84 ದಿನಗಳಿಗೆ Unlimited ಕರೆ ಮತ್ತು Data ನೀಡುವ ಈ Vodafone Idea ಪ್ಲಾನ್ ಬೆಲೆ ಎಷ್ಟು ಗೊತ್ತಾ?

Updated on 29-Nov-2023
HIGHLIGHTS

ವೊಡಾಫೋನ್ ಐಡಿಯಾ (Vodafone Idea) ಕೈಗೆಟಕುವ ಬೆಲೆಗೆ ಹೆಚ್ಚುವರಿ ಪ್ರಯೋಜನಗಳೊಂದಿಗೆ ಹೊಸ ಯೋಜನೆಗಳನ್ನು ಪರಿಚಯಿಸಿದೆ

Vi ಈ 459 ರೂಗಳ ಯೋಜನೆಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಹೈಸ್ಪೀಡ್ ಡೇಟಾ 84 ದಿನಗಳ ವ್ಯಾಲಿಡಿಟಿಯನ್ನು ಪಡೆಯಬಹುದು.

Vi ಸುಮಾರು ಮೂರು ತಿಂಗಳ ವ್ಯಾಲಿಡಿಟಿಯ ಪ್ಲಾನ್ ಬೇಕಿದ್ದರೆ ಇದು ನಿಮಗೆ ಸೂಕ್ತವಾಗಿದೆ.

ಭಾರತದ ಮೂರನೇ ಅತಿದೊಡ್ಡ ಟೆಲಿಕಾ ಕಂಪನಿಯಾಗಿರುವ ವೊಡಾಫೋನ್ ಐಡಿಯಾ (Vodafone Idea) ಕೈಗೆಟಕುವ ಬೆಲೆಗೆ ಹೆಚ್ಚುವರಿ ಪ್ರಯೋಜನಗಳೊಂದಿಗೆ ಹೊಸ ಯೋಜನೆಗಳನ್ನು ಪರಿಚಯಿಸಿದೆ. ವೊಡಾಫೋನ್ ಐಡಿಯಾದ ಈ 459 ರೂಗಳ ಯೋಜನೆಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಹೈಸ್ಪೀಡ್ ಡೇಟಾವನ್ನು ಪೂರ್ತಿ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ನೀವು ವೊಡಾಫೋನ್ ಐಡಿಯಾ ಗ್ರಾಹಕರಾಗಿದ್ದು ನಿಮಗೆ ಸುಮಾರು ಮೂರು ತಿಂಗಳ ವ್ಯಾಲಿಡಿಟಿಯ ಪ್ಲಾನ್ ಬೇಕಿದ್ದರೆ ಇದು ನಿಮಗೆ ಸೂಕ್ತವಾಗಿದೆ.

Also Read: OnePlus 12 ಸೋನಿ ಸೆನ್ಸರ್‌ಗಳೊಂದಿಗೆ ಜನವರಿ 2024 ರಂದು ಬಿಡುಗಡೆಗೆ ಡೇಟ್ ಫಿಕ್ಸ್!

ವೊಡಾಫೋನ್ ಐಡಿಯಾ (Vodafone Idea)

