ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಅತ್ಯುತ್ತಮವಾದ ರಿಚಾರ್ಜ್ ಯೋಜನೆಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತಿದೆ.
ರಿಲಯನ್ಸ್ ಜಿಯೋಫೋನ್ (JioPhone) ಬಳಕೆದಾರರಿಗೆ 859 ರೂಗಳ ಬೆಲೆಗೆ ಬರೋಬ್ಬರಿ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಈ ರಿಚಾರ್ಜ್ ಯೋಜನೆ ಕೇವಲ ರಿಲಯನ್ಸ್ ಜಿಯೋಫೋನ್ (JioPhone) ಬಳಸುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಿ.
ಭಾರತದ ಅತಿದೊಡ್ಡ ಟೆಲೆಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಅತ್ಯುತ್ತಮವಾದ ರಿಚಾರ್ಜ್ ಯೋಜನೆಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತಿದೆ. ಇದರಲ್ಲಿ ಪ್ರಮುಖವಾಗಿ ರಿಲಯನ್ಸ್ ಜಿಯೋಫೋನ್ (JioPhone) ಬಳಕೆದಾರರಿಗೆ 859 ರೂಗಳ ಬೆಲೆಗೆ ಬರೋಬ್ಬರಿ 336 ದಿನಗಳ ವ್ಯಾಲಿಡಿಟಿಯಲ್ಲಿ ಅನ್ಲಿಮಿಟೆಡ್ ಕರೆಗಳು ಮತ್ತಿ ಡೇಟಾದೊಂದಿಗೆ ಉಚಿತ SMS ಸೌಲಭ್ಯದೊಂದಿಗೆ ಉತ್ತಮವಾದ ವ್ಯಾಲಿಡಿಟಿ ಪ್ಲಾನ್ ಎಂದು ಹೆಸರುವಾಸಿಯಾಗಿದೆ. ಈ ಯೋಜನೆಯನ್ನು ತಮ್ಮ ನಂಬರ್ ಅನ್ನು ಸದಾ ಆಕ್ಟಿವ್ ಆಗಿ ಇಡಲು ಬಯಸುವವರು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ.
ರಿಲಯನ್ಸ್ ಜಿಯೋ (Reliance Jio) ರೂ. 895 ರೀಚಾರ್ಜ್ ಪ್ಲಾನ್ ಡೀಟೇಲ್ಸ್
ಮೊದಲಿಗೆ ಈ ಅದ್ದೂರಿಯ ರಿಚಾರ್ಜ್ ಯೋಜನೆ ಕೇವಲ ರಿಲಯನ್ಸ್ ಜಿಯೋಫೋನ್ (JioPhone) ಬಳಸುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಿ. ಈಗ ಇದರ ಪ್ರಯೋಜನ ಮತ್ತು ಇದರ ಅನುಕುಲಗಳ ಬಗ್ಗೆ ಮಾತನಾಡುವುದಾದರೆ ಈ ರೀಚಾರ್ಜ್ ಮಾಡಿದ ನಂತರ ನಿಮಗೆ 336 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ. ಇದರ ವಿಶೇಷವೆಂದರೆ ಅನ್ಲಿಮಿಟೆಡ್ ಕರೆಗಳು, ಉತ್ತಮ ಡೇಟಾ ಮತ್ತು ಉಚಿತ ಮೆಸೇಜ್ ಪ್ರಯೋಜನಗಳನ್ನು ನೀಡಲಾಗುತ್ತದೆ.
ಪ್ರತಿ 28 ದಿನಗಳಿಗೊಮ್ಮೆ ನಿಮಗೆ 2 GB ಡೇಟಾವನ್ನು ನೀಡಲಾಗುವುದು. ಇದರ ನಂತರ ಅದು ತನ್ನನ್ನು ತಾನೇ ನವೀಕರಿಸಿಕೊಳ್ಳುತ್ತದೆ.ಈ ಯೋಜನೆ ಪ್ರತಿ 28 ದಿನಗಳಿಗೆ ಉಚಿತವಾಗಿ 50 SMS ನೀಡುತ್ತಿದೆ ಅಂದ್ರೆ ಒಟ್ಟಾರೆಯಾಗಿ 28 ದಿನಗಳಂತೆ 12 ತಿಂಗಳಿಗೆ (336 ದಿನಗಳಿಗೆ) ಸುಮಾರು 600 ಉಚಿತ SMS ಪಡೆಯಬಹುದು. ಇದರೊಂದಿಗೆ ವಾಯ್ಸ್ ಕರೆಗಳ ಬಗ್ಗೆ ಮಾತನಾಡುವುದಾದರೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಸ್ಥಳೀಯ ಮತ್ತು STD ನಂಬರ್ಗಳಿಗೆ ಕರೆ ಬಳಸಬಹುದು. ಜಿಯೋ ಭಾರತ್ ಫೋನ್ (Jio Bharat Phone) ಬಳಕೆದಾರರು ಈ ಪ್ರಯೋಜನವನ್ನು ಪಡೆಯಲು ರೂ 1234 ರೀಚಾರ್ಜ್ ಮಾಡಬೇಕು.
Also Read: ಫೋನ್‌ನಲ್ಲಿ ಈ Setting ಆನ್ ಮಾಡ್ಕೊಳ್ಳಿ ಸಾಕು, ಯಾರು ನಿಮ್ಮ Data ಅಥವಾ ಫೋನ್ Track ಮಾಡಲು ಸಾಧ್ಯವಿಲ್ಲ!
ಆದರೆ ನೀವು ಸಾಮಾನ್ಯ ಸ್ಮಾರ್ಟ್‌ಫೋನ್ ಹೊಂದಿದ್ದರೆ ನೀವು ಬೇರೆ ಕೆಲವು ರೀಚಾರ್ಜ್ ಮಾಡಬೇಕಾಗುತ್ತದೆ. ಕೊನೆಯದಾಗಿ ಈ ಯೋಜನೆಯನ್ನು ಖರೀದಿಸಿದಾಗ ನಿಮಗೆ ಪ್ರತಿ 28 ದಿನಗಳಿಗೊಮ್ಮೆ ಕೇವಲ 2GB ಡೇಟಾ ಮಾತ್ರ ಲಭ್ಯವಿರುತ್ತದೆ ಈ ಡೇಟಾ ಮುಗಿದ ನಂತರ ನೀವು 64Kbps ವೇಗದಲ್ಲಿ ಅನ್ಲಿಮಿಟೆಡ್ ಬಳಕೆಯನ್ನು ಪಡೆಯಬಹುದು. ಅಷ್ಟೇಯಲ್ಲದೆ ನಿಮಗೆ ಇದರಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ (JioTV), ಜಿಯೋ ಸಿನಿಮಾ (JioCinema) ಮತ್ತು ಜಿಯೋ ಕ್ಲೌಡ್‌ಗೆ (JioCloud) ಪ್ರವೇಶವನ್ನು ನೀಡಲಾಗುತ್ತದೆ.
ಈ ರಿಲಯನ್ಸ್ ಜಿಯೋಫೋನ್ (JioPhone) ಯಾರ್ಯಾರಿಗೆ ಬೆಸ್ಟ್?
ಈಗಾಗಲೇ ಮೇಲೆ ತಿಳಿಸಿರುವಂತೆ ಈ ಯೋಜನೆಯನ್ನು ಕಂಪನಿಯು ವಿಶೇಷವಾಗಿ ರಿಲಯನ್ಸ್ ಜಿಯೋಫೋನ್ (JioPhone) ಬಳಸುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಬೇಕಿದೆ. ನೀವು ಜಿಯೋ ಭಾರತ್ ಫೋನ್ ಅನ್ನು ಹೊಂದಿದ್ದರೂ ಅಥವಾ ಸಾಮಾನ್ಯ ಜಿಯೋ ಬಳಕೆದಾರರಾಗಿದ್ದರೂ ಸಹ ನೀವು ಅದರಿಂದ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ. ಅಂದರೆ ಇದರ ಲಾಭ ಪಡೆಯಲು ನೀವು ರಿಲಯನ್ಸ್ ಜಿಯೋ (Reliance Jio) ಬಳಕೆದಾರರಾಗಿರಬೇಕು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile