ನೀವು ಪ್ರಿಪೇಯ್ಡ್ ಚಂದಾದಾರರಾಗಿದ್ದರೆ ಸಿಮ್ ನಿಷ್ಕ್ರಿಯತೆಯನ್ನು ತಪ್ಪಿಸಲು ಭಾರತೀಯ ಟೆಲಿಕಾಂಗಳು ಕನಿಷ್ಟ 35 ರೂಗಳ ಬ್ಯಾಲೆನ್ಸ್ ಅನ್ನು ಕಡ್ಡಾಯವಾಗಿ ರಿಚಾರ್ಜ್ ಮಾಡುವುದು ಜಾರಿಯಲ್ಲಿದೆ. ಈ ತೀರ್ಮಾನವನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಬೆಂಬಲಿಸಿ ಇನ್ಕಮಿಂಗ್ ಕರೆಗಳನ್ನು ಪಡೆಯುವಲ್ಲಿ ಹೆಚ್ಚಿನ ಮೂಲಭೂತ ಪ್ರಯೋಜನಕ್ಕಾಗಿ ಪ್ರತಿ ತಿಂಗಳು ತಮ್ಮ ನಂಬರ್ ಅನ್ನು ಪುನಃ ಚಾರ್ಜ್ ಮಾಡಲು ಪ್ರಿಪೇಡ್ ಬಳಕೆದಾರರು ಅನಿವಾರ್ಯರಾಗಿದ್ದಾರೆ.
ಇದರಿಂದಾಗಿ ಇದೀಗ ವೊಡಾಫೋನ್ ಐಡಿಯಾ ಹೊಸ ಯೋಜನೆಯನ್ನು ಪರಿಚಯಿಸಿದೆ. ಇದು ಈಗಾಗಲೇ ಜಾರಿಯಲ್ಲಿರುವ 35 ರೂಗಳಿಗಿಂತ ಕಡಿಮೆ ಬೆಲೆಯ ಪ್ಲಾನನ್ನು ಅಂದ್ರೆ ವೊಡಾಫೋನ್ ಮತ್ತು ಐಡಿಯಾ ಹೊಸ 24 ರೂಗಳ ಕನಿಷ್ಠ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನನ್ನು ಹೊರ ತಂದಿದೆ. ಈಗ ನೀವು ಪ್ರತಿ ತಿಂಗಳು ಕನಿಷ್ಠ 24 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಅನ್ನು 28 ದಿನಗಳ ಅವಧಿಯೊಂದಿಗೆ ಪಡೆಯಬವುದು.
ಇದರ ಅವಧಿ ಮುಗಿಯುವ ಮೊದಲು ಬಳಕೆದಾರರಿಗೆ ಪುನರ್ಭರ್ತಿ ಅಗತ್ಯವಿರುತ್ತದೆ. ಈ ಪ್ಲಾನಿನ ಎಕ್ಸ್ ಪೈರಿ ದಿನಾಂಕದ ಮೊದಲು SMS ಮೂಲಕ ಬಳಕೆದಾರರಿಗೆ ಇದರ ಬಗ್ಗೆ ಸೂಚನೆ ನೀಡಲಾಗುವುದು. ಯಾವ ಬಳಕೆದಾರರು ತಮ್ಮ ಸಿಮ್ ಕಾರ್ಡುಗಳನ್ನು ಪುನಃ ಚಾರ್ಜ್ ಮಾಡಲು 15 ದಿನಗಳ ಕಾಲ ನೀಡುತ್ತದೆ. ಆದರೆ ಆ ಸಮಯದಲ್ಲಿ ಔಟ್ಗೋಯಿಂಗ್ ಸೇವೆಯನ್ನು ನಿಲ್ಲಿಸುತ್ತದೆ.
ಆದರೆ ಇನ್ಕಮಿಂಗ್ ಮತ್ತು ಡೇಟಾ ಸೇವೆಗಳನ್ನು ಅಮಾನತುಗೊಳಿಸುತ್ತದೆ. ಈ 15 ದಿನಗಳ ನಂತರ ನೀವು ಪುನರ್ಭರ್ತಿ ಮಾಡದಿದ್ದರೆ ಒಳಬರುವ ಕರೆ ಸೇವೆ ಕೂಡಾ ಸ್ಥಗಿತಗೊಳ್ಳುತ್ತದೆ. ಸಿಮ್ ಅನ್ನು ಕ್ರಿಯಾತ್ಮಕಗೊಳಿಸಲು ನೀವು ಕನಿಷ್ಟ ಬ್ಯಾಲೆನ್ಸ್ ಅನ್ನು ಪಾವತಿಸಬೇಕಾಗುತ್ತದೆ. ಇದು ಎಲ್ಲಾ ಸಾಮಾನ್ಯ ಸೇವೆಗಳನ್ನು ಪುನರಾರಂಭಿಸುತ್ತದೆ. ಇದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾಗೆ ತಿಳಿದ ಕಾಯ್ದೆಯಾಗಿದೆ.