ಭಾರತದ ಟೆಲಿಕಾಂ ಕಂಪನಿಗಳಲ್ಲಿ ಒಂದಾದ Vodafone Idea (Vi) ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಇದು ಕಡಿಮೆ ಬೆಲೆಯ ಆದರೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈಗ ಕಂಪನಿಯು ರೂ 202 ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ 13 OTT ಉಚಿತ ಚಂದಾದಾರಿಕೆಗಳೊಂದಿಗೆ ಇತರ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಈ ವೊಡಾಫೋನ್ ಐಡಿಯಾದ ಯೋಜನೆಯು ಕೇವಲ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದೆ ಎನ್ನುವುದನ್ನು ಬಳಕೆದಾರರು ಗಮನಿಸಬೇಕಿದೆ.
Also Read: iPhone ಬ್ಯಾಟರಿಯನ್ನು ಉಳಿಸುವುದು ಹೇಗೆ? ಆಪಲ್‌ನ ಮಾಜಿ ಉದ್ಯೋಗಿ ತೆರೆದಿಟ್ಟ ರಹಸ್ಯ ಇಲ್ಲಿದೆ ನೋಡಿ
ಈ ಪ್ಲಾನ್ Vi ಅಧಿಕೃತ ವೆಬ್‌ಸೈಟ್‌ನಲ್ಲಿ ಕಂಡುಬಂದಿಲ್ಲ. ಇದನ್ನು ನೀವು ಕೇವಲ ವೊಡಾಫೋನ್ ಐಡಿಯಾ (Vi) ಅಪ್ಲಿಕೇಶನ್‌ನಲ್ಲಿ ಮಾತ್ರ ಈ ರೂ 202 ಪ್ಲಾನ್ ಮತ್ತು ಇದರ ಪ್ರಯೋಜನಗಳನ್ನು ಕಾಣಲು ಸಾಧ್ಯವಿದೆ. ವೊಡಾಫೋನ್ ಐಡಿಯಾದ (Vi) ರೂ 202 ರ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯದಿಂದ ಹೆಚ್ಚಾಗಿ ಮನರಂಜನೆಯನ್ನು ಹುಡುಕುತ್ತಿರುವವರಿಗಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಈ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಮತ್ತು ಬಹು ಸ್ಟ್ರೀಮಿಂಗ್ ಸೇವೆಗಳಿಗೆ ಪ್ರವೇಶವನ್ನು ಒಳಗೊಂಡಿರುತ್ತದೆ. ಹೊಸ ಯೋಜನೆಯ ಪ್ರಮುಖ ವಿಷಯವೆಂದರೆ ಅದು ಅಸ್ತಿತ್ವದಲ್ಲಿರುವ ಯೋಜನೆಯ ಮುಕ್ತಾಯದೊಂದಿಗೆ ಕೊನೆಗೊಳ್ಳುತ್ತದೆ.
ವೊಡಾಫೋನ್ ಐಡಿಯಾದ (Vi) ಯೋಜನೆಯ ಪ್ರಯೋಜನಗಳನ್ನು ನೋಡುವುದಾದರೆ ಈ ಹೊಸ ಪ್ಲಾನ್ ನಿಮಗೆ ಕೈಗೆಟಕುವ ಬೆಲೆಗೆ+ 13 ವಿವಿಧ OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ಸಹ ನೀಡುತ್ತಿದೆ. ಇದರ ಮತ್ತೊಂದು ಒಳ್ಳೆ ವಿಷಯವೆಂದರೆ ಇದರಲ್ಲಿ ಗ್ರಾಹಕರು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತಾರೆ. ಈ ಯೋಜನೆಯಲ್ಲಿನ ಪ್ರಮುಖ OTT ಅಪ್ಲಿಕೇಶನ್ಗಳೆಂದರೆ Vi Movies & TV Pro, Disney+ Hotstar, SonyLIV, SunNXT, Yupp TV, Shemaroo Me, Hungama ಮತ್ತು Discovery ಸೇರಿದಂತೆ 30 ದಿನಗಳವರೆಗೆ ಹಲವು ಯೋಜನೆಗಳನ್ನು ಹೊಂದಿದೆ.
ಈ ಯೋಜನೆಯು Vi ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಂಡಿದೆ ಆದರೆ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ ಆದರೆ ಇದನ್ನು ಶೀಘ್ರದಲ್ಲೇ ವೆಬ್‌ಸೈಟ್‌ಗೆ ಸೇರಿಸುವ ನಿರೀಕ್ಷೆಯಿದೆ. TRAI ಸೆಪ್ಟೆಂಬರ್ ವರದಿಯ ಪ್ರಕಾರ Jio ಜುಲೈನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದಿದೆ ನಂತರ Airtel ಆಗಿದೆ. ಆದರೆ Vi ಮತ್ತು BSNL ಹಲವು ಸವಾಲುಗಳನ್ನು ಎದುರಿಸಿವೆ ಮತ್ತು ಗ್ರಾಹಕರನ್ನು ಕಳೆದುಕೊಂಡಿವೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