ವೊಡಾಫೋನ್ ಭಾರತದಲ್ಲಿ ತನ್ನ 129 ಮತ್ತು 199 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಷ್ಕರಿಸಿದೆ. ಮೊದಲಿಗೆ 129 ಪ್ರಿಪೇಯ್ಡ್ ಯೋಜನೆಯನ್ನು 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಪ್ರಾರಂಭಿಸಲಾಯಿತು. ಈಗ ಅದೇ ವೊಡಾಫೋನ್ ಪ್ರಿಪೇಯ್ಡ್ ಯೋಜನೆ 24 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಯೋಜನೆಯು ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ವಾಯ್ಸ್ ಕರೆ ಪ್ರಯೋಜನಗಳು ಮತ್ತು 2GB ಹೈಸ್ಪೀಡ್ ಡೇಟಾವನ್ನು ಸಹ ಒಳಗೊಂಡಿದೆ. ಯೋಜನೆಯ ಮಾನ್ಯತೆಯ ಉದ್ದಕ್ಕೂ ಕಂಪನಿಯು 300 ಎಸ್‌ಎಂಎಸ್ಗಳನ್ನು ನೀಡುತ್ತದೆ.
ಇದರೊಂದಿಗೆ ಈಗ ಈ 129 ರೂಗಳ ವೊಡಾಫೋನ್ ಪ್ಲಾನ್ ಖರೀದಿಸಿದರೆ 499 ರೂಗಳ ಮೌಲ್ಯದ ವೊಡಾಫೋನ್ ಪ್ಲೇ ಚಂದಾದಾರಿಕೆ ಮತ್ತು 999 ಮೌಲ್ಯದ Zee5 ಚಂದಾದಾರಿಕೆಯನ್ನು ಪಡೆಯಬಹುದು. ಇದರ ಅನಂತರ 199 ರೂಗಳ ವೊಡಾಫೋನ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಬಗ್ಗೆ ಮಾತನಾಡಬೇಕೆಂದರೆ ಇದನ್ನೂ ಸಹ 24 ದಿನಗಳ ಮಾನ್ಯತೆಯೊಂದಿಗೆ ಪರಿಷ್ಕರಿಸಲಾಗಿದೆ. ಟೆಲಿಕಾಂ ಆಪರೇಟರ್ ಮೂಲತಃ 21 ದಿನಗಳ ಮಾನ್ಯತೆಯೊಂದಿಗೆ ಯೋಜನೆಯನ್ನು ಅನಾವರಣಗೊಳಿಸಿದರು. ಇದರ ವ್ಯಾಲಿಡಿಟಿ ಹೊರತುಪಡಿಸಿ ಉಳಿದ ಪ್ರಯೋಜನಗಳು ಒಂದೇ ಆಗಿರುತ್ತವೆ.
ಅಂದರೆ ಈ 199 ರೂ ಪ್ರಿಪೇಯ್ಡ್ ಯೋಜನೆಯೊಂದಿಗೆ ವೊಡಾಫೋನ್ ಅನಿಯಮಿತ ವಾಯ್ಸ್ ಕರೆ ಪ್ರಯೋಜನಗಳನ್ನು ನೀಡಲಿದೆ. ನೀವು ಪ್ರತಿದಿನ 1GB ಹೈಸ್ಪೀಡ್ ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಂದೇಶಗಳನ್ನು ಸಹ ಪಡೆಯುತ್ತೀರಿ. ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ವೊಡಾಫೋನ್ ಪ್ಲೇ ಮತ್ತು Zee5 ಚಂದಾದಾರಿಕೆಗಳನ್ನು ಒಳಗೊಂಡಿದೆ. ಇದು 129 ರೂಗಳಲ್ಲಿ ಬದಲಾವಣೆಗಳನ್ನು ಮೊಟ್ಟ ಮೊದಲು DreamDTH ಗುರುತಿಸಿದೆ. ಒಂದು ವೇಳೆ ನೀವು ಇದನ್ನು ರಿಚಾರ್ಜ್ ಮಾಡ ಬಯಸಿದರೆ ಒಮ್ಮೆ ಕಸ್ಟಮರ್ ಕೇರ್ ಕರೆ ಮಾಡಿ ಖಚಿತ ಪಡಿಸಿಕೊಳ್ಳಿ.