Vi Annual SuperHero Plans: ವೊಡಾಫೋನ್ ಐಡಿಯಾದ ಸೂಪರ್ ಹೀರೊ ಪ್ಲಾನ್ ಪರಿಚಯ! ಬೆಲೆ ಮತ್ತು ಪ್ರಯೋಜನಗಳೇನು?

Vi Annual SuperHero Plans: ವೊಡಾಫೋನ್ ಐಡಿಯಾದ ಸೂಪರ್ ಹೀರೊ ಪ್ಲಾನ್ ಪರಿಚಯ! ಬೆಲೆ ಮತ್ತು ಪ್ರಯೋಜನಗಳೇನು?
HIGHLIGHTS

ವೊಡಾಫೋನ್ ಐಡಿಯಾ (Vi) ಹೊಸ ವಾರ್ಷಿಕ ಸೂಪರ್‌ಹೀರೊ (Vi Annual SuperHero Plans) ಯೋಜನೆ ಪರಿಚಯ.

ವೊಡಾಫೋನ್ ಐಡಿಯಾ ಇದರಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಡೇಟಾಗೆ ಅನಿಯಮಿತ ಪ್ರವೇಶ ನೀಡುತ್ತದೆ.

ವೊಡಾಫೋನ್ ಐಡಿಯಾ ಸೂಪರ್‌ಹೀರೊ (Vi SuperHero) ಅಡಿಯಲ್ಲಿ 3 ಹೊಸ ವಾರ್ಷಿಕ ರೀಚಾರ್ಜ್ ಆಯ್ಕೆಗಳನ್ನು ಹೊಂದಿದೆ.

Vi Annual SuperHero Plans: ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ (Vi) ಇತ್ತೀಚೆಗೆ ತನ್ನ ಹೊಸ ವಾರ್ಷಿಕ ಸೂಪರ್‌ಹೀರೊ (Vi Annual SuperHero Plans) ಯೋಜನೆಗಳನ್ನು ಹೊಸ ವರ್ಷಕ್ಕಾಗಿ ಆರಂಭಿಸಿದೆ. ಅದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಡೇಟಾಗೆ ಅನಿಯಮಿತ ಪ್ರವೇಶ ನೀಡುತ್ತದೆ. ಹೆಚ್ಚಿನ ವೇಗದ ಡೇಟಾ ಬಳಕೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನ ವಿನ್ಯಾಸಗೊಳಿಸಲಾಗಿದೆ.

ಹೊಸ ಸೂಪರ್‌ಹೀರೊ (Vi Annual SuperHero Plans) ಯೋಜನೆಗಳು

ವಾರ್ಷಿಕ ಪ್ಯಾಕ್‌ಗಳು ಅಥವಾ ಹಣದ ಆಫರ್‌ಗಳಿಗಾಗಿ ನೋಡುತ್ತಿರುವ ಗ್ರಾಹಕರಿಗೆ ಡೀಲ್ ಅನ್ನು ಇನ್ನಷ್ಟು ಸಿಹಿಗೊಳಿಸಲು ವೊಡಾಫೋನ್ ಐಡಿಯಾ ಹೊಸ ಸೂಪರ್‌ಹೀರೊ (Vi SuperHero) ಯೋಜನೆಗಳ ಅಡಿಯಲ್ಲಿ 3 ಹೊಸ ಮತ್ತು ಅತ್ಯುತ್ತಮ ಮೌಲ್ಯದ ವಾರ್ಷಿಕ ರೀಚಾರ್ಜ್ ಆಯ್ಕೆಗಳನ್ನು ಹೊಂದಿದೆ. ಇದು ಮಾಸಿಕ ಯೋಜನೆಗಳಿಗೆ ಹೋಲಿಸಿದರೆ 25%ವರೆಗೆ ಉಳಿತಾಯ ನೀಡುತ್ತದೆ. ಅಲ್ಲದೆ ವರ್ಷದುದ್ದಕ್ಕೂ ಮನರಂಜನೆ ಮತ್ತು ತಡೆರಹಿತ ಮೊಬೈಲ್ ಡೇಟಾ ಅವಶ್ಯಕತೆಗಳನ್ನು ಪೂರೈಸುತ್ತದೆ.

Vi Annual SuperHero Plans 2025
Vi Annual SuperHero Plans 2025

ವೊಡಾಫೋನ್ ಐಡಿಯಾ ಹೊಸ ಸೂಪರ್‌ಹೀರೊ (Vi SuperHero) ವಾರ್ಷಿಕ ರೀಚಾರ್ಜ್ ಯೋಜನೆಗಳು ದಿನದ ಉಳಿದ 12 ತಾಸುಗಳ ಕಾಲ 2GB ದೈನಂದಿನ ಡೇಟಾ ಕೋಟಾದ ಜೊತೆಗೆ ಮಧ್ಯಾಹ್ನ 12ರಿಂದ ರಾತ್ರಿ 12 ತನಕ ಅರ್ಧ ದಿನದ ಅನಿಯಮಿತ ಡೇಟಾ ನೀಡುತ್ತವೆ. ಅಷ್ಟೇ ಅಲ್ಲದೆ ವೊಡಾಫೋನ್ ಐಡಿಯಾ ಹೊಸ ಸೂಪರ್‌ಹೀರೊ (Vi SuperHero) ಪ್ಯಾಕ್‌ಗಳು ವಾರಾಂತ್ಯದ ಡೇಟಾ ರೋಲ್‌ಓವರ್ ಅನ್ನು ಸಹ ನೀಡುತ್ತವೆ.

Also Read: Investment Scheme 2025: ನಕಲಿ ಹೂಡಿಕೆಯಲ್ಲಿ ಕೋಟ್ಯಾಂತರ ಹಣ ಕಳೆದುಕೊಂಡ ನಟಿ! ವಂಚನೆಯ ಅಸಲಿ ಕಹಾನಿ ಏನು?

ವೊಡಾಫೋನ್ ಐಡಿಯಾದ ವಾರ್ಷಿಕ ರೀಚಾರ್ಜ್ ಯೋಜನೆಗಳು:

ಇದು ಬಳಕೆದಾರರಿಗೆ ಬಳಕೆಯಾಗದ ವಾರದ ದಿನದ ಡೇಟಾವನ್ನು ಮುಂದಕ್ಕೆ ಬಳಸಲು ಮತ್ತು ವಾರಾಂತ್ಯದಲ್ಲಿ ಅದನ್ನು ಬಳಸಲು ಅವಕಾಶ ನೀಡುತ್ತದೆ. ಇದರ ಜತೆಗೆ ಈ ಯೋಜನೆಗಳು ಡೇಟಾ ಡಿಲೈಟ್ ವೈಶಿಷ್ಟ್ಯದೊಂದಿಗೆ ತುರ್ತು ಡೇಟಾ ಟಾಪ್-ಅಪ್ ಅನ್ನು ಸಹ ನೀಡುತ್ತವೆ. ಇದು ತಿಂಗಳಿಗೆ 2 ಬಾರಿ ಬೇಷರತ್ತಾದ ಹೆಚ್ಚುವರಿ 1GB ಡೇಟಾವನ್ನು ಒದಗಿಸುತ್ತದೆ. ಈ ಎಲ್ಲದರ ಜೊತೆಗೆ ವಾರ್ಷಿಕ ಸೂಪರ್ ಹೀರೊ ಪ್ಯಾಕ್‌ಗಳನ್ನು ಸರಿಸಾಟಿಯಿಲ್ಲದ ಮೌಲ್ಯ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

Vi Annual SuperHero Plans 2025
Vi Annual SuperHero Plans 2025

ಈ ಪ್ರಯೋಜನಗಳ ಜೊತೆಗೆ ಬಳಕೆದಾರರು ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ಲೈಟ್‌ನಂತಹ ಒಟಿಟಿ ಚಂದಾದಾರಿಕೆಗಳನ್ನು ವರ್ಷಪೂರ್ತಿ ಆನಂದಿಸಬಹುದು. ದಿನಕ್ಕೆ 10 ರೂ.ಗಿಂತ ಕಡಿಮೆ ವೆಚ್ಚದ ವೊಡಾಫೋನ್ ಐಡಿಯಾ ವಾರ್ಷಿಕ ಸೂಪರ್‌ಹೀರೊ ಪ್ಯಾಕ್‌ಗಳು ಮಾಸಿಕ ರೀಚಾರ್ಜ್‌ಗಳಿಗೆ ಹೋಲಿಸಿದರೆ ಸುಮಾರು 1,100 ರೂ.ಗಿಂತ ಹೆಚ್ಚಿನ 25% ಉಳಿತಾಯ ನೀಡುತ್ತದೆ. ಒಂದೇ ರೀಚಾರ್ಜ್‌ನ ಅನುಕೂಲದೊಂದಿಗೆ ತಮ್ಮ ಹಣಕ್ಕೆ ಉತ್ತಮ ಮೌಲ್ಯ ಬಯಸುವ ಗ್ರಾಹಕರಿಗೆ ಅದು ಉತ್ತಮ ಆಯ್ಕೆಯಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo