ಭಾರತದಲ್ಲಿ ನಾಳೆ ಅಂದ್ರೆ ಅಕ್ಟೋಬರ್ ತಿಂಗಳಿಂದ ಅಂದ್ರೆ 1ನೇ ಅಕ್ಟೋಬರ್‌ನಿಂದ SIM Card ಈ ಹೊಸ ನಿಯಮ ಜಾರಿಯಾಗಲಿದೆ.
ಎಲ್ಲ ಟೆಲಿಕಾಂಗಳಿಗೆ ಅನ್ವಯವಾಗಲಿದ್ದು ಮುಖ್ಯವಾಗಿ Jio, Airtel, Vi ಮತ್ತು BSNL ಟೆಲಿಕಾಂ ಕಂಪನಿಗಳಿಗೆ ಅನ್ವಯವಾಗಲಿದೆ.
ಯಾವ ಪ್ರದೇಶಗಳಲ್ಲಿ Network ಲಭ್ಯವಿದೆ ಎಂಬ ಮಹಿತಿಯೊಂದಿಗೆ Spam ಕರೆಗಳನ್ನು ತಡೆಯಬೇಕೆಂಬ ಹೊಸ ನಿಯಮ ಜಾರಿ.
ಭಾರತದಲ್ಲಿ ನಾಳೆ ಅಂದ್ರೆ ಅಕ್ಟೋಬರ್ ತಿಂಗಳಿಂದ ಅಂದ್ರೆ 1ನೇ ಅಕ್ಟೋಬರ್‌ನಿಂದ SIM Card ಈ ಹೊಸ ನಿಯಮ ಜಾರಿಯಾಗಲಿದೆ. ಈ ನಿಯಮವನ್ನು ಭಾರತ ಎಲ್ಲ ಟೆಲಿಕಾಂಗಳಿಗೆ ಅನ್ವಯವಾಗಲಿದ್ದು ಮುಖ್ಯವಾಗಿ Jio, Airtel, Vi ಮತ್ತು BSNL ಟೆಲಿಕಾಂ ಕಂಪನಿಗಳಿಗೆ ಅನ್ವಯವಾಗಲಿದೆ. ಇದರ ಬಗ್ಗೆ ಸ್ಪಷ್ಟತೆಯನ್ನು ನೀಡಿರುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ TRAI ಹೊಸ ನಿಯಮವನ್ನು ಜಾರಿಗೊಳಿಸಿದೆ. ಏನಪ್ಪಾ ಹೊಸ ನಿಯಮ ಅಂದ್ರೆ ಟೆಲಿಕಾಂ ಕಂಪನಿಗಳು ತಮ್ಮ ನೆಟ್‌ವರ್ಕ್ ಯಾವ ಯಾವ ಪ್ರದೇಶಗಳಲ್ಲಿ ಲಭ್ಯವಿದೆ ಎನ್ನುವ ಮಾಹಿತಿಯನ್ನು ನೀಡುವುದರೊಂದಿಗೆ ಬಳಕೆದಾರರಿಗೆ ಬರುವ Spam ಕರೆಗಳನ್ನು ಸಹ ತಡೆಯಬೇಕೆಂಬ ಹೊಸ ನಿಯಮ ಜಾರಿಗೊಳಿಸಿದೆ.
Also Read: Amazon GIF ಸೇಲ್‌ನಲ್ಲಿ Samsung Galaxy S24 FE ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 6000 ರೂಗಳ ಭಾರಿ ಡಿಸ್ಕೌಂಟ್!
1ನೇ ಅಕ್ಟೋಬರ್‌ನಿಂದ SIM Card ಈ ಹೊಸ ನಿಯಮ ಜಾರಿ!
ಭಾರತದಲ್ಲಿ ಸಿಮ್ ಕಾರ್ಡ್ ಬಳಸುವ ಪ್ರತಿಯೊಬ್ಬ ಬಳಕೆದಾರರ ಅನುಕೂಲತೆ ಮತ್ತು ಸೌಕರ್ಯದೊಂದಿಗೆ ಹೆಚ್ಚಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು TRAI ಒಂದಲ್ಲ ಒಂದು ಹೊಸ SIM Card ನಿಯಮಗಳನ್ನು ಪರಿಚಯಿಸುತ್ತಿರುತ್ತದೆ. ಈಗ ಇದರ ಭಾಗವಾಗಿ TRAI ಮತ್ತೊಂದು ಹೊಸ ನಿಬಂಧನೆಯನ್ನು ತಂದಿದ್ದು ಈ ನಿಯಮ ಜಾರಿಗೆ ಬಂದ ನಂತರ ನಿಮ್ಮ ಟೆಲಿಕಾಂ ಕಂಪನಿಗಳು ಅವರ ನೆಟ್ವರ್ಕ್ ಯಾವ ಯಾವ ಪ್ರದೇಶದಲ್ಲಿ ಲಭ್ಯವಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಹೇಳಿದೆ.
ಮತ್ತೊಂದು ವಿಶೇಷ ನಿಯಮವೆಂದರೆ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಎಲ್ಲಾ ನೆಟ್‌ವರ್ಕ್ ಬಳಕೆದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿರುವ Spam ಕರೆಗಳನ್ನು ಕಡ್ಡಾಯವಾಗಿ ತಡೆಯಬೇಕೆಂದು ಟೆಲಿಕಾಂ ಕಂಪನಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಹೊಸ ನಿಯಮವನ್ನು ಸಹ TRAI ಜಾರಿಗೊಳಿಸಿದೆ.
ಈ ಹೊಸ ನಿಯಮದಿಂದ ನಮಗೇನು ಪ್ರಯೋಜನ!
ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರೊಂದಿಗೆ ಅನೇಕ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ. ಹೊಸ ನಿಯಮಗಳ ಪರಿಣಾಮದೊಂದಿಗೆ ಎಲ್ಲಾ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಗ್ರಾಹಕರಿಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕಗೊಳಿಸುವುದು ಈಗ ಕಡ್ಡಾಯವಾಗಿದೆ. ಇದರಲ್ಲಿ ಸೇವೆಯ ಗುಣಮಟ್ಟ ಮತ್ತು ನೆಟ್‌ವರ್ಕ್ ಲಭ್ಯತೆಯ ಬಗ್ಗೆ ಹೇಳುವುದು ಅಗತ್ಯವಾಗಿರುತ್ತದೆ. ಇದನ್ನು ಮಾಡುವುದರಿಂದ ಸಾಮಾನ್ಯ ಬಳಕೆದಾರರು ತಮ್ಮ ಆಯ್ಕೆಗೆ ಅನುಗುಣವಾಗಿ ನೆಟ್‌ವರ್ಕ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ಪ್ರದೇಶದಲ್ಲಿ ಯಾವ 2G, 3G, 4G ಅಥವಾ 5G ನೆಟ್‌ವರ್ಕ್ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile