ಜಿಯೋ ಎಫೆಕ್ಟ್: ವೊಡಾಫೋನ್ ದಿನಕ್ಕೆ 1.5GB ಡೇಟಾ ಮತ್ತು 90 ದಿನಗಲ್ ವ್ಯಾಲಿಡಿಟಿಯೊಂದಿಗಿನ ಪ್ಲಾನನ್ನು ತಂದಿದೆ.

ಜಿಯೋ ಎಫೆಕ್ಟ್: ವೊಡಾಫೋನ್ ದಿನಕ್ಕೆ 1.5GB ಡೇಟಾ ಮತ್ತು 90 ದಿನಗಲ್ ವ್ಯಾಲಿಡಿಟಿಯೊಂದಿಗಿನ ಪ್ಲಾನನ್ನು ತಂದಿದೆ.
HIGHLIGHTS

ಈ ಹೊಸ ನವೀಕರಣದಲ್ಲಿ ಪ್ರತಿ ದಿನಕ್ಕೆ 100 SMS ಗಳೊಂದಿಗೆ ಅನಿಯಮಿತ ವಾಯ್ಸ್ ಕರೆಗಳ ಜೊತೆಗೆ ಬರುತ್ತದೆ.

ಭಾರತದ ಸೆಲ್ಯುಲರ್ ನೆಟ್ವರ್ಕ್ ಆಪರೇಟರ್ ಆಗಿರುವ ವೊಡಾಫೋನ್  ಹಳೆಯ 509 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನವೀಕರಿಸಿದೆ. ಈಗ ಇದು ದಿನಕ್ಕೆ 1.5GB ಯ ಡೇಟಾವನ್ನು 90 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಹೊಸ ನವೀಕರಣ ಪುನರ್ಭರ್ತಿಕಾರ್ಯವು ಪ್ರತಿ ದಿನಕ್ಕೆ 100 SMS ಗಳೊಂದಿಗೆ ಅನಿಯಮಿತ ವಾಯ್ಸ್ ಕರೆಗಳ ಜೊತೆಗೆ ಬರುತ್ತದೆ. 

ಆಅಲ್ಲದೆ ಲೈವ್ ಟಿವಿ ಮತ್ತು ಸಿನೆಮಾಗಳನ್ನು ಒದಗಿಸುವ ವೊಡಾಫೋನ್ ಪ್ಲೇ ಅಪ್ಲಿಕೇಶನ್ ಸಹ ಬಳಕೆದಾರರು ಪ್ರವೇಶಿಸಬವುದು. ಈ ಬದಲಾವಣೆಯನ್ನು ಮೊದಲು ರೂ 509 ರೂಗಳ ರೀಚಾರ್ಜ್ ದೈನಂದಿನ ಡೇಟಾವನ್ನು 1.4GB ನೀಡಲಾಗುತ್ತಿತ್ತು ಆದರೆ ಹೊಸ ಬದಲಾವಣೆಯಲ್ಲಿ  ವೊಡಾಫೋನ್ ಮತ್ತೋಂದು 529 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿರುವಂತೆ ಇದರಲ್ಲಿ ತನ್ನ ಬಳಕೆದಾರರಿಗೆ ಅದೇ ಪ್ರಯೋಜನಗಳನ್ನು ನೀಡುತ್ತದೆ.

ಸದ್ಯಕೆ ಈ ಪ್ರಿಪೇಯ್ಡ್ ಪ್ಲಾನನ್ನು ದೆಹಲಿ NCR, ಗುಜರಾತ್, ಅಸ್ಸಾಂ, ಚೆನ್ನ, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ದೂರಸಂಪರ್ಕ ವಲಯಗಳಲ್ಲಿ ಚಂದಾದಾರರಿಗೆ ಪ್ರಸ್ತುತ ರೀಚಾರ್ಜ್ ನೀಡಲಾಗಿದೆಯೆಂದು ಪಟ್ಟಿ ತಿಳಿಸಿದೆ. ಮೇಲೆ ಹೇಳಿದಂತೆ ಈ 509 ರೂಗಳ  ರೀಚಾರ್ಜ್ ಯೋಜನೆಯನ್ನು ಈಗ ದಿನಕ್ಕೆ ಹಿಂದಿನ 1.4GB ಯ ಡೇಟಾ ಹೆಚ್ಚುವರಿ 100MB ಡೇಟಾ ಪ್ರಯೋಜನಗಳನ್ನು ಒದಗಿಸುತ್ತದೆ. 

ಈ ಪರಿಷ್ಕೃತ ಯೋಜನೆಯನ್ನು ಆರಿಸುವುದರ ಮೂಲಕ ಚಂದಾದಾರರು ತಾಂತ್ರಿಕವಾಗಿ 20 ರೂಪಾಯಿಗಳ ಪ್ರಯೋಜನವನ್ನು ಪಡೆಯುತ್ತಾರೆ ಇದೀಗ ಅದು 529 ಪ್ರಿಪೇಡ್ ರೀಚಾರ್ಜ್ಗೆ ಹೋಲುತ್ತದೆ. ಹೆಚ್ಚುವರಿಯಾಗಿ ನಾವು 529 ರೂಗಳ ಯೋಜನೆಗೆ ಕೆಲವು ರೀತಿಯ ಅಪ್ಡೇಟ್ ನಿರೀಕ್ಷಿಸುತ್ತಿದ್ದೇವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo