯನ್ನು ಈಗ ನೀವು ಈವರೆಗೆ ಎಂದು ಕಾಣದ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯಾಗಿ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ ಟಿವಿ ನಿಮಗೆ ಅಥವಾ ನಿಮಗೆ ತಿಳಿದವರು ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಇದೊಂದು ಅತ್ಯುತ್ತಮವಾದ ಡೀಲ್ ಪಡೆಯುವ ಅವಕಾಶವನ್ನು Amazon ಮತ್ತು Redmi ಕೈ ಜೋಡಿಸಿ ನೀಡುತ್ತಿವೆ.

Also Read: Dimensity 8200 ಚಿಪ್‌ನೊಂದಿಗೆ Infinix Zero Flip ಬಿಡುಗಡೆ! ಬೆಲೆ ಮತ್ತು ಟಾಪ್ ಹೈಲೈಟ್ ಫೀಚರ್ಗಳೇನು?

32 Inch Redmi Smart Fire TV (2024) ಎಡಿಷನ್ ಲಭ್ಯತೆ ಮತ್ತು ಬೆಲೆ ಎಷ್ಟು?

ಮೊದಲಿಗೆ ಈ ಸ್ಮಾರ್ಟ್ ಟಿವಿಯ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ Xiaomi ಇದನ್ನು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಸೇರಿ ತಮ್ಮ ಸ್ವಂತ ವೆಬ್ ಸೈಟ್ ಮೂಲಕವೂ ಸಹ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಈ 32 Inch Redmi Smart Fire TV ಸ್ಮಾರ್ಟ್ ಟಿವಿ ಇದೆ ವರ್ಷ ಬರೋಬ್ಬರಿ 12,999 ರೂಗಳಿಗೆ ಬಿಡುಗಡೆಗೊಳಿಸಲಾಗಿತ್ತು ಆದರೆ ಇಂದು ಈ ಸ್ಮಾರ್ಟ್ ಟಿವಿ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ ಅಮೆಜಾನ್ ಮೂಲಕ ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹9,499 ರೂಗಳಿಗೆ ಖರೀದಿಸುವ ಅವಕಾಶವನ್ನು ಪಡೆಯಬಹುದು. ಹೇಗೆಂದರೆ ಅಮೆಜಾನ್ ಅಲ್ಲಿ ಇದನ್ನು ಪ್ರಸ್ತುತ ₹10,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ನೀವು ಈ ಸ್ಮಾರ್ಟ್ ಟಿವಿಯನ್ನು ICICI ಕ್ರೆಡಿಟ್ ಕಾರ್ಡ್ ಬಳಸಿ EMI ಸೌಲಭ್ಯ ಪಡೆದರೆ 1500 ರೂಗಳವರೆಗೆ ಡಿಸ್ಕೌಂಟ್ ಪಡೆಯುವುದರೊಂದಿಗೆ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

