Jio ಅತ್ಯುತ್ತಮವಾದ ಆಫರ್ ಮತ್ತು ಪ್ರಯೋಜನಗಳೊಂದಿಗೆ ಅನೇಕ ರಿಚಾರ್ಜ್ ಯೋಜನೆಗಳನ್ನು (Recharge Plans) ಹೊಂದಿದೆ.
ರಿಲಯನ್ಸ್ ಜಿಯೋ (Reliance Jio) ರೂ. 949 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಿದ್ದೇನೆ.
ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾದೊಂದಿಗೆ ಉಚಿತ Disney+Hotstar ಚಂದಾದಾರಿಕೆಯನ್ನು ಬರೋಬ್ಬರಿ 3 ತಿಂಗಳಿಗೆ ಪಡೆಯುವುದು ವಿಶೇಷವಾಗಿದೆ.
India vs Australia Cricket Live: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಅವರವರ ಅಗತ್ಯಗಳಿಗೆ ಅನುಗುಣವಾಗಿ ಆಯ್ಕೆ ಮಾಡಲು ಅತ್ಯುತ್ತಮವಾದ ಆಫರ್ ಮತ್ತು ಪ್ರಯೋಜನಗಳೊಂದಿಗೆ ಅನೇಕ ರಿಚಾರ್ಜ್ ಯೋಜನೆಗಳನ್ನು (Recharge Plans) ಹೊಂದಿದೆ. ಇದರಡಿಯಲ್ಲಿ ಪ್ರಸ್ತುತ ಅತಿ ಹೆಚ್ಚು ಜನರು ಬಳಸುತ್ತಿರುವ ಈ ರಿಲಯನ್ಸ್ ಜಿಯೋ (Reliance Jio) ರೂ. 949 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಿದ್ದೇನೆ.
India vs Australia Cricket Live
ಪ್ರಸ್ತುತ ನಡೆಯುತ್ತಿರುವ India vs Australia Cricket Live ಅನ್ನು ಮೊಬೈಲ್ ಫೋನ್ಗಳಲ್ಲಿ ವೀಕ್ಷಿಸಲು ಬಯಸುವ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ಈ ಪ್ರಿಪೇಯ್ಡ್ ಯೋಜನೆ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 50 ಓವರ್ಗಳ ಈ ಕ್ರಿಕೆಟ್ ಪಂದ್ಯವನ್ನು OTT ಪ್ಲಾಟ್ಫಾರ್ಮ್ ಆಗಿರುವ ಜನಪ್ರಿಯ Disney+Hotstar ಮೂಲಕ ಪ್ರಸಾರ ಮಾಡುತ್ತಿದೆ. ಈ ಮೂಲಕ ರಿಲಯನ್ಸ್ ಜಿಯೋವಿನ ಈ 949 ರೂಗಳ ಯೋಜನೆಯಲ್ಲಿ ಬಳಕೆದಾರರು ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾದೊಂದಿಗೆ ಉಚಿತ Disney+Hotstar ಚಂದಾದಾರಿಕೆಯನ್ನು ಬರೋಬ್ಬರಿ 3 ತಿಂಗಳಿಗೆ ಪಡೆಯುವುದು ವಿಶೇಷವಾಗಿದೆ.
ಉಚಿತ Disney+Hotstar ನೀಡುವ ಬೆಸ್ಟ್ Jio ಪ್ಲಾನ್
ಈ ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ 949 ರೂಗಳ ಪ್ರಿಪೇಯ್ಡ್ ಯೋಜನೆಯ ಮಾನ್ಯತೆಯನ್ನು ನೋಡುವುದಾದರೆ 84 ದಿನಗಳಾಗಲಿದ್ದು ಈ ಯೋಜನೆಯು ಅದರ ಅತ್ಯಂತ ಜನಪ್ರಿಯ ಪ್ರಿಪೇಯ್ಡ್ ಕೊಡುಗೆಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿನ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಗಳು, ಉಚಿತ ರಾಷ್ಟ್ರೀಯ ರೋಮಿಂಗ್, ದಿನಕ್ಕೆ 2GB ಹೈ-ಸ್ಪೀಡ್ ಡೇಟಾ ಮತ್ತು 100 ಉಚಿತ ಸಂದೇಶಗಳೊಂದಿಗೆ ಡಿಸ್ನಿ+ ಹಾಟ್ಸ್ಟಾರ್ಗೆ ವಿಶೇಷ ಚಂದಾದಾರಿಕೆಯೊಂದಿಗೆ ಬರುತ್ತದೆ.
ಮುಖ್ಯವಾಗಿ Jio ವ್ಯಾಪ್ತಿ ಪ್ರದೇಶದಲ್ಲಿ 5G ಸ್ಮಾರ್ಟ್ಫೋನ್ಗಳನ್ನು ಹೊಂದಿರುವ ಬಳಕೆದಾರರು ಅನಿಯಮಿತ 5G ಇಂಟರ್ನೆಟ್ ಅನ್ನು ಸಹ ಪ್ರವೇಶಿಸಬಹುದು. ಹೀಗಾಗಿ ಈ ಯೋಜನೆಯು ಡೇಟಾ-ಹೆವಿ ಬಳಕೆದಾರರು ಮತ್ತು ಮನರಂಜನಾ ಉತ್ಸಾಹಿಗಳಿಗೆ ಸಂಪೂರ್ಣ ಪ್ಯಾಕೇಜ್ ಆಗಿದೆ. ಅಲ್ಲದೆ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಬರುವ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾದೊಂದಿಗೆ ಉಚಿತ Disney+Hotstar ಚಂದಾದಾರಿಕೆಯನ್ನು ಬರೋಬ್ಬರಿ 3 ತಿಂಗಳಿಗೆ ಪಡೆಯುವುದು ವಿಶೇಷವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile