ವೊಡಾಫೋನ್ ಐಡಿಯಾದ ಈ ಪ್ಲಾನ್ ವ್ಯಾಲಿಡಿಟಿ 28 ದಿನಗಳು! ಆದರೆ 1 ವರ್ಷಕ್ಕೆ ಉಚಿತ Disney+ Hotstar ಚಂದಾದಾರಿಕೆ ಲಭ್ಯ

Updated on 06-Mar-2024
HIGHLIGHTS

ಭಾರತದಲ್ಲಿ ಅತಿ ಹೆಚ್ಚು ಅನುಕೂಲಗಳನ್ನು ನೀಡುವ ವೊಡಾಫೋನ್ ಐಡಿಯಾ (Vi) ಹತ್ತಾರು ಪ್ಲಾನ್ ನೀಡುತ್ತಿದೆ.

ಹೆಚ್ಚು ಅನುಕೂಲಗಳನ್ನು ನೀಡುವ 2 ಅತ್ಯುತ್ತಮ ವೊಡಾಫೋನ್ ಐಡಿಯಾದ (Vi) ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಈ ಕೆಳಗೆ ತಿಳಿಸಲಿದ್ದೇವೆ.

ಬಳಕೆದಾರರು ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ (Disney+ Hotstar Mobile) ಪೂರ್ತಿ 1 ವರ್ಷದ ಚಂದಾದಾರಿಕೆ ಲಭ್ಯ.

Get 1 Year of Free Disney+ Hotstar Subscription: ಭಾರತದಲ್ಲಿ ಅತಿ ಹೆಚ್ಚು ಅನುಕೂಲಗಳನ್ನು ನೀಡುವ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ತಮ್ಮ ಬಳಕೆದಾರರಿಗೆ ಹತ್ತಾರು ಯೋಜನೆಗಳನ್ನು ನೀಡುತ್ತಿದೆ. ಆದರೆ ಕೆಲವರಿಗೆ ನೀವು ನೀಡುವ ಹಣಕ್ಕಿಂತ ಅಧಿಕವಾದ ಪ್ರಯೋಜನಗಳನ್ನು ನೀಡುವ ಪ್ರಿಪೇಯ್ಡ್ ಯೋಜನಗಳ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರೋಲ್ಲ. ಏಕೆಂದರೆ ಸಾಮಾನ್ಯವಾಗಿ ಪ್ರಿಪೇಯ್ಡ್ ಬಳಕೆದಾರರು ಮಾಸಿಕ ರಿಚಾರ್ಜ್ ಮಾಡಿ ಬಳಸುವುದು ಹೆಚ್ಚು. ಆದರೆ ಹೆಚ್ಚು ಅನುಕೂಲಗಳನ್ನು ನೀಡುವ 2 ಅತ್ಯುತ್ತಮ ವೊಡಾಫೋನ್ ಐಡಿಯಾದ (Vi) ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಈ ಕೆಳಗೆ ತಿಳಿಸಲಿದ್ದೇವೆ.

Also Read: Facebook ಮತ್ತು Instagram ಇದ್ದಕ್ಕಿದ್ದಂತೆ ಸ್ಥಗಿತ! 80 ಕೋಟಿ ಭಾರತೀಯರ ಖಾತೆಗಳು ಅರಿವಿಲ್ಲದೆ ಲಾಗ್ ಔಟ್!

ವೊಡಾಫೋನ್ ಐಡಿಯಾದ Disney+ Hotstar ಯೋಜನೆ

ನಿಮಗೆ ಈ ಯೋಜನೆಗಳು ಅತಿ ಕಡಿಮೆ ಪ್ಲಾನ್ ವ್ಯಾಲಿಡಿಟಿ ನೀಡಿದರು ಒಮ್ಮೆ ರಿಚಾರ್ಜ್ ಮಾಡಿಕೊಂಡರೆ ಪೂರ್ತಿ 1 ವರ್ಷದ ಚಂದದಾರಿಕೆಯನ್ನು ಅಂದ್ರೆ ನೀವು ರಿಚಾರ್ಜ್ ಮಾಡಿದ ದಿನದಿಂದ ಆರಂಭವಾಗಿ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ (Disney+ Hotstar Mobile) ಮತ್ತು Vi ಚಲನಚಿತ್ರಗಳು ಮತ್ತು ಟಿವಿಗಳಿಗೆ ಉಚಿತ ಪ್ರವೇಶವನ್ನು ಪಡೆಯುವಿರಿ. ವೊಡಾಫೋನ್ ಐಡಿಯಾ ಬಳಕೆದಾರರೇ ನೀವು ಸಹ ಮಾಸಿಕ ಯೋಜನಗೆಳನ್ನು ರಿಚಾರ್ಜ್ ಮಾಡಿಕೊಳ್ಳುತ್ತಿದ್ದರೆ ಒಮ್ಮೆ ಈ ಯೋಜನೆಗಳನೊಮ್ಮೆ ಪರಿಶೀಲಸಿ.

ವೊಡಾಫೋನ್ ಐಡಿಯಾದ (Vi) ರೂ 601 ಪ್ರಿಪೇಯ್ಡ್ ಯೋಜನೆ

ಈ ಅತ್ಯುತ್ತಮ ವೊಡಾಫೋನ್ ಐಡಿಯಾದ (Vi) ರೂ 601 ಪ್ರಿಪೇಯ್ಡ್ ಯೋಜನೆಯಲ್ಲಿ ಆಸಕ್ತ ಗ್ರಾಹಕರಿಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ದಿನಕ್ಕೆ 3GB ಇಂಟರ್ನೆಟ್ ಡೇಟಾ ಮತ್ತು ದಿನಕ್ಕೆ 100 SMS ಪಡೆಯುವಿರಿ. ಇವೆಲ್ಲ ಪ್ರಯೋಜನಗಳನ್ನು ನೀವು 28 ದಿನಗಳ ಮಾನ್ಯತೆಯೊಂದಿಗೆ ಪಡೆಯುತ್ತಾರೆ. ವೊಡಾಫೋನ್ ಐಡಿಯಾದ (Vi) ಪ್ರಿಪೇಯ್ಡ್ ಯೋಜನೆಯು ಬಿಂಜ್ ಆಲ್ ನೈಟ್ ಮತ್ತು ವೀಕೆಂಡ್ ಡೇಟಾ ರೋಲ್‌ಓವರ್ ನಂತಹ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಪ್ರಯೋಜನಗಳು ಮೂಲಭೂತವಾಗಿ ಹೆಚ್ಚುವರಿ ಇಂಟರ್ನೆಟ್ ಡೇಟಾವನ್ನು ನೀಡುತ್ತವೆ. ಬಳಕೆದಾರರು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ (Disney+ Hotstar Mobile) ಪೂರ್ತಿ 1 ವರ್ಷದ ಚಂದಾದಾರಿಕೆ ನೀವು ರಿಚಾರ್ಜ್ ಮಾಡಿದ ದಿನದಿಂದ ಆರಂಭವಾಗಿ Vi ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ಪಡೆಯುವಿರಿ.

ವೊಡಾಫೋನ್ ಐಡಿಯಾದ (Vi) ರೂ 901 ಪ್ರಿಪೇಯ್ಡ್ ಯೋಜನೆ

ಈ ಸಮಯದಲ್ಲಿ ಕೇವಲ ಎರಡು Vi ಪ್ರಿಪೇಯ್ಡ್ ಯೋಜನೆಗಳು ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತಿವೆ. ಈ ವೊಡಾಫೋನ್ ಐಡಿಯಾದ (Vi) ರೂ 901 ಯೋಜನೆಯೊಂದಿಗೆ ಬಳಕೆದಾರರು ಉಚಿತ ವಾಯ್ಸ್ ಕರೆಗಳೊಂದಿಗೆ ದಿನಕ್ಕೆ 3GB ಇಂಟರ್ನೆಟ್ ಡೇಟಾ, ದಿನಕ್ಕೆ 100 SMS ಮತ್ತು 70 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಪ್ರಯೋಜನಗಳಲ್ಲಿ ಬಿಂಜ್ ಆಲ್ ನೈಟ್ ವಾರ್ಷಿಕ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ (Disney+ Hotstar Mobile) ಸದಸ್ಯತ್ವ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ಒಳಗೊಂಡಿರುತ್ತದೆ. ಬಳಕೆದಾರರು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ 1 ವರ್ಷದ ಚಂದಾದಾರಿಕೆ ನೀವು ರಿಚಾರ್ಜ್ ಮಾಡಿದ ದಿನದಿಂದ ಆರಂಭವಾಗಿ Vi ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ಪಡೆಯುವಿರಿ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :