Vodafone idea ಸದ್ದಿಲ್ಲದೆ 248 ರೂಗಳ ಪ್ಲಾನ್ ಬಿಡುಗಡೆ! ಸಿನಿಮಾ ಮತ್ತು ಟಿವಿ ಷೋ ವೀಕ್ಷಕರಿಗೆ ಸಿಹಿಸುದ್ದಿ!

Updated on 17-Jun-2024
HIGHLIGHTS

Vodafone idea ಕಡಿಮೆ ಬೆಲೆಯ ಹೊಸ ಡೇಟಾ ಆಡ್ ಆನ್ (Data Addon) ಪ್ಲಾನ್ ಅನ್ನು ಪ್ರಾರಂಭಿಸಲಾಗಿದೆ.

ವೊಡಾಫೋನ್ ಐಡಿಯಾ ಉಚಿತವಾಗಿ ಟಾಪ್ OTT ಅಪ್ಲಿಕೇಶನ್ಗಳನ್ನು ಸ್ಟ್ರೀಮಿಂಗ್ ಮಾಡಲು ಸಹ ಅವಕಾಶವಾಗಿದೆ.

ಈ ಯೋಜನೆಯಲ್ಲಿ Disney+ Hotstar ಮತ್ತು ZEE5 ಸೇರಿ 14ಕ್ಕೂ ಅಧಿಕ OTT ಅಪ್ಲಿಕೇಶನ್ ಉಚಿತವಾಗಿದೆ.

ಭಾರತದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿ ವೊಡಾಫೋನ್-ಐಡಿಯಾ (Vodafone idea) ತಮ್ಮ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯಲ್ಲಿ ಹೊಸ ಡೇಟಾ ಆಡ್ ಆನ್ (Data Addon) ಪ್ಲಾನ್ ಅನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು 248 ರೂಗಳಾಗಿದ್ದು ಯೋಜನೆಯಲ್ಲಿ ಬಳಕೆದಾರರಿಗೆ ಕಂಪನಿ ಉಚಿತವಾಗಿ ಟಾಪ್ OTT ಅಪ್ಲಿಕೇಶನ್ಗಳನ್ನು ಸ್ಟ್ರೀಮಿಂಗ್ ಮಾಡಲು ಸಹ ಅವಕಾಶವಾಗಿದೆ. ನೀವು ಹೆಚ್ಹು ಹೆಚ್ಚಾಗಿ ಇಂಟರ್ನೆಟ್ ಮೂಲಕ ಮನರಂಜನೆಯನ್ನು ಬಳಸುವವರರಾಗಿದ್ದರೆ ಹೆಚ್ಚುವರಿ ನಿಮಗೆ Disney+ Hotstar ಮತ್ತು ZEE5 ಸೇರಿ ಹತ್ತಾರು ಅಪ್ಲಿಕೇಶನ್ಗಳನ್ನು ಬಳಸಲು ಬಯಸುವುದಾದರೆ ಈ ಹೆಚ್ಚುವರಿಯ ಡೇಟಾ ಪ್ಲಾನ್ ನಿಮಗೆ ಸೂಕ್ತವಾಗಿದೆ. ಇದರಲ್ಲಿ ನಿಮಗೆ ಕೇವಲ 6GB ಡೇಟಾ ಮಾತ್ರ ಲಭ್ಯವಿರುತ್ತದೆ. ಇದಕ್ಕೆ ಬೇರೆ ಯಾವುದೇ ರೀತಿಯ ಪ್ರಯೋಜನಗಳು ಲಭ್ಯವಿರೋದಿಲ್ಲ ಎನ್ನುವುದನ್ನು ಗಮನಿಸಬೇಕಿದೆ.

Also Read: Motorola Razr 50 series ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆಗೆ ಸಜ್ಜಾಗಿದೆ

Vodafone Idea ರೂ. 248 ಪ್ರಿಪೇಯ್ಡ್ ಯೋಜನೆ:

ವೊಡಾಫೋನ್-ಐಡಿಯಾದಿಂದ (Vodafone idea) ಇತ್ತೀಚಿಗೆ ಬಿಡುಗಡೆಯಾದ ಹೊಸ 248 ರೂಗಳ ಯೋಜನೆಯಲ್ಲಿ ಬಳಕೆದಾರರಾರಿಗೆ Disney+ Hotstar ಮತ್ತು ZEE5 ಸೇರಿ ಬರೋಬ್ಬರಿ 14 OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಇದು ವೊಡ್ಡಾಫೋನ್ ಐಡಿಯಾ Watch Disney + Hotstar, ZEE5, SonyLIV, Fancode, Playflix, Aaj Tak, Manoramax & many more on TV& Mobile, Vi Movies & TV Plus plan ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ. ಈ ಯೋಜನೆಯು ಬಳಕೆದಾರರಿಗೆ 400 ಕ್ಕೂ ಹೆಚ್ಚು ಚಾನಲ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಅಲ್ಲದೆ ಈ ಯೋಜನೆಯನ್ನು ಬಳಕೆದಾರರಿಗೆ 1 ತಿಂಗಳ ಮಾನ್ಯತೆಯನ್ನು ನೀಡಲಾಗುತ್ತದೆ.

Vodafone idea ಸದ್ದಿಲ್ಲದೆ 248 ರೂಗಳ ಪ್ಲಾನ್ ಬಿಡುಗಡೆ! ಸಿನಿಮಾ ಮತ್ತು ಟಿವಿ ಷೋ ವೀಕ್ಷಕರಿಗೆ ಸಿಹಿಸುದ್ದಿ!

ವೊಡಾಫೋನ್ ಐಡಿಯಾ ರೂ. 202 ಪ್ರಿಪೇಯ್ಡ್ ಯೋಜನೆ:

ಈಗ ವೊಡಾಫೋನ್ ಐಡಿಯಾ ಬಳಕೆದಾರರು ಉಚಿತವಾಗಿ Disney+ Hotstar ಮತ್ತು SonyLIV ಸೇರಿ T20 Cricket ಟೂರ್ನಮೆಂಟ್ ಮತ್ತು SonyLIV ಅಪ್ಲಿಕೇಶನ್ಗಳಲ್ಲಿ ಭಾರತ ಟೂರ್ ಆಫ್ ಜಿಂಬಾಬ್ವೆ ಮತ್ತು ಫ್ಯಾನ್ ಕೋಡ್‌ನಲ್ಲಿ ಇಂಡಿಯಾ ಟೂರ್ ಮತ್ತು ಕೊಪಾ ಅಮೇರಿಕಾವನ್ನು ಫ್ಯಾನ್ ಕೋಡ್‌ನಲ್ಲಿ ಆನಂದಿಸಬಹುದು. Vi Movies ಮತ್ತು TV ​​Android/Google TV, Samsung TV, Amazon Firestick TV, Android ಮೊಬೈಲ್, iOS ಮೊಬೈಲ್ ಮತ್ತು ವೆಬ್ ಸೇರಿದಂತೆ ಸಂಪರ್ಕಿತ ಟಿವಿಗಳೊಂದಿಗೆ ಬರುತ್ತದೆ.

ಈಗಾಗಲೇ ಮೇಲೆ ತಿಳಿಸಿರುವಂತೆ ವೊಡಾಫೋನ್ ಐಡಿಯಾದ ಈ ₹202 ರೂಗಳ ಪ್ರಿಪೇಯ್ಡ್ ಯೋಜನೆ ಕೇವಲ 5GB ಡೇಟಾವನ್ನು ಮಾತ್ರ ಸಪೋರ್ಟ್ ಮಾಡುವುದರೊಂದಿಗೆ ಬರುತ್ತದೆ. ಇದರಲ್ಲಿ ಯಾವುದೇ ರೀತಿಯ ಕರೆಗಳು ಮತ್ತು SMS ಜೊತೆಗೆ ಯಾವುದೇ ಅನ್ಯ ವಿಶೇಷ ಪ್ರಯೋಜನಗಳಿಲ್ಲ. ಅಲ್ಲದೆ ಈ ಡೇಟಾ ಪ್ಯಾಕ್ ತನ್ನದೆಯಾದ ಒಂದು ತಿಂಗಳ ವ್ಯಾಲಿಡಿಟಿಯನ್ನು ಸಹ ಹೊಂದಿರುತ್ತದೆ. ಇದೊಂದು ಸರ್ವಿಸ್ ಯೋಜನೆಯಾಗಿದ್ದು ಈಗಾಗಲೇ ನಿಮ್ಮ ಪ್ರೈಮರಿ ಯೋಜನೆಯ ಪ್ರಯೋಜನಗಳು ಬಳಸಬಹುದು ಎನ್ನುವುದನ್ನು ಗಮನದಲ್ಲಿರುವುದು ಮುಖ್ಯವಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :