ಭಾರತದ ಜನಪ್ರಿಯ ಮೂರನೇ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ಈಗ ಹೊಸ ವರ್ಷದಲ್ಲಿ ತಮ್ಮ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ನೀಡದಿದ್ದರೂ ಅತ್ಯುತ್ತಮ ಪ್ರಯೋಜನಗಳನ್ನು ನೀಡುವ ಯೋಜನೆಗಳನ್ನು ಹೊಂದಿದೆ. ವೊಡಾಫೋನ್ ಐಡಿಯಾ ನೀಡುತ್ತಿರುವ 1066 ರೂಗಳ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಯೋಜನೆಯ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ ಈ ಯೋಜನೆಯ ವ್ಯಾಲಿಡಿಟಿ ಕೇವಲ 84 ದಿನಗಳಾಗಿವೆ. ಆದರೆ ಇದರಲ್ಲಿ ನಿಮಗೆ ಪೂರ್ತಿ 1 ವರ್ಷದವರೆಗೆ ಉಚಿತ Disney+ Hotstar ಜೊತೆಗೆ Binge All Night ಪ್ರಯೋಜನವನ್ನು ಪಡೆಯುತ್ತಾರೆ.
Also Read: PVC Aadhaar: ಕೇವಲ 50 ರೂಗಳಿಗೆ ಸಿಗುತ್ತೆ ಈ ಸ್ಮಾರ್ಟ್ ಪಿವಿಸಿ ಆಧಾರ್! ಪಡೆಯೋದು ಹೇಗೆ?
ನೀವು ಮಾಸಿಕವಾಗಿ ರಿಚಾರ್ಜ್ ಮಾಡಿಕೊಳ್ಳುವಂತೆ ಈ ರಿಚಾರ್ಜ್ ಅನ್ನು ಸಹ ಮಾಡಿಕೊಂಡರೆ ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ನೀವು ಈಗಾಗಲೇ ಮೇಲೆ ತಿಳಿಸಿರುವಂತೆ ಪೂರ್ತಿ 1 ವರ್ಷದವರೆಗೆ ಉಚಿತ Disney+ Hotstar ಕೇವಲ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ. ಇದರಲ್ಲಿ ನೀವು ಪ್ರತ್ಯೇಕ ಟಿವಿ ಶೋಗಳು, ಧಾರಾವಾಹಿಗಳು, ಲೈವ್ ಸ್ಪೋರ್ಟ್ಸ್ ಮತ್ತು ಲೇಟೆಸ್ಟ್ ಸಿನಿಮಾಗಳನ್ನು ವೀಕ್ಷಿಸಬಹುದು. ಈ ಸೇವೆಯನ್ನು ಪಡೆದ ನಂತರ ಇದನ್ನು ಬೇರೆ ಫೋನ್ಗಳಿಗೆ ವರ್ಗಾಯಿಸಲು ಅಥವಾ ಪಾಸ್ವರ್ಡ್ ಅನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.
ಈ ವೊಡಾಫೋನ್ ಐಡಿಯಾದ ರೂ 1066 ರೀಚಾರ್ಜ್ ಯೋಜನೆಯು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರು ಪ್ರತಿ ತಿಂಗಳು 2GB ದೈನಂದಿನ ಡೇಟಾ ಮತ್ತು 2GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ. ಗ್ರಾಹಕರು ಸಂಪೂರ್ಣ ಯೋಜನೆಯಲ್ಲಿ ಒಟ್ಟು 174GB ಡೇಟಾವನ್ನು ಪಡೆಯುತ್ತಾರೆ. FUP ಮಿತಿಯನ್ನು ಪೂರ್ಣಗೊಳಿಸಿದ ನಂತರ ಬಳಕೆದಾರರು 128Kbps ವೇಗದಲ್ಲಿ ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ ಬಳಕೆದಾರರು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಗಳ ಪ್ರಯೋಜನವನ್ನು ಪಡೆಯುತ್ತಾರೆ.
ವೊಡಾಫೋನ್ ಐಡಿಯಾದ ಗ್ರಾಹಕರಿಗೆ ಇದರಲ್ಲಿ Binge All Night ಪ್ರಯೋಜನವನ್ನು ಪಡೆಯುತ್ತಾರೆ. ಇದರಲ್ಲಿ ಬಳಕೆದಾರರು ಮಧ್ಯರಾತ್ರಿ 12am ರಿಂದ ಬೆಳಿಗ್ಗೆ 6am ರವರೆಗೆ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ ಬಳಕೆದಾರರಿಗೆ ಪ್ರತಿ ತಿಂಗಳು 2GB ಡೇಟಾವನ್ನು ಬ್ಯಾಕಪ್ ನೀಡಲಾಗುತ್ತಿದೆ. ಇದಕ್ಕಾಗಿ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. Vi ನ ಹೊಸ ರೀಚಾರ್ಜ್ ಯೋಜನೆಯು Vi Hero ಅನ್ಲಿಮಿಟೆಡ್ ಕೊಡುಗೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ವಾರಾಂತ್ಯದ ಡೇಟಾ ರೋಲ್‌ಓವರ್ ಪಡೆಯುತ್ತಾರೆ ಅಂದ್ರೆ ಬಳಕೆದಾರರು ವಾರಾಂತ್ಯದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಉಳಿದ ಡೇಟಾವನ್ನು ಬಳಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