ಟೆಲಿಕಾಂ ವಲಯದಲ್ಲಿ ಧೂಳೆಬ್ಬಿಸಿರುವ ರಿಲಯನ್ಸ್ ಜಿಯೋ ಹೆಚ್ಚಗಿ ಜಿಯೋ ಮೊಬೈಲ್ ರೀಚಾರ್ಜ್ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. ಇದಲ್ಲದೆ ಸಣ್ಣ ರೀಚಾರ್ಜ್‌ನಿಂದ ಹಿಡಿದು ಪೋಸ್ಟ್‌ಪೇಯ್ಡ್ ಗ್ರಾಹಕರವರೆಗೆ ಅದ್ದೂರಿಯ ಲೈವ್ ಆಫರ್ಗಳನ್ನು ಪ್ರಾರಂಭಿಸಿದೆ. ಈ ಸಂಚಿಕೆಯಲ್ಲಿ ಜಿಯೋ ಹೊಸ ಇನ್ನು ಹೆಚ್ಚಿನ ಕೊಡುಗೆಗಳನ್ನು ತರಲಿದೆ. ಈಗ ಅವರು ಜಿಯೋ ಗಿಗಾ ಫೈಬರ್‌ನಲ್ಲಿ ಹೊಸ ಯೋಜನೆಯನ್ನು ತರಬಹುದು. ಈ ಕೊಡುಗೆ ಮುಂದಿನ ತಿಂಗಳು ಗ್ರಾಹಕರನ್ನು ಭೇಟಿ ಮಾಡುವುದಾಗಿ ನಂಬಲಾಗಿದೆ.
ಈ ವರ್ಷ ಜಿಯೋ ತನ್ನ ಈ ಜಿಯೋಗಿಗಾ ಫೈಬರ್ ಮೂಲಕ ಜನರಿಗೆ ಖುಷಿ ನೀಡುವ ಭರ್ಜರಿಯ ಆಫರ್ಗಳನ್ನು ಪ್ರಸ್ತುತಪಡಿಸಬಹುದು. ಈ ಪ್ರಸ್ತಾಪವನ್ನು ದೇಶದ ಹಲವು ನಗರಗಳಲ್ಲಿ ಈಗಾಗಲೇ ಪರೀಕ್ಷಿಸಲಾಗುತ್ತಿದೆ. ಜಿಯೋ ಫೈಬರ್‌ನ ಪೂರ್ವವೀಕ್ಷಣೆಯನ್ನು ನೀಡಲಾಗುತ್ತಿದೆ. ಈ ಕೊಡುಗೆಗಳು ಇನ್ನೂ ಉಚಿತವಾಗಿದ್ದು 100mbps ಅಥವಾ 50mbps ವರೆಗೆ ವೇಗದ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಪ್ರತಿ ತಿಂಗಳು 1100GB ಡೇಟಾವನ್ನು ನೀಡಲಾಗುತ್ತಿದೆ. ಈ ಕೊಡುಗೆ ಮೂರು ತಿಂಗಳವರೆಗೆ ಮಾನ್ಯತೆ ಹೊಂದಿರುವುದಾಗಿ ಹೇಳಲಾಗುತ್ತಿತ್ತು ಆದರೆ ಈಗ ಅದು ಪ್ರಾರಂಭವಾಗುವವರೆಗೂ ಮುಂದುವರಿಯುವ ಸಾಧ್ಯತೆಯಿದೆ.
ಜಿಯೋವಿನ ಈ ಪೂರ್ವವೀಕ್ಷಣೆ ಕೊಡುಗೆಯಲ್ಲಿ ಎರಡು ಆಯ್ಕೆ ಆಯ್ಕೆಗಳಿವೆ. ಮೊದಲಿಗೆ ನಿಮಗೆ 4500 ರೂಗಳ ಮುಂಗಡ ಹಣವನ್ನು ಕಟ್ಟಬೇಕು ಅದು ಮರುಪಾವತಿಸಬಹುದಾದ ಭದ್ರತಾ ಮೊತ್ತವಾಗಿರುತ್ತದೆ. ಇದರ ಮೂಲಕ ನಿಮಗೆ 100mbps ವೇಗ ಮತ್ತು ಡ್ಯುಯಲ್ ವೈಫೈ ರೂಟರ್ ಸಿಗುತ್ತದೆ. ಆದಾಗ್ಯೂ ಎರಡನೇ ಆಯ್ಕೆಯಲ್ಲಿ ಗ್ರಾಹಕರಿಗೆ ಭದ್ರತಾ ಠೇವಣಿಗಳಾಗಿ 2500 ರೂಗಳ ಮುಂಗಡ ಹಣವನ್ನು ಕಟ್ಟಬೇಕು ಅದು ಮರುಪಾವತಿಸಬಹುದಾದ ಭದ್ರತಾ ಮೊತ್ತವಾಗಿರುತ್ತದೆ. ಇದರ ಮೂಲಕ ನಿಮಗೆ 50mbps ವೇಗ ಮತ್ತು ಸಿಂಗಲ್ ಬ್ಯಾಂಡ್ ವೈಫೈ ರೂಟರ್ ಸಿಗುತ್ತದೆ.
ಈ ಸೇವೆಯನ್ನು ದೇಶದ 1,600 ನಗರಗಳಲ್ಲಿ ಪ್ರಾರಂಭಿಸಲಾಗುವುದು. ಇದರ ಅಡಿಯಲ್ಲಿ ಗ್ರಾಹಕರು ಬ್ರಾಡ್‌ಬ್ಯಾಂಡ್-ಲ್ಯಾಂಡ್‌ಲೈನ್ ಕಾಂಬೊವನ್ನು ಕೇವಲ 600 ರೂಗಳಲ್ಲಿ ಪಡೆಯಬವುದು. ಈ ಸೇವೆಯಡಿಯಲ್ಲಿ ಸ್ಮಾರ್ಟ್ ಹೋಮ್ ನೆಟ್‌ವರ್ಕ್ ಸುಮಾರು 40 ಸಾಧನಗಳನ್ನು ಸೇರಿಸುವ ಆಯ್ಕೆಯನ್ನು ಪಡೆಯುತ್ತದೆ. ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಸುದ್ದಿಗಳಿಗಾಗಿ ಡಿಜಿಟ್ ಕನ್ನಡ Instagram ಮತ್ತು Telegram ಅಪ್ಲಿಕೇಷನ್ಗಳಲ್ಲೂ ಲಭ್ಯ.