ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ ರೂ 1,028 ಮತ್ತು ರೂ 1,029 ಪ್ರಿಪೇಯ್ಡ್ ಯೋಜನೆಯ ಬಗ್ಗೆ ನಿಮಗೆ ಉತ್ತಮನ ಪ್ರಯೋಜನಗಳನ್ನು ನೀಡುತ್ತಿದೆ. ಆದರೆ ಈ ಎರಡು ಪ್ರಿಪೇಯ್ಡ್ ಯೋಜನೆಗಳಿಗೆ ಬಂದಾಗ ಕೇವಲ ಒಂದು ರೂಪಾಯಿಗಳ ವ್ಯತ್ಯಾಸದೊಂದಿಗೆ ಭಾರಿ ಪ್ರಯೋಜನಗಳಲ್ಲಿ ಏರುಪೇರನ್ನು ಕಾಣಬಹುದು. ಆದರೆ ಅವುಗಳಲ್ಲಿ ಲಭ್ಯವಿರುವ ಪ್ರಯೋಜನಗಳು ಅನನ್ಯವಾಗಿವೆ. ಈ ಎರಡು ಯೋಜನೆಗಳಲ್ಲಿ ಜಿಯೋ ಬಳಕೆದಾರರು ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಎರಡರಲ್ಲಿ ಯಾವುದು ಉತ್ತಮ ಎನ್ನುವುದನ್ನು ಈ ಕೆಳಗೆ ಪರಿಶೀಲಿಸಬಹುದು.
Also Read: iPhone 16 Pro ಮತ್ತು iPhone 16 Pro Max ಲಾಂಚ್! ಭಾರತದಲ್ಲಿ ಬೆಲೆ ಮತ್ತು ಫೀಚರ್ಗಳೇನು?
ರಿಲಯನ್ಸ್ ಜಿಯೋದ ರೂ 1028 ಪ್ರಿಪೇಯ್ಡ್ ಯೋಜನೆಯ ಮಾನ್ಯತೆ 84 ದಿನಗಳು. ಈ ಯೋಜನೆಯಲ್ಲಿ 2GB ದೈನಂದಿನ ಡೇಟಾದಂತೆ ಒಟ್ಟು 168GB ಡೇಟಾವನ್ನು ನೀಡಲಾಗುತ್ತದೆ. ಜಿಯೋದ ಈ ಪ್ರಿಪೇಯ್ಡ್ ಪ್ಯಾಕ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು 100SMS ಪ್ರತಿದಿನ ಲಭ್ಯವಿದೆ. ಜಿಯೋದ ಈ ಯೋಜನೆಯಲ್ಲಿ ಬಳಕೆದಾರರು ಜಿಯೋದ 5G ನೆಟ್‌ವರ್ಕ್‌ನಲ್ಲಿ ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತಾರೆ. ಆದಾಗ್ಯೂ ಈ ಯೋಜನೆಯಲ್ಲಿ ಹಲವು ಹೆಚ್ಚುವರಿ ಕೊಡುಗೆಗಳನ್ನು ಸಹ ನೀಡಲಾಗಿದೆ. Jio ನ ಈ ಯೋಜನೆಯಲ್ಲಿ Swiggy One Lite ನ ಚಂದಾದಾರಿಕೆಯು 3 ತಿಂಗಳವರೆಗೆ ಲಭ್ಯವಿದೆ. ಇವರ ಮೌಲ್ಯ 600 ರೂಗಳಾಗಿವೆ.
ಕೇವಲ 1 ರೂಪಾಯಿಯ ವ್ಯತ್ಯಾಸದೊಂದಿಗೆ ಜಿಯೋ ರೂ 1029 ಪ್ರಿಪೇಯ್ಡ್ ಯೋಜನೆಯಲ್ಲಿ 2GB ದೈನಂದಿನ ಡೇಟಾದೊಂದಿಗೆ ಒಟ್ಟು 168GB ಡೇಟಾವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ ಅನಿಯಮಿತ ಕರೆಗಳು, 100 SMS ನೀಡಲಾಗುತ್ತದೆ. ಈ ಯೋಜನೆಯ ಮಾನ್ಯತೆ 84 ದಿನಗಳಾಗಿವೆ. ಆದರೆ Swiggy ಚಂದಾದಾರಿಕೆಯ ಬದಲಿಗೆ ಗ್ರಾಹಕರು 84 ದಿನಗಳವರೆಗೆ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿ ಚಂದಾದಾರಿಕೆಯನ್ನು ಪಡೆಯುತ್ತಾರೆ. ಅಂದರೆ ನೀವು ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸದೆ ನಿಮ್ಮ ಮೆಚ್ಚಿನ ವಿಷಯವನ್ನು ಉಚಿತವಾಗಿ ವೀಕ್ಷಿಸಬಹುದು.
ನೀವು ಆನ್ಲೈನ್ ಮೂಲಕ ಹೆಚ್ಚು ಆರ್ಡರ್ ಮಾಡುವವರಾಗಿದ್ದರೆ ಅಥವಾ ಹೆಚ್ಚು ಆಹಾರ ಪ್ರಿಯರಾಗಿದ್ದರೆ ನಿಮಗಾಗಿ ಸ್ವಿಗ್ಗಿಯಿಂದ (Swiggy) ಆರ್ಡರ್ ಮಾಡಲು ಇಷ್ಟಪಡುತ್ತಿದ್ದರೆ ರೂ 1,028 ಯೋಜನೆಯು ಅದರ ಡೆಲಿವರಿ ಪರ್ಕ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಯೊಂದಿಗೆ ಅತ್ಯತ್ತಮ ಡೀಲ್ ಮೌಲ್ಯವನ್ನು ನೀಡುತ್ತದೆ. ಆದರೆ ಮತ್ತೊಂದೆಡೆಯಲ್ಲಿ ನಿಮಗೆ ಹೆಚ್ಚು ಮನರಂಜನೆಯನ್ನು ಬಯಸುವವರಗಿದ್ದಾರೆ ರೂ 1,029 ಪ್ಲಾನ್ ಉತ್ತಮವಾಗಿದ್ದು ಇದರಲ್ಲಿ ಪ್ರೈಮ್ ವೀಡಿಯೊ (Prime Video) ಪ್ರವೇಶವು ಉತ್ತಮ ಆಯ್ಕೆಯಾಗಿದೆ. ಯಾವುದೇ ರೀತಿಯಲ್ಲಿ ಆ ರೂ 1 ನಿಮ್ಮ ಜಿಯೋ ಪ್ರಯೋಜನಗಳನ್ನು ನೀವು ಹೇಗೆ ಆನಂದಿಸುತ್ತೀರಿ ಎಂಬುದರಲ್ಲಿ ಈ ಎಲ್ಲಾ ವ್ಯತ್ಯಾಸಗಳನ್ನು ಹೊಂದಿದೆ.