32 Inch Redmi Smart Fire TV

32 Inch Redmi Smart Fire TV (2024) ಎಡಿಷನ್ ಫೀಚರ್ ಮತ್ತು ವಿಶೇಷಣಗಳು

ಈ ಸ್ಮಾರ್ಟ್ ಟಿವಿಯ ಫೀಚರ್ ಮತ್ತು ವಿಶೇಷಣಗಳನ್ನು ನೋಡುವುದಾದರೆ ಇತ್ತೀಚಿನ ಈ ಸ್ಮಾರ್ಟ್ ಟಿವಿಯನ್ನು ಪ್ರೀಮಿಯಂ ಮೆಟಲ್ ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಸಜ್ಜುಗೊಳಿಸುತ್ತದೆ ಮತ್ತು ಟಿವಿಗೆ ಎದ್ದುಕಾಣುವ ಇಮೇಜ್ ಎಂಜಿನ್ ಅನ್ನು ಸಂಯೋಜಿಸುತ್ತದೆ. ಈ 32 Inch Redmi Smart Fire TV ಉತ್ತಮ ಬಳಕೆದಾರ ಅನುಭವಕ್ಕಾಗಿ Fire OS 7 ನೊಂದಿಗೆ ಇಂಟರ್ನಲ್ ಫೈರ್ ಟಿವಿಯನ್ನು ಹೊಂದಿದೆ. ಈ Xiaomi ಟಿವಿ ರಿಮೋಟ್‌ಗೆ ಅಲೆಕ್ಸಾ ಬಟನ್ ಮತ್ತು ಮೀಸಲಾದ OTT ಹಾಟ್‌ಕೀಗಳನ್ನು ಸಹ ಸಂಯೋಜಿಸುತ್ತದೆ. ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್ ಟಿವಿಯ ಸಂಪೂರ್ಣ ವಿಶೇಷಣಗಳನ್ನು ಈ ಕೆಳಗೆ ಪಡೆಯಿರಿ.

ಡಿಸ್ಪ್ಲೇ: ಇದರಲ್ಲಿ 32 ಇಂಚಿನ 1,366 x 768 ಪಿಕ್ಸೆಲ್‌ಗಳು, 178° ವೀಕ್ಷಣಾ ಕೋನ, 60Hz ರಿಫ್ರೆಶ್ ದರ, 6.5ms ಪ್ರತಿಕ್ರಿಯೆ ಸಮಯ, ವಿವಿಡ್ ಪಿಕ್ಚರ್ ಎಂಜಿನ್ ಹೊಂದಿದೆ.
ಆಡಿಯೋ: 2x 20W ಸ್ಪೀಕರ್‌ಗಳು, ಡಾಲ್ಬಿ ಆಡಿಯೋ, DTS ವರ್ಚುವಲ್ X ಮತ್ತು DTS HD ಹೊಂದಿದೆ.
ಪ್ರೊಸೆಸರ್: ಕ್ವಾಡ್ ಕೋರ್ ಕಾರ್ಟೆಕ್ಸ್ A35 CPU, ಮಾಲಿ G31 MP2 GPU ಹೊಂದಿದೆ.
ಹಾರ್ಡ್ವೇರ್ ಮತ್ತು ಸ್ಟೋರೇಜ್: 1GB RAM, 8GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.
ಸಾಫ್ಟ್‌ವೇರ್: Fire TV ಇಂಟರ್ನಲ್ 12,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳೊಂದಿಗೆ ಆಪ್ ಸ್ಟೋರ್, ಲೈವ್ ಟಿವಿ ಚಾನೆಲ್‌ಗಳು, ಪೇರೆಂಟಲ್ ಕಂಟ್ರೋಲ್‌ಗಳು, ಡೇಟಾ ಮಾನಿಟರಿಂಗ್, ಅಲೆಕ್ಸಾದೊಂದಿಗೆ ವಾಯ್ಸ್ ರಿಮೋಟ್ ಒಳಗೊಂಡಿದೆ.
ಕನೆಕ್ಷನ್: ಬ್ಲೂಟೂತ್ 5.0, ವೈ-ಫೈ 2.4GHz / 5GHZ 802.11 a/b/g/n/ac (2x MIMO) ಹೊಂದಿದೆ.
ಪೋರ್ಟ್‌ಗಳು: 2x USB 2.0, 1x ಎತರ್ನೆಟ್, 1x AV, 2x HDMI (1 ARC ಜೊತೆಗೆ), 1x ಆಂಟೆನಾ ಹೊಂದಿದೆ.
ರಿಮೋಟ್: ಅಲೆಕ್ಸಾ ಬಟನ್, ಪ್ಲೇಬ್ಯಾಕ್ ನಿಯಂತ್ರಣಗಳು, ಮಾರ್ಗದರ್ಶಿ ಬಟನ್, ಮ್ಯೂಟ್ ಬಟನ್ ಲಭ್ಯವಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo