ಭಾರತದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ (Vodafone Idea) ತಮ್ಮ ಬಳಕೆದಾರರಿಗೆ ಪ್ರತಿ ಭಾರಿ ಒಂದಲ್ಲ ಒಂದು ವಿಶೇಷ ಪ್ರಯೋಜನ ಮತ್ತು ಅನುಕೂಲಗಳನ್ನು ನೀಡುತ್ತಾ ಬಂದಿದೆ. ಇದರೊಂದಿಗೆ ಈಗ ವೊಡಾಫೋನ್ ಐಡಿಯಾ (Vi) 599 ರೂಗಳ ಉತ್ತಮ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಇದರಲ್ಲಿ ಬಳಕೆದಾರರು ಬರೋಬ್ಬರಿ 70 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಯಾರಿಗೆ ಸುಮಾರು ಎರಡು ತಿಂಗಳ ಮಾನ್ಯತೆಯೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾದೊಂದಿಗೆ SMS ನೀಡುವ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಬೇಕಿದ್ದರೆ ಈ ವೊಡಾಫೋನ್ ಐಡಿಯಾ (Vi) 599 ರೂಗಳ ಪ್ರಿಪೇಯ್ಡ್ ರಿಚಾರ್ಜ್ ನಿಮಗೆ ಉತ್ತಮವಾದ ಆಯ್ಕೆಯಾಗಿದೆ. ೩
ಪ್ರಸ್ತುತ ವೊಡಾಫೋನ್ ಐಡಿಯಾ ದೇಶದಲ್ಲಿ ತಮ್ಮ 5G ನೆಟ್ವರ್ಕ್ ಇನ್ನೂ ನೀಡಿಲ್ಲದ ಕೆಲ ಬಳಕೆದಾರರಿಗೆ ಇದರ ಒಂದಿಷ್ಟು ಬೇಸರ ಇದ್ದೆ ಇರುತ್ತದೆ. ಆದರೆ ಸಾಮಾನ್ಯವಾಗಿ ಈಗ ದೇಶದ ಪ್ರತಿ ಮೂಲೆಯಲ್ಲಿ ನಿಮಗೆ ವೊಡಾಫೋನ್ ಐಡಿಯಾದ 4G ಸೇವೆಗಳನ್ನು ಅನುಭವಿಸಲು ಲಭ್ಯವಿರುತ್ತದೆ. ಆಸಕ್ತರು ವೊಡಾಫೋನ್ ಐಡಿಯಾ ನಂಬರ್ ಅನ್ನು ಸುಲಭವಾಗಿ ರೀಚಾರ್ಜ್ ಮಾಡಲು ವೊಡಾಫೋನ್ ಅಪ್ಲಿಕೇಶನ್ ಅಥವಾ ಆನ್ಲೈನ್ ಮೂಲಕ ವಿವಿಧ ಪಾವತಿ ವಿಧಾನಗಳ ಮೂಲಕ ಸುರಕ್ಷಿತ ವಹಿವಾಟುಗಳನ್ನು ಮಾಡಬಹುದು.
ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ತಮ್ಮ ಬಳಕೆದಾರರಿಗೆ ಉತ್ತಮವಾದ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದ್ದಾರೆ. ಇದರಲ್ಲಿ ಈಗಾಗಲೇ ಮೇಲೆ ತಿಳಿಸಿರುವಂತೆ 70 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು 4G ವೇಗದ ಡೇಟಾವನ್ನು ಅಂದ್ರೆ ಈ ಯೋಜನೆಯಲ್ಲಿ ನಿಮಗೆ ಪ್ರತಿದಿನ 1.5GB ಡೇಟಾ ಲಭ್ಯವಿರುತ್ತದೆ ಈ ಡೇಟಾ ಮುಗಿದ ನಂತರ ವೇಗ 64kbps ಕಡಿಮೆಯಾಗಿ ಅನ್ಲಿಮಿಟೆಡ್ ಬಳಕೆಗೆ ದಾರಿ ಮಾಡಿಕೊಡುತ್ತದೆ. ಒಟ್ಟಾರೆಯ ವ್ಯಾಲಿಡಿಟಿಯವರೆಗೆ 105GB ಡೇಟಾವನ್ನು ಪಡೆಯುವಿರಿ. ಇದರೊಂದಿಗೆ ಪ್ರತಿದಿನ 100 ಉಚಿತ SMS ಸಹ ನೀಡಲಾಗುತ್ತದೆ.
Also Read: Cinematic ಕ್ಯಾಮೆರಾಗಳೊಂದಿಗೆ Xiaomi 14 Civi ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಫೀಚರ್‌ಗಳೇನು?
ವೊಡಾಫೋನ್ ಐಡಿಯಾ (Vi) ನೀಡುತ್ತಿರುವ ಈ ಯೋಜನೆಯಲ್ಲಿ ಹೆಚ್ಚುರಿಯ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ ಮಧ್ಯರಾತ್ರಿ 12am ರಿಂದ ಬೆಳಿಗ್ಗೆ 6am ವರೆಗೆ ಅನಿಯಮಿತ ನೈಟ್ ಡೇಟಾವನ್ನು ಆನಂದಿಸಲು ಅವಕಾಶ ನೀಡುತ್ತದೆ. ಬಳಕೆದಾರರು ಸೋಮವಾರದಿಂದ ಶುಕ್ರವಾರದವರೆಗೆ ಬಳಕೆಯಾಗದ ಡೇಟಾವನ್ನು ಫಾರ್ವರ್ಡ್ ಮಾಡಿ ಶನಿವಾರ ಮತ್ತು ಭಾನುವಾರದವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮಾಸಿಕ 2GB ಬೋನಸ್ ಡೇಟಾವನ್ನು ಸ್ವೀಕರಿಸಿ ಬಳಸಬಹುದು. ಅಲ್ಲದೆ ಈ ರಿಚಾರ್ಜ್ ಮಾಡುವ ಬಳಕೆದಾರರಿಗೆ Vi Movies ಮತ್ತು ಟಿವಿಯನ್ನು ವೀಕ್ಷಿಸುವ ಪ್ರವೇಶವನ್ನು ಸಹ ಹೊಂದಿದೆ.