ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಪ್ರತಿದಿನ ಆಗುವ ತಲೆನೋವಿಗೆ ಈ ಅತ್ಯುತ್ತಮ ಪರಿಹಾರವನ್ನು ಬಳಸುವಂತೆ ಸಲಹೆ ನೀಡುತ್ತಿದೆ. ಜನ ಸಾಮಾನ್ಯರಿಗೆ ಪ್ರತಿದಿನ ಗಂಟೆಗೊಂದು ಬರುವ ಅಪರಿಚಿತ ಮತ್ತು Spam Call ಮತ್ತು ಮೆಸೇಜ್‌ಗಳನ್ನು ತಡೆಗಟ್ಟಲು ರಿಲಯನ್ಸ್ ಜಿಯೋ ಈ ಸಮಸ್ಯೆಗೆ ಸರಳ ಮತ್ತು ಉಚಿತ ಪರಿಹಾರವನ್ನು ನೀಡುತ್ತದೆ. ಆದರೆ Reliance Jio ತುಂಬ ಜನರಿಗೆ ತಿಳಿದಿಲ್ಲದ ಕಾರಣ ಇದನ್ನು ಅಷ್ಟಾಗಿ ಬಳಸುತ್ತಿಲ್ಲ. ಏನಪ್ಪಾ ಅದು ಅಂತೀರಾ ಇದರ ಬಗ್ಗೆ ಒಂದಿಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.
ಪ್ರತಿದಿನ ನಮಗೆ ಪ್ರಚಾರಗಳು, ಜಾಹೀರಾತುಗಳು, ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ದೈನಂದಿನ ಸಮಸ್ಯೆಗಳಿಂದ ಬಳಲುತ್ತಿರುವುದು ನಿಮಗೆಲ್ಲ ತಿಳಿದಿದೆ. ಇಂಡಿಯಾ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಈ ಟೆಕ್ನಾಲಜಿಯೊಂದಿಗೆ ಹೆಜ್ಜೆ ಇಡುತ್ತಾ ವಂಚಕರು ಸಹ ಹೊಸ ಮಾದರಿಯ ವಂಚನೆಗಳಿಗೆ ಕೈ ಹಾಕಿದ್ದಾರೆ. ಭಾರತದಲ್ಲಿ ಅತಿ ಹೆಚ್ಚಾಗಿ ಮತ್ತು ಅತಿ ಸರಳವಾಗಿ ವಂಚನೆ ನಡೆಯೋದು ಅಂದ್ರೆ ಅದು ಸಾಮಾನ್ಯ ಕರೆ ಮತ್ತು SMS ಮೂಲಕ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ ನಷ್ಟ ಅನುಭವಿಸಿರುವುದು.
ಆದ್ದರಿಂದ ಇದನ್ನು ತಡೆಗಟ್ಟಲು ರಿಲಯನ್ಸ್ ಜಿಯೋ ಈ ಸಮಸ್ಯೆಗೆ ಸರಳ ಮತ್ತು ಉಚಿತ ಪರಿಹಾರವನ್ನು ನೀಡುತ್ತದೆ. ಆದರೆ ತುಂಬ ಜನರಿಗೆ ತಿಳಿದಿಲ್ಲದ ಕಾರಣ ಇದನ್ನು ಅಷ್ಟಾಗಿ ಬಳಸುತ್ತಿಲ್ಲ. Jio ಬಳಕೆದಾರರು MyJio ಅಪ್ಲಿಕೇಶನ್‌ನಲ್ಲಿ ಒಂದೇ ಕ್ಲಿಕ್‌ನಲ್ಲಿ ಅನಗತ್ಯ ಕರೆಗಳು ಮತ್ತು SMS ಅನ್ನು ನಿರ್ಬಂಧಿಸಬಹುದು. ಇದು ದೈನಂದಿನ ಕಿರಿಕಿರಿ ಮತ್ತು ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮನಸ್ಸಿನ ಶಾಂತಿಗಾಗಿ ಸ್ಪ್ಯಾಮ್ ಕರೆಗಳು ಮತ್ತು SMS ಅನ್ನು ನಿರ್ಬಂಧಿಸಿ.
Also Read: Voter ID Card: ನಿಮಗೊಂದು ಮತದಾರರ ಗುರುತಿನ ಚೀಟಿ ಬೇಕಿದ್ದರೆ ಆನ್‌ಲೈನ್ ಮೂಲಕ ಈ ರೀತಿ ಅರ್ಜಿ ಸಲ್ಲಿಸಿ!
ರಿಲಯನ್ಸ್ ಜಿಯೋ ಬಳಕೆದಾರರು ಅಪ್ಲಿಕೇಶನ್ ಮೂಲಕವೇ ಉಚಿತವಾಗಿ ಈ Do Not Disturb (DND) ಸೇವೆಯನ್ನು ಸಕ್ರಿಯಗೊಳಿಸಲು ಮೊದಲಿಗೆ ಅಪ್ಲಿಕೇಶನ್ ತೆರೆಯಬೇಕು. ಇದರ ನಂತರ ನೇರವಾಗಿ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಈಗ ಇದರಲ್ಲಿ Setting ಆಯ್ಕೆಗೆ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ಎರಡನೇ ಆಯ್ಕೆ Service Settings ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ಮೊದಲ ಆಯ್ಕೆಯಲ್ಲಿ ನಿಮಗೆ Do Not Disturb ಕಾಣಿಸುತ್ತದೆ ಇದನ್ನು ಆಯ್ಕೆ ಮಾಡಿ. ಅಲ್ಲದೆ ಬೇರೆ ಮಾದರಿಯಲ್ಲೂ ಈ ಸೇವೆಯನ್ನು ಸಕ್ರಿಯಗೊಳಿಸಲು ಬಯಸಿದರೆ ಈ ಕೆಳಗೆ ಮತ್ತೆ ಮೂರು ವಿಧಾನವನ್ನು ಅನುಸರಿಸಬಹುದು.
ಸಾಮಾನ್ಯವಾಗಿ ಈ Do Not Disturb (DND) ಸೇವೆಯಲ್ಲಿ ಬರುವ ಕರೆ ಮತ್ತು ಮೆಸೇಜ್ಗಳನ್ನು ಒಟ್ಟು 7 ವರ್ಗಗಳಲ್ಲಿ (Travel related, Health-related, Real estate related, Automobile-related, Education and study related, Communication and entertainment, Banking, insurance, and finance related) ವಿಂಗಡಿಸಲಾಗಿದ್ದು ನಿಮಗೆ ಬೇಕಾದ ವರ್ಗದಿಂದ ಕರೆ ಮತ್ತು ಮೆಸೇಜ್ ತಡೆಯಲುಬಹುದು ಅಥವಾ ಪಡೆಯಲುಬಹುದು.