ಹೊಸ Jio AirFiber ಕನೆಕ್ಷನ್ ಬೇಕಾ? ಮೊದಲು ಬೆಲೆ, ಪ್ಲಾನ್ ಮತ್ತು Installation ಬಗ್ಗೆ ತಿಳಿಯಿರಿ

Updated on 12-Oct-2023
HIGHLIGHTS

ರಿಲಯನ್ಸ್ ಜಿಯೋ Jio AirFiber ಇಂಟರ್ನೆಟ್ ವೇಗವನ್ನು 1.5 Gbps ವರೆಗೆ ನೀಡುತ್ತದೆ.

ರಿಲಯನ್ಸ್ ಜಿಯೋ JioAirFiber ಈಗ ಬೆಂಗಳೂರು ಸೇರಿದಂತೆ ಪ್ರಸ್ತುತ 8 ನಗರಗಳಲ್ಲಿ ಲಭ್ಯವಿದೆ.

ಜಿಯೋ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೊಸ ಜಿಯೋ ಏರ್‌ಫೈಬರ್ ಸಂಪರ್ಕವನ್ನು ನೀಡುತ್ತಿದೆ

ರಿಲಯನ್ಸ್ ಜಿಯೋದ ಭಾರತದಲ್ಲಿ ಪ್ರಾರಂಭಿಸಲಾಗಿದೆ. ಮನೆ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್‌ನ ಅಗತ್ಯಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಜಿಯೋ ಏರ್‌ಫೈಬರ್ (Jio AirFiber) ಪ್ರಸ್ತುತ ದೇಶದ ಎಂಟು ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಿದ್ದು ಪ್ರಸ್ತುತ ನಿಮಗೆ Ahmedabad, Bengaluru, Chennai, Delhi, Hyderabad, Mumbai ಮತ್ತು Pune ಜೊತೆಗೆ ಭಾರತದಾದ್ಯಂತ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಜಿಯೋ ಹೊಂದಿದೆ.

What is AirFiber Jio?

ರಿಲಯನ್ಸ್ ಜಿಯೋದ ಭಾರತದಲ್ಲಿ ಇತ್ತೀಚೆಗೆ ಹೊಸ ವೈರ್‌ಲೆಸ್ ಇಂಟರ್ನೆಟ್ ಜಿಯೋ ಏರ್‌ಫೈಬರ್ (Jio AirFiber) ಸೇವೆಯಾಗಿದೆ. ಅಂದ್ರೆ ಈ ಸೇವೆಯಲ್ಲಿ ನಿಮಗೆ ಯಾವುದೇ ಮಾದರಿಯ ವೈರ್ಗಳ ತಲೆನೋವೆ ಇರೋಲ್ಲ. ಏಕೆಂದರೆ ನಿಮಗೆ ಡೇಟಾ ಗಾಳಿಯ ಮೂಲಕ ಲಭ್ಯವಿರುವ ವೈರ್‌ಲೆಸ್ ಇಂಟರ್ನೆಟ್ ಸೇವೆಯಾಗಿದೆ. ಅಂದ್ರೆ ನಿಮ್ಮ ಮೊಬೈಲ್ ಫೋನ್ ಹೇಗೆ ಬಳಸುತ್ತಿರೋ ಹಾಗೆ ಅಷ್ಟೇ. ಆದ್ರೆ ಡಿವೈಸ್ ಬ್ಯಾಟರಿ ಚಾರ್ಜ್ ಮಾಡಲು ಮಾತ್ರ ಚಾರ್ಜಿಂಗ್ ಕೇಬಲ್ ಬಳಸಬಹುದು. ದಿನದಿಂದ ದಿನಕ್ಕೆ ನಡೆಯುತ್ತಿರುವ ಲೇಟೆಸ್ಟ್ ಟೆಕ್ನಾಲಜಿಯೊಂದಿಗೆ ಕಂಪನಿ ಹೆಜ್ಜೆ ಹಾಗುತ್ತಿದೆ.

JioAirfiber ಬುಕಿಂಗ್ ಪ್ರಕ್ರಿಯೆ

ಹಂತ 1: ನಿಮಗೆ ಹೊಸ ವೈರ್‌ಲೆಸ್ ಇಂಟರ್ನೆಟ್ ಜಿಯೋ ಏರ್‌ಫೈಬರ್ ಬೇಕಿದ್ದರೆ ಮೊದಲಿಗೆ ನಿಮ್ಮ ಪ್ರದೇಶದಲ್ಲಿ Jio Airfiber ಸೇವೆ ಲಭ್ಯವಿದೆಯೇ ಎಂಬುದನ್ನು ದೃಢೀಕರಿಸುವ ಮೂಲಕ ಪ್ರಾರಂಭಿಸಿ. ಅದಕ್ಕಾಗಿ ನೀವು Jio ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ My Jio ಅಪ್ಲಿಕೇಶನ್‌ನಲ್ಲಿ ಅಥವಾ Jio ಕಸ್ಟಮರ್ ಕೇರ್ ಸಂಪರ್ಕಿಸುವ ಮೂಲಕ ಇದನ್ನು ಮಾಡಬಹುದು.

ಹಂತ 2: ಹೊಸ ಕನೆಕ್ಷನ್ ಪಡೆಯಲು ಬುಕಿಂಗ್ ಅನ್ನು ಪ್ರಾರಂಭಿಸಲು ನೀವು ಈ ಕೆಳಗಿನ ಅಂಶಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅನುಸರಿಸಬಹುದು.

  • ಮೊದಲಿಗೆ WhatsApp ಮೂಲಕ ಬುಕಿಂಗ್ ಪ್ರಾರಂಭಿಸಲು ನೀವು 60008-60008 ಮಿಸ್ಡ್ ಕಾಲ್ ನೀಡಿ.
  • jio.com ನಲ್ಲಿ ಅಧಿಕೃತ ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಇದರ ನಂತರ ಜಿಯೋ ಅಪ್ಲಿಕೇಶನ್‌ಗೆ ಭೇಟಿ ನೀಡಿ.
  • ಅಲ್ಲದೆ ನೀವು ನಿಮ್ಮ ಹತ್ತಿರದ ಜಿಯೋ ಸ್ಟೋರ್‌ಗೆ ನೀವೆ ವೈಯಕ್ತಿಕವಾಗಿ ಹೋಗಬಹುದು.

ಹಂತ 3: Jio AirFiber ನೋಂದಾಯಿಸಿಕೊಳ್ಳಬೇಕು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 4: ದೃಢೀಕರಣಕ್ಕಾಗಿ ನಿರೀಕ್ಷಿಸಬೇಕು ಅಂದ್ರೆ ಒಮ್ಮೆ ಸಲ್ಲಿಸಿದ ನಂತರ ನಿಮ್ಮ ಕಟ್ಟಡ ಅಥವಾ ಸ್ಥಳದಲ್ಲಿ ಸೇವೆಗಳು ಲಭ್ಯವಾದ ನಂತರ ಶೀಘ್ರದಲ್ಲೇ Jio ತಂಡ ನಿಮ್ಮನ್ನು ಸಂಪರ್ಕಿಸಿ ಹೊಸ ವೈರ್‌ಲೆಸ್ ಇಂಟರ್ನೆಟ್ ಜಿಯೋ ಏರ್‌ಫೈಬರ್ (JioAirFiber) ಸೇವೆ ನೀಡುತ್ತಾರೆ.

What is the cost of Jio AirFiber?

ಜಿಯೋದ ಈ ಏರ್‌ಫೈಬರ್ ಯೋಜನೆಗಳು 6 ಮತ್ತು 12 ತಿಂಗಳ ಆಯ್ಕೆಗಳಲ್ಲಿ ಮಾತ್ರ ಲಭ್ಯವಿದ್ದು ಒಂದು ವೇಳೆ ನೀವು ಕೇವಲ 6 ತಿಂಗಳ ಪ್ಲಾನ್ ಪಡೆದರೆ ಸ್ಥಾಪನೆ ಶುಲ್ಕ (Installation Charge) 1000 ರೂಗಳನ್ನು ನೀಡಬೇಕಾಗುತ್ತದೆ. ಅದೇ 12 ತಿಂಗಳ ಯೋಜನೆಗಳನ್ನು ಪಡೆದರೆ ರೂ 1000 ಉಚಿತ ಸ್ಥಾಪನೆ ಶುಲ್ಕ (Free Installation Charge) ಮನ್ನಾವಾಗುತ್ತದೆ. ಈ ಜಿಯೋ ಏರ್‌ಫೈಬರ್ ಮ್ಯಾಕ್ಸ್ (Jio AirFiber Max) ಯೋಜನೆಗಳು ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿರುತ್ತವೆ ಎಂಬುದನ್ನು ಗಮನಿಸಬೇಕಿದೆ.

Jio AirFiber ಯೋಜನೆಗಳ ವಿವರಗಳು:

ಈ ವರ್ಗದಲ್ಲಿ ಕ್ರಮವಾಗಿ Rs 599, Rs 899 ಮತ್ತು Rs 1199 ಬೆಲೆಯ ಮೂರು ಪ್ಲಾನ್‌ಗಳನ್ನು ನೀಡುತ್ತಿದೆ. ಈ ಯೋಜನೆಗಳು 100 Mbps ವೇಗದ ಇಂಟರ್ನೆಟ್ ಡೇಟಾವನ್ನು ಒಳಗೊಂಡಿವೆ. ಜೊತೆಗೆ 550 ಡಿಜಿಟಲ್ ಚಾನಲ್‌ಗಳು ಮತ್ತು 14 OTT ಅಪ್ಲಿಕೇಶನ್‌ಗಳಿಗೆ ಪ್ರವೇಶದಂತಹ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ರೂ 1199 ಯೋಜನೆಯು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋಸಿನಿಮಾ ಪ್ರೀಮಿಯಂನ ಉಚಿತ ಚಂದಾದಾರಿಕೆಯನ್ನು ಒಳಗೊಂಡಿದೆ.

Jio AirFiber Max ಯೋಜನೆಗಳ ವಿವರಗಳು:

ಈ ವರ್ಗದಲ್ಲಿ ಕ್ರಮವಾಗಿ Rs 1499, Rs 2499 ಮತ್ತು Rs 3999 ಬೆಲೆಯ ಮೂರು ಯೋಜನೆಗಳನ್ನು ನೀಡುತ್ತಿದೆ. ಯೋಜನೆಗಳು 1Gbps ಇಂಟರ್ನೆಟ್ ಡೇಟಾ ವೇಗವನ್ನು ಮತ್ತು 550 ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‌ಗಳಿಗೆ ಪ್ರವೇಶವನ್ನು ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು JioCinema ಪ್ರೀಮಿಯಂನಂತಹ 14 OTT ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :