Vodafone idea: ಡೇಟಾಕ್ಕಿಂತ ಕರೆಗಳ ಹೆಚ್ಚಿನ ಅಗತ್ಯವಿದ್ದರೆ 180 ದಿನಗಳ ವ್ಯಾಲಿಡಿಟಿಯ ಈ Vi ಪ್ಲಾನ್ ಬೆಸ್ಟ್!

Vodafone idea: ಡೇಟಾಕ್ಕಿಂತ ಕರೆಗಳ ಹೆಚ್ಚಿನ ಅಗತ್ಯವಿದ್ದರೆ 180 ದಿನಗಳ ವ್ಯಾಲಿಡಿಟಿಯ ಈ Vi ಪ್ಲಾನ್ ಬೆಸ್ಟ್!
HIGHLIGHTS

ವೊಡಾಫೋನ್ ಐಡಿಯಾ Vodafone Idea (Vi) ತಮ್ಮ ಬಳಕೆದಾರರಿಗೆ ಸುಮಾರು 6 ತಿಂಗಳ ವ್ಯಾಲಿಡಿಟಿ ನೀಡುತ್ತಿದೆ.

ಡೇಟಾಕ್ಕಿಂತ ಕರೆಗಳ ಹೆಚ್ಚಿನ ಅಗತ್ಯವಿದ್ದರೆ 180 ದಿನಗಳ ವ್ಯಾಲಿಡಿಟಿಯ ಈ Vodafone idea ಪ್ಲಾನ್ ಬೆಸ್ಟ್!

ವೊಡಾಫೋನ್ ಐಡಿಯಾ 2 ಜನಪ್ರಿಯ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಮೂರನೇ ಅತಿ ದೊಡ್ಡ ಖಾಸಗಿ ಟೆಲಿಕಾಂ ಆಪರೇಟರ್ ಕಂಪನಿಯಾಗಿರುವ ವೊಡಾಫೋನ್ ಐಡಿಯಾ Vodafone Idea (Vi) ತಮ್ಮ ಬಳಕೆದಾರರಿಗೆ ಸುಮಾರು 6 ತಿಂಗಳಿಗೆ ಅಂದ್ರೆ ಬರೋಬ್ಬರಿ 180 ದಿನಗಳ ಮಾನ್ಯತೆಯೊಂದಿಗೆ ಜಿಯೋ ಮತ್ತು ಏರ್ಟೆಲ್ ಹೋಲಿಕೆಯಲ್ಲಿ ಉತ್ತಮವಾದ ಪ್ರಯೋಜನಗಳೊಂದಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ವ್ಯಾಲಿಡಿಟಿ ಪ್ಯಾಕ್‌ಗಳು ವೊಡಾಫೋನ್ ಐಡಿಯಾ Vodafone Idea (Vi) ಬಳಕೆದಾರರಿಗೆ ಗಮನಾರ್ಹ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತವೆ. ಈ ಯೋಜನೆಯನ್ನು ನೀವು Vi ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಪಡೆಯಬಹುದು. ಇದರಲ್ಲಿ ಹತ್ತಾರು ಯೋಜನೆಗಳಿದ್ದರೂ ಬರೋಬ್ಬರಿ 180 ದಿನಗಳ ಮಾನ್ಯತೆಯನ್ನು ನೀಡುವ ಎರಡು ಜನಪ್ರಿಯ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

Also Read: Nothing Phone 2a ಸ್ಮಾರ್ಟ್ಫೋನ್ 25,000 ರೂ.ಗಿಂತ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟ!

Vodafone Idea (Vi) ರೂ 1049 ಯೋಜನೆಯ ವಿವರಗಳು

ನಿಮಗೆ ಡೇಟಾಕ್ಕಿಂತ ಕರೆಗಳ ಹೆಚ್ಚಿನ ಅಗತ್ಯವಿದ್ದರೆ ಬರೋಬ್ಬರಿ 180 ದಿನಗಳ ವ್ಯಾಲಿಡಿಟಿಯ ಈ Vodafone idea ಪ್ಲಾನ್ ಉತ್ತಮ ಆಯ್ಕೆಯಾಗಲಿದೆ ಯಾಕೆಂದರೆ ಈ Vodafone Idea (Vi) ನೀಡುವ ರೂ 1049 ಪ್ರಿಪೇಯ್ಡ್ ಯೋಜನೆಯಲ್ಲಿ ನಿಮಗೆ ಅನಿಯಮಿತ ವಾಯ್ಸ್ ಕರೆಗಳು, 12GB ಡೇಟಾದೊಂದಿಗೆ ಒಟ್ಟಾರೆಯಾಗಿ 1800 SMS ಸಹ ನೀಡಲಾಗುತ್ತದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಪ್ಲಾನ್ 180 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿನ ಡೇಟಾ ಕೋಟಾ ಮುಗಿದ ನಂತರ ಪ್ರತಿ MB ಬಳಕೆಗೆ 50 ಪೈಸೆಯಂತೆ ಶುಲ್ಕ ವಿಧಿಸಲಾಗುತ್ತದೆ. ಈ ಯೋಜನೆಯೊಂದಿಗೆ ಯಾವುದೇ ಹೆಚ್ಚುವರಿ ಪ್ರಯೋಜನಗಳಿಲ್ಲದೆ ನೀವು ಹಗಲು ರಾತ್ರಿ ಎನ್ನದೆ ವಾಯ್ಸ್ ಕರೆಗಳ ಕೇಂದ್ರಿತ ಬಳಕೆಯೊಂದಿಗೆ ಒಮ್ಮೆ ರಿಚಾರ್ಜ್ ಮಾಡಿ ಸುಮಾರು 6 ತಿಂಗಳ ಕಾಲ ಸಂಪರ್ಕದಲ್ಲಿರಬಹುದು.

Vodafone idea prepaid plan

Vodafone Idea (Vi) ರೂ 1749 ಯೋಜನೆಯ ವಿವರಗಳು

Vodafone Idea ನ ರೂ 1749 Hero ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು ದಿನಕ್ಕೆ 1.5GB ಡೇಟಾವನ್ನು ಒಳಗೊಂಡಿರುತ್ತದೆ. ಎಲ್ಲವೂ 180 ದಿನಗಳ ಮಾನ್ಯತೆಯೊಂದಿಗೆ. ದೈನಂದಿನ ಕೋಟಾವನ್ನು ತಲುಪಿದ ನಂತರ ಡೇಟಾ ವೇಗವನ್ನು 64 Kbps ವರೆಗೆ ಕಡಿಮೆ ಮಾಡಲಾಗುತ್ತದೆ. “ಜಸ್ಟ್ ಫಾರ್ ಯು” ಪ್ರಯೋಜನವಾಗಿ Vi 45 ದಿನಗಳ ವ್ಯಾಲಿಡಿಟಿಯೊಂದಿಗೆ ಹೆಚ್ಚುವರಿ 30GB ಡೇಟಾವನ್ನು ಸಹ ಬಂಡಲ್ ಮಾಡಿದೆ.

Vodafone idea prepaid plan

ಹೆಚ್ಚುವರಿ Hero ಪ್ರಯೋಜನಗಳಲ್ಲಿ Binge All Night, Weekend Data Rollover ಮತ್ತು Data Delights ಸೇರಿವೆ. ಇದು ತಿಂಗಳಿಗೆ 2GB ವರೆಗೆ ಬ್ಯಾಕಪ್ ಡೇಟಾವನ್ನು ಒದಗಿಸುತ್ತದೆ. Vi ಅಪ್ಲಿಕೇಶನ್ ಮೂಲಕ ಕ್ಲೈಮ್ ಮಾಡಬಹುದು. Vi ಗ್ಯಾರಂಟಿಯ ಭಾಗವಾಗಿ ಅರ್ಹ ಪ್ರಿಪೇಯ್ಡ್ ಗ್ರಾಹಕರು ವರ್ಷಕ್ಕೆ 130GB ವರೆಗೆ ಡೇಟಾವನ್ನು ಸ್ವೀಕರಿಸುತ್ತಾರೆ. ಪ್ರತಿ 28 ದಿನಗಳಿಗೊಮ್ಮೆ 10GB ಉಚಿತ. ಯಾವುದೇ ಇತರ ಪ್ರಯೋಜನಗಳನ್ನು ಪ್ರಸ್ತುತ ಯೋಜನೆಯೊಂದಿಗೆ ಸಂಯೋಜಿಸಲಾಗಿಲ್ಲ.

ವೊಡಾಫೋನ್ ಐಡಿಯಾ 180 ದಿನಗಳ ವ್ಯಾಲಿಡಿಟಿಯ ಪ್ರಯೋಜನ

ಒಟ್ಟಾರೆಯಾಗಿ ವೊಡಾಫೋನ್ ಐಡಿಯಾ 180 ದಿನಗಳ ವ್ಯಾಲಿಡಿಟಿ ವಿಭಾಗದಲ್ಲಿ ಎರಡು ಪ್ಲಾನ್‌ಗಳನ್ನು ನೀಡುತ್ತದೆ. ಒಂದು ವಾಯ್ಸ್ ಕೇಂದ್ರಿತವಾಗಿದ್ದರೆ ಇನ್ನೊಂದು ಹೀರೋ ಪ್ರಯೋಜನಗಳ ಯೋಜನೆಯಾಗಿದ್ದು ಅದು 1.5GB ದೈನಂದಿನ ಡೇಟಾ, ನೈಟ್ ಅನ್‌ಲಿಮಿಟೆಡ್, ಡೇಟಾ ಡಿಲೈಟ್‌ಗಳು, ವಾರಾಂತ್ಯದ ಡೇಟಾ ರೋಲ್‌ಓವರ್, ಹೆಚ್ಚುವರಿ 30GB ಡೇಟಾ, ಮತ್ತು 10GB Vi ಗ್ಯಾರಂಟಿ ಪ್ರಯೋಜನಗಗಳೊಂದಿಗೆ Vi ಇನ್ನೂ ತನ್ನ 5G ನೆಟ್‌ವರ್ಕ್ ಅನ್ನು ಪ್ರಾರಂಭಿಸದ ಕಾರಣ ಈ ಯೋಜನೆಗಳಲ್ಲಿ ಯಾವುದೂ 5G ಪ್ರಯೋಜನಗಳನ್ನು ಒಳಗೊಂಡಿಲ್ಲ. ನಮ್ಮ ಮುಂಬರುವ ಲೇಖನಗಳ ಸರಣಿಯಲ್ಲಿ ಇತರ ಯೋಜನೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಟ್ಯೂನ್ ಮಾಡಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo