ಭಾರತದ ಸೆಲ್ಯುಲರ್ ನೆಟ್ವರ್ಕ್ ಆಪರೇಟರ್ ಆಗಿರುವ ವೊಡಾಫೋನ್ ಹಳೆಯ 509 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನವೀಕರಿಸಿದೆ. ಈಗ ಇದು ದಿನಕ್ಕೆ 1.5GB ಯ ಡೇಟಾವನ್ನು 90 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಹೊಸ ನವೀಕರಣ ಪುನರ್ಭರ್ತಿಕಾರ್ಯವು ಪ್ರತಿ ದಿನಕ್ಕೆ 100 SMS ಗಳೊಂದಿಗೆ ಅನಿಯಮಿತ ವಾಯ್ಸ್ ಕರೆಗಳ ಜೊತೆಗೆ ಬರುತ್ತದೆ.
ಆಅಲ್ಲದೆ ಲೈವ್ ಟಿವಿ ಮತ್ತು ಸಿನೆಮಾಗಳನ್ನು ಒದಗಿಸುವ ವೊಡಾಫೋನ್ ಪ್ಲೇ ಅಪ್ಲಿಕೇಶನ್ ಸಹ ಬಳಕೆದಾರರು ಪ್ರವೇಶಿಸಬವುದು. ಈ ಬದಲಾವಣೆಯನ್ನು ಮೊದಲು ರೂ 509 ರೂಗಳ ರೀಚಾರ್ಜ್ ದೈನಂದಿನ ಡೇಟಾವನ್ನು 1.4GB ನೀಡಲಾಗುತ್ತಿತ್ತು ಆದರೆ ಹೊಸ ಬದಲಾವಣೆಯಲ್ಲಿ ವೊಡಾಫೋನ್ ಮತ್ತೋಂದು 529 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿರುವಂತೆ ಇದರಲ್ಲಿ ತನ್ನ ಬಳಕೆದಾರರಿಗೆ ಅದೇ ಪ್ರಯೋಜನಗಳನ್ನು ನೀಡುತ್ತದೆ.
ಸದ್ಯಕೆ ಈ ಪ್ರಿಪೇಯ್ಡ್ ಪ್ಲಾನನ್ನು ದೆಹಲಿ NCR, ಗುಜರಾತ್, ಅಸ್ಸಾಂ, ಚೆನ್ನ, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ದೂರಸಂಪರ್ಕ ವಲಯಗಳಲ್ಲಿ ಚಂದಾದಾರರಿಗೆ ಪ್ರಸ್ತುತ ರೀಚಾರ್ಜ್ ನೀಡಲಾಗಿದೆಯೆಂದು ಪಟ್ಟಿ ತಿಳಿಸಿದೆ. ಮೇಲೆ ಹೇಳಿದಂತೆ ಈ 509 ರೂಗಳ ರೀಚಾರ್ಜ್ ಯೋಜನೆಯನ್ನು ಈಗ ದಿನಕ್ಕೆ ಹಿಂದಿನ 1.4GB ಯ ಡೇಟಾ ಹೆಚ್ಚುವರಿ 100MB ಡೇಟಾ ಪ್ರಯೋಜನಗಳನ್ನು ಒದಗಿಸುತ್ತದೆ.
ಈ ಪರಿಷ್ಕೃತ ಯೋಜನೆಯನ್ನು ಆರಿಸುವುದರ ಮೂಲಕ ಚಂದಾದಾರರು ತಾಂತ್ರಿಕವಾಗಿ 20 ರೂಪಾಯಿಗಳ ಪ್ರಯೋಜನವನ್ನು ಪಡೆಯುತ್ತಾರೆ ಇದೀಗ ಅದು 529 ಪ್ರಿಪೇಡ್ ರೀಚಾರ್ಜ್ಗೆ ಹೋಲುತ್ತದೆ. ಹೆಚ್ಚುವರಿಯಾಗಿ ನಾವು 529 ರೂಗಳ ಯೋಜನೆಗೆ ಕೆಲವು ರೀತಿಯ ಅಪ್ಡೇಟ್ ನಿರೀಕ್ಷಿಸುತ್ತಿದ್ದೇವೆ.