ವೊಡಾಫೋನ್ ಐಡಿಯಾ ಬಳಕೆದಾರರಿಗೊಂದು ಸಿಹಿಸುದ್ದಿ! ಈಗ 3G ನೆಟ್‌ವರ್ಕ್ ಗ್ರಾಹಕರಿಗೆ 4G ಅಪ್‌ಗ್ರೇಡ್

ವೊಡಾಫೋನ್ ಐಡಿಯಾ ಬಳಕೆದಾರರಿಗೊಂದು ಸಿಹಿಸುದ್ದಿ! ಈಗ 3G ನೆಟ್‌ವರ್ಕ್ ಗ್ರಾಹಕರಿಗೆ 4G ಅಪ್‌ಗ್ರೇಡ್
HIGHLIGHTS

ಇದಕ್ಕಾಗಿ ವೊಡಾಫೋನ್ ಐಡಿಯಾ Vi GIGAnet ತಂತ್ರಜ್ಞಾನವನ್ನು ಬಳಸುತ್ತಿದೆ

ನಿಮ್ಮ 3G ನೆಟ್‌ವರ್ಕ್ ಅನ್ನು ಈಗ 4G ಗೆ ಅಪ್‌ಗ್ರೇಡ್ ಮಾಡಲಾಗುತ್ತದೆ.

ಜನಪ್ರಿಯ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಈಗಾಗಲೇ ಈ ಕೆಲಸವನ್ನು ಮಾಡಿ ಮುಗಿಸಿದ್ದಾರೆ.

ವೊಡಾಫೋನ್ ಐಡಿಯಾ ಲಿಮಿಟೆಡ್ (Vi) ತನ್ನ ಅಸ್ತಿತ್ವದಲ್ಲಿರುವ 3G ಗ್ರಾಹಕರನ್ನು 4G ನೆಟ್‌ವರ್ಕ್‌ಗಳಿಗೆ ಉತ್ತಮ ಡೇಟಾ ವೇಗ ಮತ್ತು ಸೇವೆಗಳನ್ನು ಒದಗಿಸುತ್ತದೆ. ಸುಲಭ ಭಾಷೆಯಲ್ಲಿ ಅರ್ಥಮಾಡಿಕೊಳ್ಳಿ ನಿಮ್ಮ 3G ನೆಟ್‌ವರ್ಕ್ ಅನ್ನು ಈಗ 4G ಗೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಇದಕ್ಕಾಗಿ ವೊಡಾಫೋನ್ ಐಡಿಯಾ Vi GIGAnet ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ಬಿರ್ಲಾ ಗ್ರೂಪ್ ಕಂಪನಿ ತಿಳಿಸಿದೆ. ಕಂಪನಿಯ ಎಂಡಿ ಮತ್ತು ಸಿಇಒ ರವೀಂದರ್ ತಕ್ಕರ್ ಮಾತನಾಡಿ ನಾವು 4G ನೆಟ್‌ವರ್ಕ್ ಅನ್ನು ದೇಶದ ಒಂದು ಬಿಲಿಯನ್ ಜನಸಂಖ್ಯೆಗೆ ಹರಡಿದ್ದೇವೆ. ಇದಕ್ಕೂ ಮೊದಲು ಜನಪ್ರಿಯ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಈಗಾಗಲೇ ಈ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಈ ನೆಟ್ವರ್ಕ್ನ ಏಕೀಕರಣವು ಪೂರ್ಣಗೊಳ್ಳುವ ಹಂತದೊಂದಿಗೆ ಟೆಲಿಕಾಂ ಕಂಪನಿಯು 3G ಸ್ಪೆಕ್ಟ್ರಮ್ನ ದೊಡ್ಡ ಭಾಗಗಳನ್ನು 4G ಗೆ ಜೋಡಿಸುವ ಮೂಲಕ ತನ್ನ 4G ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಇದು 900MHz, 1800MHz ಮತ್ತು 2100MHz ಸ್ಪೆಕ್ಟ್ರಮ್ ಬ್ಯಾಂಡ್‌ಗಳನ್ನು 4G ನೆಟ್‌ವರ್ಕ್‌ಗೆ ಜೋಡಿಸಿವೆ.

Vodafone Idea 4G

2G ಬಳಕೆದಾರರಿಗೆ ಸಾಮಾನ್ಯ ವಾಯ್ಸ್ ಸೇವೆ ಮುಂದುವರಿಯುತ್ತದೆ

ಕಂಪನಿಯು ತನ್ನ 2G ಬಳಕೆದಾರರಿಗೆ ಮೂಲ ವಾಯ್ಸ್ ಸೇವೆಗಳನ್ನು ನೀಡುವುದನ್ನು ಮುಂದುವರಿಸುತ್ತದೆ.  ಗಿಗಾನೆಟ್ ನೆಟ್‌ವರ್ಕ್‌ನಲ್ಲಿ ಕಂಪನಿಯು ತನ್ನ 3G ಬಳಕೆದಾರರಿಗೆ ವೇಗವಾಗಿ 4G ಡೇಟಾ ವೇಗವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಐಡಿಯಾ ವೊಡಾಫೋನ್ ಹೇಳಿದೆ. ಕಂಪನಿಯ 3G ಆಧಾರಿತ ಸೇವೆಯನ್ನು ಬಳಸುವ ಎಂಟರ್‌ಪ್ರೈಸ್ ಗ್ರಾಹಕರನ್ನು 4G ಮತ್ತು 4G ಆಧಾರಿತ ಐಒಟಿ ಅಪ್ಲಿಕೇಶನ್‌ಗಳು ಮತ್ತು ಸೇವೆಗಳಿಗೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಕಂಪನಿಯು ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸುತ್ತದೆ. ಆದಾಗ್ಯೂ ಕಂಪನಿಯ 2G ಬಳಕೆದಾರರಿಗೆ ಒದಗಿಸುವ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅವರು ಮೊದಲಿನಂತೆ ಮೂಲ ವಾಯ್ಸ್ ಸೇವೆಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ.

ಒಟ್ಟಿಗೆ ಬಂದ ನಂತರ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲಾರ್ Vi ಬ್ರಾಂಡ್ ಹೆಸರಿನಲ್ಲಿ ಸಂಯೋಜಿತ 4G ನೆಟ್‌ವರ್ಕ್ ಗಿಗಾನೆಟ್ ಅನ್ನು ಪ್ರಾರಂಭಿಸಿತು. ಕಂಪನಿಯು ಒಟ್ಟು 16 ಕೀ-ವಲಯಗಳನ್ನು ಹೊಂದಿದೆ ಎಂದು ವೊಡಾಫೋನ್-ಐಡಿಯಾ ಹೇಳಿದೆ. ಇಲ್ಲಿ ಆಪರೇಟರ್‌ನ ಗಮನವು ಹೆಚ್ಚಿನ ಚಂದಾದಾರರನ್ನು ಪಡೆಯುವುದು ಮತ್ತು ಮಾರುಕಟ್ಟೆ ಪಾಲನ್ನು ಹೆಚ್ಚಿಸುವುದು. ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಪ್ರಯತ್ನವನ್ನು ಕಂಪನಿಯು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರ ಸಂಖ್ಯೆಯಲ್ಲಿನ ಕಡಿತವನ್ನು ನಿಲ್ಲಿಸಬಹುದು. TRAI ವರದಿಯ ಪ್ರಕಾರ 2020 ರ ಜೂನ್‌ನಲ್ಲಿ Vi ಯ ಸುಮಾರು 48.2 ಲಕ್ಷ ಬಳಕೆದಾರರು ಕಡಿಮೆಯಾಗಿದ್ದಾರೆ.

Vodafone ಮತ್ತು Idea ಗ್ರಾಹಕರು ನೀವಾಗಿದ್ದರೆ ನಿಮ್ಮ ನಂಬರ್‌ಗೆ ಲಭ್ಯವಿರುವ ಇತ್ತೀಚಿನ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳನೊಮ್ಮೆ ನೋಡ್ಕೊಳ್ಳಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo