ವೋಡಾಫೋನ್ ಐಡಿಯಾ (Vi) ಆಯ್ದ ಬಳಕೆದಾರರಿಗೆ ಉಚಿತ Swiggy One Membership ಚಂದಾದಾರಿಕೆಯನ್ನು ನೀಡುತ್ತಿದೆ

ವೋಡಾಫೋನ್ ಐಡಿಯಾ (Vi) ಆಯ್ದ ಬಳಕೆದಾರರಿಗೆ ಉಚಿತ Swiggy One Membership ಚಂದಾದಾರಿಕೆಯನ್ನು ನೀಡುತ್ತಿದೆ
HIGHLIGHTS

ವೋಡಾಫೋನ್ ಐಡಿಯಾ (Vi) ತನ್ನ ಆಯ್ದ ಗ್ರಾಹಕರಿಗೆ ಈಗ 2500 ರೂ ಮೌಲ್ಯದ ಅತ್ಯಂತ ಪ್ರಚಾರದ ಕೊಡುಗೆಯನ್ನು ಪ್ರಕಟಿಸಿದೆ.

ವೋಡಾಫೋನ್ ಐಡಿಯಾ (Vi) ಬಳಕೆದಾರರಿಗೆ ಉಚಿತ Swiggy One ಚಂದಾದಾರಿಕೆಯನ್ನು ನೀಡುತ್ತಿದೆ.

ಗ್ರಾಹಕರಿಗೆ ಮಾತ್ರ ಲಭ್ಯವಿದ್ದು Zwiggy ಮತ್ತು Instamart ನಂತಹ ಸೈಟ್‌ಗಳಲ್ಲಿ ಶಾಪಿಂಗ್ ಮಾಡುವವರಿಗೆ ಈ ಕೊಡುಗೆ ಉಪಯುಕ್ತವಾಗಿದೆ.

ವೋಡಾಫೋನ್ ಐಡಿಯಾ (Vi) ತನ್ನ ಆಯ್ದ ಗ್ರಾಹಕರಿಗೆ ಈಗ 2500 ರೂ ಮೌಲ್ಯದ ಅತ್ಯಂತ ಪ್ರಚಾರದ ಕೊಡುಗೆಯನ್ನು ಪ್ರಕಟಿಸಿದೆ. ವೋಡಾಫೋನ್ ಐಡಿಯಾ (Vi) ಬಳಕೆದಾರರಿಗೆ ಉಚಿತ ಚಂದಾದಾರಿಕೆಯನ್ನು (Swiggy One Membership) ನೀಡುತ್ತಿದೆ. ಆದರೆ ಇದನ್ನು ಪಡೆಯಲು ಇಲ್ಲಿ ಒಂದು ಷರತ್ತು ಅನ್ವಯವಾಗುತ್ತದೆ. ಆದಾಗ್ಯೂ Swiggy One ಚಂದಾದಾರಿಕೆ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಈ ಸೇವೆಯನ್ನು ಒದಗಿಸುತ್ತಿದೆ. ವೋಡಾಫೋನ್ ಐಡಿಯಾ (Vi) Max ಯೋಜನೆಗಳನ್ನು ರೀಚಾರ್ಜ್ ಮಾಡುವ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು Zwiggy ಮತ್ತು Instamart ನಂತಹ ಸೈಟ್‌ಗಳಲ್ಲಿ ಶಾಪಿಂಗ್ ಮಾಡುವವರಿಗೆ ಈ ಕೊಡುಗೆ ಉಪಯುಕ್ತವಾಗಿದೆ.

Also Read: Intel Core 11th Gen i3 ಪ್ರೊಸೆಸರ್‌ನೊಂದಿಗೆ TECNO MEGABOOK T1 ಕೇವಲ ₹23,990 ರೂಗಳಿಗೆ ಲಭ್ಯ!

ವೋಡಾಫೋನ್ ಐಡಿಯಾ (Vi) Swiggy One Membership

ವೋಡಾಫೋನ್ ಐಡಿಯಾ ಬಳಕೆದಾರರು Swiggy One ಚಂದಾದಾರಿಕೆಯನ್ನು ಪಡೆಯಲು Vi ಬಳಕೆದಾರರು ಪೋಸ್ಟ್‌ಪೇಯ್ಡ್ ಗ್ರಾಹಕರು ರೂ. 501 ಅಥವಾ ಹೆಚ್ಚಿನ ಬೆಲೆಗೆ Vi Max ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ ರೀಚಾರ್ಜ್ ಮಾಡಬೇಕಾಗಿದೆ. ಇದರಲ್ಲಿ ನೀವು ಈ ರೀಚಾರ್ಜ್ ಯೋಜನೆಗಳು ರೂ.501 ಪ್ಲಾನ್, ರೂ.701 ಪ್ಲಾನ್, ರೂ.1101 ಪ್ಲಾನ್, ಅಥವಾ Vi Max ಫ್ಯಾಮಿಲಿ ಪ್ಲಾನ್ ರೂ.1001 ಪ್ಲಾನ್ ಮತ್ತು ರೂ.1151 ಸಹ ಪಡೆಯಬಹುದು. ಈ ಯೋಜನೆಗಳ ಬಳಕೆದಾರರಿಗೆ ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ಒದಗಿಸಲಾಗಿದೆ. ಇದರ ಜೊತೆಗೆ ಯೋಜನೆ EaseMyTrip ಜೊತೆಗೆ ನಿಮಗೆ ಇದರಲ್ಲಿ SonyLIV, Disney+ Hotstar, ಮತ್ತು Amazon Prime ವೀಡಿಯೊಗಳಂತಹ OTT ಪ್ರಯೋಜನಗಳು ಒಳಗೊಂಡಿವೆ.

Swiggy One Membership

ವೊಡಾಫೋನ್ ಐಡಿಯಾದ ಸ್ವಿಗ್ಗಿ One ಆಫರ್ ನೀಡಲು ಕಾರಣ

ಈ Swiggyಎಂಬ ಕಂಪನಿ ಆಹಾರ ವಿತರಣಾ ವೇದಿಕೆಗೆ ಚಂದಾದಾರಿಕೆಯಾಗಿದೆ. ನೀವು ಇದರಲ್ಲಿ ರೂ.149 ಕ್ಕಿಂತ ಹೆಚ್ಚಿನ ಆಹಾರ ಆರ್ಡರ್‌ಗಳಲ್ಲಿ ಬಳಕೆದಾರರು ಅನಿಯಮಿತ ಉಚಿತ ವಿತರಣೆಯನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಇನ್‌ಸ್ಟಾಮಾರ್ಟ್‌ನಲ್ಲಿ 199 ರೂ.ಗಿಂತ ಹೆಚ್ಚಿನ ಆರ್ಡರ್‌ಗಳಿಗೆ ಉಚಿತ ಡೆಲಿವರಿ & ಅನೇಕ ಇತರ ಪ್ರಯೋಜನಗಳು ಸಹ ಲಭ್ಯವಿದೆ. Vi ಗ್ರಾಹಕರ ಸಂಖ್ಯೆಯನ್ನು ಏರಿಕೆಯಲ್ಲಿ ಮುಂದುವರಿಸಲಾಗದೆ ನಷ್ಟ ಅನುಭವಿಸುತ್ತಿರುವುದು ಗಮನಾರ್ಹ. ಕಂಪನಿಯಿಂದ ಇನ್ನಷ್ಟು 5G ಸೇವೆಗಳು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಇದರ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಗಳು ಕೆಲವು ನಗರಗಳಲ್ಲಿ ಮಾತ್ರ ಸೀಮಿತವಾಗಿದೆ ಈ ಕಾರಣಕ್ಕಾಗಿ ಜನರು Vi ನಿಂದ ಇತರ ಟೆಲಿಕಾಂ ಆಪರೇಟರ್‌ಗಳಿಗೆ ಹೋಗುತ್ತಿದ್ದಾರೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo