Vodafone Idea ನೀಡುತ್ತಿರುವ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 3GB ಡೇಟಾದೊಂದಿಗೆ 48GB ಹೆಚ್ಚುವರಿ ಡೇಟಾ ಲಭ್ಯ!

Vodafone Idea ನೀಡುತ್ತಿರುವ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 3GB ಡೇಟಾದೊಂದಿಗೆ 48GB ಹೆಚ್ಚುವರಿ ಡೇಟಾ ಲಭ್ಯ!
HIGHLIGHTS

ವೊಡಾಫೋನ್ ಐಡಿಯಾ (Vodafone idea) 601 ಮತ್ತು 901 ರೂಗಳ ರಿಚಾರ್ಜ್ ಪ್ಲಾನ್ ಹೆಚ್ಚುವರಿ ಹೆಚ್ಚುವರಿಯ ಡೇಟಾ ನೀಡುತ್ತಿದೆ.

ವೊಡಾಫೋನ್ ಐಡಿಯಾ (Vodafone idea) ಗ್ರಾಹಕರಾಗಿದ್ದರೆ ಒಮ್ಮೆ ನಿಮ್ಮ ಮಾಸಿಕ ಯೋಜನೆಗೆ ಈ ಎರಡು ಯೋಜನೆಗಳನ್ನು ಹೋಲಿಸಿ ನೋಡಬಹುದು.

ವೊಡಾಫೋನ್ ಐಡಿಯಾ (Vodafone idea) ಈ ಭಾರಿ ವ್ಯಾಲಿಡಿಟಿಯೊಂದಿಗೆ ಉಚಿತ OTT ಪ್ರಯೋಜನಗಳನ್ನು ಸಹ ಸೇರಿಸಿದೆ.

Vodafone Idea Plan: ಭಾರತದ ಜನಪ್ರಿಯ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ (Vodafone idea) ಈಗಾಗಲೇ ಟೆಲಿಕಾಂ ಮಾರುಕಟ್ಟೆಯನ್ನು ಆಳುತ್ತಿರುವ Jio ಮತ್ತು Airtel ಕಂಪನಿಗಳೊಂದಿಗೆ ಪೈಪೋಟಿ ನೀಡುತ್ತ ಒಂದಿಷ್ಟು ಕೈಗೆಟಕುವ ರಿಚಾರ್ಜ್ ಯೋಜನೆಯಲ್ಲಿ ಸಿಗುವ ಪ್ರಯೋಜನಗಳಿಗಿಂತ ಅಧಿಕವಾಗಿ ಅನುಕೂಲಗಳನ್ನು ನೀಡಲು ಆರಂಭಿಸಿದೆ. ಇವುಗಳ ಪೈಕಿ ಕೆಲವೊಂದು ಯೋಜನೆಗಳಲ್ಲಿ ಪ್ರಮುಖವಾಗಿ 601 ಮತ್ತು 901 ರೂಗಳ ರಿಚಾರ್ಜ್ ಪ್ಲಾನ್ ಹೆಚ್ಚುವರಿ ವ್ಯಾಲಿಡಿಟಿ, ಉಚಿತ ಕರೆಗಳು, ಪ್ರತಿದಿನದ ಡೇಟಾ ನೀಡಿದರೆ ಮತ್ತೆ ಬೇರೆ ಯೋಜನೆಗಳಲ್ಲಿ ಬರೋಬ್ಬರಿ 48GB ಹೆಚ್ಚುವರಿಯ ಡೇಟಾ ನೀಡುತ್ತಿದೆ.

Also Read: ನಿಮ್ಮ Smartphone ಸ್ಲೋ ಅಥವಾ ಹ್ಯಾಂಗ್ ಆಗ್ತಾ ಇದ್ಯಾ? ಚಿಂತಿಸದೆ ಫೋನಲ್ಲಿ ಈ ಸೆಟ್ಟಿಂಗ್ ಬದಲಾಯಿಸಿಕೊಳ್ಳಿ ಸಾಕು!

ನೀವು ವೊಡಾಫೋನ್ ಐಡಿಯಾ (Vodafone idea) ಗ್ರಾಹಕರಾಗಿದ್ದರೆ ಒಮ್ಮೆ ನಿಮ್ಮ್ ಮಾಸಿಕ ಯೋಜನೆಗೆ ಈ ಎರಡು ಯೋಜನೆಗಳನ್ನು ಹೋಲಿಸಿ ನೋಡಬಹುದು. Vi ಕಂಪನಿ ನೀಡುತ್ತಿರುವ ಈ ರಿಚಾರ್ಜ್ 601 ಮತ್ತು 901 ರೂಗಳ ರಿಚಾರ್ಜ್ ಯೋಜನೆಯು ಇತ್ತೀಚಿಗೆ ಸ್ಥಗಿತಗೊಂಡ ನಂತರ ಮತ್ತೆ ಕೆಲವೇ ದಿನಗಳಲ್ಲಿ ಕಂಪನಿ ಮರುಪರಿಚಯಿಸಿ ಈ ಭಾರಿ ವ್ಯಾಲಿಡಿಟಿಯೊಂದಿಗೆ ಉಚಿತ OTT ಪ್ರಯೋಜನಗಳನ್ನು ಸಹ ಸೇರಿಸಿದೆ. ಈ ಯೋಜನೆಗಳಲ್ಲಿ ದಿನಕ್ಕೆ 3GB ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು 100 SMS ಮೆಸೇಜ್ಗಳನ್ನು ಒಳಗೊಂಡಂತೆ ಭಾರಿ ಪ್ರಯೋಜನಗಳನ್ನು ನೀಡುತ್ತದೆ. ಈ ಮೂಲಕ ವೊಡಾಫೋನ್ ಐಡಿಯಾ (Vodafone idea) ನೀಡುತ್ತಿರುವ ಬೆಸ್ಟ್ ಪ್ಲಾನ್ ಪ್ರಯೋಜನ ಬಗ್ಗೆ ತಿಳಿಯೋಣ.

Vodafone Idea rs. 601 and rs. 901 recharge plan
Vodafone Idea rs. 601 and rs. 901 recharge plan

ವೊಡಾಫೋನ್ ಐಡಿಯಾ 601 ರೂಗಳ ರಿಚಾರ್ಜ್ ಪ್ಲಾನ್

ಮೊದಲಿಗೆ ಈ ಯೋಜನೆಯ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನಿಮಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ದಿನಕ್ಕೆ 100 SMS ಮತ್ತು ಪ್ರತಿದಿನ 3GB ಡೇಟಾ ಲಭ್ಯವಿರುತ್ತದೆ. ಈ ಪ್ಲಾನ್ ಅನ್ನು ಬಳಕೆದಾದರೂ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯುತ್ತಾರೆ ಇದರಲ್ಲಿ ಒಟ್ಟಾರೆಯಾಗಿ 84GB ಡೇಟಾ ಲಭ್ಯವಿರುತ್ತದೆ. ಅಲ್ಲದೆ ಈ ಯೋಜನೆಯಲ್ಲಿ 16GB ಹೆಚ್ಚುವರಿಯ ಡೇಟಾವನ್ನು ಸಹ ಪಡೆಯಬಹುದು.

ಅಷ್ಟೇಯಲ್ಲದೆ ಈ ಯೋಜನೆಯನ್ನು ನೀವು ಪಡೆದರೆ ಉಚಿತವಾಗಿ 1 ವರ್ಷಕ್ಕೆ Disney+ Hotstar Mobile ಸಹ ನೀಡುತ್ತದೆ. ಇದಕ್ಕಾಗಿ ನ್ನಿವು ಯಾವುದೇ ಹೆಚ್ಚುವರಿಯ ಹಣ ಖರ್ಚು ಮಾಡಬೇಕಿಲ್ಲ. ಅಲ್ಲದೆ ಈ ಪ್ಲಾನ್ Binge All Night ಪ್ರಯೋಜನವನ್ನು ನೀಡಲಾಗುತ್ತಿದೆ ಅಂದ್ರೆ ನೀವು ಪ್ರತಿದಿನ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಕರೆ ಮತ್ತು ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ.

Vodafone idea Rs. 901 ರೂಗಳ ರಿಚಾರ್ಜ್ ಪ್ಲಾನ್

ಈ ಪಟ್ಟಿಯ ಎರಡನೇ ಯೋಜನೆಯ ಪ್ರಯೋಜನಗಳನ್ನು ನೋಡುವುದಾದರೆ ಇದರಲ್ಲೂ ಸಹ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ದಿನಕ್ಕೆ 100 SMS ಮತ್ತು ಪ್ರತಿದಿನ 3GB ಡೇಟಾ ಲಭ್ಯವಿರುತ್ತದೆ. ಈ ಪ್ಲಾನ್ ಅನ್ನು ಬಳಕೆದಾದರೂ 70 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯುತ್ತಾರೆ ಇದರಲ್ಲಿ ಒಟ್ಟಾರೆಯಾಗಿ 210GB ಡೇಟಾ ಲಭ್ಯವಿರುತ್ತದೆ. ಅಲ್ಲದೆ ಈ ಯೋಜನೆಯಲ್ಲಿ 48GB ಹೆಚ್ಚುವರಿಯ ಡೇಟಾವನ್ನು ಸಹ ಪಡೆಯಬಹುದು.

ಅಷ್ಟೇಯಲ್ಲದೆ ಈ ಯೋಜನೆಯನ್ನು ನೀವು ಪಡೆದರೆ ಉಚಿತವಾಗಿ 1 ವರ್ಷಕ್ಕೆ Disney+ Hotstar Mobile ಸಹ ನೀಡುತ್ತದೆ. ಇದಕ್ಕಾಗಿ ನ್ನಿವು ಯಾವುದೇ ಹೆಚ್ಚುವರಿಯ ಹಣ ಖರ್ಚು ಮಾಡಬೇಕಿಲ್ಲ. ಅಲ್ಲದೆ ಈ ಪ್ಲಾನ್ ಸಹ Binge All Night ಪ್ರಯೋಜನವನ್ನು ನೀಡಲಾಗುತ್ತಿದೆ ಅಂದ್ರೆ ನೀವು ಪ್ರತಿದಿನ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಕರೆ ಮತ್ತು ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo