ಭಾರತದ ಅತಿದೊಡ್ಡ ಟೆಲಿಕಾಂ ರಿಲಯನ್ಸ್ ಜಿಯೋ (Reliance Jio) ಈ ವರ್ಷದ ದೀಪಾವಳಿವರೆಗೆ ತನ್ನ ಮತ್ತೊಂದು ಲೇಟೆಸ್ಟ್ ಫೀಚರ್ ಜಿಯೋಭಾರತ್ (JioBharat) ಅನ್ನು ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಈ ಬಾರಿಯ ಸ್ಮಾರ್ಟ್ಫೋನ್ ಬಳಕೆದಾರರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವುದರೊಂದಿಗೆ ವಿಶೇಷವಾಗಿ ಈ ಫೀಚರ್ ಫೋನ್ ಸೋಶಿಯಲ್ ಮೀಡಿಯಾ ಮತ್ತು ಪೇಮೆಂಟ್ ಗೇಟ್‌ಗಳ ಅನುಭವವನ್ನು ದ್ವಿಗುಣಗೊಳಿಸುವ ನಿರೀಕ್ಷೆಗಳಿವೆ. ರಿಲಯನ್ಸ್ ಜಿಯೋ (Reliance Jio) ಕಂಪನಿಯು ಭಾರತವನ್ನು ಪೂರ್ತಿಯಾಗಿ 2G ಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದು Jio 4G ಅನ್ನು ಬೆಂಬಲಿಸುವ ಮತ್ತೊಂದು ಹೊಸ ಫೀಚರ್ ಫೋನ್‌ಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.
Also Read: ಮಕ್ಕಳನ್ನು ಅಶ್ಲೀಲ ಕಂಟೆಂಟ್‌ಗಳಿಂದ ದೂರವಿಡಲು ಸ್ಮಾರ್ಟ್‌ಫೋನ್‌ಗಳಲ್ಲಿ ಈ 3 ಸೆಟ್ಟಿಂಗ್ ಆನ್ ಮಾಡಿ!
ಕಳೆದ ವರ್ಷ ಬಿಡುಗಡೆಯಾದ JioBharat ಪ್ಲಾಟ್‌ಫಾರ್ಮ್ ಅನ್ನು ಘೋಷಿಸಿತು ಅದರ ಅಡಿಯಲ್ಲಿ ಕಂಪನಿಯು OEM ತಯಾರಕರೊಂದಿಗೆ ಪಾಲುದಾರಿಕೆ ಹೊಂದಿದ್ದು ಸುಮಾರು 1200 ರೂಗಳ ಕೈಗೆಟಕುವ ಬೆಲೆಯಲ್ಲಿ ಈ ಹೊಸ 4G ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸುವ ನಿರೀಕ್ಷೆಗಳಿವೆ. ಜಿಯೋ ಈಗಾಗಲೇ JioBharat B1 ಅನ್ನು ಬಿಡುಗಡೆ ಮಾಡಿದ್ದು ಉತ್ತಮವಾಗಿ ಮಾರಾಟವಾಗುತ್ತಿದೆ. ಇದು ಪ್ರಸ್ತುತ ಅಮೆಜಾನ್ ಇಂಡಿಯಾದಲ್ಲಿ ನೀವು 1,299 ರೂಗಳಿಗೆ ಖರೀದಿಸಬಹುದು. ಇದರ ಬಗ್ಗೆ ಇದೀಗ ಜಿಯೋ 91ಮೊಬೈಲ್ಸ್‌ನ ವರದಿಯ ಪ್ರಕಾರ ಜಿಯೋಭಾರತ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಈ JioBharat B2 ಫೀಚರ್ ಫೋನ್ ಅನ್ನು ಪ್ರಾರಂಭಿಸುವುದಾಗಿ ನಿರೀಕ್ಷೆ. ಈ ಹೊಸ ಫೋನ್ ಅಸ್ತಿತ್ವವನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ ಇದು ಪ್ರಮಾಣೀಕರಣ ಸೈಟ್‌ನಲ್ಲಿ ಗುರುತಿಸಲ್ಪಟ್ಟಿದೆ.
ಈಗಾಗಲೇ ಲಭ್ಯವಿರುವ ಜಿಯೋಫೋನ್ ಕನೆಕ್ಷನ್ ಜೊತೆಗೆ ಮುಂದುವರಿಯಲಿದ್ದು ಇದರಲ್ಲಿ ಈಗಾಗಲೇ ಮೇಲೆ ತಿಳಿಸಿರುವಂತೆ ಫುಲ್ ಮನರಂಜನೆ ಲೋಡ್ ಜೊತೆಗೆ ಎಲ್ಲ ಮಾದರಿಯ ಪೇಮೆಂಟ್ ಅದರಲ್ಲೂ UPI ಪಾವತಿಗಳನ್ನು ಮಾಡುವ ಸಾಮರ್ಥ್ಯವನ್ನು ನೀಡಲಿದೆ. ಇದರೊಂದಿಗೆ ಬಳಕೆದಾರರು ಜಿಯೋ ಸಿನಿಮಾ ಮೂಲಕ ಆನ್‌ಲೈನ್ ವಿಷಯವನ್ನು ವೀಕ್ಷಿಸಲು ಮತ್ತು ಹೆಚ್ಚಿನ ಫೀಚರ್ ಪಡೆಯಲು ಬಳಕೆದಾರರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಈ JioBharat B2 ಬರುವ ನಿರೀಕ್ಷೆ. ಅಲ್ಲದೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಲ್ಲಿ ಈ ಫೀಚರ್ ಫೋನ್ ಗುರುತಿಸಲಾಗಿದೆ.
ಈ ಮುಂಬರಲಿರುವ JioBharat B2 ಫೀಚರ್ ಫೋನ್ ಕುರಿತು ಪ್ರಸ್ತುತ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಆದರೆ ಫೋನ್ ಅನ್ನು BIS ನಲ್ಲಿ ಪಟ್ಟಿ ಮಾಡಲಾಗಿರುವುದರಿಂದ ಇದರ ಬಿಡುಗಡೆಗೆ ಹೆಚ್ಚು ಕಾಯುವ ಅಗತ್ಯವಿಲ್ಲ. ಪ್ರಸ್ತುತ ಗ್ರಾಹಕರು ಇನ್ನೂ ಅಮೆಜಾನ್ ಇಂಡಿಯಾದಿಂದ JioBharat B1 ಅನ್ನು ಪಡೆಯಬಹುದು. ಈ ವೈಶಿಷ್ಟ್ಯದ ಫೋನ್ ಮೂಲಕ ಬಳಕೆದಾರರು JioCinema, JioSaavn, JioPay ಮತ್ತು ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದು. ಫೋನ್‌ನಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು 2000mAh ಬ್ಯಾಟರಿಯನ್ನು ಪ್ಯಾಕ್ ಮಾಡಲಾಗಿದೆ. ಇದು ಜಿಯೋ ನೆಟ್‌ವರ್ಕ್‌ಗೆ ಮಾತ್ರ ಲಾಕ್ ಆಗಿದೆ ಮತ್ತು 4G ಸಂಪರ್ಕವನ್ನು ಬೆಂಬಲಿಸುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!