ಇತ್ತೀಚಿನ ಬಿಡುಗಡೆಯಲ್ಲಿ ದೀರ್ಘಾವಧಿಯ ಆಯ್ಕೆಯನ್ನು ಬಯಸುವ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು Vi ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. Vi ಇತ್ತೀಚೆಗೆ ತನ್ನ ಪ್ರಿಪೇಯ್ಡ್ ಪ್ಲಾನ್ ಪಟ್ಟಿಯ ಅಡಿಯಲ್ಲಿ ರೂ 459 ಬೆಲೆಯ ಹೊಸ ಪ್ಲಾನ್ ಅನ್ನು ಸೇರಿಸಿದೆ. ಕರೆ ಮತ್ತು ಡೇಟಾ ಪ್ರಯೋಜನಗಳೊಂದಿಗೆ ದೀರ್ಘ ವ್ಯಾಲಿಡಿಟಿ ಪ್ಲಾನ್‌ಗಳನ್ನು ಹುಡುಕುತ್ತಿರುವ Vi ಬಳಕೆದಾರರಿಗೆ ಈ ಯೋಜನೆಯನ್ನು ಕ್ಯೂರೇಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಹೊಸ ವೊಡಾಫೋನ್ ಐಡಿಯಾ (Vi) ರೂ 459 ಪ್ಲಾನ್‌ನ ಎಲ್ಲಾ ಕೊಡುಗೆಗಳನ್ನು ಸಂಕ್ಷಿಪ್ತವಾದ ಮಾಹಿತಿಗಳನ್ನು ತಿಳಿಯಿರಿ.

ವೊಡಾಫೋನ್ ಐಡಿಯಾ (Vi) ರೂ 459 ಪ್ಲಾನ್ ವಿವರಗಳು

ಈ ಹೊಸ ಮತ್ತು ಬೆಸ್ಟ್ ವೊಡಾಫೋನ್ ಐಡಿಯಾ (Vi) ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಯೋಜನೆಯ ವಿವರಗಳ ಪ್ರಕಾರ ಹೊಸ ರೂ 459 ಪ್ರಿಪೇಯ್ಡ್ ಯೋಜನೆಯು 84 ದಿನಗಳ ಸೇವಾ ಮಾನ್ಯತೆಯನ್ನು ನೀಡುತ್ತದೆ. ಇದಲ್ಲದೆ ಪ್ಲಾನ್ ನಿಮಗೆ ಕೇವಲ 6GB ಡೇಟಾವನ್ನು ಮಾತ್ರ ಒದಗಿಸುತ್ತದೆ. ಡೇಟಾ ವೋಚರ್‌ಗಳ ಮೂಲಕ ಹೆಚ್ಚುವರಿ ಡೇಟಾ ಲಭ್ಯವಿದೆ. ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳಿಗೆ 50 ಪೈಸೆ/ಸೆಕೆಂಡಿಗೆ ಶುಲ್ಕ ವಿಧಿಸಲಾಗುತ್ತದೆ.

ವೊಡಾಫೋನ್ ಐಡಿಯಾ (Vi) ಯೋಜನೆಯು ರೂ 459 ರೂಗಳಲ್ಲಿ ಸೀಮಿತ ಟಾಕ್ ಟೈಮ್ ಅನ್ನು ಒಳಗೊಂಡಿದೆ. ಈ ಯೋಜನೆಯು 1000 SMS ಪ್ರಯೋಜನಗಳನ್ನು ನೀಡುವುದರೊಂದಿಗೆ ಗ್ರಾಹಕರನ್ನು ನಿರಾಶೆಗೊಳಿಸುವುದಿಲ್ಲ. TRAI ನಿರ್ದೇಶನದ ಪ್ರಕಾರ ಈ ಯೋಜನೆಯಲ್ಲಿರುವ ಗ್ರಾಹಕರು ಪೋರ್ಟ್-ಔಟ್ SMS ಗಳನ್ನು ಕಳುಹಿಸಲು ಸಾಧ್ಯ. ನಿಮ್ಮ ಕೋಟದ ನಂತರದ ಮೆಸೇಜ್ ಸೆಂಡ್ ಮಾಡಿದರೆ ಲೋಕಲ್ 1 ರೂ ಮತ್ತು STD ಮೆಸೇಜ್ಗಳಿಗೆ 1.5 ರೂಗಳು ಚಾರ್ಜ್ ಆಗುತ್ತದೆ. ವೊಡಾಫೋನ್ ಐಡಿಯಾ (Vi) ನಿಮಗೆ ಮೂವೀಸ್, ಲೈವ್ ಟಿವಿ, ನ್ಯೂಸ್ ಪಡೆಯಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :